Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಪಂದ್ಯ ವೀಕ್ಷಿಸಲು ಬರದ ಪ್ರೇಕ್ಷಕರು: ಟಿಕೆಟ್ ಬೆಲೆ 15 ರೂ.ಗೆ ಇಳಿಸಿದ ಪಿಸಿಬಿ

ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಆಗಸ್ಟ್ 21 ರಿಂದ ಶುರುವಾಗಲಿರುವ ಈ ಸರಣಿ ಪಂದ್ಯಗಳ ಟಿಕೆಟ್ ದರಗಳನ್ನು ಘೋಷಿಸಲಾಗಿದೆ. ಅಚ್ಚರಿ ಎಂದರೆ ಈ ಪಂದ್ಯಗಳ ದಿನದಾಟದ ಟಿಕೆಟ್ ದರ ಕೇವಲ 15 ರೂ. (ಪಿಕೆಆರ್​ 50) ಎಂದು ನಿಗದಿ ಮಾಡಲಾಗಿದೆ. ಅಂದರೆ ಅತೀ ಕಡಿಮೆ ಬೆಲೆಗೆ ಟಿಕೆಟ್​ಗಳನ್ನು ಮಾರಾಟ ಮಾಡಲು ಪಿಸಿಬಿ ನಿರ್ಧರಿಸಿದೆ.

ಪಾಕಿಸ್ತಾನದ ಪಂದ್ಯ ವೀಕ್ಷಿಸಲು ಬರದ ಪ್ರೇಕ್ಷಕರು: ಟಿಕೆಟ್ ಬೆಲೆ 15 ರೂ.ಗೆ ಇಳಿಸಿದ ಪಿಸಿಬಿ
Pakistan
Follow us
ಝಾಹಿರ್ ಯೂಸುಫ್
|

Updated on: Aug 13, 2024 | 12:43 PM

ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 21 ರಿಂದ ಶುರುವಾಗಲಿದೆ. ತವರಿನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ ಎದುರಾಗುವ ಆತಂಕದಲ್ಲಿ ಪಾಕ್ ಕ್ರಿಕೆಟ್ ಮಂಡಳಿ. ಏಕೆಂದರೆ ಕಳೆದ ಒಂದು ವರ್ಷದಿಂದ ಪಾಕಿಸ್ತಾನ್ ಆಟಗಾರರ ಪಂದ್ಯವನ್ನು ವೀಕ್ಷಿಸಲು ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಆಗಮಿಸುತ್ತಿಲ್ಲ. ಹೀಗಾಗಿಯೇ ಇದೀಗ ಟೆಸ್ಟ್ ಪಂದ್ಯಗಳ ಟಿಕೆಟ್ ದರವನ್ನು ಇಳಿಕೆ ಮಾಡಿದೆ. ಅದು ಸಹ ಕೇವಲ 15 ರೂ.ಗೆ ಎಂಬುದೇ ಅಚ್ಚರಿ.

ಕರಾಚಿಯಲ್ಲಿ ನಡೆಯಲಿರುವ ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಪಂದ್ಯದ ಟಿಕೆಟ್ ದರವನ್ನು ಘೋಷಿಸಲಾಗಿದೆ. ಇಲ್ಲಿ ಸಾಮಾನ್ಯ ಟಿಕೆಟ್ ಕೇವಲ ಕೇವಲ 15 ರೂ. (PKR 50 ರೂ.) ಗೆ ಮಾರಾಟ ಮಾಡಲಾಗುತ್ತಿದೆ.

2024ರ ಪಾಕಿಸ್ತಾನ್ ಸೂಪರ್ ಲೀಗ್ (PSL) ವೇಳೆ ಸ್ಟೇಡಿಯಂಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದುಕಂಡಿತ್ತು. ಅದರಲ್ಲೂ ಎಲಿಮಿನೇಟರ್ ಅಥವಾ ಫೈನಲ್‌ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ನಿರೀಕ್ಷಿತ ಮಟ್ಟದಲ್ಲಿ ಆಗಮಿಸಿರಲಿಲ್ಲ. ಇನ್ನು ಏಷ್ಯಾಕಪ್ ಕೂಡ ಖಾಲಿ ಸ್ಟೇಡಿಯಂಗಳಿಗೆ ಸಾಕ್ಷಿಯಾಗಿತ್ತು.

