AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy 2022, Quarterfinals: ರಣಜಿ ಕ್ವಾರ್ಟರ್‌-ಫೈನಲ್‌: ಟಾಸ್ ಗೆದ್ದ ಉತ್ತರ ಪ್ರದೇಶ: ಕರ್ನಾಟಕ ಉತ್ತಮ ಆರಂಭ

Karnataka vs Uttar Pradesh, 3rd Quarter-Final: ಕರ್ನಾಟಕ ತಂಡವು ಮೂರನೇ ಕ್ವಾಟರ್ ಫೈನಲ್‌ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು ಎದುರಿಸುತ್ತಿದ್ದು, ಆಲೂರಿನ ಕೆಎಸ್‌ಸಿಎ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಪಂದ್ಯ ಶುರುವಾಗಿದೆ.

Ranji Trophy 2022, Quarterfinals: ರಣಜಿ ಕ್ವಾರ್ಟರ್‌-ಫೈನಲ್‌: ಟಾಸ್ ಗೆದ್ದ ಉತ್ತರ ಪ್ರದೇಶ: ಕರ್ನಾಟಕ ಉತ್ತಮ ಆರಂಭ
Manish Pandey KAR vs UP Ranji Trophy
TV9 Web
| Updated By: Vinay Bhat|

Updated on:Jun 06, 2022 | 12:09 PM

Share

ಇಂಡಿಯನ್ ಪ್ರೀಮಿಯರ್ ಲೀಗ್ 15 ಆವೃತ್ತಿಯ ಕಾರಣಕ್ಕೆ ಬ್ರೇಕ್‌ ನೀಡಲಾಗಿದ್ದ ಪ್ರಸಕ್ತ ಸೀಸನ್‌ನ ರಣಜಿ ಟ್ರೋಫಿ (Ranji Trophy 2022) ನಾಕೌಟ್‌ ಪಂದ್ಯಗಳಿಗೆ ಇಂದು ಮರು ಚಾಲನೆ ಸಿಕ್ಕಿದೆ. ಕರ್ನಾಟಕ ತಂಡವು ಮೂರನೇ ಕ್ವಾಟರ್ ಫೈನಲ್‌ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು (Karnataka vs Uttar Pradesh) ಎದುರಿಸುತ್ತಿದ್ದು, ಆಲೂರಿನ ಕೆಎಸ್‌ಸಿಎ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಪಂದ್ಯ ಶುರುವಾಗಿದೆ. ಭಾನುವಾರ ತಡರಾತ್ರಿ ಮಳೆ ಸುರಿದ ಕಾರಣ ಕೆಎಸ್‌ಸಿಎ ಮೈದಾನವು ತೇವವಾಗಿತ್ತು. ಹೀಗಾಗಿ ಕ್ವಾರ್ಟರ್‌ಫೈನಲ್‌ ಪಂದ್ಯ ಕೊಂಚ ತಡವಾಗಿ ಆರಂಭವಾಗಿದೆ. ಸದ್ಯ ಟಾಸ್ ಗೆದ್ದ ಉತ್ತರ ಪ್ರದೇಶ ತಂಡದ ನಾಯಕ ಕರ್ಣ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಬ್ಯಾಟಿಂಗ್ ಆರಂಭಿಸಿರುವ ಮನೀಶ್ ಪಾಂಡೆ (Manish Pandey) ಪಡೆ ಉತ್ತಮ ಆರಂಭ ಪಡೆದುಕೊಂಡಿದೆ.

ಕರ್ನಾಟಕ ಪರ ಓಪನರ್​ಗಳಾಗಿ ಕಣಕ್ಕಿಳಿದ ರವಿಕುಮಾರ್ ಸಮರ್ಥ್ ಹಾಗೂ ಮಯಾಂಕ್ ಅಗರ್ವಾಲ್ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದಾರೆ. ಉಳಿದಂತೆ ಕರುಣ್ ನಾಯರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಶ್ರೀನಿವಾಸ್ ಶರತ್, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ರೋನಿತ್ ಮೋರೆ, ವಿಧ್ವತ್ ಕಾವೇರಪ್ಪ ಹಾಗೂ ವಿಜಯ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ದೇವದತ್ ಪಡಿಕ್ಕಲ್, ಜಗದೀಶ ಸುಚಿತ್​ ಅವರನ್ನು ಬೆಂಚ್ ಕಾಯಿಸಿದ್ದು ಅಚ್ಚರಿ ಮೂಡಿಸಿದೆ.

