
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 23ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 180 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡವು 2 ರನ್ಗಳ ರೋಚಕ ಜಯ ಸಾಧಿಸಿದೆ.
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಪ್ರಭ್ಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕರನ್, ಸಿಕಂದರ್ ರಾಝ, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಕಗಿಸೊ ರಬಾಡ.
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಝ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್.
ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಜಯ ಸಾಧಿಸಿದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ದಾಖಲಿಸಿತ್ತು. ಇದೀಗ ಅಂಕ ಪಟ್ಟಿಯಲ್ಲಿ ಎಸ್ಆರ್ಹೆಚ್ ತಂಡವು 5ನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ತಂಡ 6ನೇ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆದ್ದರೆ ಪಾಯಿಂಟ್ಸ್ ಟೇಬಲ್ನಲ್ಲಿ ಮೇಲೇರಬಹುದು.
ಇನ್ನು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಇದುವರೆಗೆ 21 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಎಸ್ಆರ್ಹೆಚ್ ತಂಡ 14 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದರೆ, ಪಂಜಾಬ್ ಕಿಂಗ್ಸ್ 7 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇಲ್ಲಿ ಮೇಲ್ನೋಟಕ್ಕೆ ಎಸ್ಆರ್ಹೆಚ್ ಮೇಲುಗೈ ಹೊಂದಿದ್ದರೂ ಪಂಜಾಬ್ ಕಿಂಗ್ಸ್ ಕಡೆಯಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಉಭಯ ತಂಡಗಳು ಹೀಗಿವೆ:
ಪಂಜಾಬ್ ಕಿಂಗ್ಸ್ ತಂಡ: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋ, ಪ್ರಭ್ಸಿಮ್ರಾನ್ ಸಿಂಗ್, ಸ್ಯಾಮ್ ಕರನ್, ಸಿಕಂದರ್ ರಾಝ, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹರ್‌ಪ್ರೀತ್ ಬ್ರಾರ್, ಅಶುತೋಷ್ ಶರ್ಮಾ, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಷದೀಪ್ ಸಿಂಗ್, ತನಯ್ ತ್ಯಾಗರಾಜನ್, ನಾಥನ್ ಎಲ್ಲಿಸ್, ರಾಹುಲ್ ಚಹರ್, ವಿಧ್ವತ್ ಕಾವೇರಪ್ಪ, ಲಿಯಾಮ್ ಲಿವಿಂಗ್‌ಸ್ಟೋನ್, ರಿಲೀ ರೊಸ್ಸೊ, ಹರ್‌ಪ್ರೀತ್ ಸಿಂಗ್ ಭಾಟಿಯಾ, ಕ್ರಿಸ್ ವೋಕ್ಸ್, ರಿಷಿ ಧವನ್, ಅಥರ್ವ ಟೈಡೆ, ಶಿವಂ ಸಿಂಗ್, ಪ್ರಿನ್ಸ್ ಚೌಧರಿ, ವಿಶ್ವನಾಥ್ ಸಿಂಗ್.
ಸನ್‌ರೈಸರ್ಸ್ ಹೈದರಾಬಾದ್ ತಂಡ: ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಝ್ ಅಹ್ಮದ್, ನಿತೀಶ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಜಯದೇವ್ ಉನದ್ಕತ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ. ನಟರಾಜನ್, ಟ್ರಾವಿಸ್ ಹೆಡ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ರಾಹುಲ್ ತ್ರಿಪಾಠಿ, ಮಯಾಂಕ್ ಅಗರ್ವಾಲ್, ಉಪೇಂದ್ರ ಯಾದವ್, ಅನ್ಮೋಲ್ಪ್ರೀತ್ ಸಿಂಗ್, ಜಾತವೇಧ್ ಸುಬ್ರಮಣ್ಯನ್, ಸನ್ವಿರ್ ಸಿಂಗ್, ಫಝಲ್ಹಕ್ ಫಾರೂಕಿ, ಮಾರ್ಕೊ ಯಾನ್ಸೆನ್, ಆಕಾಶ್ ಮಹಾರಾಜ್ ಸಿಂಗ್.
