‘ಫಲಿತಾಂಶವೇ ಹೇಳುತ್ತದೆ’; ಭಾರತ- ಪಾಕ್ ನಡುವೆ ಯಾವುದು ಬೆಸ್ಟ್ ತಂಡ? ಮೋದಿ ಉತ್ತರ ಏನು ಗೊತ್ತಾ?

|

Updated on: Mar 16, 2025 | 10:28 PM

PM Modi on India-Pakistan Cricket: ಲೆಕ್ಸ್ ಫ್ರೀಡ್‌ಮ್ಯಾನ್ ಜೊತೆಗಿನ ಸಂದರ್ಶನದಲ್ಲಿ, ಪ್ರಧಾನಿ ಮೋದಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳ ಮಹತ್ವವನ್ನು ಚರ್ಚಿಸಿದ್ದಾರೆ. ಕ್ರೀಡೆ ಜನರನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. ಯಾವ ತಂಡ ಉತ್ತಮ ಎಂಬ ಪ್ರಶ್ನೆಗೆ, ಫಲಿತಾಂಶಗಳು ತಾವಾಗಿಯೇ ಮಾತನಾಡುತ್ತವೆ ಎಂದು ಅವರು ಉತ್ತರಿಸಿದ್ದಾರೆ. ಅತ್ಯುತ್ತಮ ಫುಟ್ಬಾಲ್ ಆಟಗಾರನಾಗಿ ಮೆಸ್ಸಿಯನ್ನು ಅವರು ಪ್ರಶಂಸಿಸಿದ್ದಾರೆ.

‘ಫಲಿತಾಂಶವೇ ಹೇಳುತ್ತದೆ’; ಭಾರತ- ಪಾಕ್ ನಡುವೆ ಯಾವುದು ಬೆಸ್ಟ್ ತಂಡ? ಮೋದಿ ಉತ್ತರ ಏನು ಗೊತ್ತಾ?
Pm Modi
Follow us on

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕಿರುವ ಮಹತ್ವವನ್ನು ನಾವು ಹೊಸದಾಗಿ ಹೇಳಬೇಕಿಲ್ಲ. ಈ ಎರಡೂ ತಂಡಗಳು ಕ್ರಿಕೆಟ್ ಕಣದಲ್ಲಿ ಎದುರುಬದುರಾಗುತ್ತಿವೆ ಎಂಬ ಸುದ್ದಿ ಹೊರಬಿದ್ದರೆ ಸಾಕು ಅಭಿಮಾನಿಗಳು ಈ ಪಂದ್ಯಕ್ಕಾಗಿ ಬಕ ಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಎಲ್ಲೇ ಪಂದ್ಯ ನಡದರು ಮೈದಾನಗಳು ಕಿಕ್ಕಿರಿದು ತುಂಬಿರುತ್ತವೆ. ಇತ್ತ ಆಟಗಾರರು ಕೂಡ ಶತಾಯಗತಾಯ ಈ ಪಂದ್ಯವನ್ನು ಗೆಲ್ಲಲೇಬೇಕೆಂಬ ಒತ್ತಡದಲಿರುತ್ತಾರೆ. ಇತ್ತಿಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಉಭಯ ತಂಡಗಳ ನಡುವಿನ ಪಂದ್ಯವೇ ಇದಕ್ಕೆ ಸಾಕ್ಷಿಯಾಗಿತ್ತು. ಇದೀಗ ಅಮೆರಿಕನ್ ಪೋಡ್​ಕ್ಯಾಸ್ಟರ್ ಹಾಗೂ ಸಂಶೋಧಕ ವಿಜ್ಞಾನಿ ಲೆಕ್ಸ್ ಫ್ರೀಡ್​​ಮ್ಯಾನ್ ಜೊತೆಗಿನ ಪೋಡ್​ಕ್ಯಾಸ್ಟ್​​ನಲ್ಲಿ ಉಭಯ ತಂಡಗಳ ಪಂದ್ಯದ ಬಗ್ಗೆ ಮಾತನಾಡಿರುವ ನರೇಂದ್ರ ಮೋದಿ ಜಾಣ್ಮೆಯ ಉತ್ತರ ನೀಡಿದ್ದಾರೆ.

ವಾಸ್ತವವಾಗಿ ಈ ಸಂದರ್ಶನದಲ್ಲಿ, ಫ್ರೀಡ್​​ಮ್ಯಾನ್ ಕ್ರೀಡೆಗಳ ಬಗ್ಗೆ ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಪಂದ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಈ ಕುರಿತು ಮಾತನಾಡಿದ ಪ್ರಧಾನಿ ಮೋದಿ, ‘ಕ್ರೀಡೆಗಳು ಇಡೀ ಜಗತ್ತಿಗೆ ಚೈತನ್ಯ ತುಂಬುವ ಮತ್ತು ಜನರನ್ನು ಒಟ್ಟುಗೂಡಿಸುವ ಶಕ್ತಿಯನ್ನು ಹೊಂದಿವೆ ಎಂದು ನಾನು ನಂಬುತ್ತೇನೆ. ಕ್ರೀಡಾ ಮನೋಭಾವವು ವಿವಿಧ ದೇಶಗಳ ಜನರನ್ನು ಒಟ್ಟಿಗೆ ತರುತ್ತದೆ. ಅದಕ್ಕಾಗಿಯೇ ಕ್ರೀಡೆಗಳು ಎಂದಿಗೂ ಅಪಖ್ಯಾತಿಗೊಳಗಾಗುವುದನ್ನು ನಾನು ಬಯಸುವುದಿಲ್ಲ. ಕ್ರೀಡೆಗಳು ಮಾನವ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾನು ನಂಬುತ್ತೇನೆ ಎಂದರು.