ಇತ್ತ ಉ. ಪ್ರದೇಶ ಪರ ಸಮರ್ಥ್ ಸಿಂಗ್, ರಿಯಾನ್ ಪರಾಗ್, ಪ್ರಿನ್ಸ್ ಯಾದವ್, ರಿಂಕು ಸಿಂಗ್, ಆರ್ಯನ್ ಜುಯಾಲ್, ಧ್ರುವ್ ಜೂರೆಲ್, ಶಿವಂ ಮಾವಿ, ಅಮಖಿತ್ ರಜ್ಪೂತ್, ಯಶ್ ದಯಾಲ್ ಹಾಗೂ ಸೌರಭ್ ಕುಮಾರ್ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ
Image
India vs South Africa ಟಿ20 ಸರಣಿ ಯಾವಾಗ?, ಎಷ್ಟು ಗಂಟೆಗೆ, ನೇರ ಪ್ರಸಾರ, ಟಿಕೆಟ್ ಮಾರಾಟ: ಇಲ್ಲಿದೆ ಎಲ್ಲ ಮಾಹಿತಿ
Image
Rafael Nadal: ದಾಖಲೆಯ 14ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ರಫೆಲ್ ನಡಾಲ್‌: ಯಾರು ಹೇಗೆ ಪ್ರತಿಕ್ರಿಯಿಸಿದರು?
Image
French Open 2022: 14ನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ರಾಫೆಲ್ ನಡಾಲ್..!
Image
ಟ್ಯಾಟೂ ಪ್ರಿಯರ ಕಣ್ಣು ಕುಕ್ಕುತ್ತಿದೆ ಸೂರ್ಯಕುಮಾರ್ ಯಾದವ್ ಹೊಸ ಟ್ಯಾಟೂ; ಫೋಟೋ ನೋಡಿ

Riyan Parag: ನೀನಿನ್ನೂ ಮಗು ಅಷ್ಟೆ: RCB vs RR​ ಪಂದ್ಯದ ಮಧ್ಯೆ ನಡೆದ ಘಟನೆ ಬಗ್ಗೆ ಪರಾಗ್ ಶಾಕಿಂಗ್ ಹೇಳಿಕೆ

ಎಸ್‌ಸಿಎ ಮೈದಾನದಲ್ಲಿ ನಡೆಯುವ ಪಂದ್ಯಕ್ಕಾಗಿ ತನ್ನದೇ ರಣತಂತ್ರ ರೂಪಿಸಿರುವ ಕರ್ನಾಟಕ, ಟೂರ್ನಿಯ ಮುಂದಿನ ಹಂತಕ್ಕೇರುವ ನಿರೀಕ್ಷೆ ಹೊಂದಿದೆ. ಆದರೆ ಕರ್ನಾಟಕ ತಂಡಕ್ಕೆ ಸ್ಟಾರ್‌ ಆಟಗಾರರ ಅಲಭ್ಯತೆ ಕಾಡುವುದು ಖಚಿತ. ಕೆ.ಎಲ್. ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ರಣಜಿ ತಂಡಕ್ಕೆ ಅಲಭ್ಯರಾಗಿದ್ದಾರೆ. ತವರಿನಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕೆ.ಎಲ್. ರಾಹುಲ್ ಭಾರತವನ್ನು ಮುನ್ನಡೆಸಲಿದ್ದರೆ.‌ ಇಂಗ್ಲೆಂಡ್‌ನಲ್ಲಿ ನಡೆಯಲಿರುವ 5ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯಕ್ಕಾಗಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ್ ಕೃಷ್ಣ ಅವರಿಗೆ ವಿಶ್ರಾಂತಿ ಪಡೆಯಲು ಕೇಳಲಾಗಿದೆ.

ಇನ್ನು ಅಭಿಮನ್ಯು ಈಶ್ವರನ್ ನಾಯಕನಾಗಿರುವ ಬೆಂಗಾಲ್ ತಂಡ ಜಾರ್ಖಂಡ್ ವಿರುದ್ಧ ಟಾಸ್ ಸೋತರೂ ಉತ್ತಮ ಆರಂಭ ಪಡೆದುಕೊಂಡಿದೆ. ನಾಯಕ ಹಾಗೂ ಅಭಿಷೇಕ್ ರಾಮನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಮುಂಬೈ ಹಾಗೂ ಉತ್ತರಖಂಡ್ ನಡುವಣ ಪಂದ್ಯದಲ್ಲಿ ಮುಂಬೈ ಬ್ಯಾಟಿಂಗ್ ಆಯ್ಕೆ ಮಾಡಿದೆ. ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ರನ್ ಕಲೆಹಾಕುತ್ತಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:09 pm, Mon, 6 June 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