Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI: ಬಿಸಿಸಿಐ ನೀಡಿರುವ 58 ಕೋಟಿ ಬಹುಮಾನದಲ್ಲಿ ಯಾರಿಗೆ ಎಷ್ಟೆಷ್ಟು?

58 Crore Prize for India's Champions Trophy Win: ಭಾರತ ತಂಡವು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದಕ್ಕಾಗಿ ಬಿಸಿಸಿಐ 58 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಿದೆ. ಪ್ರತಿ ಆಟಗಾರನಿಗೆ 3 ಕೋಟಿ ರೂಪಾಯಿಗಳು, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೂ 3 ಕೋಟಿ ರೂಪಾಯಿಗಳು ಮತ್ತು ಇತರ ಸಿಬ್ಬಂದಿಗೆ ವಿಭಿನ್ನ ಮೊತ್ತವನ್ನು ನೀಡಲಾಗುವುದು. ಐಸಿಸಿಯಿಂದ ಬರುವ 20 ಕೋಟಿ ರೂಪಾಯಿಗಳ ಬಹುಮಾನವನ್ನು ಆಟಗಾರರಿಗೆ ಮಾತ್ರ ಹಂಚಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

BCCI: ಬಿಸಿಸಿಐ ನೀಡಿರುವ 58 ಕೋಟಿ ಬಹುಮಾನದಲ್ಲಿ ಯಾರಿಗೆ ಎಷ್ಟೆಷ್ಟು?
Team India
Follow us
ಪೃಥ್ವಿಶಂಕರ
|

Updated on: Mar 20, 2025 | 7:04 PM

2025 ರ ಚಾಂಪಿಯನ್ಸ್ ಟ್ರೋಫಿ (Champions Trophy 2025) ಗೆದ್ದಿರುವ ಭಾರತ ತಂಡಕ್ಕೆ ಬಿಸಿಸಿಐ (BCCI) ಭರ್ಜರಿ ಬಹುಮಾನ ಘೋಷಿಸಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ತನ್ನ ಚಾಂಪಿಯನ್ ತಂಡಕ್ಕೆ 58 ಕೋಟಿ ರೂಪಾಯಿ ಬಹುಮಾನ ನೀಡಿದೆ. ಈ ಬಹುಮಾನದ ಮೊತ್ತದಲ್ಲಿ ರೋಹಿತ್-ವಿರಾಟ್‌ರಂತಹ ಅನುಭವಿ ಆಟಗಾರರಿಗೆ ಎಷ್ಟು ಹಣ ಸಿಗುತ್ತದೆ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಎಷ್ಟು ಹಣ ಸಿಗುತ್ತದೆ? ಇವರಲ್ಲದೆ ತಂಡದ ಗೆಲುವಿಗೆ ಕಾರಣರಾದ ಇತರರಿಗೆ ಸಿಗುವ ಹಣವೆಷ್ಟು? ಬಿಸಿಸಿಐ ಬಹುಮಾನ ಮಾತ್ರವಲ್ಲದೆ, ಐಸಿಸಿಯಿಂದ ಬರುವವ 20 ಕೋಟಿ ರೂ.ಗಳ ಹಂಚಿಕೆ ಹೇಗೆ ಆಗುತ್ತದೆ ಎಂಬುದರ ಪೂರ್ಣ ವಿವರ ಇಲ್ಲಿದೆ.

58 ಕೋಟಿ ರೂಪಾಯಿಗಳ ಹಂಚಿಕೆ ಹೇಗೆ?

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಈ 58 ಕೋಟಿ ರೂಪಾಯಿಗಳಲ್ಲಿ, 15 ಸದಸ್ಯರ ತಂಡದ ಪ್ರತಿಯೊಬ್ಬ ಆಟಗಾರನಿಗೆ ತಲಾ 3 ಕೋಟಿ ರೂಪಾಯಿ ಸಿಗಲಿದೆ. ಇದಲ್ಲದೆ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಹುಮಾನದ ಹಣವನ್ನು (2.24 ಮಿಲಿಯನ್ ಯುಎಸ್ ಡಾಲರ್ ಅಂದರೆ 20 ಕೋಟಿ ರೂಪಾಯಿಗಳು) ಟೀಮ್ ಇಂಡಿಯಾ ಆಟಗಾರರಿಗೆ ಮಾತ್ರ ವಿತರಿಸಲು ಎಂದು ಬಿಸಿಸಿಐ ನಿರ್ಧರಿಸಿದೆ. ಇದರರ್ಥ ಮುಖ್ಯ ತರಬೇತುದಾರ ಮತ್ತು ಸಹಾಯಕ ಸಿಬ್ಬಂದಿಗೆ ಈ ಮೊತ್ತದಲ್ಲಿ ಯಾವುದೇ ಪಾಲು ಇರುವುದಿಲ್ಲ.

