
ಇಂಡಿಯನ್ ಪ್ರೀಮಿಯರ್ ಲೀಗ್ನ 40ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಮುಲ್ಲನ್ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 222 ರನ್ ಕಲೆಹಾಕಿತು. ಈ ಗುರಿಯನ್ನು ರಾಜಸ್ಥಾನ್ ರಾಯಲ್ಸ್ 19.2 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ 6 ವಿಕೆಟ್ಗಳ ಜಯ ಸಾಧಿಸಿದೆ.
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ದಸುನ್ ಶಾನಕ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪೂಂಜಾ.
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಕೂಪರ್ ಕೊನೊಲಿ, ಸೂರ್ಯಾಂಶ್ ಶೆಡ್ಗೆ, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಲಾಕಿ ಫರ್ಗುಸನ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.
18ನೇ ಓವರ್ನಲ್ಲಿ 15 ರನ್ ನೀಡಿದ ಅರ್ಷದೀಪ್ ಸಿಂಗ್.
ಕೊನೆಯ 12 ಎಸೆತಗಳಲ್ಲಿ 18 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಶುಭಂ ದುಬೆ ಹಾಗೂ ಡೊನೊವನ್ ಫೆರೇರಾ ಬ್ಯಾಟಿಂಗ್.
ಮಾರ್ಕೊ ಯಾನ್ಸೆಲ್ ಎಸೆದ 16ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಶುಭಂ ದುಬೆ.
4ನೇ ಎಸೆತದಲ್ಲಿ ದುಬೆ ಬ್ಯಾಟ್ನಿಮದ ಸ್ಟ್ರೈಟ್ ಹಿಟ್ ಫೋರ್.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲ್ಲಲು 24 ಎಸೆತಗಳಲ್ಲಿ ಕೇವಲ 43 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಶುಭಂ ದುಬೆ ಹಾಗೂ ಡೊನೊವನ್ ಫೆರೇರಾ ಬ್ಯಾಟಿಂಗ್.
ಕೊನೆಯ 5 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ಗೆ 58 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಶುಭಂ ದುಬೆ ಹಾಗೂ ಡೊನೊವನ್ ಫೆರೇರಾ ಬ್ಯಾಟಿಂಗ್.
ಕುತೂಹಲಘಟ್ಟದತ್ತ ಸಾಗುತ್ತಿರುವ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯ.
ಯುಜ್ವೇಂದ್ರ ಚಹಲ್ ಎಸೆದ 14ನೇ ಓವರ್ನ ಕೊನೆಯ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ರಿಯಾನ್ ಪರಾಗ್.
16 ಎಸೆತಗಳಲ್ಲಿ 29 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ರಿಯಾನ್ ಪರಾಗ್.
14 ಓವರ್ಗಳಲ್ಲಿ 151 ರನ್ ಕಲೆಹಾಕಿರುವ ರಾಜಸ್ಥಾನ್ ರಾಯಲ್ಸ್.
ಕೊನೆಯ 6 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ಗೆ 72 ರನ್ಗಳ ಅವಶ್ಯಕತೆ.
ಚಹಲ್ ಎಸೆದ 12ನೇ ಓವರ್ನ ಮೊದಲ ಎಸೆತದಲ್ಲಿ ಫೋರ್ ಬಾರಿಸಿದ ಯಶಸ್ವಿ ಜೈಸ್ವಾಲ್.
26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಯಶಸ್ವಿ ಜೈಸ್ವಾಲ್.
2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಯಶಸ್ವಿ ಜೈಸ್ವಾಲ್ (51).
ಪಂಜಾಬ್ ಕಿಂಗ್ಸ್ ತಂಡಕ್ಕೆ ಮೂರನೇ ಯಶಸ್ಸು.
12 ಓವರ್ಗಳ ಮುಕ್ತಾಯದ ವೇಳೆಗೆ ರಾಜಸ್ಥಾನ್ ರಾಯಲ್ಸ್ ಸ್ಕೋರ್ 131 ರನ್ಗಳು.
ಕ್ರೀಸ್ನಲ್ಲಿ ರಿಯಾನ್ ಪರಾಗ್ ಹಾಗೂ ಡೊನೊವನ್ ಫೆರೇರಾ ಬ್ಯಾಟಿಂಗ್.
