RR vs PBKS: ಐಪಿಎಲ್ನಲ್ಲಿಂದು ರಾಜಸ್ಥಾನ್-ಪಂಜಾಬ್ ಮುಖಾಮುಖಿ: ಯಾರು ಗೆದ್ದರೆ ಆರ್ಸಿಬಿಗೆ ಲಾಭ?
Rajasthan Royals vs Punjab Kings: ಐಪಿಎಲ್ 2024 ರಲ್ಲಿಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ. ಉಭಯ ತಂಡಗಳಿಗೆ ಇದೊಂದು ಔಪಚಾರಿಕ ಪಂದ್ಯ ಎನ್ನಬಹುದು. ಈ ಪಂದ್ಯದಲ್ಲಿನ ಸೋಲು-ಗೆಲುವು ಆರ್ಸಿಬಿ ಸೇರಿದಂತೆ ಇತರೆ ಯಾವುದೇ ತಂಡಗಳ ಮೇಲೆ ಪರಿಣಾಮ ಬೀರುವುದಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ 2024 ರ 65 ನೇ ಪಂದ್ಯವು ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ (RR vs PBKS) ನಡುವೆ ಮೇ 15 ರಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂಜಾಬ್ ಕಿಂಗ್ಸ್ ಈಗಾಗಲೇ ಐಪಿಎಲ್ 2024 ರಿಂದ ಹೊರಬಿದ್ದಿದೆ. ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಪ್ರವೇಶಿಸಿದ್ದು, ಈ ಪಂದ್ಯವನ್ನು ಹೇಗೇ ಗೆದ್ದರೂ ಅಗ್ರ 2 ರಲ್ಲಿ ಸ್ಥಾನ ಪಡೆಯಲಿದೆ. ಅಸ್ಸಾಂನಲ್ಲಿ ಈ ಬಾರಿಯ ಐಪಿಎಲ್‌ನ ಮೊದಲ ಪಂದ್ಯ ಇದಾಗಿದೆ.
ಮುಂಬರುವ ಪಾಕಿಸ್ತಾನ ವಿರುದ್ಧದ ಸರಣಿಗೆ ಇಂಗ್ಲೆಂಡ್ ತಂಡವನ್ನು ಸೇರಲು ರಾಜಸ್ಥಾನ್ ತಂಡದ ಇನ್-ಫಾರ್ಮ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ತವರಿಗೆ ತೆರಳಿದ್ದಾರೆ. ಹೀಗಾಗಿ ಇವರ ಅನುಪಸ್ಥಿತಿಯಲ್ಲಿ ರಾಯಲ್ಸ್ ಆಡಲಿದೆ. ಇವರ ಜಾಗಕ್ಕೆ ಟಾಮ್ ಕೊಹ್ಲರ್-ಕ್ಯಾಡ್ಮೋರ್ ಆಯ್ಕೆ ಆಗುವ ಸಾಧ್ಯತೆಯಿದೆ. ಉಭಯ ತಂಡಗಳಿಗೆ ಇದೊಂದು ಔಪಚಾರಿಕ ಪಂದ್ಯ ಎನ್ನಬಹುದು. ಈ ಪಂದ್ಯದಲ್ಲಿನ ಸೋಲು-ಗೆಲುವು ಆರ್ಸಿಬಿ ಸೇರಿದಂತೆ ಇತರೆ ಯಾವುದೇ ತಂಡಗಳ ಮೇಲೆ ಪರಿಣಾಮ ಬೀರುವುದಿಲ್ಲ.
ಎಲ್ಎಸ್ಜಿ ಮಾಲೀಕನಿಂದ ಮತ್ತೊಂದು ಅವಾಂತರ: ರಾಹುಲ್ ಔಟಾದಾಗ ಗೋಯೆಂಕಾ ಏನು ಮಾಡಿದ್ರು ನೋಡಿ
ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ಲಿಯಾಮ್ ಲಿವಿಂಗ್‌ಸ್ಟೋನ್ ಸೇವೆ ಕಳೆದುಕೊಂಡಿದೆ. ಇವರು ಗಾಯದಿಂದ ಚೇತರಿಸಿಕೊಳ್ಳಲು ತಮ್ಮ ದೇಶಕ್ಕೆ ಹಿಂತಿರುಗಿದ್ದಾರೆ. ತಂಡದ ಇತರ ಇಂಗ್ಲೆಂಡ್ ಆಟಗಾರರಾದ ಸ್ಯಾಮ್ ಕರ್ರಾನ್ ಮತ್ತು ಜಾನಿ ಬೈರ್‌ಸ್ಟೋವ್ ಕೂಡ ರಾಯಲ್ಸ್ ವಿರುದ್ಧದ ಪಂದ್ಯದ ನಂತರ ತಮ್ಮ ದೇಶಕ್ಕೆ ಮರಳಲಿದ್ದಾರೆ.
ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಇಲ್ಲಿಯವರೆಗೆ ಹೆಚ್ಚು ಸ್ಕೋರಿಂಗ್ ಪಂದ್ಯಗಳನ್ನು ಮಾತ್ರ ಇಲ್ಲಿ ನಡೆದಿವೆ ಎನ್ನಬಹುದು. ಇಲ್ಲಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ರನ್ ಗಳಿಸುತ್ತಾರೆ. ಈ ಮೈದಾನದಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳು ಕೂಡ ಅತಿ ಹೆಚ್ಚು ಹೋಗಿವೆ. ಈ ಮೈದಾನದಲ್ಲಿ ಇದುವರೆಗೆ ಒಟ್ಟು 4 ಟಿ20 ಪಂದ್ಯಗಳು ನಡೆದಿವೆ. ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಒಟ್ಟು 2 ಪಂದ್ಯಗಳು ನಡೆದಿದ್ದು, ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವೇ ಗೆದ್ದಿದೆ. ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 198 ರನ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನ ಸರಾಸರಿ 167 ರನ್ ಆಗಿದೆ.
ನಾನು ಆರ್ಸಿಬಿ ವಿರುದ್ಧ ಆಡಿದ್ದರೆ..: ಲಕ್ನೋ ವಿರುದ್ಧ ಗೆದ್ದ ಬಳಿಕ ರಿಷಭ್ ಪಂತ್ ಶಾಕಿಂಗ್ ಸ್ಟೇಟ್ಮೆಂಟ್
ಪಂಜಾಬ್ ಕಿಂಗ್ಸ್: ಸ್ಯಾಮ್ ಕರ್ರಾನ್ (ನಾಯಕ), ಮ್ಯಾಥ್ಯೂ ಶಾರ್ಟ್, ಜಾನಿ ಬೈರ್‌ಸ್ಟೋ, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಸಿಕಂದರ್ ರಜಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಷ್‌ದೀಪ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ , ಹರ್‌ಪ್ರೀತ್ ಬ್ರಾರ್, ರಾಹುಲ್ ಚಹಾರ್, ಹರ್‌ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ಶಿವಂ ಸಿಂಗ್, ಹರ್ಷಲ್ ಪಟೇಲ್, ಕ್ರಿಸ್ ವೋಕ್ಸ್, ಅಶುತೋಷ್ ಶರ್ಮಾ, ವಿಶ್ವನಾಥ್ ಪ್ರತಾಪ್ ಸಿಂಗ್, ಶಶಾಂಕ್ ಸಿಂಗ್, ತನಯ್ ತ್ಯಾಗರಾಜನ್, ಪ್ರಿನ್ಸ್ ಚೌಧರಿ ಮತ್ತು ರಿಲೇ ರೂಸೋ.
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಅಬಿದ್ ಮುಷ್ತಾಕ್, ಅವೇಶ್ ಖಾನ್, ಧ್ರುವ್ ಜುರೆಲ್, ಡೊನೊವನ್ ಫೆರೇರಾ, ಜೋಸ್ ಬಟ್ಲರ್, ಕುಲದೀಪ್ ಸೇನ್, ಕೃನಾಲ್ ಸಿಂಗ್ ರಾಥೋಡ್, ನಾಂದ್ರೆ ಬರ್ಗರ್, ನವದೀಪ್ ಸೈನಿ, ರವಿಚಂದ್ರನ್ ಅಶ್ವಿನ್, ರಯಾನ್ ಪರಾಗ್, ಸಂದೀಪ್ ಶರ್ಮಾ, ಶಿಮ್ರೋನ್ ಹೆಟ್ಮಿಯರ್ ದುಬೆ, ರೋವ್ಮನ್ ಪೊವೆಲ್, ಟಾಮ್ ಕೊಹ್ಲರ್-ಕೆಡ್ಮೋರ್, ಟ್ರೆಂಟ್ ಬೌಲ್ಟ್, ಯಶಸ್ವಿ ಜೈಸ್ವಾಲ್, ಯುಜ್ವೇಂದ್ರ ಚಾಹಲ್ ಮತ್ತು ತನುಷ್ ಕೋಟ್ಯಾನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