Karnataka vs Uttar Pradesh: ಯುಪಿ ಬೌಲಿಂಗ್ ಬಿರುಗಾಳಿಗೆ ಕರ್ನಾಟಕ ತತ್ತರ: ಮನೀಶ್ ಪಡೆ ಕೇವಲ 253 ರನ್​ಗೆ ಆಲೌಟ್

| Updated By: Vinay Bhat

Updated on: Jun 07, 2022 | 10:48 AM

Ranji Trophy 2022, Quarterfinals: ಕರ್ನಾಟಕ ತಂಡ ಉತ್ತರ ಪ್ರದೇಶ (Karnataka vs Uttar Pradesh) ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿದೆ. ಮೊದಲ ದಿನದಾಟದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿದ್ದ ಮನೀಶ್ ಪಾಂಡೆ (Manish Pandey) ಬಳಗ ಇಂದು ಎರಡನೇ ದಿನದ ಆರಂಭದಲ್ಲೇ 253 ರನ್​ಗೆ ಆಲೌಟ್ ಆಗಿದೆ.

Karnataka vs Uttar Pradesh: ಯುಪಿ ಬೌಲಿಂಗ್ ಬಿರುಗಾಳಿಗೆ ಕರ್ನಾಟಕ ತತ್ತರ: ಮನೀಶ್ ಪಡೆ ಕೇವಲ 253 ರನ್​ಗೆ ಆಲೌಟ್
Manish Pandey KAR vs UP Ranji Trophy
Follow us on

ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಕ್ವಾರ್ಟರ್‌ಫೈನಲ್ (Ranji Trophy 2022, Quarterfinals) ಪಂದ್ಯದಲ್ಲಿ ಕರ್ನಾಟಕ ತಂಡ ಉತ್ತರ ಪ್ರದೇಶ (Karnataka vs Uttar Pradesh) ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿದೆ. ಮೊದಲ ದಿನದಾಟದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿದ್ದ ಮನೀಶ್ ಪಾಂಡೆ (Manish Pandey) ಬಳಗ ಇಂದು ಎರಡನೇ ದಿನದ ಆರಂಭದಲ್ಲೇ 253 ರನ್​ಗೆ ಆಲೌಟ್ ಆಗಿದೆ. ಸೌರಭ್ ಕುಮಾರ್ ಹಾಗೂ ಶಿವಂ ಮಾವಿ ರಾಜ್ಯ ತಂಡದ ಬ್ಯಾಟರ್​ಗಳನ್ನು ಬೆನ್ನು ಬಿಡದೆ ಕಾಡಿದರು. ಇದರ ನಡುವೆಯೂ ಶ್ರೇಯಸ್ ಗೋಪಾಲ್ ಏಕಾಂಗಿ ಹೋರಾಟ ನಡೆಸಿ ಅರ್ಧಶತಕದ ಕಾಣಿಕೆ ನೀಡಿದರು. ರವಿಕುಮಾರ್ ಸಮರ್ಥ್ ಕೂಡ 57 ರನ್ ಗಳಿಸಿದರು. ಉಳಿದವರು ನಿರೀಕ್ಷೆಗೆ ತಕ್ಕ  ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಇದೀಗ ಕರ್ನಾಟಕದ ಬೌಲರ್​ಗಳ ಮೇಲೆ ಒತ್ತಡ ಹೆಚ್ಚಾಗಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಉತ್ತರಪ್ರದೇಶ ತಂಡದ ನಾಯಕ ಕರಣ್ ಶರ್ಮಾ ಅವರ ಯೋಜನೆ ಫಲಿಸಿತು. ಅವರ ಬೌಲಿಂಗ್‌ ಪ್ರಯೋಗಗಳು ಫಲ ನೀಡಿದವು. ಆತಿಥೇಯ ಬ್ಯಾಟರ್‌ಗಳು ಉತ್ತಮ ಆರಂಭ ಕಂಡರೂ ದೊಡ್ಡ ಜೊತೆಯಾಟಗಳನ್ನು ದಾಖಲಿಸದಂತೆ ಬೌಲರ್‌ಗಳು ನೋಡಿಕೊಂಡರು. ಪರಿಣಾಮ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಅರ್ಧಶತಕದ ಜೊತೆಯಾಟ ಪಡೆದರೂ ಸಹ ಮುಂದುವರಿಸಲು ವಿಫಲಗೊಂಡಿತು. ಮಯಾಂಕ್ ಅಗರ್ವಾಲ್ ಕೇವಲ 10ರನ್‌ಗಳಿಗೆ ಶಿವಂ ಮಾವಿ ಬೌಲಿಂಗ್‌ನಲ್ಲಿ ಔಟಾಗಿ ಪೆವಿಲಿಯನ್ ಸೇರಿಕೊಂಡರು.