ಯಾರಿಗೆ ಕಡಿಮೆ ಹಣ ಸಿಗುತ್ತದೆ?

ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಆಟಗಾರರಿಗೆ ಸಮಾನಾದ ಮೊತ್ತ ಅಂದರೆ 3 ಕೋಟಿ ರೂ., ಸಿಗಲಿದೆ. ಸಹಾಯಕ ಸಿಬ್ಬಂದಿಗೆ ತಲಾ 50 ಲಕ್ಷ ರೂ. ಸಿಕ್ಕರೆ, ತಂಡದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರಿಗೆ 30 ಲಕ್ಷ ರೂ. ಹಣ ಸಿಗಲಿದೆ. ಹಾಗೆಯೇ ಆಯ್ಕೆ ಸಮಿತಿಯ ಇತರ ನಾಲ್ವರು ಸದಸ್ಯರಿಗೆ ತಲಾ 25 ಲಕ್ಷ ರೂ. ನೀಡಲಾಗುವುದು. ದುಬೈನಲ್ಲಿ ಟೀಂ ಇಂಡಿಯಾ ಜೊತೆಗಿದ್ದ ಬಿಸಿಸಿಐ ಸಿಬ್ಬಂದಿಗೂ ತಲಾ 25 ಲಕ್ಷ ರೂ. ಸಿಗಲಿದೆ.

ಇದನ್ನೂ ಓದಿ
Image
ಚೇತರಿಸಿಕೊಳ್ಳಲಾರದಷ್ಟು ಪಾತಾಳಕ್ಕೆ ಕುಸಿದ ಪಾಕ್ ಕ್ರಿಕೆಟ್
Image
ಚಾಂಪಿಯನ್ಸ್ ಟ್ರೋಫಿ ನಂತರ ನಡೆಯಬೇಕಿದ್ದ ಸರಣಿ ರದ್ದು; ಕಾರಣ ಏನು ಗೊತ್ತಾ?
Image
ಟೀಂ ಇಂಡಿಯಾದ ಮುಂದಿನ ಸರಣಿ ಯಾವುದು? ಎದುರಾಳಿ ಯಾರು?
Image
60 ಕೋಟಿ ರೂಗಳಲ್ಲಿ ಯಾವ ತಂಡಕ್ಕೆ ಎಷ್ಟು ಹಣ ಸಿಗ್ತು? ಇಲ್ಲಿದೆ ವಿವರ

ಭಾರತದ ವಿರುದ್ಧ ಜಿದ್ದಿಗೆ ಬಿದ್ದು ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದ್ದ ಪಾಕಿಸ್ತಾನಕ್ಕೆ 2383 ಕೋಟಿ ನಷ್ಟ..!

ಟಿ20 ವಿಶ್ವಕಪ್ ಗೆದಿದ್ದಕ್ಕೆ 125 ಕೋಟಿ

ಕಳೆದ ವರ್ಷ ಭಾರತ ತಂಡ 17 ವರ್ಷಗಳ ನಂತರ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಆ ಸಮಯದಲ್ಲಿಯೂ ಸಹ, ಬಿಸಿಸಿಐ ಟೀಂ ಇಂಡಿಯಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಭರ್ಜರಿ ಬಹುಮಾನ ನೀಡಿತ್ತು. ರೋಹಿತ್ ಶರ್ಮಾ ನಾಯಕತ್ವದ ತಂಡಕ್ಕೆ ಮಂಡಳಿಯು 125 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿತ್ತು. ಆ ಬಹುಮಾನವನ್ನು ಎಲ್ಲಾ ಆಟಗಾರರು, ಆಯ್ಕೆದಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ವಿತರಿಸಲಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