SRH vs GT: ಇಂದು ಕೇನ್ vs ಹಾರ್ದಿಕ್: ಗುಜರಾತ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಸನ್​ರೈಸರ್ಸ್​

Sunrisers Hyderabad vs Gujarat Titans, IPL 2022: ಇಂದು ಕೇನ್ ವಿಲಿಯಮ್ಸನ್ ನಾಯಕತ್ವದ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿ ಆಗಲಿದೆ. ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್​ ಅಕಾಡೆಮಿಯಲ್ಲಿ ಈ ಪಂದ್ಯ ನಡೆಯಲಿದ್ದು, ಹೈವೋಲ್ಟೇಜ್ ಕದನ ನಿರೀಕ್ಷಿಸಲಾಗಿದೆ.

SRH vs GT: ಇಂದು ಕೇನ್ vs ಹಾರ್ದಿಕ್: ಗುಜರಾತ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಸನ್​ರೈಸರ್ಸ್​
SRH vs GT IPL 2022
Follow us
| Updated By: Vinay Bhat

Updated on: Apr 11, 2022 | 8:32 AM

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿಂದು (IPL 2022) ಕೇನ್ ವಿಲಿಯಮ್ಸನ್ ನಾಯಕತ್ವದ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (SRH vs GT) ತಂಡಗಳು ಮುಖಾಮುಖಿ ಆಗಲಿದೆ. ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್​ ಅಕಾಡೆಮಿಯಲ್ಲಿ ಈ ಪಂದ್ಯ ನಡೆಯಲಿದ್ದು, ಹೈವೋಲ್ಟೇಜ್ ಕದನ ನಿರೀಕ್ಷಿಸಲಾಗಿದೆ. ಗುಜರಾತ್ ಟೈಟನ್ಸ್ ತಂಡವು ಈ ಬಾರಿ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ತೋರಿದೆ. ಈವರೆಗೆ ಆಡಿರುವ 3 ಪಂದ್ಯಗಳ ಪೈಕಿ ಮೂರರಲ್ಲೂ ಗೆದ್ದು ಐಪಿಎಲ್​ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇತ್ತ ಹೈದರಾಬಾದ್ ತಂಡ ಈ ಬಾರಿ ಕೂಡ ನೀರಸ ಪ್ರದರ್ಶನ ತೋರಿದೆ. ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಷ್ಟೆ ಗೆಲುವು ಸಾಧಿಸಿ ಎರಡರಲ್ಲಿ ಸೋತಿದೆ. 2 ಅಂಕದೊಂದಿಗೆ ಎಂಟನೇ ಸ್ಥಾನದಲ್ಲಿದೆ. ಹ್ಯಾಟ್ರಿಕ್ ಗೆಲುವಿನಿಂದ ವಿಶ್ವಾಸದಲ್ಲಿರುವ ಹಾರ್ದಿಕ್​ಗೆ (Hardik Pandya) ಕೇನ್ ಪಡೆ ಶಾಕ್ ನೀಡುತ್ತಾ ಎಂಬುದು ನೋಡಬೇಕಿದೆ.

ಗುಜರಾತ್ ತಂಡ ಬ್ಯಾಟಿಂಗ್​ನಲ್ಲಿ ಬಲಿಷ್ಠವಾಗಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಎದುರು ಆಲ್ರೌಂಡರ್ ರಾಹುಲ್ ತೆವಾಟಿಯ ಕಡೇ 2 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸುವ ಮೂಲಕ ಗೆಲುವು ತಂದುಕೊಟ್ಟಿದ್ದರು. ಶುಭ್ಮನ್ ಗಿಲ್ ಫಾರ್ಮ್​​ಗೆ ಮರಳಿದ್ದು ತಂಡ ಬ್ಯಾಟಿಂಗ್ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಆಲ್ರೌಂಡರ್ ವಿಜಯ್ ಶಂಕರ್ ಬದಲಿಗೆ ಸ್ಥಾನ ಪಡೆದ ಸಾಯಿ ಸುದರ್ಶನ್ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಯುವ ಬೌಲರ್ ದರ್ಶನ ನಲಕಂಡೆ, ಲಾಕಿ ಫರ್ಗ್ಯುಸನ್, ಮೊಹಮದ್ ಶಮಿ, ರಶೀದ್ ಖಾನ್ ಒಳಗೊಂಡ ಬೌಲಿಂಗ್ ಪಡೆ ಕೂಡ ಬಲಿಷ್ಠವಾಗಿದೆ.