ಕೊನೆಯ ಓವರ್ನಲ್ಲಿ 29 ರನ್ಗಳನ್ನು ಗುರಿ ಪಡೆದಿದ್ದ ಪಂಜಾಬ್ ಕಿಂಗ್ಸ್ ಬ್ಯಾಟರ್ಗಳು.
ಕೊನೆಯ ಓವರ್ನಲ್ಲಿ 26 ರನ್ ನೀಡಿದ ಜಯದೇವ್ ಉನಾದ್ಕಟ್.
ಅಂತಿಮ ಓವರ್ ಸ್ಕೋರ್: 6, Wd, Wd, 6, 2, 2, Wd, 1, 6
ಕೊನೆಗೂ 2 ರನ್ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾದ ಸನ್‌ರೈಸರ್ಸ್ ಹೈದರಾಬಾದ್.
12 ಎಸೆತಗಳಲ್ಲಿ 39 ರನ್ ಬೇಕಿದ್ದ ವೇಳೆ 19ನೇ ಓವರ್ನಲ್ಲಿ 2 ಫೋರ್ಗಳೊಂದಿಗೆ ಕೇವಲ 10 ರನ್ ಮಾತ್ರ ನೀಡಿದ ಟಿ ನಟರಾಜನ್.
ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು ಕೊನೆಯ ಓವರ್ನಲ್ಲಿ 29 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಅಶುತೋಷ್ ಶರ್ಮಾ ಹಾಗೂ ಶಶಾಂಕ್ ಸಿಂಗ್ ಬ್ಯಾಟಿಂಗ್.
ಪಂಜಾಬ್ ಕಿಂಗ್ಸ್ ತಂಡಕ್ಕೆ 12 ಎಸೆತಗಳಲ್ಲಿ 39 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಅಶುತೋಷ್ ಶರ್ಮಾ ಹಾಗೂ ಶಶಾಂಕ್ ಸಿಂಗ್ ಬ್ಯಾಟಿಂಗ್.
ಭುವನೇಶ್ವರ್ ಕುಮಾರ್ ಎಸೆದ 17ನೇ ಓವರ್ನಲ್ಲಿ ಮೂರು ಫೋರ್ ಬಾರಿಸಿದ ಶಶಾಂಕ್ ಸಿಂಗ್.
17ನೇ ಓವರ್ನಲ್ಲಿ 17 ರನ್ ಕಲೆಹಾಕಿದ ಪಂಜಾಬ್ ಕಿಂಗ್ಸ್.
ಕ್ರೀಸ್ನಲ್ಲಿ ಅಶುತೋಷ್ ಶರ್ಮಾ ಹಾಗೂ ಶಶಾಂಕ್ ಸಿಂಗ್ ಬ್ಯಾಟಿಂಗ್.
ನಿತೀಶ್ ರೆಡ್ಡಿ ಎಸೆದ 16ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಕ್ಯಾಚ್ ನೀಡಿದ ಜಿತೇಶ್ ಶರ್ಮಾ.
11 ಎಸೆತಗಳಲ್ಲಿ 19 ರನ್ ಬಾರಿಸಿ ಔಟಾದ ಜಿತೇಶ್ ಶರ್ಮಾ.
ಕ್ರೀಸ್ನಲ್ಲಿ ಅಶುತೋಷ್ ಶರ್ಮಾ ಹಾಗೂ ಶಶಾಂಕ್ ಸಿಂಗ್ ಬ್ಯಾಟಿಂಗ್.
15 ಓವರ್ಗಳ ಮುಕ್ತಾಯದ ವೇಳೆಗೆ 105 ರನ್ ಕಲೆಹಾಕಿದ ಪಂಜಾಬ್ ಕಿಂಗ್ಸ್.