ಯುಜ್ವೇಂದ್ರ ಚಹಲ್ ಎಸೆದ 10ನೇ ಓವರ್ನ 4ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಧ್ರುವ್ ಜುರೆಲ್.
20 ಎಸೆತಗಳಲ್ಲಿ 16 ರನ್ಗಳಿಸಿ ವಿಕೆಟ್ ಒಪ್ಪಿಸಿದ ಧ್ರುವ್ ಜುರೆಲ್.
10 ಓವರ್ಗಳಲ್ಲಿ 109 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್.
ಕ್ರೀಸ್ನಲ್ಲಿ ರಿಯಾನ್ ಪರಾಗ್ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್.
17 ಎಸೆತಗಳ ಬಳಿಕ ಮೂಡಿಬಂದ ಬೌಂಡರಿ.
ಹರ್ಪ್ರೀತ್ ಬ್ರಾರ್ ಎಸೆದ 9ನೇ ಓವರ್ನ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದ ಯಶಸ್ವಿ ಜೈಸ್ವಾಲ್.
9 ಓವರ್ಗಳ ಮುಕ್ತಾಯದ ವೇಳೆಗೆ ರಾಜಸ್ಥಾನ್ ರಾಯಲ್ಸ್ ಸ್ಕೋರ್ 103 ರನ್ಗಳು.
ಕ್ರೀಸ್ನಲ್ಲಿ ಧ್ರು ವ್ ಜುರೆಲ್ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್.
ಔಟಾದ ಬ್ಯಾಟರ್:
5ನೇ ಓವರ್ನಲ್ಲಿ ಕೇವಲ 2 ರನ್ ನೀಡಿದ ಹರ್ಪ್ರೀತ್ ಬ್ರಾರ್
5 ಓವರ್ಗಳ ಮುಕ್ತಾಯದ ವೇಳೆಗೆ ರಾಜಸ್ಥಾನ್ ರಾಯಲ್ಸ್ ಸ್ಕೋರ್ 68 ರನ್.
ಕ್ರೀಸ್ನಲ್ಲಿ ಧ್ರುವ್ ಜುರೆಲ್ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್.
ಅರ್ಷದೀಪ್ ಸಿಂಗ್ ಎಸೆದ 4ನೇ ಓವರ್ನ 2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ವೈಭವ್ ಸೂರ್ಯವಂಶಿ.
ಕೇವಲ 16 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 43 ರನ್ ಬಾರಿಸಿ ಔಟಾದ ವೈಭವ್.
ಪಂಜಾಬ್ ಕಿಂಗ್ಸ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟ ಅರ್ಷದೀಪ್ ಸಿಂಗ್.
4 ಓವರ್ಗಳ ಮುಕ್ತಾಯದ ವೇಳೆಗೆ 66 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್.
ಕ್ರೀಸ್ನಲ್ಲಿ ಧ್ರುವ್ ಜುರೆಲ್ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್.
ಮಾರ್ಕೊ ಯಾನ್ಸೆನ್ ಎಸೆದ 3ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ವೈಭವ್ ಸೂರ್ಯವಂಶಿ.
ಮೊದಲ ಮೂರು ಓವರ್ಗಳಲ್ಲಿ 4 ಸಿಕ್ಸ್ ಸಿಡಿಸಿರುವ ವೈಭವ್ ಸೂರ್ಯವಂಶಿ.
3 ಓವರ್ಗಳಲ್ಲಿ 44 ರನ್ ಕಲೆಹಾಕಿರುವ ರಾಜಸ್ಥಾನ್ ರಾಯಲ್ಸ್.
ಕ್ರೀಸ್ನಲ್ಲಿ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್.
ಲಾಕಿ ಫರ್ಗುಸನ್ ಎಸೆದ 2ನೇ ಓವರ್ನ 5ನೇ ಮತ್ತು 6ನೇ ಎಸೆತಗಳಲ್ಲಿ ಸಿಕ್ಸ್ ಸಿಡಿಸಿದ ವೈಭವ್.
