5 ಸಿಕ್ಸರ್, 4 ಬೌಂಡರಿ; ಐರ್ಲೆಂಡ್ ವಿರುದ್ಧ ಸರಾಗವಾಗಿ ರನ್ ನೀಡಿ ‘ಪ್ರಸಿದ್ಧ’ರಾದ ಕೃಷ್ಣ

Prasidh Krishna Struggles in India-Ireland 1st T20: ಐರ್ಲೆಂಡ್ ವಿರುದ್ಧದ ಮೊದಲ T20 ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ದುಬಾರಿ ಬೌಲರ್ ಎನಿಸಿದರು, 4 ಓವರ್‌ಗಳಲ್ಲಿ 57 ರನ್ ಬಿಟ್ಟುಕೊಟ್ಟರು. ಹರ್ಷಿತ್ ರಾಣಾ 3 ವಿಕೆಟ್ ಪಡೆದು ಮಿಂಚಿದರೆ, ಉಳಿದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಐರ್ಲೆಂಡ್ ಬ್ಯಾಟರ್‌ಗಳು ಭಾರತದ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿ ರನ್ ಕಲೆಹಾಕಿದರು. ಪಂದ್ಯದ ಪ್ರಮುಖಾಂಶಗಳು ಮತ್ತು ಬೌಲರ್‌ಗಳ ಪ್ರದರ್ಶನದ ವಿಶ್ಲೇಷಣೆ ಇಲ್ಲಿ ಲಭ್ಯ.

5 ಸಿಕ್ಸರ್, 4 ಬೌಂಡರಿ; ಐರ್ಲೆಂಡ್ ವಿರುದ್ಧ ಸರಾಗವಾಗಿ ರನ್ ನೀಡಿ ‘ಪ್ರಸಿದ್ಧ’ರಾದ ಕೃಷ್ಣ
Prasidh Krishna

Updated on: Jun 26, 2026 | 8:13 PM

ಐರ್ಲೆಂಡ್‌ನ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿರುವ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಐರ್ಲೆಂಡ್ ತಂಡ, ಭಾರತದ (India vs Ireland) ಬಲಿಷ್ಠ ಬೌಲಿಂಗ್ ವಿಭಾಗವನ್ನು ಸಮರ್ಥವಾಗಿ ಎದುರಿಸಿ 20 ಓವರ್​ಗಳಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಕಲೆಹಾಕಿತು. ತಂಡದ ಪರ ನಾಯಕ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ಹರ್ಷಿತ್ ರಾಣಾ (Harshit Rana) 3 ವಿಕೆಟ್ ಪಡೆದರು. ಉಳಿದಂತೆ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna) ಐರಿಶ್ ನೆಲದಲ್ಲೂ ಸರಾಗವಾಗಿ ರನ್ ಬಿಟ್ಟುಕೊಟ್ಟು ತೀರ ದುಬಾರಿಯಾದರು. ಪ್ರಸಿದ್ಧ್ ಒಬ್ಬರೇ ತಮ್ಮ ನಾಲ್ಕು ಓವರ್​ಗಳ ಖೋಟಾದಲ್ಲಿ ಒಂದೇ ಒಂದು ವಿಕೆಟ್ ಪಡೆಯದೆ 14.25 ರ ಸರಾಸರಿಯಲ್ಲಿ 57 ರನ್ ಬಿಟ್ಟುಕೊಟ್ಟರು.

ಪ್ರಸಿದ್ಧ್ ಬೌಲಿಂಗ್ ಹೀಗಿತ್ತು

  • ತಂಡದ ಪರ 6ನೇ ಓವರ್ ಬೌಲಿಂಗ್ ಮಾಡಲು ಬಂದ ಪ್ರಸಿದ್ಧ್ ಈ ಓವರ್​ನಲ್ಲಿ 2 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟರು. ಈ ಎರಡು ಸಿಕ್ಸರ್‌ಗಳನ್ನು ಬೆಂಜಮಿನ್ ಕ್ಯಾಲಿಟ್ಜ್ ಬಾರಿಸಿದರು. ಈ ಓವರ್​ನಲ್ಲಿ 15 ರನ್​ಗಳು ಬಂದವು.
  • ನಂತರ 9ನೇ ಓವರ್ ಬೌಲ್ ಮಾಡಿದ ಪ್ರಸಿದ್ಧ್ ಈ ಓವರ್​ನಲ್ಲಿ 1 ಬೌಂಡರಿ ಸಹಿತ 9 ರನ್ ಬಿಟ್ಟುಕೊಟ್ಟರು.
  • 12ನೇ ಓವರ್​ನಲ್ಲಿ ಮತ್ತೆ ದಾಳಿಗಿಳಿದ ಪ್ರಸಿದ್ಧ್ ಈ ಓವರ್​ನಲ್ಲೂ 1 ಬೌಂಡರಿ ಸೇರಿದಂತೆ ಒಟ್ಟು 8 ರನ್​ಗಳನ್ನು ನೀಡಿದರು.
  • ತಮ್ಮ ಖೋಟಾದ ಕೊನೆಯ ಓವರ್ ಬೌಲ್ ಮಾಡಿದ ಕೃಷ್ಣ, 17ನೇ ಓವರ್​ನಲ್ಲಿ ಬರೋಬ್ಬರಿ 27 ರನ್ ನೀಡಿದರು. ಈ ಓವರ್​ನಲ್ಲಿ ಡೆಲಾನಿ ಸತತ ಮೂರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ ಮೂರು ಸಿಕ್ಸರ್‌ಗಳು ಮತ್ತು ಎರಡು ಬೌಂಡರಿಗಳು ಸೇರಿದಂತೆ 27 ರನ್‌ಗಳು ಬಂದವು.

IND vs IRE: ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ವೈಭವ್ ಆಡುವ ಬಗ್ಗೆ ಹೇಳಿದ್ದೇನು?

ಭಾರತದ ಬೌಲರ್​ಗಳ ಪ್ರದರ್ಶನ

ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ್ದ ಪ್ರಸಿದ್ಧ್ ಕೃಷ್ಣ, ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ತುಂಬಾ ದುಬಾರಿಯಾದರು. ಪ್ರಸಿದ್ಧ್​ರನ್ನು ಹೊರತುಪಡಿಸಿದರೆ ಉಳಿದ ಬೌಲರ್​ಗಳು ಹೆಚ್ಚು ರನ್ ಬಿಟ್ಟುಕೊಡಲಿಲ್ಲ. ಹರ್ಷಿತ್ 4 ಓವರ್​ಗಳಲ್ಲಿ 24 ರನ್ ನೀಡಿ 3 ವಿಕೆಟ್ ಪಡೆದರೆ, ಅರ್ಷದೀಪ್ 4 ಓವರ್‌ಗಳಲ್ಲಿ 28 ರನ್ ನೀಡಿ 2 ವಿಕೆಟ್ ಪಡೆದರು. ದುಬೆ ಕೂಡ 3 ಓವರ್‌ಗಳಲ್ಲಿ 18 ರನ್ ನೀಡಿ 1 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 4 ಓವರ್‌ಗಳಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದರು. ಆದಾಗ್ಯೂ ವಾಷಿಂಗ್ಟನ್ ಸುಂದರ್ 1 ಓವರ್​ನಲ್ಲಿ 19 ರನ್ ನೀಡಿ ದುಬಾರಿ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 pm, Fri, 26 June 26

Follow Us