ಕರ್ನಾಟಕ ಕ್ರಿಕೆಟ್ ತಂಡ (Karnataka Cricket Team) ರಣಜಿ ಟ್ರೋಫಿ (Ranji Trophy) ಪ್ರಶಸ್ತಿಗಾಗಿ 7 ವರ್ಷಗಳಿಂದ ಕಾಯುತ್ತಿದೆ. ಉತ್ತರ ಪ್ರದೇಶದ ಕಾಯುವಿಕೆ ಅದಕ್ಕಿಂತಲೂ ದೀರ್ಘವಾಗಿದೆ. ಉತ್ತರ ಪ್ರದೇಶ (UP Cricket Team) 2005-06ರಲ್ಲಿ ತನ್ನ ಏಕೈಕ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕರ್ನಾಟಕ ಬಹು ಬಾರಿ ಚಾಂಪಿಯನ್ ಆಗಿದ್ದು, ಯುಪಿ ಎರಡನೇ ಬಾರಿಗೆ ಟ್ರೋಫಿಗೆ ಕೈ ಹಾಕಲು ಕಾಯುತ್ತಿದೆ. ಇವೆರಡರಲ್ಲಿ ಯಾವುದು ಸಕ್ಸಸ್ ಆಗುತ್ತೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಆದರೆ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ಮತ್ತು ಯುಪಿ ಪರಸ್ಪರ ಪೈಪೋಟಿ ನಡೆಸುತ್ತಿದ್ದು, ಉತ್ತರ ಪ್ರದೇಶ ಯಶಸ್ಸಿಗೆ ಜಾಸ್ತಿ ಹತ್ತಿರವಾಗಿದೆ. ಆಲೂರಿನಲ್ಲಿ ಆರಂಭವಾದ ರಣಜಿ ಟ್ರೋಫಿ 2022 ರ ಕ್ವಾರ್ಟರ್ ಫೈನಲ್‌ನ ಮೊದಲ ದಿನದಂದು ಉತ್ತರ ಪ್ರದೇಶದ ಸೌರಭ್ ಕುಮಾರ್ ಮತ್ತು ಶಿವಂ ಮಾವಿ (Saurabh Kumar and Shivam Mavi) ಒಟ್ಟಾಗಿ ಕರ್ನಾಟಕದ ಬ್ಯಾಟಿಂಗ್ ಬೆನ್ನೇಲುಬನ್ನು ಮುರಿದಿದ್ದಾರೆ.
ಸೋಮವಾರ, ಜೂನ್ 6, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈದಾನ (Karnataka State Cricket Association ground)ದಲ್ಲಿ, ಯುಪಿ ನಾಯಕ ಕರಣ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆರಂಭದಲ್ಲಿ ಈ ನಿರ್ಧಾರಕ್ಕೆ ಹಿನ್ನಡೆ ಎನಿಸಿತು, ಆದರೆ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಮತ್ತು ವೇಗದ ಬೌಲರ್ ಶಿವಂ ಮಾವಿ ದಾಳಿಗಿಳಿದ ಕೂಡಲೇ ಕರ್ನಾಟಕದ ಸ್ಥಿತಿ ಹದಗೆಟ್ಟಿತು. ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕ ಏಳು ವಿಕೆಟ್‌ಗೆ 213 ರನ್ ಗಳಿಸಿದೆ.
ಸೌರಭ್ ಮತ್ತು ಶಿವಂ ಬೆಂಕಿ ಬೌಲಿಂಗ್
ಸ್ಪಿನ್ನರ್ ಸೌರಭ್ ಅವರ ಸ್ಪಿನ್ ಅನ್ನು ಅರ್ಥಮಾಡಿಕೊಳ್ಳುವುದು ಕರ್ನಾಟಕದ ಬ್ಯಾಟ್ಸ್‌ಮನ್‌ಗಳಿಗೆ ಕಷ್ಟದ ಕೆಲಸವಾಗಿತ್ತು. 67 ರನ್ ನೀಡಿ 4 ವಿಕೆಟ್ ಪಡೆದರು. ಇದರಲ್ಲಿ ಆರಂಭಿಕ ರವಿಕುಮಾರ್ ಸಮರ್ಥ್ ಮತ್ತು ನಾಯಕ ಮನೀಶ್ ಪಾಂಡೆಯಂತಹ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು ಸೇರಿದ್ದರು. ಅದೇ ವೇಳೆ ಯುವ ವೇಗಿ ಶಿವಂ ಮಾವಿ ಕೂಡ 40 ರನ್ ನೀಡಿ ಮೂರು ವಿಕೆಟ್ ಪಡೆದರು. ಮಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್ ಅವರಂತಹ ದಿಗ್ಗಜರನ್ನು ಪೆವಿಲಿಯನ್‌ಗೆ ಕಳುಹಿಸಿದರು.
