IPL 2024: ಸಿಕ್ಸರ್ಗಳ ಸುರಿಮಳೆಗೆ ಹಳೆಯ ದಾಖಲೆಗಳು ಧೂಳೀಪಟ
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಮೊದಲ ಸೀಸನ್ನಲ್ಲಿ ಮೂಡಿಬಂದ ಒಟ್ಟು ಸಿಕ್ಸ್ಗಳ ಸಂಖ್ಯೆ 622. ಇದಾದ ಬಳಿಕ ಐಪಿಎಲ್ 2022 ರಲ್ಲಿ ಮೊದಲ ಬಾರಿಗೆ ಒಟ್ಟು ಸಿಕ್ಸ್ಗಳ ಸಂಖ್ಯೆಯು ಸಾವಿರದ ಗಡಿದಾಟಿತ್ತು. ಆದರೆ ಈ ಬಾರಿಯ ಐಪಿಎಲ್ನಲ್ಲಿ ಈ ಎಲ್ಲಾ ದಾಖಲೆಗಳು ಧೂಳೀಪಟವಾಗಿದೆ.
Updated on: May 15, 2024 | 3:52 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಸಿಕ್ಸರ್ಗಳ ಸುರಿಮಳೆಯಾಗಿದೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು. ಅಂದರೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸ್ಗಳು ಮೂಡಿಬಂದ ಸೀಸನ್ ಎಂಬ ಹೆಗ್ಗಳಿಕೆಗೆ IPL 2024 ಪಾತ್ರವಾಗಿದೆ.

ಹಾಗೆಯೇ ಈ ಬಾರಿಯ ಐಪಿಎಲ್ನಲ್ಲಿ ಅತೀ ವೇಗವಾಗಿ ಸಾವಿರ ಸಿಕ್ಸ್ಗಳು ಪೂರ್ಣಗೊಂಡಿವೆ. ಐಪಿಎಲ್ 2023 ರಲ್ಲಿ 67 ಪಂದ್ಯಗಳಲ್ಲಿ 1000 ಸಿಕ್ಸ್ಗಳು ಮೂಡಿಬಂದಿದ್ದವು. ಆದರೆ ಈ ಬಾರಿಯ ಐಪಿಎಲ್ನಲ್ಲಿ ಕೇವಲ 57 ಮ್ಯಾಚ್ಗಳಲ್ಲೇ 1000 ಸಿಕ್ಸ್ಗಳು ಪೂರ್ಣಗೊಂಡಿತ್ತು.

ಅಷ್ಟೇ ಅಲ್ಲದೆ ಐಪಿಎಲ್ 2023 ರಲ್ಲಿ 1000 ಸಿಕ್ಸರ್ಗಳನ್ನು ಪೂರ್ಣಗೊಳಿಸಲು ಬ್ಯಾಟರ್ಗಳು ತೆಗೆದುಕೊಂಡ ಒಟ್ಟು ಎಸೆತ 15,391. ಆದರೆ ಈ ಬಾರಿ 13,079 ಎಸೆತಗಳಲ್ಲಿಯೇ 1000 ಸಿಕ್ಸ್ಗಳು ಮೂಡಿಬಂದಿವೆ.

ಇನ್ನು 64 ಪಂದ್ಯಗಳ ಮುಕ್ತಾಯದ ವೇಳೆಗೆ 1125 ಸಿಕ್ಸ್ಗಳು ಮೂಡಿಬಂದಿವೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸರ್ಗಳು ಮೂಡಿಬಂದ ಆವೃತ್ತಿ ಎಂಬ ದಾಖಲೆ ಐಪಿಎಲ್ ಸೀಸನ್-17 ರ ಪಾಲಾಗಿದೆ. ಇದಕ್ಕೂ ಮುನ್ನ ಐಪಿಎಲ್ 2023 ಅತೀ ಹೆಚ್ಚು ಸಿಕ್ಸ್ಗಳು ಮೂಡಿಬಂದ ಸೀಸನ್ ಆಗಿತ್ತು.

ಕಳೆದ ಬಾರಿಯ ಐಪಿಎಲ್ನಲ್ಲಿ 74 ಪಂದ್ಯಗಳಲ್ಲಿ ಒಟ್ಟು 1124 ಸಿಕ್ಸರ್ಗಳು ಮೂಡಿಬಂದಿದ್ದವು. ಆದರೆ ಈ ಬಾರಿಯ ಐಪಿಎಲ್ನ 64 ಪಂದ್ಯಗಳ ಮುಕ್ತಾಯದ ವೇಳೆಗೆ ಒಟ್ಟು 1125 ಸಿಕ್ಸ್ಗಳು ಮೂಡಿಬಂದಿವೆ. ಇದರೊಂದಿಗೆ IPL 2024 ರ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸರ್ಗಳು ಮೂಡಿಬಂದ ಆವೃತ್ತಿ ಎನಿಸಿಕೊಂಡಿದೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