ಕೊನೆಯ 5 ಓವರ್ಗಳಲ್ಲಿ 78 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಜಿತೇಶ್ ಶರ್ಮಾ ಹಾಗೂ ಶಶಾಂಕ್ ಸಿಂಗ್ ಬ್ಯಾಟಿಂಗ್.
ಜಯದೇವ್ ಉನಾದ್ಕಟ್ 14ನೇ ಓವರ್ನ ಮೊದಲ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಸಿಕಂದರ್ ರಾಝ.
22 ಎಸೆತಗಳಲ್ಲಿ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸಿಕಂದರ್ ರಾಝ.
ಕ್ರೀಸ್ನಲ್ಲಿ ಜಿತೇಶ್ ಶರ್ಮಾ ಹಾಗೂ ಶಶಾಂಕ್ ಸಿಂಗ್ ಬ್ಯಾಟಿಂಗ್.
ಜಯದೇವ್ ಉನಾದ್ಕಟ್ ಎಸೆದ 11ನೇ ಓವರ್ನ ಮೊದಲ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸಿಕಂದರ್ ರಾಝ.
ಕ್ರೀಸ್ನಲ್ಲಿ ಸಿಕಂದರ್ ರಾಝ ಹಾಗೂ ಶಶಾಂಕ್ ಸಿಂಗ್ ಬ್ಯಾಟಿಂಗ್.
ನಟರಾಜನ್ ಎಸೆದ 10ನೇ ಓವರ್ನ ಮೊದಲ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಸ್ಯಾಮ್ ಕರನ್.
ಮಿಡ್ ಆಫ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ಪ್ಯಾಟ್ ಕಮಿನ್ಸ್ ಅದ್ಭುತ ಕ್ಯಾಚ್… ಕರನ್ ಔಟ್.
22 ಎಸೆತಗಳಲ್ಲಿ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸ್ಯಾಮ್ ಕರನ್.
ಕ್ರೀಸ್ನಲ್ಲಿ ಸಿಕಂದರ್ ರಾಝ ಹಾಗೂ ಶಶಾಂಕ್ ಸಿಂಗ್ ಬ್ಯಾಟಿಂಗ್.
ನಿತೀಶ್ ರೆಡ್ಡಿ ಎಸೆದ 9ನೇ ಓವರ್ನ 5ನೇ ಎಸೆತದಲ್ಲಿ ಆಫ್ ಸೈಡ್ನತ್ತ ಸಿಕ್ಸ್ ಸಿಡಿಸಿದ ಸ್ಯಾಮ್ ಕರನ್.
9 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಪಂಜಾಬ್ ಕಿಂಗ್ಸ್.
ಕ್ರೀಸ್ನಲ್ಲಿ ಸಿಕಂದರ್ ರಾಝ ಹಾಗೂ ಸ್ಯಾಮ್ ಕರನ್ ಬ್ಯಾಟಿಂಗ್.
ಜಯದೇವ್ ಉನಾದ್ಕಟ್ ಎಸೆದ 8ನೇ ಓವರ್ನ ಮೊದಲ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಬಾರಿಸಿದ ಸ್ಯಾಮ್ ಕರನ್.
ಇದು ಪಂಜಾಬ್ ಕಿಂಗ್ಸ್ ಇನಿಂಗ್ಸ್ನ ಮೊದಲ ಸಿಕ್ಸ್.
ಕ್ರೀಸ್ನಲ್ಲಿ ಸಿಕಂದರ್ ರಾಝ ಹಾಗೂ ಸ್ಯಾಮ್ ಕರನ್ ಬ್ಯಾಟಿಂಗ್.
ನಿತೀಶ್ ರೆಡ್ಡಿ ಎಸೆದ 7ನೇ ಓವರ್ನ 5ನೇ ಮತ್ತು 6ನೇ ಎಸೆತಗಳಲ್ಲಿ ಫೋರ್ ಬಾರಿಸಿದ ಸಿಕಂದರ್ ರಾಝ.
