IPL 2024: ಸಿಕ್ಸರ್​ಗಳ ಸುರಿಮಳೆಗೆ ಹಳೆಯ ದಾಖಲೆಗಳು ಧೂಳೀಪಟ

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್) ಮೊದಲ ಸೀಸನ್​ನಲ್ಲಿ ಮೂಡಿಬಂದ ಒಟ್ಟು ಸಿಕ್ಸ್​ಗಳ ಸಂಖ್ಯೆ 622. ಇದಾದ ಬಳಿಕ ಐಪಿಎಲ್ 2022 ರಲ್ಲಿ ಮೊದಲ ಬಾರಿಗೆ ಒಟ್ಟು ಸಿಕ್ಸ್​ಗಳ ಸಂಖ್ಯೆಯು ಸಾವಿರದ ಗಡಿದಾಟಿತ್ತು. ಆದರೆ ಈ ಬಾರಿಯ ಐಪಿಎಲ್​ನಲ್ಲಿ ಈ ಎಲ್ಲಾ ದಾಖಲೆಗಳು ಧೂಳೀಪಟವಾಗಿದೆ.

ಝಾಹಿರ್ ಯೂಸುಫ್
|

Updated on: May 15, 2024 | 3:52 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಸಿಕ್ಸರ್​ಗಳ ಸುರಿಮಳೆಯಾಗಿದೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು. ಅಂದರೆ ಐಪಿಎಲ್​ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸ್​ಗಳು ಮೂಡಿಬಂದ ಸೀಸನ್ ಎಂಬ ಹೆಗ್ಗಳಿಕೆಗೆ IPL 2024 ಪಾತ್ರವಾಗಿದೆ.

1 / 5
ಹಾಗೆಯೇ ಈ ಬಾರಿಯ ಐಪಿಎಲ್​ನಲ್ಲಿ ಅತೀ ವೇಗವಾಗಿ ಸಾವಿರ ಸಿಕ್ಸ್​ಗಳು ಪೂರ್ಣಗೊಂಡಿವೆ. ಐಪಿಎಲ್ 2023 ರಲ್ಲಿ 67 ಪಂದ್ಯಗಳಲ್ಲಿ 1000 ಸಿಕ್ಸ್​ಗಳು ಮೂಡಿಬಂದಿದ್ದವು. ಆದರೆ ಈ ಬಾರಿಯ ಐಪಿಎಲ್​ನಲ್ಲಿ ಕೇವಲ 57 ಮ್ಯಾಚ್​ಗಳಲ್ಲೇ 1000 ಸಿಕ್ಸ್​ಗಳು ಪೂರ್ಣಗೊಂಡಿತ್ತು.

2 / 5
ಅಷ್ಟೇ ಅಲ್ಲದೆ ಐಪಿಎಲ್​ 2023 ರಲ್ಲಿ 1000 ಸಿಕ್ಸರ್​ಗಳನ್ನು ಪೂರ್ಣಗೊಳಿಸಲು ಬ್ಯಾಟರ್​ಗಳು ತೆಗೆದುಕೊಂಡ ಒಟ್ಟು ಎಸೆತ 15,391. ಆದರೆ ಈ ಬಾರಿ 13,079 ಎಸೆತಗಳಲ್ಲಿಯೇ 1000 ಸಿಕ್ಸ್​ಗಳು ಮೂಡಿಬಂದಿವೆ.

3 / 5
ಇನ್ನು 64 ಪಂದ್ಯಗಳ ಮುಕ್ತಾಯದ ವೇಳೆಗೆ 1125 ಸಿಕ್ಸ್​​ಗಳು ಮೂಡಿಬಂದಿವೆ. ಇದರೊಂದಿಗೆ ಐಪಿಎಲ್​ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸರ್​ಗಳು ಮೂಡಿಬಂದ ಆವೃತ್ತಿ ಎಂಬ ದಾಖಲೆ ಐಪಿಎಲ್ ಸೀಸನ್-17 ರ ಪಾಲಾಗಿದೆ. ಇದಕ್ಕೂ ಮುನ್ನ ಐಪಿಎಲ್ 2023 ಅತೀ ಹೆಚ್ಚು ಸಿಕ್ಸ್​ಗಳು ಮೂಡಿಬಂದ ಸೀಸನ್ ಆಗಿತ್ತು.

4 / 5
ಕಳೆದ ಬಾರಿಯ ಐಪಿಎಲ್​ನಲ್ಲಿ 74 ಪಂದ್ಯಗಳಲ್ಲಿ ಒಟ್ಟು 1124 ಸಿಕ್ಸರ್​ಗಳು ಮೂಡಿಬಂದಿದ್ದವು. ಆದರೆ ಈ ಬಾರಿಯ ಐಪಿಎಲ್​ನ 64 ಪಂದ್ಯಗಳ ಮುಕ್ತಾಯದ ವೇಳೆಗೆ ಒಟ್ಟು 1125 ಸಿಕ್ಸ್​ಗಳು ಮೂಡಿಬಂದಿವೆ. ಇದರೊಂದಿಗೆ IPL 2024 ರ ಸೀಸನ್​ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸರ್​ಗಳು ಮೂಡಿಬಂದ ಆವೃತ್ತಿ ಎನಿಸಿಕೊಂಡಿದೆ.

5 / 5
Follow us
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ

ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು

ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ

ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ

ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ

Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು

ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು

ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