ಬೆಂಗಳೂರು (ಮಾ. 20): ಭಾರತೀಯ ಕ್ರಿಕೆಟ್ ತಂಡದ ದಂತಕಥೆ ರಾಹುಲ್ ದ್ರಾವಿಡ್ (Rahul Dravid) ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಸದ್ಯ ಐಪಿಎಲ್ 2025 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲ ತಂಡಗಳು ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿವೆ. ದ್ರಾವಿಡ್ ಕೂಡ ಆರ್ ಆರ್ ತಂಡದ ಅಭ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ದ್ರಾವಿಡ್ ಊರುಗೋಲಿನ ಜೊತೆಗೆ ಮತ್ತು ವೀಲ್‌ಚೇರ್‌ನಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ ದ್ರಾವಿಡ್ ಕಾಲಿಗೆ ದಪ್ಪ ಪ್ಲಾಸ್ಟರ್ ಹಾಕಲಾಗಿದೆ. ಇದರಿಂದ, ಅವರ ಗಾಯ ಎಷ್ಟು ಗಂಭೀರವಾಗಿದೆ ಎಂದು ಅಂದಾಜು ಮಾಡಬಹುದು.
ರಾಹುಲ್ ದ್ರಾವಿಡ್ ಅವರಿಗೆ ಬೆಂಬಲವಿಲ್ಲದೆ ನಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಗಾಯದ ಹೊರತಾಗಿಯೂ ದ್ರಾವಿಡ್ ವಿಶ್ರಾಂತಿ ತೆಗೆದುಕೊಳ್ಳದೆ ತಮ್ಮ ಜವಾಭ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ವಿಡಿಯೋದಲ್ಲಿ, ದ್ರಾವಿಡ್ ವೀಲ್‌ಚೇರ್ ಮೇಲೆ ಕುಳಿತು ರಾಜಸ್ಥಾನ ರಾಯಲ್ಸ್ ಆಟಗಾರರಿಗೆ ಮೈದಾನದಲ್ಲಿ ತರಬೇತಿ ನೀಡುತ್ತಿರುವುದನ್ನು ಕಾಣಬಹುದು.
💗➡️🏡 pic.twitter.com/kdmckJn4bz
— Rajasthan Royals (@rajasthanroyals) March 13, 2025
ದ್ರಾವಿಡ್ ಅವರ ಈ ಸಮರ್ಪಣೆಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಗಾಯಗೊಂಡಿದ್ದರೂ ಸಹ, ಮುಂಬರುವ ಐಪಿಎಲ್ ಋತುವಿನಲ್ಲಿ ಅವರು ತಮ್ಮ ತಂಡಕ್ಕೆ ತನ್ನ ಕೈಯಿಂದ ಏನು ಕೊಡುಗೆ ನೀಡಲು ಸಾಧ್ಯವೋ ಅದನ್ನು ಮಾಡುತ್ತಿದ್ದಾರೆ. 18ನೇ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮೊದಲ ಪಂದ್ಯ ಮಾರ್ಚ್ 23 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿದೆ.
IPL 2025, RCB: ಸಾರ್ವಜನಿಕವಾಗಿ ಆರ್‌ಸಿಬಿಯನ್ನು ಗೇಲಿ ಮಾಡಿದ ಸಿಎಸ್‌ಕೆ ಆಟಗಾರ: ವಿಡಿಯೋ
ಟೀಮ್ ಇಂಡಿಯಾದ ಗೋಡೆ ಎಂದೇ ಕರೆಯಲ್ಪಡುವ ರಾಹುಲ್ ದ್ರಾವಿಡ್, ವಿಜಯ ಕ್ರಿಕೆಟ್ ಕ್ಲಬ್ ಪರ ಆಡುವಾಗ ಈ ಗಾಯಕ್ಕೆ ಒಳಗಾದರು. ದ್ರಾವಿಡ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಲೀಗ್ ಪಂದ್ಯವನ್ನು ಆಡುತ್ತಿದ್ದರು. ಈ ಪಂದ್ಯದಲ್ಲಿ ಅವರ ಮಗ ಅನ್ವಯ್ ಕೂಡ ದ್ರಾವಿಡ್ ಜೊತೆ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಆಡುವಾಗ ದ್ರಾವಿಡ್ ಅವರ ಎಡಗಾಲಿಗೆ ಗಾಯವಾಗಿದೆ. ಗಾಯದಿಂದಾಗಿ, ಸ್ನಾಯುರಜ್ಜು ಅಂದರೆ ಮೂಳೆಯನ್ನು ಸಂಪರ್ಕಿಸುವ ರಕ್ತನಾಳಕ್ಕೆ ದೊಡ್ಡ ಪೆಟ್ಟಾಗಿದೆ. ಆದಾಗ್ಯೂ, ಇದರ ಹೊರತಾಗಿಯೂ, ಅವರು ರಾಜಸ್ಥಾನ್ ರಾಯಲ್ಸ್ ಆಟಗಾರರ ಮೇಲೆ ನಿಗಾ ಇಡುತ್ತಿದ್ದಾರೆ.
Head Coach Rahul Dravid, who picked up an injury while playing Cricket in Bangalore, is recovering well and will join us today in Jaipur 💗 pic.twitter.com/TW37tV5Isj
— Rajasthan Royals (@rajasthanroyals) March 12, 2025
ಕೋಚ್ ಮಾತ್ರವಲ್ಲ, ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಕೂಡ ಗಾಯಗೊಂಡಿದ್ದಾರೆ. ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ವೇಳೆ ಸಂಜು ಸ್ಯಾಮ್ಸನ್ ಬೆರಳಿಗೆ ಗಾಯವಾಗಿತ್ತು. ಇದರಿಂದಾಗಿ, ಸಂಜು ಇನ್ನು ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಐಪಿಎಲ್ 2025ರ ಮೊದಲ ಮೂರು ಪಂದ್ಯಗಳಲ್ಲಿ ಸಂಜು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ವಹಿಸಿಕೊಳ್ಳುವುದಿಲ್ಲ. ಅವರ ಸ್ಥಾನದಲ್ಲಿ ಯುವ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ ನಾಯಕನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಆದಾಗ್ಯೂ, ಬ್ಯಾಟ್ಸ್‌ಮನ್ ಆಗಿರುವುದರ ಹೊರತಾಗಿ, ಸಂಜು ತಂಡಕ್ಕಾಗಿ ಇಂಪ್ಯಾಕ್ಟ್ ಸಬ್ ಆಗಿ ಆಡಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