ಸಮರ್ಥ್ ಹೊರತುಪಡಿಸಿ ಇತರರು ವಿಫಲ
ಕರ್ನಾಟಕದ ಪರ ಆರಂಭಿಕ ರವಿಕುಮಾರ್ ಸಮರ್ಥ್ (57) ಮಾತ್ರ ಸುಸ್ಥಿರ ಬ್ಯಾಟಿಂಗ್‌ಗೆ ಶಕ್ತರಾದರು. ರವಿಕುಮಾರ್ ಮತ್ತು ಮಯಾಂಕ್ ಅಗರ್ವಾಲ್ (10) ಮೊದಲ ವಿಕೆಟ್‌ಗೆ 57 ರನ್ ಸೇರಿಸಿದರು. ಆದಾಗ್ಯೂ, ಈ ಜೊತೆಯಾಟದ ಸಮಯದಲ್ಲಿ ಅಗರ್ವಾಲ್ ಲಯದಲ್ಲಿ ಕಾಣಿಸಿಕೊಂಡಿಲ್ಲ. ರವಿಕುಮಾರ್ ಕೇವಲ 54 ಎಸೆತಗಳಲ್ಲಿ ಸೌರಭ್ ಎಸೆತದಲ್ಲಿ ಅರ್ಧಶತಕ ಪೂರೈಸಿ, ಅವರಿಗೆ ಬಲಿಯಾದರು. ರವಿಕುಮಾರ್ 81 ಎಸೆತಗಳನ್ನು ಎದುರಿಸಿ 10 ಬೌಂಡರಿ ಬಾರಿಸಿದರು. ಕೆಲವೇ ಸಮಯದಲ್ಲಿ ನಾಯರ್ (29) ಅವರನ್ನು ಬೌಲ್ಡ್ ಮಾಡುವ ಮೂಲಕ ಮಾವಿ ಕರ್ನಾಟಕಕ್ಕೆ ಮೂರನೇ ಹೊಡೆತ ನೀಡಿದರು.
ಇದಾದ ನಂತರ ನಾಯಕ ಪಾಂಡೆ (27) ಮತ್ತು ಕೆ.ಸಿದ್ಧಾರ್ಥ (37) ತಂಡದ ಸ್ಕೋರ್ ಅನ್ನು ಮೂರು ವಿಕೆಟ್‌ಗೆ 163 ರನ್‌ಗಳಿಗೆ ಕೊಂಡೊಯ್ದರು. 56ನೇ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಪಾಂಡೆ ಮತ್ತು ಶ್ರೀನಿವಾಸ್ ಶರತ್ (00) ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಸೌರಭ್ ಕರ್ನಾಟಕಕ್ಕೆ ಎರಡು ಹೊಡೆತ ನೀಡಿದರು. ಸೌರಭ್ ಮೇಲೆ ಶ್ರೇಯಸ್ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು ಆದರೆ ಮಾವಿ ಸಿದ್ಧಾರ್ಥ್ ಬೌಲ್ಡ್ ಮಾಡುವ ಮೂಲಕ ಅವರ ಮೂರನೇ ವಿಕೆಟ್ ಪಡೆದರು. ಹವಾಮಾನ ವೈಪರೀತ್ಯದಿಂದಾಗಿ ಮೊದಲ ದಿನ ಕೇವಲ 72 ಓವರ್‌ಗಳು ಮಾತ್ರ ಆಡಲು ಸಾಧ್ಯವಾಯಿತು.