7 ಓವರ್ಗಳ ಮುಕ್ತಾಯದ ವೇಳೆಗೆ ಪಂಜಾಬ್ ಕಿಂಗ್ಸ್ ತಂಡದ ಸ್ಕೋರ್ 40 ರನ್ಗಳು.
ಕ್ರೀಸ್ನಲ್ಲಿ ಸಿಕಂದರ್ ರಾಝ ಹಾಗೂ ಸ್ಯಾಮ್ ಕರನ್ ಬ್ಯಾಟಿಂಗ್.
ನಟರಾಜನ್ ಎಸೆದ 6ನೇ ಓವರ್ನ ಮೊದಲ ಎಸೆತದಲ್ಲಿ ಮಿಡ್ ಆನ್ನತ್ತ ಫೋರ್ ಬಾರಿಸಿದ ಸ್ಯಾಮ್ ಕರನ್.
ಪವರ್ಪ್ಲೇನಲ್ಲಿ ಕೇವಲ 27 ರನ್ ನೀಡಿ 3 ವಿಕೆಟ್ ಕಬಳಿಸಿದ ಸನ್‌ರೈಸರ್ಸ್ ಹೈದರಾಬಾದ್ ಬೌಲರ್ಗಳು.
ಕ್ರೀಸ್ನಲ್ಲಿ ಸಿಕಂದರ್ ರಾಝ ಹಾಗೂ ಸ್ಯಾಮ್ ಕರನ್ ಬ್ಯಾಟಿಂಗ್.
ಜಾನಿ ಬೈರ್‌ಸ್ಟೋವ್, ಶಿಖರ್ ಧವನ್ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ಔಟ್.
ಭುವನೇಶ್ವರ್ ಕುಮಾರ್ ಎಸೆದ 5ನೇ ಓವರ್ನ 4ನೇ ಎಸೆತದಲ್ಲಿ ಸ್ಟಂಪ್ ಔಟ್ ಆದ ಶಿಖರ್ ಧವನ್.
ಭುವಿ ಓವರ್ನಲ್ಲಿ ಸ್ಟಂಪ್ ಔಟ್ ಮಾಡಲು ವಿಕೆಟ್ ಹತ್ತಿರ ನಿಂತಿದ್ದ ವಿಕೆಟ್ ಕೀಪರ್ ಹೆನ್ರಿಕ್ ಕ್ಲಾಸೆನ್.
ಮುನ್ನುಗಿ ಹೊಡೆಯಲು ಯತ್ನಿಸಿದ ಶಿಖರ್ ಧವನ್ (14) ಅವರನ್ನು ಕ್ಷಣಾರ್ಧದಲ್ಲಿ ಸ್ಟಂಪ್ ಔಟ್ ಮಾಡಿದ ಕ್ಲಾಸೆನ್.
ಭುವನೇಶ್ವರ್ ಕುಮಾರ್ ಎಸೆದ 3ನೇ ಓವರ್ನ ಕೊನೆಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಪ್ರಭ್ಸಿಮ್ರಾನ್ ಸಿಂಗ್.
ಫ್ರಂಟ್ ಫೀಲ್ಡರ್ ನಿತೀಶ್ ರೆಡ್ಡಿ ಅತ್ಯುತ್ತಮ ರನ್ನಿಂಗ್ ಕ್ಯಾಚ್. ಪ್ರಭ್ಸಿಮ್ರಾನ್ ಸಿಂಗ್ ಔಟ್.
6 ಎಸೆತಗಳಲ್ಲಿ 4 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಪ್ರಭ್ಸಿಮ್ರಾನ್ ಸಿಂಗ್.
ಪ್ಯಾಟ್ ಕಮಿನ್ಸ್ ಎಸೆದ 2ನೇ ಓವರ್ನ 4ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಜಾನಿ ಬೈರ್‌ಸ್ಟೋವ್.
