Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಭಾರತ ಮತ್ತೆ ಅಖಾಡಕ್ಕಿಳಿಯುವುದು ಯಾವಾಗ? ಯಾವ ತಂಡದ ವಿರುದ್ಧ?

Team India: ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ, ಜೂನ್ 2025 ರಿಂದ ಆರಂಭವಾಗುವ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಆದರೆ ತಂಡಗಳನ್ನು ಮಾತ್ರ ಹೆಸರಿಸಿಲ್ಲ. ಹೀಗಾಗಿ ಈಗ ಚಾಂಪಿಯನ್ಸ್ ಟ್ರೋಫಿಯನ್ನು ಆಡಿ ಮುಗಿಸಿರುವ ಭಾರತ, ಮೂರು ತಿಂಗಳ ನಂತರ ಮತ್ತೆ ಅಖಾಡಕ್ಕಿಳಿಯಲಿದೆ.

ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಭಾರತ ಮತ್ತೆ ಅಖಾಡಕ್ಕಿಳಿಯುವುದು ಯಾವಾಗ? ಯಾವ ತಂಡದ ವಿರುದ್ಧ?
Team India
Follow us
ಪೃಥ್ವಿಶಂಕರ
|

Updated on: Mar 10, 2025 | 6:54 PM

ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ (Champions Trophy 2025) ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಟೀಂ ಇಂಡಿಯಾ ಸದ್ಯ ಗೆದ್ದ ಖುಷಿಯಲ್ಲಿ ತೇಲಾಡುತ್ತಿದೆ. ಪ್ರಸ್ತುತ ದುಬೈನಲ್ಲಿರುವ ರೋಹಿತ್ ಪಡೆ ಇಷ್ಟರಲ್ಲೇ ಭಾರತಕ್ಕೆ ಬಂದಿಳಿಯಲಿದೆ. ಚಾಂಪಿಯನ್ಸ್ ಟ್ರೋಫಿ ಸಂಭ್ರಮ ಮುಗಿಯುವುದರೊಳಗೆ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ (IPL) ಆರಂಭವಾಗಲಿದೆ. 2 ತಿಂಗಳುಗಳ ಕಾಲ ನಡೆಯುವ ಐಪಿಎಲ್ ಮೇ ಕೊನೆಯ ವಾರದಲ್ಲಿ ಅಂತ್ಯಗೊಳಲಿದೆ. ಇದರರ್ಥ ಟೀಂ ಇಂಡಿಯಾ (Team India) ಮುಂದಿನ ಮೂರು ತಿಂಗಳು ಯಾವ ಅಂತರರಾಷ್ಟ್ರೀಯ ಸರಣಿಗಳನ್ನು ಆಡುವುದಿಲ್ಲ. ಹಾಗಿದ್ದರೆ, ಟೀಂ ಇಂಡಿಯಾ ಮತ್ತೆ ಕಣಕ್ಕಿಳಿಯುವುದು ಯಾವಾಗ?

ಟೀಂ ಇಂಡಿಯಾದ ವೇಳಾಪಟ್ಟಿಯ ಪ್ರಕಾರ, ರೋಹಿತ್ ಪಡೆ ಜೂನ್ ತಿಂಗಳಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ನಾಲ್ಕನೇಯ ಆವೃತ್ತಿಯೂ ಶುರುವಾಗಲಿದೆ. ಈ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್​ಗೆ ಪ್ರವಾಸ ಮಾಡಲಿರುವ ಟೀಂ ಇಂಡಿಯಾ, ಬಲಿಷ್ಠ ಇಂಗ್ಲೆಂಡ್ ತಂಡವನ್ನು ಅವರ ನೆಲದಲ್ಲೇ ಎದುರಿಸಲಿದೆ. ಸುಮಾರು 45 ದಿನಗಳ ಕಾಲ ಇಂಗ್ಲೆಂಡ್​ನಲ್ಲಿರುವ ಟೀಂ ಇಂಡಿಯಾ, ಐದು ಪಂದ್ಯಗಳನ್ನು ಆಡಿ ಮುಗಿಸಿದ ಬಳಿಕ ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ವಾಪಸ್ಸಾಗಲಿದೆ.

