15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶ ಬೆಳಕಿಗೆ ಬರುತ್ತಿದೆ. ಹಿಂದಿನ ಸೀಸನ್ನಲ್ಲಿ ನೀರಸ ಪ್ರದರ್ಶನ ತೋರುತ್ತಿದ್ದ ತಂಡ ಈ ಬಾರಿ ಹೊಸ ಆಟಗಾರರನ್ನು ಸೇರಿಸಿ ಭರ್ಜರಿ ಪ್ರದರ್ಶನ ತೋರುತ್ತಿದ್ದರೆ, ಹಾಲಿ ಚಾಂಪಿಯನ್, ಮಾಜಿ ಚಾಂಪಿಯನ್ ತಂಡಗಳು ಚೊಚ್ಚಲ ಗೆಲುವಿಗಾಗಿ ಹಾತೊರೆಯುತ್ತಿದೆ. ಕಳೆದ ಬಾರಿಯ ವಿನ್ನರ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲುಂಡು ಕೆಟ್ಟ ದಾಖಲೆ ಬರೆದಿದೆ. ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಲಖನೌ ಸೂಪರ್ ಜೇಂಟ್ಸ್ ನಡುವಣ ರಣ ರೋಚಕ ಪಂದ್ಯದಲ್ಲಿ ಆರ್ಆರ್ ಗೆಲುವು ಕಂಡಿತು. ಇದರ ನಡುವೆ ಈ ಬಾರಿ ಅತಿ ಹೆಚ್ಚು ರನ್ ಕಲೆಹಾಕಿದವರಿಗೆ ಆರೆಂಜ್ ಕ್ಯಾಪ್, ಅತಿ ಹೆಚ್ಚು ವಿಕೆಟ್ ಕಿತ್ತವರು ಪರ್ಪಲ್ ಕ್ಯಾಪ್ ಧರಿಸುತ್ತಾರೆ. ಹಾಗಾದ್ರೆ ಐಪಿಎಲ್ 2022ರ ಪಾಯಿಂಟ್ ಟೇಬಲ್ (IPL 2022 Point Table) ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬುದನ್ನು ನೋಡೋಣ.
ಪಾಯಿಂಟ್ ಟೇಬಲ್:
ಆರೆಂಜ್ ಕ್ಯಾಪ್:
ಅತಿ ಹೆಚ್ಚು ರನ್ ಗಳಿಸಿದವರ ಮೊದಲ ಸ್ಥಾನದಲ್ಲಿ ಆರ್ ಆರ್ ತಂಡದ ಜೋಸ್ ಬಟ್ಲರ್ ಇದ್ದು ಇವರು ನಾಲ್ಕು ಪಂದ್ಯಗಳಿಂದ 218 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಎರಡನೇ ಸ್ಥಾನಕ್ಕೆ ಲಖನೌ ತಂಡದ ಕ್ವಿಂಟನ್ ಡಿಕಾಕ್ ಜಿಗಿದಿದ್ದು ಇವರು ಐದು ಪಂದ್ಯಗಳಿಂದ 188 ರನ್ ಸಿಡಿಸಿದ್ದಾರೆ. ಗುಜರಾತ್ ತಂಡದ ಶುಭ್ಮನ್ ಗಿಲ್ ಜಿಗಿದಿದ್ದು 180 ರನ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಮುಂಬೈ ತಂಡದ ಇಶಾನ್ ಕಿಶನ್ ನಾಲ್ಕನೇ ಸ್ಥಾನ ಪಡೆದು 175 ರನ್ ಕಲೆಹಾಕಿದ್ದಾರೆ. ರಾಜಸ್ಥಾನ್ ತಂಡದ ಶಿಮ್ರೊನ್ ಹೆಟ್ಮೇರ್ 168 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ.
ಪರ್ಪಲ್ ಕ್ಯಾಪ್:
ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಯುಜ್ವೇಂದ್ರ ಚಹಲ್ ಟಾಪ್ನಲ್ಲಿದ್ದಾರೆ. ಇವರು ಆಡಿದ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದು 11 ವಿಕೆಟ್ ಕಬಳಿಸಿದ್ದಾರೆ. ಕೆಕೆಆರ್ ತಂಡದ ಉಮೇಶ್ ಯಾದವ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಇವರು ಆಡಿರುವ 5 ಪಂದ್ಯಗಳಿಂದ 10 ವಿಕೆಟ್ ಕಿತ್ತಿದ್ದಾರೆ. ಕುಲ್ದೀಪ್ ಯಾದವ್ 4 ಪಂದ್ಯಗಳಿಂದ 10 ವಿಕೆಟ್ ಪಡೆದು ದಿಢೀರ್ ಮೂರನೇ ಸ್ಥಾನಕ್ಕೇರಿದ್ದಾರೆ. ಆರ್ಸಿಬಿ ತಂಡದ ವನಿಂದು ಹಸರಂಗ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, ಇವರು ಆಡಿದ ನಾಲ್ಕು ಪಂದ್ಯಗಳಿಂದ 8 ವಿಕೆಟ್ ಕಿತ್ತಿದ್ದಾರೆ. 8 ವಿಕೆಟ್ ಕಿತ್ತ ಆವೇಶ್ ಖಾನ್ ಐದನೇ ಸ್ಥಾನದಲ್ಲಿದ್ದಾರೆ.
Sanju Samson: ಪಂದ್ಯ ಮುಗಿದ ಬಳಿಕ ಸಂಜು ಸ್ಯಾಮ್ಸನ್ ರಿವೀಲ್ ಮಾಡಿದ್ರು ರಣ ರೋಚಕ ಪ್ಲಾನ್
SRH vs GT: ಇಂದು ಕೇನ್ vs ಹಾರ್ದಿಕ್: ಗುಜರಾತ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಸನ್‌ರೈಸರ್ಸ್