PBKS vs RCB Highlights, IPL 2024: ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಆರ್ಸಿಬಿಗೆ ಸತತ 4ನೇ ಜಯ
Punjab Kings Vs Royal Challengers Bangalore Highlights in Kannada: ಸತತ 6 ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೀಗ್ನಲ್ಲಿ ಅದ್ಭುತ ಪುನರಾಗಮನ ಮಾಡಿದೆ. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್‌ಗಳಿಂದ ಸೋಲಿಸುವ ಮೂಲಕ ಈ ಟೂರ್ನಿಯಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದೆ.

ಸತತ 6 ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೀಗ್ನಲ್ಲಿ ಅದ್ಭುತ ಪುನರಾಗಮನ ಮಾಡಿದೆ. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್‌ಗಳಿಂದ ಸೋಲಿಸುವ ಮೂಲಕ ಈ ಟೂರ್ನಿಯಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದೆ. ಇದರೊಂದಿಗೆ ತನ್ನ ಪ್ಲೇಆಫ್ ಕನಸನ್ನು ಇನ್ನು ಜೀವಂತವಾಗಿಸಿರಿಸಿಕೊಂಡಿದೆ. ಇತ್ತ ಆರ್‌ಸಿಬಿ ವಿರುದ್ಧ ಸೋತ ಪಂಜಾಬ್ ಪ್ಲೇಆಫ್ ರೇಸ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದೆ. ಪಂಜಾಬ್ 12 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಗೆದ್ದಿದೆ. ಆದರೆ ಆರ್‌ಸಿಬಿ 12 ಪಂದ್ಯಗಳಲ್ಲಿ ಐದನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 7 ವಿಕೆಟ್ ಕಳೆದುಕೊಂಡು 241 ರನ್ ಕಲೆಹಾಕಿತು. ತಂಡದ ಪರ ವಿರಾಟ್ ಕೊಹ್ಲಿ 92 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ರಜತ್ ಪಾಟಿದರ್ 55 ರನ್ ಹಾಗೂ ಕ್ಯಾಮರೂನ್ ಗ್ರೀನ್ 46 ರನ್‌ಗಳ ಕೊಡುಗೆ ನೀಡಿದರು. ಈ ಗುರಿ ಬೆನ್ನಟ್ಟಿದ ಪಂಜಾಬ್ 17 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
LIVE NEWS & UPDATES
-
ಪಂಜಾಬ್ ಆಲೌಟ್
ಐಪಿಎಲ್ 2024 ರ 58 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ಅನ್ನು 60 ರನ್‌ಗಳಿಂದ ಸೋಲಿಸಿದೆ. ಈ ಸೋಲಿನೊಂದಿಗೆ ಪಂಜಾಬ್ ತಂಡ ಐಪಿಎಲ್ 2024ರ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.
-
9ನೇ ವಿಕೆಟ್
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 242 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 174 ರನ್ ಗಳಿಸುವಷ್ಟರಲ್ಲಿ 9ನೇ ವಿಕೆಟ್ ಕಳೆದುಕೊಂಡಿತು.
-
-
15 ಓವರ್ ಮುಕ್ತಾಯ
15 ಓವರ್‌ಗಳ ಆಟ ಮುಗಿದಿದ್ದು ಪಂಜಾಬ್ ಕಿಂಗ್ಸ್ 7 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ. ಈಗ ಗೆಲ್ಲಲು 30 ಎಸೆತಗಳಲ್ಲಿ 78 ರನ್ ಗಳಿಸಬೇಕಿದೆ.
-
ಶಶಾಂಕ್ ರನೌಟ್
14ನೇ ಓವರ್‌ನಲ್ಲಿ ಶಶಾಂಕ್ ಸಿಂಗ್ ರನೌಟ್ಗೆ ಬಲಿಯಾದರು. ವಿರಾಟ್ ಕೊಹ್ಲಿ ಎಸೆದ ಅದ್ಭುತ ನೇರ ಎಸೆತಕ್ಕೆ ಶಶಾಂಕ್ ವಿಕೆಟ್ ಪತನವಾಯಿತು. ಶಶಾಂಕ್ 19 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 37 ರನ್ ಗಳಿಸಿದರು. 14 ಓವರ್‌ಗಳ ನಂತರ ಪಂಜಾಬ್ ಸ್ಕೋರ್ ಆರು ವಿಕೆಟ್‌ಗೆ 153 ರನ್ ಆಗಿದೆ.
