AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranchi Weather Update: ಸೋಲಿನ ಸುಳಿಯಲ್ಲಿರುವ ಭಾರತಕ್ಕೆ ಗುಡ್​ ನ್ಯೂಸ್: ಪಂದ್ಯ ಡ್ರಾ ಸಾಧ್ಯತೆ, ಹೇಗೆ ಗೊತ್ತೇ?

India vs England 4th Test Day 3 Weather: ಟೀಮ್ ಇಂಡಿಯಾ ಎರಡನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ಗೆ 219 ರನ್ ಗಳಿಸಿದೆ. ಅಂದರೆ, ಇಂಗ್ಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಇನ್ನೂ 134 ರನ್‌ಗಳ ಹಿಂದೆ ಇದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಮುನ್ನಡೆ ಪಡೆಯುವುದು ಬಹುತೇಕ ಖಚಿತವಾಗಿದೆ. ಹೀಗಿರುವಾಗ ರೋಹಿತ್ ಪಡೆಗೆ ಗುಡ್ ನ್ಯೂಸ್ ಸಿಕ್ಕಿದೆ.

Ranchi Weather Update: ಸೋಲಿನ ಸುಳಿಯಲ್ಲಿರುವ ಭಾರತಕ್ಕೆ ಗುಡ್​ ನ್ಯೂಸ್: ಪಂದ್ಯ ಡ್ರಾ ಸಾಧ್ಯತೆ, ಹೇಗೆ ಗೊತ್ತೇ?
IND vs ENG 4th Test Weather
Vinay Bhat
|

Updated on: Feb 25, 2024 | 7:53 AM

Share

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದಲ್ಲಿ ಮೊದಲ ಎರಡು ದಿನಗಳ ಆಟ ಮುಗಿದಿದ್ದು, ರೋಹಿತ್ ಪಡೆಯ ವಿರುದ್ಧ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಿದಂತೆ ತೋರುತ್ತಿದೆ. ಇಂಗ್ಲೆಂಡ್ ಪ್ರಸ್ತುತ ಈ ಟೆಸ್ಟ್ ಗೆಲ್ಲುವ ಓಟದಲ್ಲಿ ಮುಂಚೂಣಿಯಲ್ಲಿದೆ. ಹೀಗಿರುವಾಗ ಟೀಮ್ ಇಂಡಿಯಾಕ್ಕೆ ಶುಭಸುದ್ದಿಯೊಂದು ಸಿಕ್ಕಿದೆ. ಈ ಟೆಸ್ಟ್ ಪಂದ್ಯ ಡ್ರಾ ಆಗುವ ಸಾಧ್ಯತೆ ಇದೆ. ಯಾಕೆಂದರೆ ಪಂದ್ಯದ ಮೂರು, ನಾಲ್ಕು ಮತ್ತು 5ನೇ ದಿನದಂದು ರಾಂಚಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಾಂಚಿ ನಗರದಲ್ಲಿ ಹವಾಮಾನ ಬದಲಾಗುತ್ತಿದ್ದು, ಇದು ಟೀಮ್ ಇಂಡಿಯಾಕ್ಕೆ ವರವಾಗುವ ಸಾಧ್ಯತೆ ದಟ್ಟವಾಗಿದೆ.

ರಾಂಚಿಯಲ್ಲಿ ಮಳೆ ಸಾಧ್ಯತೆ

Accuweather.com ಪ್ರಕಾರ, ಟೆಸ್ಟ್ ಪಂದ್ಯದ ಮೂರನೇ ದಿನವಾದ ಭಾನುವಾರ ಮಧ್ಯಾಹ್ನ ಮಳೆಯಾಗುವ ಸಾಧ್ಯತೆಗಳಿವೆ. ಇದಲ್ಲದೇ 5ನೇ ದಿನವೂ ಆಕಾಶದಲ್ಲಿ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ನಂತರ ಒಂದು ಅಥವಾ ಎರಡು ಬಾರಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ವೆಬ್‌ಸೈಟ್ ಪ್ರಕಾರ, ನಾಲ್ಕನೇ ದಿನವೂ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ತೋರಿಸುತ್ತದೆ.

ಧ್ರುವ್ ಮೇಲೆ ಎಲ್ಲರ ಕಣ್ಣು: ರೋಚಕತೆ ಸೃಷ್ಟಿಸಿದ ಇಂದಿನ ಮೂರನೇ ದಿನದಾಟ

ಮಳೆಯು ಇಡೀ ದಿನದ ಆಟದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಆಟವು ಸ್ವಲ್ಪ ಸಮಯ ಸ್ಥಗಿತಗೊಂಡು ನಂತರ ಮುಂದುವರೆಸಬೇಕಾಗಿ ಬರಬಹುದು. ಇದು ರಾಂಚಿ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಟೀಂ ಇಂಡಿಯಾಗೆ ಉತ್ತಮ ಅವಕಾಶವಾಗಲಿದೆ.

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 353 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಟೀಮ್ ಇಂಡಿಯಾ ಎರಡನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ಗೆ 219 ರನ್ ಗಳಿಸಿದೆ. ಅಂದರೆ, ಇಂಗ್ಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಇನ್ನೂ 134 ರನ್‌ಗಳ ಹಿಂದೆ ಇದ್ದಾರೆ. ಭಾರತದ 3 ವಿಕೆಟ್‌ಗಳು ಉಳಿದರೆ ಆಲೌಟ್ ಆಗಲಿದೆ. ಭಾರತ 3 ವಿಕೆಟ್ ಉಳಿಸಿಕೊಂಡು 134 ರನ್ ಗಳಿಸುವುದು ಕಷ್ಟ. ಅಂದರೆ, ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಮುನ್ನಡೆ ಪಡೆಯುವುದು ಬಹುತೇಕ ಖಚಿತವಾಗಿದೆ.

ಮೇಘನಾ, ರಿಚಾ, ಆಶಾ ಸೂಪರ್ ಶೋ; ಲೀಗ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದ ಆರ್​ಸಿಬಿ..!

ಧ್ರುವ್ ಜುರೆಲ್ ಮತ್ತು ಕುಲ್ದೀಪ್ ಮೇಲೆ ನಿರೀಕ್ಷೆ

ಭಾರತ ಪರ ಧ್ರುವ್ ಜುರೆಲ್ 58 ಎಸೆತಗಳಲ್ಲಿ 30 ರನ್ ಗಳಿಸಿ ತಂಡಕ್ಕೆ ಆಸರೆಯಾದರೆ, ಕುಲ್ದೀಪ್ ಯಾದವ್ 72 ಎಸೆತಗಳಲ್ಲಿ 17 ರನ್ ಗಳಿಸಿ ಧ್ರುವ್​ಗೆ ಸಾಥ್ ನೀಡುತ್ತಿದ್ದಾರೆ. ಇವರಿಬ್ಬರು ಇಂದು ಮೂರನೇ ದಿನದಾಟ ಶುರುಮಾಡಲಿದ್ದಾರೆ. ಟೀಮ್ ಇಂಡಿಯಾ ಆದಷ್ಟು ತನ್ನ ಹಿನ್ನಡೆಯನ್ನು ಕಡಿಮೆ ಮಾಡುವತ್ತ ಚಿನ್ನ ನೆಟ್ಟಿದೆ. ಹೀಗಾಗಿ ಇಂದಿನ ಮೂರನೇ ದಿನದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