ಎರಡನೇ ಓವರ್ನಲ್ಲಿ 17 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್ ಆರಂಭಿಕರು.
ಕ್ರೀಸ್ನಲ್ಲಿ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್.
2 ಓವರ್ಗಳ ಮುಕ್ತಾಯದ ವೇಳೆಗೆ ರಾಜಸ್ಥಾನ್ ರಾಯಲ್ಸ್ ಸ್ಕೋರ್ 32 ರನ್ಗಳು.
ಮೊದಲ ಓವರ್ನಲ್ಲಿ 15 ರನ್ ನೀಡಿದ ಅರ್ಷದೀಪ್ ಸಿಂಗ್.
ಜೋಫ್ರಾ ಆರ್ಚರ್ ಎಸೆದ 19ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಮಾರ್ಕಸ್ ಸ್ಟೊಯಿನಿಸ್.
19ನೇ ಓವರ್ನಲ್ಲಿ 17 ರನ್ ಕಲೆಹಾಕಿದ ಪಂಜಾಬ್ ಕಿಂಗ್ಸ್.
19 ಓವರ್ಗಳಲ್ಲಿ 198 ರನ್ ಗಳಿಸಿರುವ ಪಂಜಾಬ್ ಕಿಂಗ್ಸ್.
ಕ್ರೀಸ್ನಲ್ಲಿ ಮಾರ್ಕಸ್ ಸ್ಟೊಯಿನಿಸ್ ಹಾಗೂ ಸುರ್ಯಾಂಶ್ ಶೆಡ್ಗೆ ಬ್ಯಾಟಿಂಗ್.
ನಾಂಡ್ರೆ ಬರ್ಗರ್ ಎಸೆದ 18ನೇ ಓವರ್ನ ಕೊನೆಯ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರ ನಡೆದ ಶ್ರೇಸ್ ಅಯ್ಯರ್ (30).
ಕೊನೆಯ ಹಂತದಲ್ಲಿ ಅಯ್ಯರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್.
ಕ್ರೀಸ್ನಲ್ಲಿ ಸುರ್ಯಾಂಶ್ ಶೆಡ್ಗೆ ಹಾಗೂ ಮಾರ್ಕಸ್ ಸ್ಟೊಯಿನಿಸ್ ಬ್ಯಾಟಿಂಗ್.
15 ಓವರ್ಗಳಲ್ಲಿ 150 ರನ್ ಕಲೆಹಾಕಿದ ಪಂಜಾಬ್ ಕಿಂಗ್ಸ್.
ಪ್ರತಿ ಓವರ್ನಲ್ಲಿ 10ರ ಸರಾಸರಿಯಲ್ಲಿ ರನ್ ಕಲೆಹಾಕಿರುವ ಪಂಜಾಬ್ ಬ್ಯಾಟರ್ಗಳು.
ಕ್ರೀಸ್ನಲ್ಲಿ ಮಾರ್ಕಸ್ ಸ್ಟೊಯಿನಿಸ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
ಔಟಾದ ಬ್ಯಾಟರ್ಗಳು:
ಯಶ್ ರಾಜ್ ಎಸೆದ 14ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶ್ರೇಯಸ್ ಅಯ್ಯರ್.
ಕೊನೆಯ ಎಸೆತದಲ್ಲಿ ಪ್ರಭ್ಸಿಮ್ರಾನ್ ಸಿಂಗ್ (59) ವಿಕೆಟ್ ಕಬಳಿಸಿದ ಯಶ್ ರಾಜ್.
14 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿರುವ ಪಂಜಾಬ್ ಕಿಂಗ್ಸ್.
35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ದಾಂಡಿಗ ಪ್ರಭ್ಸಿಮ್ರಾನ್ ಸಿಂಗ್.
12 ಓವರ್ಗಳ ಮುಕ್ತಾಯದ ವೇಳೆಗೆ 127 ರನ್ ಕಲೆಹಾಕಿದ ಪಂಜಾಬ್ ಕಿಂಗ್ಸ್,
ಕ್ರೀಸ್ನಲ್ಲಿ ಬಲಗೈ ದಾಂಡಿಗರಾದ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
ಔಟಾದ ಬ್ಯಾಟರ್ಗಳು:
ಯಶ್ ಪೂಂಜಾ ಎಸೆದ 9ನೇ ಓವರ್ನ 2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಕೂಪರ್ ಕೊನೊಲಿ (30).