-
ಲಿವಿಂಗ್‌ಸ್ಟನ್ ಶೂನ್ಯಕ್ಕೆ ಔಟ್
ಲಿಯಾಮ್ ಲಿವಿಂಗ್‌ಸ್ಟನ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಹಿಂತಿರುಗಿದ್ದಾರೆ. 12 ಓವರ್‌ಗಳ ಆಟ ಮುಗಿದಾಗ ಪಂಜಾಬ್ 132 ರನ್ ಗಳಿಸಿದೆ.
-
-
ಜಿತೇಶ್ ಶರ್ಮಾ ಔಟ್
ಪಂಜಾಬ್ ಕಿಂಗ್ಸ್ 4ನೇ ವಿಕೆಟ್ ಕಳೆದುಕೊಂಡಿದೆ. ಜಿತೇಶ್ ಶರ್ಮಾ ಕೇವಲ 5 ರನ್ ಗಳಿಸಿ ಕರ್ಣ್ ಶರ್ಮಾಗೆ ಬಲಿಯಾದರು. 11 ಓವರ್‌ಗಳ ಅಂತ್ಯಕ್ಕೆ ಪಂಜಾಬ್ 4 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತ್ತು.
-
ರೂಸೋ ಔಟ್
ಒಂಬತ್ತನೇ ಓವರ್‌ನಲ್ಲಿ ಪಂಜಾಬ್ ತನ್ನ ಮೂರನೇ ವಿಕೆಟ್ ಕಳೆದುಕೊಂಡಿತು. ಕರ್ಣ್ ಶರ್ಮಾ, ರಿಲೇ ರೂಸೋ ವಿಕೆಟ್ ಪಡೆದರು. 27 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 61 ರನ್ ಗಳಿಸಿ ಔಟಾದರು. 10 ಓವರ್‌ಗಳ ನಂತರ ಪಂಜಾಬ್ ಸ್ಕೋರ್ ಮೂರು ವಿಕೆಟ್‌ಗೆ 114 ರನ್ ಆಗಿದೆ. ಪಂಜಾಬ್‌ಗೆ ಈಗ 60 ಎಸೆತಗಳಲ್ಲಿ 128 ರನ್‌ಗಳ ಅಗತ್ಯವಿದೆ.
-
ಎರಡನೇ ವಿಕೆಟ್
ಆರನೇ ಓವರ್‌ನಲ್ಲಿ ಪಂಜಾಬ್ ತನ್ನ ಎರಡನೇ ವಿಕೆಟ್ ಕಳೆದುಕೊಂಡಿದೆ. ಲೋಕಿ ಫರ್ಗುಸನ್ ಅವರು ಜಾನಿ ಬೈರ್‌ಸ್ಟೋವ್ ಅವರನ್ನು ಔಟ್ ಮಾಡಿದರು. 16 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 27 ರನ್ ಬಾರಿಸಿ ಬೈರ್‌ಸ್ಟೋ ವಿಕೆಟ್ ಒಪ್ಪಿಸಿದರು. 84 ಎಸೆತಗಳಲ್ಲಿ 167 ರನ್‌ಗಳ ಅಗತ್ಯವಿದೆ.
-
ರೂಸೋ-ಬೇರ್‌ಸ್ಟೋವ್ ಜೊತೆಯಾಟ
ಒಂದು ವಿಕೆಟ್ ಪತನದ ಹೊರತಾಗಿಯೂ ರಿಲೆ ರೂಸೋ ಮತ್ತು ಬೈರ್‌ಸ್ಟೋ ರನ್ ದರ ಕುಸಿಯಲು ಅವಕಾಶ ನೀಡಲಿಲ್ಲ. ನಾಲ್ಕು ಓವರ್‌ಗಳ ನಂತರ ತಂಡದ ಸ್ಕೋರ್ ಒಂದು ವಿಕೆಟ್‌ಗೆ 45 ರನ್ ಆಗಿದೆ. ಪ್ರಸ್ತುತ, ರೂಸೋ 13 ಎಸೆತಗಳಲ್ಲಿ 32 ರನ್ ಮತ್ತು ಬೈರ್‌ಸ್ಟೋವ್ ಏಳು ರನ್ ಗಳಿಸಿದ್ದಾರೆ.
