Rahul Dravid Video: ಸೂರ್ಯಕುಮಾರ್ ಔಟ್ ಆಗುತ್ತಿದ್ದಂತೆ ಅಸಮಾಧಾನ ಹೊರಹಾಕಿದ ರಾಹುಲ್ ದ್ರಾವಿಡ್

| Updated By: ಝಾಹಿರ್ ಯೂಸುಫ್

Updated on: Jul 26, 2021 | 2:41 PM

ಶ್ರೀಲಂಕಾ ವಿರುದ್ದ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 38 ರನ್​ಗಳಿಂದ ಭರ್ಜರಿ ಜಯ ಸಾಧಿಸಿತು. ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತದ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ (Suryakumar Yadav) ಆಕರ್ಷಕ ಅರ್ಧಶತಕ ಬಾರಿಸಿದ್ದರು. 34 ಎಸೆತಗಳನ್ನು ಎದುರಿಸಿದ್ದ ಸೂರ್ಯಕುಮಾರ್ 2 ಸೂಪರ್ ಸಿಕ್ಸ್ ಹಾಗೂ 5 ಭರ್ಜರಿ ಬೌಂಡರಿ ಸಿಡಿಸಿ 50 ರನ್​ […]

Rahul Dravid Video: ಸೂರ್ಯಕುಮಾರ್ ಔಟ್ ಆಗುತ್ತಿದ್ದಂತೆ ಅಸಮಾಧಾನ ಹೊರಹಾಕಿದ ರಾಹುಲ್ ದ್ರಾವಿಡ್
Rahul Dravid and Suryakumar Yadav
Follow us on

ಶ್ರೀಲಂಕಾ ವಿರುದ್ದ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 38 ರನ್​ಗಳಿಂದ ಭರ್ಜರಿ ಜಯ ಸಾಧಿಸಿತು. ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತದ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ (Suryakumar Yadav) ಆಕರ್ಷಕ ಅರ್ಧಶತಕ ಬಾರಿಸಿದ್ದರು. 34 ಎಸೆತಗಳನ್ನು ಎದುರಿಸಿದ್ದ ಸೂರ್ಯಕುಮಾರ್ 2 ಸೂಪರ್ ಸಿಕ್ಸ್ ಹಾಗೂ 5 ಭರ್ಜರಿ ಬೌಂಡರಿ ಸಿಡಿಸಿ 50 ರನ್​ ಕಲೆಹಾಕಿದ್ದರು.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕ ಶಿಖರ್ ಧವನ್ (Shikhar Dhawan) ಜೊತೆಗೂಡಿ 62 ರನ್ ಪಾಲುದಾರಿಕೆ ನೀಡಿದ್ದರು. ಆದರೆ ಹಾಫ್​ ಸೆಂಚುರಿ ಬೆನ್ನಲ್ಲೇ ವನಿಂದು ಹಸರಂಗ ಎಸೆತದಲ್ಲಿ ರಮೇಶ್ ಮೆಂಡಿಸ್​ಗೆ ಸುಲಭ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಇತ್ತ ಸೂರ್ಯಕುಮಾರ್ ಸುಲಭವಾಗಿ ವಿಕೆಟ್​ ಒಪ್ಪಿಸುತ್ತಿದ್ದಂತೆ ಕೋಚ್ ರಾಹುಲ್ ದ್ರಾವಿಡ್ (Rahul Dravid) ಬೇಸರದ ಪ್ರತಿಕ್ರಿಯೆ ನೀಡಿದ್ದರು.

ಉತ್ತಮ ಫಾರ್ಮ್​ ಪ್ರದರ್ಶಿಸಿದ್ದ ಸೂರ್ಯಕುಮಾರ್ ದೊಡ್ಡ ಮೊತ್ತ ಪೇರಿಸುವ ನಿರೀಕ್ಷೆ ಇಡಲಾಗಿತ್ತು. ಅಲ್ಲದೆ ಮುಂಬೈ ದಾಂಡಿಗ ಕ್ರೀಸ್​ನಲ್ಲಿದ್ದ ವೇಳೆ ಟೀಮ್ ಇಂಡಿಯಾ ಮೊತ್ತ 200ರ ಗಡಿ ದಾಟಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಸುಲಭ ಕ್ಯಾಚ್ ನೀಡುತ್ತಿದ್ದಂತೆ ಡಗೌಟ್​ನಲ್ಲಿ ಕೂತಿದ್ದ ರಾಹುಲ್ ಸಪ್ಪೆ ಮುಖದೊಂದಿಗೆ ನಿರಾಸೆ ವ್ಯಕ್ತಪಡಿಸಿದ್ದರು.

ರಾಹುಲ್ ದ್ರಾವಿಡ್ ಅವರ ಈ ಮೌನ ಪ್ರತಿಕ್ರಿಯೆಯ ವಿಡಿಯೋ ಇದೀಗ ವೈರಲ್ ಆಗಿದೆ. ಆಟಗಾರ ವಿನಾಕಾರಣ ವಿಕೆಟ್ ಒಪ್ಪಿಸಿದಾಗ ಕೋಚ್ ಆಗುವ ಬೇಸರ ಹೇಗಿರುತ್ತೆ ಎಂಬುದನ್ನು ದ್ರಾವಿಡ್ (Rahul Dravid) ಅವರ ಮುಖದಲ್ಲಿ ಕಾಣಬಹುದು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇದಾಗ್ಯೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾಗೆ 165 ರನ್​ಗಳ ಟಾರ್ಗೆಟ್​ ನೀಡಿತು.

ಈ ಟಾರ್ಗೆಟ್​ನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 18.3 ಓವರ್​ನಲ್ಲಿ 126 ರನ್​ಗಳಿಗೆ ಸರ್ವಪತನ ಕಂಡಿತು. ಟೀಮ್ ಇಂಡಿಯಾ ಪರ ಭುವನೇಶ್ವರ್ ಕುಮಾರ್ 4 ವಿಕೆಟ್ ಉರುಳಿಸಿ ಮಿಂಚಿದರೆ, ದೀಪಕ್ ಚಹರ್ 2 ವಿಕೆಟ್ ಕಬಳಿಸಿದರು. ಈ ಜಯದೊಂದಿಗೆ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. 2ನೇ ಪಂದ್ಯವು ಮಂಗಳವಾರ (ಜು.27) ನಡೆಯಲಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ ದ್ರಾವಿಡ್ ಗರಡಿ ಹುಡುಗರು.

ಇದನ್ನೂ ಓದಿ: ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಭುವನೇಶ್ವರ್ ಆಯ್ಕೆಯಾಗದಿರಲು ಇದುವೇ ಅಸಲಿ ಕಾರಣ

ಇದನ್ನೂ ಓದಿ: ಕೊಹ್ಲಿ ಪಡೆಯ ಎದುರಾಳಿಗಳು ಯಾರು? ಇಲ್ಲಿದೆ RCBಯ ಸಂಪೂರ್ಣ ವೇಳಾಪಟ್ಟಿ

(Rahul Dravid Upset after Suryakumar Yadav Dismiss in the First T20I)

 

 

Published On - 2:40 pm, Mon, 26 July 21