ಇದನ್ನೂ ಓದಿ
ಮೋದಿ ಸಂದರ್ಶನಕ್ಕಾಗಿ 45 ಗಂಟೆ ಉಪವಾಸ ಮಾಡಿದ ಲೆಕ್ಸ್ ಫ್ರೀಡ್​​ಮ್ಯಾನ್
ಆರೆಸ್ಸೆಸ್, ವಿವೇಕಾನಂದ, ಗಾಂಧೀಜಿ ಪ್ರಭಾವ ಸ್ಮರಿಸಿದ ಮೋದಿ
ಲೆಕ್ಸ್ ಫ್ರೀಡ್​ಮ್ಯಾನ್ ಪಾಡ್‌ಕ್ಯಾಸ್ಟ್​ನಲ್ಲಿ ಗೋಧ್ರಾ ಬಗ್ಗೆ ಮೋದಿ ಮಾತು
ಲೆಕ್ಸ್ ಪೋಡ್​ಕ್ಯಾಸ್ಟ್​​ನಲ್ಲಿ ಪಾಕಿಸ್ತಾನವನ್ನು ಕುಟುಕಿದ ಮೋದಿ

ಭಾರತ- ಪಾಕ್ ನಡುವೆ ಯಾವುದು ಬೆಸ್ಟ್ ತಂಡ?

ಇದೇ ಸಂದರ್ಭದಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಉತ್ತಮ ತಂಡವನ್ನು ಆಯ್ಕೆ ಮಾಡಲು ಮೋದಿಯವರನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಈಗ ಯಾರು ಉತ್ತಮ ಮತ್ತು ಯಾರು ಅಲ್ಲ ಎಂಬ ಪ್ರಶ್ನೆಗೆ ಬರೋಣ. ಆಟದ ತಂತ್ರದ ವಿಷಯಕ್ಕೆ ಬಂದರೆ, ನಾನು ಅದರಲ್ಲಿ ಪರಿಣಿತನಲ್ಲ. ಇದರಲ್ಲಿ ಪರಿಣಿತರಾದವರು ಮಾತ್ರ ಇದಕ್ಕೆ ಉತ್ತರಿಸಬಹುದು. ಯಾವ ತಂಡ ಉತ್ತಮ ಮತ್ತು ಯಾವ ಆಟಗಾರರು ಉತ್ತಮ ಎಂಬುದನ್ನು ಅವರು ಮಾತ್ರ ನಿರ್ಧರಿಸಬಹುದು. ಆದರೆ ಕೆಲವೊಮ್ಮೆ, ಫಲಿತಾಂಶಗಳು ತಾವಾಗಿಯೇ ಮಾತನಾಡುತ್ತವೆ. ಕೆಲವು ದಿನಗಳ ಹಿಂದೆ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆದಿತ್ತು ಮತ್ತು ಫಲಿತಾಂಶವು ಯಾವ ತಂಡ ಉತ್ತಮವಾಗಿದೆ ಎಂಬುದನ್ನು ತೋರಿಸಿತ್ತು. ನಮಗೆ ಗೊತ್ತಾದದ್ದು ಹೀಗೆ ಎಂದು ಪ್ರಧಾನಿ ಮೋದಿ ಉತ್ತರಿಸಿದರು.

ಇದನ್ನೂ ಓದಿ: ಲೆಕ್ಸ್ ಫ್ರೀಡ್​​ಮ್ಯಾನ್ ಪೋಡ್​ಕ್ಯಾಸ್ಟ್​​​: ಆಡಳಿತ ಸುಧಾರಣೆ ಬಗ್ಗೆ ಪ್ರಧಾನಿ ಮೋದಿ ಮಾತು

ಮೆಸ್ಸಿ ಉತ್ತಮ ಫುಟ್ಬಾಲ್ ಆಟಗಾರ

ಈ ಪಾಡ್‌ಕ್ಯಾಸ್ಟ್‌ನಲ್ಲಿ, ಪ್ರಧಾನಿಯವರಿಗೆ ಅತ್ಯುತ್ತಮ ಫುಟ್ಬಾಲ್ ಆಟಗಾರ ಯಾರು ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘80 ರ ದಶಕದಲ್ಲಿ ಜನರು ಡಿಯಾಗೋ ಮರಡೋನಾ ಅವರನ್ನು ತಿಳಿದಿದ್ದರು. ಈಗ ಎಲ್ಲರಿಗೂ ಲಿಯೋನೆಲ್ ಮೆಸ್ಸಿ ತಿಳಿದಿದ್ದಾರೆ ಎಂದು ಪ್ರಧಾನಿ ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:27 pm, Sun, 16 March 25