-
ಮೊದಲ ವಿಕೆಟ್
ಮೊದಲ ಓವರ್ನಲ್ಲೇ ಪಂಜಾಬ್‌ಗೆ ಆಘಾತ ಎದುರಾಯಿತು. ಪ್ರಭುಸಿಮ್ರಾನ್ ಸಿಂಗ್ ಆರು ರನ್ ಗಳಿಸಿ ಔಟಾದರು. ಸದ್ಯ ರಿಲೆ ರೂಸೋ ಮತ್ತು ಜಾನಿ ಬೈರ್‌ಸ್ಟೋ ಕ್ರೀಸ್‌ನಲ್ಲಿದ್ದಾರೆ. ಮೊದಲ ಓವರ್‌ನಲ್ಲಿ 14 ರನ್ಗಳಿಗೆ ಒಂದು ವಿಕೆಟ್ ಪತನವಾಯಿತು.
-
241 ರನ್ ಟಾರ್ಗೆಟ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ಗೆ 242 ರನ್ ಗಳ ಗುರಿ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿತು.
-
ಶತಕ ವಂಚಿತ ವಿರಾಟ್
ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 92 ರನ್ ಗಳಿಸಿ ಔಟಾದರು. ಈ ಮೂಲಕ ವಿರಾಟ್ ತಮ್ಮ ಒಂಬತ್ತನೇ ಶತಕವನ್ನು ಮಿಸ್ ಮಾಡಿಕೊಂಡರು. ಆದಾಗ್ಯೂ, ಅವರು ಈ ಇನ್ನಿಂಗ್ಸ್‌ನಲ್ಲಿ ಅನೇಕ ದಾಖಲೆಗಳನ್ನು ಮಾಡಿದರು.
-
15 ಓವರ್‌ಗಳಲ್ಲಿ 164 ರನ್
15 ಓವರ್‌ಗಳ ಆಟದ ಅಂತ್ಯಕ್ಕೆ ಆರ್‌ಸಿಬಿ 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ. ವಿರಾಟ್ ಕೊಹ್ಲಿ 67 ರನ್ ಮತ್ತು ಕ್ಯಾಮರೂನ್ ಗ್ರೀನ್ 19 ರನ್‌ಗಳೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ.
-
ಕೊಹ್ಲಿ ಅರ್ಧಶತಕ
ಎರಡೆರಡು ಜವದಾನಗಳ ಲಾಭ ಪಡೆದಿರುವ ವಿರಾಟ್ ಕೊಹ್ಲಿ 32 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ.
-
ಆಲಿಕಲ್ಲು ಸಹಿತ ಮಳೆ
Rain stops play in Dharamsala 🌧️#RCB 119/3 at the halfway mark
Stay tuned for further updates
Scorecard ▶️ https://t.co/49nk5rrUlp#TATAIPL | #PBKSvRCB pic.twitter.com/4bWfTbvf3D
— IndianPremierLeague (@IPL) May 9, 2024
-
ರಜತ್ ಔಟ್; ಮಳೆಯಿಂದ ಪಂದ್ಯ ಸ್ಥಗಿತ
ಅರ್ಧಶತಕ ಸಿಡಿಸಿದ ರಜತ್ ಪಾಟಿದರ್ ಸ್ಯಾಮ್ ಕರನ್ಗೆ ಬಲಿಯಾದರು. ಇದರೊಂದಿಗೆ ಕೊಹ್ಲಿ- ರಜತ್ ನಡುವಿನ ಜೊತೆಯಾಟ ಮುರಿದುಬಿತ್ತು. ಇದೀಗ ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.
-
ರಜತ್ ಅರ್ಧಶತಕ
ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದ ಆರ್ಸಿಬಿಗೆ ರಜತ್ ಪಾಟಿದರ್ ಆಸರೆಯಾಗಿದ್ದಾರೆ. ಈ ಬ್ಯಾಟರ್ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
-
ಶತಕ ಪೂರೈಸಿದ ಆರ್‌ಸಿಬಿ
ಆರ್‌ಸಿಬಿ 8.3 ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟಿದೆ. ಕೊಹ್ಲಿ- ರಜತ್ ನಡುವೆ ಅರ್ಧಶತಕದ ಜೊತೆಯಾಟವಿದೆ.
-
ಆರ್‌ಸಿಬಿ ಪವರ್ ಪ್ಲೇ ಅಂತ್ಯ
ಆರ್‌ಸಿಬಿ ಪವರ್ ಪ್ಲೇ ಅಂತ್ಯಗೊಂಡಿದೆ. ಈ 6 ಓವರ್‌ಗಳಲ್ಲಿ ತಂಡ 2 ವಿಕೆಟ್ ಕಳೆದುಕೊಂಡು 56 ರನ್ ಕಲೆಹಾಕಿದೆ.