ಟೆಸ್ಟ್ ಸರಣಿಯ ವೇಳಾಪಟ್ಟಿ

  1. ಮೊದಲ ಟೆಸ್ಟ್: ಜೂನ್ 20 ರಿಂದ 24 ರವರೆಗೆ, ಲೀಡ್ಸ್‌
  2. ಎರಡನೇ ಟೆಸ್ಟ್: ಜುಲೈ 2 ರಿಂದ 6 ರವರೆಗೆ, ಬರ್ಮಿಂಗ್ಹ್ಯಾಮ್‌
  3. ಮೂರನೇ ​​ಟೆಸ್ಟ್: ಜುಲೈ 10 ರಿಂದ 14 ರವರೆಗೆ, ಲಂಡನ್‌
  4. ನಾಲ್ಕನೇ ಟೆಸ್ಟ್: ಜುಲೈ 23 ರಿಂದ 27 ರವರೆಗೆ, ಮ್ಯಾಂಚೆಸ್ಟರ್‌
  5. ಐದನೇ ಟೆಸ್ಟ್: ಜುಲೈ 31 ರಿಂದ ಆಗಸ್ಟ್ 4 ರವರೆಗೆ, ಲಂಡನ್‌

ಈ ಪ್ರವಾಸಕ್ಕಾಗಿ ಟೀಂ ಇಂಡಿಯಾವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಟೆಸ್ಟ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಮುಂದುವರಿಯುವ ನಿರೀಕ್ಷೆಯಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಮೊದಲು ರೋಹಿತ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಬಹುದು ಎಂಬ ಊಹಾಪೋಹವಿತ್ತು. ಆದರೆ ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಸದ್ಯಕ್ಕೆ ನಿವೃತ್ತಿಯ ನಿರ್ಧಾರವಿಲ್ಲ ಎಂದು ನೇರವಾಗಿ ಹೇಳಿದ್ದರು. ಹೀಗಾಗಿ ಇಂಗ್ಲೆಂಡ್ ಪ್ರವಾಸಕ್ಕೆ ರೋಹಿತ್ ಜೊತೆಗೆ, ವಿರಾಟ್ ಕೊಹ್ಲಿ, ಶುಭ್​ನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರು ಸಹ ತಂಡದ ಭಾಗವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ
Image
ಸುನಿಲ್ ಗವಾಸ್ಕರ್ ನಾಲಿಗೆ ಬಿಗಿ ಹಿಡಿದು ಮಾತನಾಡಲಿ; ಇಂಜಮಾಮ್
Image
ರೋಹೀತ್-ಕೊಹ್ಲಿ 76 ರನ್​ಗಳ ಆಟ; ಭಾರತಕ್ಕೆ ಚಾಂಪಿಯನ್ ಕಿರೀಟ
Image
‘ಧನ್ಯವಾದಗಳು’; ನಿವೃತ್ತಿ ವದಂತಿ ಬಗ್ಗೆ 4 ಪದಗಳಲ್ಲಿ ಉತ್ತರಿಸಿದ ಜಡೇಜಾ
Image
ಒಂದು ಪಂದ್ಯವನ್ನು ಗೆಲ್ಲದೆ ಕೋಟಿ ಮೊತ್ತ ಪಡೆದ ಪಾಕಿಸ್ತಾನ

ಮುಖಾಮುಖಿ ದಾಖಲೆ

ಭಾರತ ಹಾಗೂ ಇಂಗ್ಲೆಂಡ್ ಎರಡೂ ತಂಡಗಳು 135 ಬಾರಿ ಟೆಸ್ಟ್ ಕ್ರಿಕೆಟ್​ನಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 35 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 51 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ 50 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.

ಇದನ್ನೂ ಓದಿ: ‘ಶಾರ್ಜಾದಿಂದ ಪರಾರಿಯಾಗಲು ಯತ್ನಿಸಿದ್ದ ಗವಾಸ್ಕರ್​ಗೆ ಇದು ಶೋಭೆ ಅಲ್ಲ’; ಇಂಜಮಾಮ್ ಆಕ್ರೋಶ

ಇಂಗ್ಲೆಂಡ್ ಪ್ರವಾಸಕ್ಕೆ ಸಂಭಾವ್ಯ ಭಾರತ ತಂಡ: ಶುಭ್​ಮನ್ ಗಿಲ್, ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಾರ ದಯೆಯಿಂದಲೂ ನಾನಿಲ್ಲಿ ಬಂದಿಲ್ಲ; ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ
ಯಾರ ದಯೆಯಿಂದಲೂ ನಾನಿಲ್ಲಿ ಬಂದಿಲ್ಲ; ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ
ಶಾಸಕರ ಪರವಾಗಿ ಕ್ಷಮೆ ಕೇಳಿದ ಅಜಯ್ ರಾವ್, ಕಾರಣ?
ಶಾಸಕರ ಪರವಾಗಿ ಕ್ಷಮೆ ಕೇಳಿದ ಅಜಯ್ ರಾವ್, ಕಾರಣ?
ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಯುವಕನ ಕತ್ತು ಹಿಸುಕಿ ಕೊಲೆ
ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಯುವಕನ ಕತ್ತು ಹಿಸುಕಿ ಕೊಲೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್
ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್
ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್‌ನಲ್ಲಿ ಸಂಭ್ರಮಾಚರಣೆ
ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್‌ನಲ್ಲಿ ಸಂಭ್ರಮಾಚರಣೆ
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು