Jason Roy: ಸಿಕ್ಸ್-ಫೋರ್ಗಳ ಮೂಲಕ 92 ರನ್: ಸಿಡಿಲಬ್ಬರದ ಶತಕ ಸಿಡಿಸಿದ ಜೇಸನ್ ರಾಯ್
Jason Roy century: ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಾಯ್ ಜೇಸನ್ ರಾಯ್ ಎಹ್ಸಾನ್ ಅಲಿ ಜೊತೆಗೂಡಿ ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 71 ರನ್ ಪೇರಿಸಿದರು.
ಐಪಿಎಲ್ ಮೆಗಾ ಹರಾಜಿಗೆ ದಿನಗಳು ಮಾತ್ರ ಉಳಿದಿವೆ. ಅತ್ತ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಆಡುತ್ತಿರುವ ಕೆಲ ವಿದೇಶಿ ಆಟಗಾರರು ಈ ಬಾರಿ ಮೆಗಾ ಹರಾಜಿಗೆ ಹೆಸರು ನೀಡಿದ್ದಾರೆ. ಅದರಲ್ಲೊಬ್ಬರು ಇಂಗ್ಲೆಂಡ್ ಆಟಗಾರ ಜೇಸನ್ ರಾಯ್. ಇದೀಗ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ರಾಯ್ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಲಾಹೋರ್ ಖಲಂದರ್ಸ್ ನಡುವಣ ಈ ಪಂದ್ಯದಲ್ಲಿ ಮೊದಲು ಮಾಡಿದ ಖಲಂದರ್ಸ್ 5 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಗ್ಲಾಡಿಯೇಟರ್ಸ್ ಪರ ಜೇಸನ್ ರಾಯ್ ಇನಿಂಗ್ಸ್ ಆರಂಭಿಸಿದ್ದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಾಯ್ ಜೇಸನ್ ರಾಯ್ ಎಹ್ಸಾನ್ ಅಲಿ ಜೊತೆಗೂಡಿ ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 71 ರನ್ ಪೇರಿಸಿದರು. ಈ 71 ರನ್ನಲ್ಲಿ ಎಹ್ಸಾನ್ ಕಲೆಹಾಕಿದ್ದು ಕೇವಲ 7 ರನ್ ಮಾತ್ರ. ಉಳಿದ ರನ್ಗಳು ಮೂಡಿಬಂದಿದ್ದು ಜೇಸನ್ ರಾಯ್ ಬ್ಯಾಟ್ನಿಂದ ಎಂಬುದು ವಿಶೇಷ. ಅದರಂತೆ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಯ್, ತನ್ನ ಅಬ್ಬರವನ್ನು ಮುಂದುವರೆಸಿದರು. ಪರಿಣಾಮ 49 ಎಸೆತಗಳಲ್ಲಿ 8 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ ಶತಕ ಪೂರೈಸಿದರು. ಅಂತಿಮವಾಗಿ 57 ಎಸೆತಗಳಲ್ಲಿ 11 ಫೋರ್ ಹಾಗೂ 8 ಸಿಕ್ಸ್ನೊಂದಿಗೆ 116 ರನ್ ಗಳಿಸಿ ಔಟಾದರು. ಆ ಬಳಿಕ ಬಂದ ಜೇಮ್ಸ್ ವಿನ್ಸ್ (49) ಹಾಗೂ ಮೊಹಮ್ಮದ್ ನವಾಜ್ (25) 19.3 ಓವರ್‌ಗಳಲ್ಲಿ 207 ರನ್ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಕ್ವೆಟ್ಟಾ ಗ್ಲಾಡಿಯೇಟರ್ಸ್ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
*punches the air* ?? #HBLPSL7 l #LevelHai l #QGvLQ pic.twitter.com/CxQG89oFen
— PakistanSuperLeague (@thePSLt20) February 7, 2022
7 ಸಾವಿರ ರನ್ ಮತ್ತು 4 ಶತಕ: ಈ ಭರ್ಜರಿ ಇನಿಂಗ್ಸ್ಗೂ ಮುನ್ನ ಜೇಸನ್ ರಾಯ್ 261 ಇನ್ನಿಂಗ್ಸ್‌ಗಳಲ್ಲಿ 28 ರ ಸರಾಸರಿಯಲ್ಲಿ 6972 ರನ್ ಗಳಿಸಿದ್ದರು. ಈ ವೇಳೆ 4 ಶತಕ ಮತ್ತು 47 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಈ ಪಂದ್ಯದ ನಂತರ ಅವರ ಟಿ20ಯಲ್ಲಿ 7 ಸಾವಿರ ರನ್ ಕೂಡ ಪೂರೈಸಿದರು. ಇದು ಅವರ ಒಟ್ಟಾರೆ 5ನೇ ಶತಕ. ಅಂತರಾಷ್ಟ್ರೀಯ ಟಿ20ಯಲ್ಲಿ ಶತಕ ಗಳಿಸಲು ಸಾಧ್ಯವಾಗದಿದ್ದರೂ, 58 ಇನ್ನಿಂಗ್ಸ್‌ಗಳಲ್ಲಿ 25ರ ಸರಾಸರಿಯಲ್ಲಿ 1446 ರನ್ ಗಳಿಸಿದ್ದಾರೆ. ಈ ವೇಳೆ 8 ಅರ್ಧಶತಕ ಬಾರಿಸಿದ್ದಾರೆ. ಇನ್ನು ಕಳೆದ ಸೀಸನ್ ಐಪಿಎಲ್ನಲ್ಲಿ ಎಸ್ಆರ್ಹೆಚ್ ತಂಡದಲ್ಲಿದ್ದ ಜೇಸನ್ ರಾಯ್ ಈ ಬಾರಿ ಮೆಗಾ ಹರಾಜಿಗೆ ಹೆಸರು ನೀಡಿದ್ದಾರೆ. ಇನ್ನೇನು ಮೆಗಾ ಹರಾಜಿಗೆ ದಿನಗಳು ಮಾತ್ರ ಬಾಕಿಯಿರುವಾಗ ಅಬ್ಬರಿಸುವ ಮೂಲಕ ಇದೀಗ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: Yuzvendra Chahal: ವಿಕೆಟ್ಗಳ ಶತಕ ಪೂರೈಸಿದ ಚಹಾಲ್
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!