-
2ನೇ ವಿಕೆಟ್
ಆರ್ಸಿಬಿಗೆ ಕನ್ನಡಿಗ ಕಾವೇರಪ್ಪ ಅಪಾಯಕಾರಿಯಾಗಿ ಮಾರ್ಪಟ್ಟಿದ್ದಾರೆ. ಈ ವೇಗಿ ತಂಡದ ಇಬ್ಬರು ಪ್ರಮುಖ ಬ್ಯಾಟರ್ಗಳನ್ನು ಔಟ್ ಮಾಡಿದರು. ಸ್ಫೋಟಕ ಬ್ಯಾಟರ್ ವಿಲ್ ಜ್ಯಾಕ್ಸ್ ಔಟಾಗಿದ್ದಾರೆ.
-
ಫಾಫ್ ಔಟ್
ಕನ್ನಡಿಗ ಕಾವೇರಪ್ಪ ತಮ್ಮ ಖೋಟಾದ ಎರಡನೇ ಓವರ್‌ನಲ್ಲಿ ಆರ್‌ಸಿಬಿ ನಾಯಕ ಫಾಫ್ ವಿಕೆಟ್ ಉರುಳಿಸಿದರು.
-
ಕೊಹ್ಲಿ ಕ್ಯಾಚ್ ಮಿಸ್
ಮೊದಲ ಓವರ್ನ ಮೂರನೇ ಎಸೆತದಲ್ಲಿ ವಿರಾಟ್ ಕೊಹ್ಲಿ ನೀಡಿದ ಕ್ಯಾಚ್ ಅನ್ನು ಅಶುತೋಷ್ ಶರ್ಮಾ ಕೈಬಿಟ್ಟರು. ವಿದ್ವತ್ ಕವರಪ್ಪ ಎಸೆತದಲ್ಲಿ ಅಶುತೋಷ್ ಕಠಿಣ ಕ್ಯಾಚ್ ಪಡೆಯುವಲ್ಲಿ ವಿಫಲರಾದರು. ಒಂದು ಓವರ್ ನಂತರ ಸ್ಕೋರ್ ಯಾವುದೇ ವಿಕೆಟ್ ಇಲ್ಲದೆ 11 ರನ್ ಆಗಿದೆ.
-
ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟಿದಾರ್, ಮಹಿಪಾಲ್ ಲೊಮ್ರೊರ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸ್ವಪ್ನಿಲ್ ಸಿಂಗ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್.
-
ಪಂಜಾಬ್ ಕಿಂಗ್ಸ್
ಜಾನಿ ಬೈರ್‌ಸ್ಟೋವ್, ಪ್ರಭ್‌ಸಿಮ್ರಾನ್ ಸಿಂಗ್, ರಿಲೆ ರೂಸೋ, ಶಶಾಂಕ್ ಸಿಂಗ್, ಸ್ಯಾಮ್ ಕರನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಅಶುತೋಷ್ ಶರ್ಮಾ, ಹರ್ಷಲ್ ಪಟೇಲ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್, ವಿದ್ವತ್ ಕಾವೇರಪ್ಪ.
-
ಟಾಸ್ ಗೆದ್ದ ಪಂಜಾಬ್
ಟಾಸ್ ಗೆದ್ದ ಪಂಜಾಬ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡದಿದೆ. ಹೀಗಾಗಿ ಆರ್‌ಸಿಬಿ ಮೊದಲು ಬ್ಯಾಟ್ ಮಾಡಲಿದೆ.
-
ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್‌ಸಿಬಿ- ಪಂಜಾಬ್
ಇಂದಿನ ಪಂದ್ಯದಲ್ಲಿ ಸೋತ ತಂಡವೂ ಹೊರಬೀಳಲಿದೆ. ಸೋತ ತಂಡದ ಬಳಿ 12 ಪಂದ್ಯಗಳಿಂದ ಎಂಟು ಅಂಕ ಮಾತ್ರ ಉಳಿದಿರುತ್ತದೆ. ಈ ತಂಎ ಗರಿಷ್ಠ 12 ಅಂಕ ಮಾತ್ರ ಸಂಪಾಧಿಸಬಹುದು. ಇದು ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಸಾಕಾಗುವುದಿಲ್ಲ. ಇನ್ನ ಈ ಪಂದ್ಯದಲ್ಲಿ ಗೆಲ್ಲುವ ತಂಡದ ಭರವಸೆ ಜೀವಂತವಾಗಿರುತ್ತದೆ. ಆದಾಗ್ಯೂ, ಆ ತಂಡ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.
Published On - May 09,2024 6:45 PM