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 2ನೇ ಯಶಸ್ಸು.
9 ಓವರ್ಗಳಲ್ಲಿ ಶತಕ ಪೂರೈಸಿದ ಪಂಜಾಬ್ ಕಿಂಗ್ಸ್.
ಕ್ರೀಸ್ನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
ರವೀಂದ್ರ ಜಡೇಜಾ ಎಸೆದ 8ನೇ ಓವರ್ನ 5ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಕೂಪರ್ ಕೊನೊಲಿ.
31 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟ ಪೂರೈಸಿದ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ.
8 ಓವರ್ಗಳ ಮುಕ್ತಾಯದ ವೇಳೆಗೆ 95 ರನ್ ಕಲೆಹಾಕಿದ ಪಂಜಾಬ್ ಕಿಂಗ್ಸ್.
ಔಟಾದ ಬ್ಯಾಟರ್:
5ನೇ ಓವರ್ನಲ್ಲಿ ಕೇವಲ 4 ರನ್ ನೀಡಿದ ಬ್ರಿಜೇಶ್ ಶರ್ಮಾ.
5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 52 ರನ್ ಕಲೆಹಾಕಿದ ಪಂಜಾಬ್ ಕಿಂಗ್ಸ್
ಕ್ರೀಸ್ನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.
ನಾಂಡ್ರೆ ಬರ್ಗರ್ ಎಸೆದ 4ನೇ ಓವರ್ನ 4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಭರ್ಜರಿ ಫೋರ್ ಬಾರಿಸಿದ ಪ್ರಭ್ಸಿಮ್ರಾನ್.
5ನೇ ಎಸೆತದಲ್ಲಿ ಪ್ರಭ್ಸಿಮ್ರಾನ್ ಬ್ಯಾಟ್ನಿಂದ ಡೀಪ್ ಮಿಡ್ ವಿಕೆಟ್ನತ್ತ ಮತ್ತೊಂದು ಆಕರ್ಷಕ ಫೋರ್.
4 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 48 ರನ್ ಕಲೆಹಾಕಿದ ಪಂಜಾಬ್ ಕಿಂಗ್ಸ್.
ಕ್ರೀಸ್ನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.
ಜೋಫ್ರಾ ಆರ್ಚರ್ ಎಸೆದ 3ನೇ ಓವರ್ನ 5ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರ ನಡೆದ ಪ್ರಿಯಾಂಶ್ ಆರ್ಯ.
11 ಎಸೆತಗಳಲ್ಲಿ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಪ್ರಿಯಾಂಶ್.
3 ಓವರ್ಗಳಲ್ಲಿ 37 ರನ್ ಕಲೆಹಾಕಿದ ಪಂಜಾಬ್ ಕಿಂಗ್ಸ್.
ಕ್ರೀಸ್ನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.
ನಾಂಡ್ರೆ ಬರ್ಗರ್ ಎಸೆದ 2ನೇ ಓವರ್ನ 2ನೇ ಎಸೆತದಲ್ಲಿ ಫೋರ್ ಬಾರಿಸಿದ ಪ್ರಿಯಾಂಶ್.
ಮೂರನೇ ಎಸೆತದಲ್ಲಿ ಪ್ರಿಯಾಂಶ್ ಬ್ಯಾಟ್ನಿಂದ ಡೀಪ್ ಕವರ್ನತ್ತ ಭರ್ಜರಿ ಸಿಕ್ಸರ್.
ನಾಲ್ಕನೇ ಮತ್ತು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಪ್ರಿಯಾಂಶ್.
2ನೇ ಓವರ್ನಲ್ಲಿ 21 ರನ್ ನೀಡಿದ ನಾಂಡ್ರೆ ಬರ್ಗರ್.
ಜೋಫ್ರಾ ಆರ್ಚರ್ ಎಸೆದ ಮೊದಲ ಓವರ್ನಲ್ಲಿ 8 ರನ್ ಕಲೆಹಾಕಿದ ಪಂಜಾಬ್ ಕಿಂಗ್ಸ್.