3 ಎಸೆತಗಳನ್ನು ಎದುರಿಸಿದರೂ ಶೂನ್ಯಕ್ಕೆ ಔಟಾದ ಬೈರ್‌ಸ್ಟೋವ್.
ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಮೊದಲ ಯಶಸ್ಸು.
ಕ್ರೀಸ್ನಲ್ಲಿ ಶಿಖರ್ ಧವನ್ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ಬ್ಯಾಟಿಂಗ್.
20 ಓವರ್ಗಳಲ್ಲಿ 182 ರನ್ ಕಲೆಹಾಕಿದ ಸನ್‌ರೈಸರ್ಸ್ ಹೈದರಾಬಾದ್ ತಂಡ.
ಎಸ್ಆರ್ಹೆಚ್ ಪರ 37 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 64 ರನ್ ಬಾರಿಸಿ ಮಿಂಚಿದ ನಿತೀಶ್ ರೆಡ್ಡಿ.
ಪಂಜಾಬ್ ಕಿಂಗ್ಸ್ ಪರ 4 ಓವರ್ಗಳಲ್ಲಿ 29 ರನ್ ನೀಡಿ 4 ವಿಕೆಟ್ ಕಬಳಿಸಿದ ಅರ್ಷದೀಪ್ ಸಿಂಗ್.
ಅರ್ಷದೀಪ್ ಸಿಂಗ್ ಎಸೆದ 19ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶಹಬಾಝ್ ಅಹ್ಮದ್,
ಕೊನೆಯ 6 ಎಸೆತಗಳು ಮಾತ್ರ ಬಾಕಿ.
ಕ್ರೀಸ್ನಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಶಹಬಾಝ್ ಅಹ್ಮದ್ ಬ್ಯಾಟಿಂಗ್.
ಕಗಿಸೊ ರಬಾಡ ಎಸೆದ 18ನೇ ಓವರ್ನ 3ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಪ್ಯಾಟ್ ಕಮಿನ್ಸ್.
4 ಎಸೆತಗಳಲ್ಲಿ 3 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಸ್ಆರ್ಹೆಚ್ ತಂಡದ ನಾಯಕ.
ಕ್ರೀಸ್ನಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಶಹಬಾಝ್ ಅಹ್ಮದ್ ಬ್ಯಾಟಿಂಗ್.
ಅರ್ಷದೀಪ್ ಸಿಂಗ್ ಎಸೆದ 17ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಕ್ಯಾಚ್ ನೀಡಿದ ಅಬ್ದುಲ್ ಸಮದ್.
12 ಎಸೆತಗಳಲ್ಲಿ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಬ್ದುಲ್ ಸಮದ್.
5ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಸುಲಭ ಕ್ಯಾಚ್ ನೀಡಿದ ನಿತೀಶ್ ರೆಡ್ಡಿ.
37 ಎಸೆತಗಳಲ್ಲಿ 64 ರನ್ಗಳ ಕೊಡುಗೆ ನೀಡಿ ಔಟಾದ ನಿತೀಶ್ ರೆಡ್ಡಿ.
ಕ್ರೀಸ್ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಶಹಬಾಝ್ ಅಹ್ಮದ್ ಬ್ಯಾಟಿಂಗ್.
ಹರ್ಷಲ್ ಪಟೇಲ್ ಎಸೆದ 16ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಕವರ್ನತ್ತ ಫೋರ್ ಬಾರಿಸಿದ ಸಮದ್.
5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಸಮದ್ ಬ್ಯಾಟ್ನಿಂದ ಮತ್ತೊಂದು ಫೋರ್.
ಕ್ರೀಸ್ನಲ್ಲಿ ನಿತೀಶ್ ರೆಡ್ಡಿ ಹಾಗೂ ಅಬ್ದುಲ್ ಸಮದ್ ಬ್ಯಾಟಿಂಗ್.
