CLT20: ಚಾಂಪಿಯನ್ಸ್​ ಲೀಗ್ ಆಯೋಜನೆಗೆ ಬಿಸಿಸಿಐ ಭರ್ಜರಿ ಪ್ಲ್ಯಾನ್

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) ಟಾಪ್-3 ತಂಡಗಳನ್ನು ಒಳಗೊಂಡಂತೆ ವಿಶ್ವದ ಪ್ರಮುಖ ಲೀಗ್​ಗಳಲ್ಲಿನ ವಿಜೇತ ತಂಡಗಳ ನಡುವಣ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸುತ್ತಿದೆ. ಈ ಯೋಜನೆ ಯಶಸ್ವಿಯಾದರೆ, IPL 2024 ರ ಮುಕ್ತಾಯದ ಬಳಿಕ ಮತ್ತೊಂದು ವರ್ಣರಂಚಿತ ಟೂರ್ನಿಯನ್ನು ವೀಕ್ಷಿಸುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ದೊರೆಯಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Apr 03, 2024 | 10:53 AM

ಚಾಂಪಿಯನ್ಸ್ ಲೀಗ್ ಟಿ20 (CLT20) ಟೂರ್ನಿಯನ್ನು ಮತ್ತೆ ಆಯೋಜಿಸಲು ಬಿಸಿಸಿಐ ತೆರೆಮರೆಯ ಪ್ರಯತ್ನಕ್ಕೆ ಕೈ ಹಾಕಿದೆ. ವಿಶ್ವದ ಪ್ರಮುಖ ಲೀಗ್​ಗಳಲ್ಲಿನ ಚಾಂಪಿಯನ್ಸ್ ತಂಡಗಳ ನಡುವಣ ಟೂರ್ನಿಯನ್ನು 2014 ರಲ್ಲಿ ಕೊನೆಯ ಬಾರಿ ಆಯೋಜಿಸಲಾಗಿತ್ತು. ಇದಾದ ಬಳಿಕ ವಿಶ್ವದ ಚಾಂಪಿಯನ್ಸ್ ತಂಡಗಳನ್ನು ಮತ್ತೆ ಒಂದುಗೂಡಿಸಲು ಬಿಸಿಸಿಐಗೆ ಸಾಧ್ಯವಾಗಿರಲಿಲ್ಲ.

1 / 6
ಇದೀಗ 10 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಈ ಬಗ್ಗೆ ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮತ್ತು ಇಸಿಬಿ (ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ) ಜೊತೆ ಬಿಸಿಸಿಐ ಚರ್ಚೆ ನಡೆಸಿದೆ. ಈ ಮಾತುಕತೆ ಯಶಸ್ವಿಯಾದರೆ ಇದೇ ವರ್ಷ ಚಾಂಪಿಯನ್ಸ್ ಲೀಗ್ ಟೂರ್ನಿ ಆಯೋಜನೆಗೊಳ್ಳುವ ಸಾಧ್ಯತೆಯಿದೆ.

2 / 6
ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ವಿಶ್ವದ ಪ್ರಮುಖ ಲೀಗ್​ನಲ್ಲಿನ ತಂಡಗಳು ಕಣಕ್ಕಿಳಿಯಲಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಐಪಿಎಲ್​ನ ಮೂರು ತಂಡಗಳು, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ಲೀಗ್​ನಿಂದ ತಲಾ ಎರಡು ತಂಡಗಳು ಹಾಗೂ ಪಾಕಿಸ್ತಾನ್, ವೆಸ್ಟ್ ಇಂಡೀಸ್ ಮತ್ತು ನ್ಯೂಝಿಲೆಂಡ್​ನ ಟಿ20 ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ತಂಡಗಳು ಕಣಕ್ಕಿಳಿದಿದ್ದವು.

3 / 6
ಇದೀಗ ಮತ್ತೊಮ್ಮೆ ಫ್ರಾಂಚೈಸಿ ಲೀಗ್​ನ ಚಾಂಪಿಯನ್ಸ್​ ತಂಡಗಳನ್ನು ಒಂದುಗೂಡಿಸಿ ಚಾಂಪಿಯನ್ಸ್ ಟಿ20 ಟೂರ್ನಿ ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸುತ್ತಿದೆ. ಆದರೆ ಪ್ರಸ್ತುತ ಕ್ರಿಕೆಟ್ ಕ್ಯಾಲೆಂಡರ್ ಜ್ಯಾಮ್-ಪ್ಯಾಕ್ ಆಗಿರುವ ಕಾರಣ ಈ ಟೂರ್ನಿಗಾಗಿ ಸಮಯವಕಾಶವನ್ನು ಕಂಡುಕೊಳ್ಳಬೇಕಿರುವುದು ಬಿಸಿಸಿಐ ಮುಂದಿರುವ ದೊಡ್ಡ ಸವಾಲು.

4 / 6
ಹೀಗಾಗಿ ಇಂಗ್ಲೆಂಡ್, ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಜೊತೆ ಬಿಸಿಸಿಐ ಚರ್ಚೆ ನಡೆಸಿದ್ದು, ಈ ಎರಡು ಕ್ರಿಕೆಟ್ ಮಂಡಳಿ ತಮ್ಮ ರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಯನ್ನು ಬದಲಿಸಿದರೆ, ಚಾಂಪಿಯನ್ಸ್ ಟಿ20 ಲೀಗ್​ಗೆ ವಿಂಡೋ ತೆರೆದುಕೊಳ್ಳಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ಮಾತುಕತೆ ಯಶಸ್ವಿಯಾದರೆ, ನವೆಂಬರ್-ಡಿಸೆಂಬರ್ ವೇಳೆ ಚಾಂಪಿಯನ್ ತಂಡಗಳ ಚಾಂಪಿಯನ್ಸ್​ ಟಿ20 ಲೀಗ್ ಆಯೋಜನೆಗೊಳ್ಳುವ ಸಾಧ್ಯತೆಯಿದೆ.

5 / 6
2009-10 ರಿಂದ 2014-15 ರ ನಡುವೆ 6 ಬಾರಿ ಚಾಂಪಿಯನ್ಸ್ ಟಿ20 ಟೂರ್ನಿಯನ್ನು ಆಯೋಜಿಸಲಾಗಿದೆ. ನಾಲ್ಕು ಬಾರಿ ಭಾರತದಲ್ಲಿ ಟೂರ್ನಿ ನಡೆದರೆ, 2 ಬಾರಿ ಸೌತ್ ಆಫ್ರಿಕಾದಲ್ಲಿ ಟೂರ್ನಿಯನ್ನು ಆಡಲಾಗಿತ್ತು. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ ಎರಡು ಬಾರಿ ಗೆದ್ದರೆ, ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ತಲಾ ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

6 / 6
Follow us