ಕ್ರೀಸ್ನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಪ್ರಿಯಾಂಶ್ ಆರ್ಯ ಬ್ಯಾಟಿಂಗ್.
🚨Toss update from New Chandigarh🚨@rajasthanroyals won the toss and elected to bowl first against @PunjabKingsIPL
Updates ▶️ https://t.co/fBbdVnF5Fx#TATAIPL | #KhelBindaas | #PBKSvRR pic.twitter.com/B0CBFCjVhr
— IndianPremierLeague (@IPL) April 28, 2026
ಮುಲ್ಲನ್ಪುರ್ನಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಪಂಜಾಬ್ ಕಿಂಗ್ಸ್ ತಂಡವು ಮೊದಲು ಬ್ಯಾಟ್ ಮಾಡಲಿದೆ.
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಕೂಪರ್ ಕೊನೊಲಿ, ಸೂರ್ಯಾಂಶ್ ಶೆಡ್ಗೆ, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಲಾಕಿ ಫರ್ಗುಸನ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ದಸುನ್ ಶಾನಕ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪೂಂಜಾ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಪಂಜಾಬ್ ಕಿಂಗ್ಸ್ ತಂಡ ಮೊದಲು ಬ್ಯಾಟ್ ಮಾಡಲಿದೆ.
ಪಂಜಾಬ್ ಕಿಂಗ್ಸ್ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಪ್ರಭ್ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಅಝ್ಮತುಲ್ಲಾ ಒಮರ್ಝಾಹಿ, ಮಾರ್ಕೊ ಯಾನ್ಸೆನ್, ಹರ್ಪ್ರೀತ್ ಬ್ರಾರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಶೀರ್ ಖಾನ್, ಪ್ಯಾಲಾ ಅವಿನಾಶ್, ಹರ್ನೂರ್ ಪನ್ನು, ಸೂರ್ಯಾಂಶ್ ಶೆಡ್ಗೆ, ಮಿಚೆಲ್ ಓವನ್, ಕ್ಸೇವಿಯರ್ ಬಾರ್ಟ್ಲೆಟ್, ಲಾಕಿ ಫರ್ಗುಸನ್, ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ವಿಷ್ಣು ವಿನೋದ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಪ್ರವೀಣ್ ದುಬೆ, ವಿಶಾಲ್ ನಿಶಾದ್.
ರಾಜಸ್ಥಾನ್ ರಾಯಲ್ಸ್ ತಂಡ: ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್ರೆ ಬರ್ಗರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರ್, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್, ಕುಲದೀಪ್ ಸೇನ್.
ಪಂಜಾಬ್ ಕಿಂಗ್ಸ್ ತಂಡವು ಈ ಬಾರಿಯ ಐಪಿಎಲ್ನಲ್ಲಿ ಒಂದೇ ಒಂದು ಸೋಲು ಕಂಡಿಲ್ಲ. ಆಡಿರುವ 7 ಪಂದ್ಯಗಳಲ್ಲಿ 6 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಅದರಂತೆ ಒಟ್ಟು 7 ಪಂದ್ಯಗಳ ಮೂಲಕ 13 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
Invincible energy only 🛡️🔥
Can Rajasthan Royals finally crack the absolute cheat code that is #PBKS? 👊#TATAIPL | #KhelBindaas | #PBKSvRR | @PunjabKingsIPL pic.twitter.com/h82zAWpFaC
— IndianPremierLeague (@IPL) April 28, 2026
ಪ್ರಿಯಾಂಶ್ ಆರ್ಯ (ಪಂಜಾಬ್ ಕಿಂಗ್ಸ್) ಮತ್ತು ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) ನಡುವಣ ಮುಖಾಮುಖಿ.
The Left-hand Law of Destruction💥
Which southpaw is clearing the ropes more tonight? 🗣️👇#TATAIPL | #KhelBindaas | #PBKSvRR pic.twitter.com/aL4XbQvbib
— IndianPremierLeague (@IPL) April 28, 2026
Published On - 6:01 pm, Tue, 28 April 26