ಹರ್‌ಪ್ರೀತ್ ಬ್ರಾರ್ ಎಸೆದ 15ನೇ ಓವರ್ನ ಮೂರನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದ ನಿತೀಶ್.
ಈ ಸಿಕ್ಸ್ನೊಂದಿಗೆ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನಿತೀಶ್ ರೆಡ್ಡಿ.
5ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಬಾರಿಸಿದ ನಿತೀಶ್ ರೆಡ್ಡಿ.
15 ಓವರ್ಗಳ ಮುಕ್ತಾಯದ ವೇಳೆಗೆ ಸನ್‌ರೈಸರ್ಸ್ ಹೈದರಾಬಾದ್ ಸ್ಕೋರ್ 133 ರನ್ಗಳು.
ಹರ್ಷಲ್ ಪಟೇಲ್ ಎಸೆದ 14ನೇ ಓವರ್ನ ಮೊದಲ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ.
ಚೆಂಡು ನೇರವಾಗಿ ಬೌಂಡರಿ ಲೈನ್ನಲ್ಲಿದ್ದ ಸ್ಯಾಮ್ ಕರನ್ ಕೈಗೆ…ಹೆನ್ರಿಕ್ ಕ್ಲಾಸೆನ್ ಔಟ್.
9 ಎಸೆತಗಳಲ್ಲಿ 9 ರನ್ ಬಾರಿಸಿ ಔಟಾದ ಕ್ಲಾಸೆನ್.
ಕ್ರೀಸ್ನಲ್ಲಿ ನಿತೀಶ್ ರೆಡ್ಡಿ ಹಾಗೂ ಅಬ್ದುಲ್ ಸಮದ್ ಬ್ಯಾಟಿಂಗ್.
13ನೇ ಓವರ್ನಲ್ಲಿ ಶತಕ ಪೂರೈಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ.
ಕ್ರೀಸ್ನಲ್ಲಿ ನಿತೀಶ್ ರೆಡ್ಡಿ ಹಾಗೂ ಹೆನ್ರಿಕ್ ಕ್ಲಾಸೆನ್ ಬ್ಯಾಟಿಂಗ್.
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್ ಹಾಗೂ ರಾಹುಲ್ ತ್ರಿಪಾಠಿ ಔಟ್.
ಕಗಿಸೊ ರಬಾಡ ಎಸೆದ 12ನೇ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ನಿತೀಶ್ ರೆಡ್ಡಿ.
25 ಎಸೆತಗಳಲ್ಲಿ 33 ರನ್ ಬಾರಿಸುವ ಮೂಲಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಯುವ ದಾಂಡಿಗ.
ಕ್ರೀಸ್ನಲ್ಲಿ ನಿತೀಶ್ ರೆಡ್ಡಿ ಹಾಗೂ ಹೆನ್ರಿಕ್ ಕ್ಲಾಸೆನ್ ಬ್ಯಾಟಿಂಗ್.
ಹರ್‌ಪ್ರೀತ್ ಬ್ರಾರ್ ಎಸೆದ 11ನೇ ಓವರ್ನಲ್ಲಿ 15 ರನ್ ಕಲೆಹಾಕಿದ ನಿತೀಶ್ ರೆಡ್ಡಿ
1 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ ರನ್ ಗತಿ ಹೆಚ್ಚಿಸಿದ ಯುವ ದಾಂಡಿಗ.
ಕ್ರೀಸ್ನಲ್ಲಿ ನಿತೀಶ್ ರೆಡ್ಡಿ ಹಾಗೂ ಹೆನ್ರಿಕ್ ಕ್ಲಾಸೆನ್ ಬ್ಯಾಟಿಂಗ್.
ಹರ್ಷಲ್ ಪಟೇಲ್ ಎಸೆದ 10ನೇ ಓವರ್ನ 4ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ರಾಹುಲ್ ತ್ರಿಪಾಠಿ.