IND vs SA T20I: ಟೀಮ್ ಇಂಡಿಯಾದ ಈ 5 ಆಟಗಾರರ ಮೇಲೆ ಎಲ್ಲರ ಕಣ್ಣು

ಇದನ್ನೂ ಓದಿ
Joe Root: ಅನುಮಾನ ಮೂಡಿಸಿದ ಜೋ ರೂಟ್ ಬ್ಯಾಟ್: ಯಾವುದೇ ಆಧಾರವಿಲ್ಲದೆ ಮೈದಾನದಲ್ಲಿ ನಿಂತಿದ್ದೇಗೆ?
IND vs SA: ಮೊದಲ ಟಿ20ಗೆ ಫಿನಿಶರ್ ದಿನೇಶ್ ಕಾರ್ತಿಕ್ ಭರ್ಜರಿ ತಯಾರಿ: ವೈರಲ್ ಆಗುತ್ತಿದೆ ಫೋಟೋ
Indonesia Open: ಲಕ್ಷ್ಯ ಸೇನ್​ಗೆ ಭಾರತೀಯನೇ ಎದುರಾಳಿ; ಪಿವಿ ಸಿಂಧು, ಸೈನಾ ನೆಹ್ವಾಲ್ ಮೇಲೆ ಭಾರಿ ನಿರೀಕ್ಷೆ
Ranji Trophy: ಕರ್ನಾಟಕದ 7 ವಿಕೆಟ್ ಕಿತ್ತ ಯುಪಿ ತಂಡದ ಇಬ್ಬರು ಬೌಲರ್ಸ್​! ಮೊದಲ ದಿನದಾಟ ಹೀಗಿತ್ತು

ಅರ್ಧಶತಕ ಗಳಿಸಿದ ಸಮರ್ಥ್ 30ನೇ ಓವರ್‌ನಲ್ಲಿ ಸೌರಭ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಕರುಣ್ ನಾಯರ್ (29; 74ಎ) ಆಟಕ್ಕೆ ಕುದುರಿಕೊಂಡಂತೆ ಕಂಡ ಹೊತ್ತಿನಲ್ಲಿಯೇ ಶಿವಂ ಸ್ವಿಂಗ್ ಎಸೆತಕ್ಕೆ ಕ್ಲೀನ್‌ಬೌಲ್ಡ್ ಆದರು. ಆಗ ತಂಡದ ಮೊತ್ತ ನೂರು ಕೂಡ ದಾಟಿರಲಿಲ್ಲ. ಕೃಷ್ಣಮೂರ್ತಿ ಸಿದ್ಧಾರ್ಥ್‌ ಮತ್ತು ನಾಯಕ ಮನೀಶ್ ಪಾಂಡೆ ತಂಡಕ್ಕೆ ಭದ್ರ ಜೊತೆಯಾಟವಾಡುವ ನಿರೀಕ್ಷೆ ಮೂಡಿಸಿದರಷ್ಟೆ. ಆದರೆ ಇವರಿಬ್ಬರ ಜೊತೆಯಾಟಕ್ಕೆ ಶಿವಂ ಮಾವಿ ಬ್ರೇಕ್ ಹಾಕಿದರು. 27ರನ್ ಕಲೆಹಾಕಿ ಉತ್ತಮ ಆಟವಾಡ್ತಿದ್ದ ಮನೀಶ್ ಪಾಂಡೆ ಔಟಾದರು.

ಮುಂದಿನ ಎಸೆತದಲ್ಲೇ ವಿಕೆಟ್ ಕೀಪರ್ ಬ್ಯಾಟರ್ ಶ್ರೀನಿವಾಸ್ ಶರತ್ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ನೀಡಿತು. ಅಂತಿಮವಾಗಿ ಕರ್ನಾಟಕ ತಂಡ ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ ಕಳೆದುಕೊಂಡು 213 ರನ್‌ ಗಳಿಸಿತು. 26 ರನ್‌ ಗಳಿಸಿ ಶ್ರೇಯಸ್‌ ಗೋಪಾಲ್‌ ಮತ್ತು 12 ರನ್‌ ಗಳಿಸಿ ವಿಜಯಕುಮಾರ್‌ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು.

ಆದರೆ, ಇಂದು ಕರ್ನಾಟಕ ಬ್ಯಾಟರ್​ಗಳ ಆಟ ನಡೆಯಲಿಲ್ಲ. ವಿಜಯಕುಮಾರ್‌ ಬಂದ ಬೆನ್ನಲ್ಲೇ ಪೆವಿಲಿಯನ್ ಸೇರಿಕೊಂಡರೆ, ರೋನಿತ್ ಮೋರೆ 6 ಹಾಗೂ ವಿಧ್ವತ್ 4 ರನ್​ಗೆ ಔಟಾದರು. ಇದರ ನಡುವೆ ಶ್ರೇಯಸ್ ಕೊಂಚ ರನ್ ಕಲೆಹಾಕಿದ ಪರಿಣಾಮ ತಂಡದ ಮೊತ್ತ 250 ರನ್​ಗಳ ಗಡಿ ದಾಟಿತು. ಗೋಪಾಲ್ 80 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದರು. ಕರ್ನಾಟಕ ತಂಡ 84 ಓವರ್​ನಲ್ಲಿ 253 ರನ್​ಗೆ ಆಲೌಟ್ ಆಯಿತು. ಯುಪಿ ಪರ ಸೌರಭಗ 4 ವಿಕೆಟ್ ಕಿತ್ತರೆ, ಶಿವಂ ಮಾವಿ 3 ವಿಕೆಟ್ ಪಡೆದರು.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.