ಹೀಗಾಗಿಯೇ ಟೆಸ್ಟ್ ಪಂದ್ಯಗಳಿಗೂ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಆತಂಕ ಪಿಸಿಬಿ ಎದುರಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು 50 ಪಿಕೆ ರೂ.​ಗೆ (ಭಾರತದ 15 ರೂ.) ಟಿಕೆಟ್​ಗಳನ್ನು ಮಾರಾಟ ಮಾಡಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಾಗಿದೆ.

ಇನ್ನು ಈ ಪಂದ್ಯಗಳ ಐದು ದಿನದಾಟದ ಟಿಕೆಟ್​ ಅನ್ನು ಖರೀದಿಸುವವರಿಗೆ ವಿಶೇಷ ರಿಯಾಯಿತಿಯನ್ನು ಸಹ ಘೋಷಿಸಿದೆ. ಅದರಂತೆ ಪೂರ್ಣ ಐದು ದಿನಗಳವರೆಗೆ ಕ್ರಿಕೆಟ್ ವೀಕ್ಷಿಸಲು ಬಯಸಿದರೆ, ಅವರು ಕೇವಲ 72 ರೂ.ಗೆ (PKR 215) ಪಾಸ್ ನೀಡಲಾಗುತ್ತಿದೆ.

ಈ ಮೂಲಕ ಟೆಸ್ಟ್ ಕ್ರಿಕೆಟ್​ಗೆ ಪ್ರೇಕ್ಷಕರನ್ನು ಕರೆತರಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಪ್ಲ್ಯಾನ್ ರೂಪಿಸಿದೆ. ಅದರಂತೆ ಬಾಂಗ್ಲಾದೇಶ್ ಮತ್ತು ಪಾಕಿಸ್ತಾನ್ ನಡುವಣ ಟೆಸ್ಟ್ ಪಂದ್ಯದ ವೇಳೆ ಸ್ಟೇಡಿಯಂ ಭರ್ತಿಯಾಗಲಿದೆಯಾ ಕಾದು ನೋಡಬೇಕಿದೆ.

ಪಾಕಿಸ್ತಾನ್ ಟೆಸ್ಟ್ ತಂಡ: ಶಾನ್ ಮಸೂದ್ (ನಾಯಕ), ಸೌದ್ ಶಕೀಲ್ (ಉಪನಾಯಕ), ಅಮೀರ್ ಜಮಾಲ್, ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಬಾಬರ್ ಆಝಂ, ಕಮ್ರಾನ್ ಗುಲಾಮ್, ಖುರ್ರಂ ಶಹಜಾದ್, ಮೀರ್ ಹಮ್ಜಾ, ಮೊಹಮ್ಮದ್ ಅಲಿ, ಮೊಹಮ್ಮದ್ ಹುರೈರಾ, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ನಸೀಮ್ ಶಾ, ಸೈಮ್ ಅಯೂಬ್, ಸಲ್ಮಾನ್ ಅಲಿ ಅಘಾ, ಸರ್ಫರಾಝ್ ಅಹ್ಮದ್ (ವಿಕೆಟ್ ಕೀಪರ್), ಶಾಹೀನ್ ಅಫ್ರಿದಿ.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಹರಾಜಿನಲ್ಲಿ ಕಾಣಿಸಿಕೊಂಡರೆ 30 ಕೋಟಿ ರೂ. ಗ್ಯಾರಂಟಿ..!

ಬಾಂಗ್ಲಾದೇಶ್ ಟೆಸ್ಟ್ ತಂಡ: ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮಹಮ್ಮದುಲ್ ಹಸನ್ ಜಾಯ್, ಜಾಕಿರ್ ಹಸನ್, ಶದ್ಮನ್ ಇಸ್ಲಾಂ, ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟನ್ ಕುಮಾರ್ ದಾಸ್, ಮೆಹದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ನಯೀಮ್ ಹಸನ್, ನಹಿದ್ ರಾಣಾ, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್, ಹಸನ್ ತಸ್ಕಿನ್ ಅಹ್ಮದ್ ಮತ್ತು ಸೈಯದ್ ಖಾಲಿದ್ ಅಹ್ಮದ್.

ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ
ಅಧ್ಯಕ್ಷರು ಊಟಕ್ಕೆ ಕರೆದರೆ ಹೋಗದಿರಲಾಗುತ್ತದೆಯೇ? ಸತೀಶ್ ಜಾರಕಿಹೊಳಿ
ಅಧ್ಯಕ್ಷರು ಊಟಕ್ಕೆ ಕರೆದರೆ ಹೋಗದಿರಲಾಗುತ್ತದೆಯೇ? ಸತೀಶ್ ಜಾರಕಿಹೊಳಿ
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