14 ಎಸೆತಗಳಲ್ಲಿ 11 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬಲಗೈ ಬ್ಯಾಟರ್ ರಾಹುಲ್ ತ್ರಿಪಾಠಿ.
ಕ್ರೀಸ್ನಲ್ಲಿ ನಿತೀಶ್ ರೆಡ್ಡಿ ಹಾಗೂ ಹೆನ್ರಿಕ್ ಕ್ಲಾಸೆನ್ ಬ್ಯಾಟಿಂಗ್.
9ನೇ ಓವರ್ನಲ್ಲಿ ಕೇವಲ 5 ರನ್ ಮಾತ್ರ ನೀಡಿದ ಹರ್‌ಪ್ರೀತ್ ಬ್ರಾರ್.
9 ಓವರ್ಗಳ ಮುಕ್ತಾಯದ ವೇಳೆಗೆ ಎಸ್ಆರ್ಹೆಚ್ ಸ್ಕೋರ್ 61 ರನ್ಗಳು.
ಕ್ರೀಸ್ನಲ್ಲಿ ನಿತೀಶ್ ರೆಡ್ಡಿ ಹಾಗೂ ರಾಹುಲ್ ತ್ರಿಪಾಠಿ ಬ್ಯಾಟಿಂಗ್.
ಟ್ರಾವಿಸ್ ಹೆಡ್, ಐಡೆನ್ ಮಾರ್ಕ್ರಾಮ್ ಮತ್ತು ಅಭಿಷೇಕ್ ಶರ್ಮಾ ಔಟ್.
ಸ್ಯಾಮ್ ಕರನ್ ಎಸೆದ 8ನೇ ಓವರ್ನ ಮೊದಲ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ನಿತೀಶ್ ರೆಡ್ಡಿ.
8 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಸನ್‌ರೈಸರ್ಸ್ ಹೈದರಾಬಾದ್.
ಕ್ರೀಸ್ನಲ್ಲಿ ನಿತೀಶ್ ರೆಡ್ಡಿ ಹಾಗೂ ರಾಹುಲ್ ತ್ರಿಪಾಠಿ ಬ್ಯಾಟಿಂಗ್.
ಪವರ್ಪ್ಲೇನಲ್ಲಿ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ ಪಂಜಾಬ್ ಕಿಂಗ್ಸ್ ಬೌಲರ್ಗಳು.
6 ಓವರ್ಗಳಲ್ಲಿ 40 ರನ್ ಕಲೆಹಾಕಿದ ಸನ್‌ರೈಸರ್ಸ್ ಹೈದರಾಬಾದ್.
ಕ್ರೀಸ್ನಲ್ಲಿ ನಿತೀಶ್ ರೆಡ್ಡಿ ಹಾಗೂ ರಾಹುಲ್ ತ್ರಿಪಾಠಿ ಬ್ಯಾಟಿಂಗ್.
ಸ್ಯಾಮ್ ಕರನ್ ಎಸೆದ 5ನೇ ಓವರ್ನ 4ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಅಭಿಷೇಕ್ ಶರ್ಮಾ.
5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಆಕರ್ಷಕ ಫೋರ್.
6ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಅಭಿಷೇಕ್ ಶರ್ಮಾ.
11 ಎಸೆತಗಳಲ್ಲಿ 16 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಅಭಿಷೇಕ್.
ಅರ್ಷದೀಪ್ ಸಿಂಗ್ ಎಸೆದ 4ನೇ ಓವರ್ನ 2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಟ್ರಾವಿಸ್ ಹೆಡ್.
ಶಿಖರ್ ಧವನ್ ಉತ್ತಮ ರನ್ನಿಂಗ್ ಕ್ಯಾಚ್… ಟ್ರಾವಿಸ್ ಹೆಡ್ ಔಟ್.
15 ಎಸೆತಗಳಲ್ಲಿ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್.