ಇತ್ತ ಸನ್‌ರೈಸರ್ಸ್‌ ತಂಡದ ಯುವ ಬ್ಯಾಟರ್ ಅಭಿಷೇಕ್ ಶರ್ಮ ಸಿಎಸ್​ಕೆ ವಿರುದ್ಧ ಅಬ್ಬರಿಸಿದ್ದರು. ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್ ಹಾಗೂ ಏಡನ್ ಮಾರ್ಕ್ರಮ್ ಒಳಗೊಂಡ ಬ್ಯಾಟಿಂಗ್ ಪಡೆ ಗುಜರಾತ್ ತಂಡ ಬಲಿಷ್ಠ ಬೌಲಿಂಗ್ ಅನ್ನು ಎದುರಿಸಲು ಸಜ್ಜಾಗಿದೆ. ವೇಗದ ಎಸೆತಗಳ ಮೂಲಕ ಗಮನ ಸೆಳೆಯುತ್ತಿದ್ದರೂ ದುಬಾರಿಯಾಗುತ್ತಿರುವ ಉಮ್ರಾನ್ ಮಲಿಕ್ ಬದಲಿಗೆ ಕನ್ನಡಿಗ ಶ್ರೇಯಸ್ ಗೋಪಾಲ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಭುವನೇಶ್ವರ್ ಕುಮಾರ್ ಹಾಗೂ ಟಿ. ನಟರಾಜನ್ ಇನ್ನಷ್ಟು ಅಪಾಯಕಾರಿ ಆಗಿ ಗೋಚರಿಸಬೇಕಿದೆ.

ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ 2022 ರಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿದೆ. ಕೇನ್ ತಂಡವು ಮೊದಲ ಇನ್ನಿಂಗ್ಸ್​ ಬ್ಯಾಟಿಂಗ್ ಮಾಡಿದಾಗ ಸರಾಸರಿ 150ರಿಂದ 170 ರನ್​ ಗಳಿಸಿದರೆ, ಗುಜರಾತ್ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 170ರಿಂದ 190 ರನ್​ ಗಳಸುವ ಮೂಲಕ ಇಲ್ಲಿಯೂ ಬಲಿಷ್ಠವಾಗಿದೆ ಎಂದು ಹೇಳಬಹುದಾಗಿದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11:

ಸನ್‌ರೈಸರ್ಸ್ ಹೈದರಾಬಾದ್ – ಕೇನ್ ವಿಲಿಯಮ್ಸನ್ (ನಾಯಕ) ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಮಾರ್ಕೊ ಯಾನ್ಸನ್, ಉಮ್ರಾನ್ ಮಲಿಕ್, ಟಿ ನಟರಾಜನ್.

ಗುಜರಾತ್ ಟೈಟನ್ಸ್ – ಹಾರ್ದಿಕ್ ಪಾಂಡ್ಯ, ರಹಮಾನುಲ್ಲಾ ಗುರ್ಬಾಜ್, ಶುಭಮನ್ ಗಿಲ್, ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ದರ್ಶನ್ ನಲ್ಕಂಡೆ.

RR vs LSG: ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ರಾಜಸ್ಥಾನಕ್ಕೆ ಗೆಲುವು ತಂದುಕೊಟ್ಟ ಕುಲ್ದೀಪ್ ಸೇನ್

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