ನಾಲ್ಕನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಐಡೆನ್ ಮಾರ್ಕ್ರಾಮ್ (0).
ಕಗಿಸೊ ರಬಾಡ ಎಸೆದ ಮೂರನೇ ಓವರ್ನ ಮೊದಲ ಮೂರು ಎಸೆತದಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಟ್ರಾವಿಸ್ ಹೆಡ್.
ಮೊದಲ ಎಸೆತದಲ್ಲಿ ಇನ್ಸೈಡ್ ಎಡ್ಜ್ ಆಗಿ ಹಿಂಬದಿಯತ್ತ ಫೋರ್.
ಎರಡನೇ ಎಸೆತದಲ್ಲಿ ಲಾಂಗ್ ಆನ್ನತ್ತ ಫೋರ್ ಬಾರಿಸಿದ ಹೆಡ್.
ಮೂರನೇ ಎಸೆತದಲ್ಲಿ ಡೀಪ್ ಮಿಡ್ ಆನ್ನತ್ತ ಆಕರ್ಷಕ ಫೋರ್ ಸಿಡಿಸಿದ ಟ್ರಾವಿಸ್ ಹೆಡ್.
ಮೊದಲೆರಡು ಓವರ್ಗಳಲ್ಲಿ ಕೇವಲ 10 ರನ್ ನೀಡಿದ ಪಂಜಾಬ್ ಕಿಂಗ್ಸ್ ಬೌಲರ್ಗಳು.
ಅರ್ಷದೀಪ್ ಸಿಂಗ್ ಎಸೆದ 2ನೇ ಓವರ್ನ 5ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಎಡಗೈ ದಾಂಡಿಗ ಅಭಿಷೇಕ್ ಶರ್ಮಾ.
ಕ್ರೀಸ್ನಲ್ಲಿ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಬ್ಯಾಟಿಂಗ್.
ಮೊದಲ ಓವರ್ನಲ್ಲಿ ಕೇವಲ 4 ರನ್ ಮಾತ್ರ ನೀಡಿದ ಕಗಿಸೊ ರಬಾಡ.
ರಬಾಡ ಎಸೆದ ಮೊದಲ ಓವರ್ನಲ್ಲಿ ಟ್ರಾವಿಸ್ ಹೆಡ್ ಬ್ಯಾಟ್ ಎಡ್ಜ್ ಆಗಿ ಹಿಂಬದಿಯತ್ತ ಸಾಗಿದ ಚೆಂಡು..ಫೋರ್.
ಕ್ರೀಸ್ನಲ್ಲಿ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಬ್ಯಾಟಿಂಗ್.
ಸನ್‌ರೈಸರ್ಸ್ ಹೈದರಾಬಾದ್ ಪರ ಆರಂಭಿಕರು: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್.
ಪಂಜಾಬ್ ಕಿಂಗ್ಸ್ ಪರ ಮೊದಲ ಓವರ್: ಕಗಿಸೊ ರಬಾಡ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ಪಂಜಾಬ್ ಕಿಂಗ್ಸ್.
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಝ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್.
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಪ್ರಭ್ಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕರನ್, ಸಿಕಂದರ್ ರಾಝ, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಕಗಿಸೊ ರಬಾಡ.
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 23ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದೆ. ಚಂಡೀಗಢದ ಮಹಾರಾಜ ಯದವೀಂದ್ರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಇಂದಿನ ಪಂದ್ಯ: ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್
ಸ್ಥಳ: ಮಹಾರಾಜ ಯದವೀಂದ್ರ ಸ್ಟೇಡಿಯಂ, ಚಂಡೀಗಢ
ಟಾಸ್ ಪ್ರಕ್ರಿಯೆ: 7 ಗಂಟೆಗೆ
ಪಂದ್ಯ ಶುರು: 7.30 ರಿಂದ
Published On - 6:31 pm, Tue, 9 April 24