Ranji Trophy: ಕರ್ನಾಟಕದ 7 ವಿಕೆಟ್ ಕಿತ್ತ ಯುಪಿ ತಂಡದ ಇಬ್ಬರು ಬೌಲರ್ಸ್​! ಮೊದಲ ದಿನದಾಟ ಹೀಗಿತ್ತು

Ranji Trophy: ಈ ಪಂದ್ಯದಲ್ಲಿ ಕರ್ನಾಟಕದ ದಿಗ್ಗಜ ಬ್ಯಾಟ್ಸ್‌ಮನ್‌ಗಳಾದ ಮಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್ ಕೂಡ ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾದರೆ, ನಾಯಕ ಮನೀಶ್ ಪಾಂಡೆ ಕೂಡ ಯಶಸ್ಸು ಕಾಣಲಿಲ್ಲ.

Ranji Trophy: ಕರ್ನಾಟಕದ 7 ವಿಕೆಟ್ ಕಿತ್ತ ಯುಪಿ ತಂಡದ ಇಬ್ಬರು ಬೌಲರ್ಸ್​! ಮೊದಲ ದಿನದಾಟ ಹೀಗಿತ್ತು
ಕರ್ನಾಟಕ ಕ್ರಿಕೆಟ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Jun 06, 2022 | 8:42 PM

ಕರ್ನಾಟಕ ಕ್ರಿಕೆಟ್ ತಂಡ (Karnataka Cricket Team) ರಣಜಿ ಟ್ರೋಫಿ (Ranji Trophy) ಪ್ರಶಸ್ತಿಗಾಗಿ 7 ವರ್ಷಗಳಿಂದ ಕಾಯುತ್ತಿದೆ. ಉತ್ತರ ಪ್ರದೇಶದ ಕಾಯುವಿಕೆ ಅದಕ್ಕಿಂತಲೂ ದೀರ್ಘವಾಗಿದೆ. ಉತ್ತರ ಪ್ರದೇಶ (UP Cricket Team) 2005-06ರಲ್ಲಿ ತನ್ನ ಏಕೈಕ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕರ್ನಾಟಕ ಬಹು ಬಾರಿ ಚಾಂಪಿಯನ್ ಆಗಿದ್ದು, ಯುಪಿ ಎರಡನೇ ಬಾರಿಗೆ ಟ್ರೋಫಿಗೆ ಕೈ ಹಾಕಲು ಕಾಯುತ್ತಿದೆ. ಇವೆರಡರಲ್ಲಿ ಯಾವುದು ಸಕ್ಸಸ್ ಆಗುತ್ತೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಆದರೆ ಕ್ವಾರ್ಟರ್ ಫೈನಲ್​ನಲ್ಲಿ ಕರ್ನಾಟಕ ಮತ್ತು ಯುಪಿ ಪರಸ್ಪರ ಪೈಪೋಟಿ ನಡೆಸುತ್ತಿದ್ದು, ಉತ್ತರ ಪ್ರದೇಶ ಯಶಸ್ಸಿಗೆ ಜಾಸ್ತಿ ಹತ್ತಿರವಾಗಿದೆ. ಆಲೂರಿನಲ್ಲಿ ಆರಂಭವಾದ ರಣಜಿ ಟ್ರೋಫಿ 2022 ರ ಕ್ವಾರ್ಟರ್ ಫೈನಲ್‌ನ ಮೊದಲ ದಿನದಂದು ಉತ್ತರ ಪ್ರದೇಶದ ಸೌರಭ್ ಕುಮಾರ್ ಮತ್ತು ಶಿವಂ ಮಾವಿ (Saurabh Kumar and Shivam Mavi) ಒಟ್ಟಾಗಿ ಕರ್ನಾಟಕದ ಬ್ಯಾಟಿಂಗ್ ಬೆನ್ನೇಲುಬನ್ನು ಮುರಿದಿದ್ದಾರೆ.

ಸೋಮವಾರ, ಜೂನ್ 6, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈದಾನ (Karnataka State Cricket Association ground)ದಲ್ಲಿ, ಯುಪಿ ನಾಯಕ ಕರಣ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆರಂಭದಲ್ಲಿ ಈ ನಿರ್ಧಾರಕ್ಕೆ ಹಿನ್ನಡೆ ಎನಿಸಿತು, ಆದರೆ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಮತ್ತು ವೇಗದ ಬೌಲರ್ ಶಿವಂ ಮಾವಿ ದಾಳಿಗಿಳಿದ ಕೂಡಲೇ ಕರ್ನಾಟಕದ ಸ್ಥಿತಿ ಹದಗೆಟ್ಟಿತು. ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕ ಏಳು ವಿಕೆಟ್‌ಗೆ 213 ರನ್ ಗಳಿಸಿದೆ.

ಇದನ್ನೂ ಓದಿ:Ranji Trophy 2022, Quarterfinals: ರಣಜಿ ಕ್ವಾರ್ಟರ್‌-ಫೈನಲ್‌: ಟಾಸ್ ಗೆದ್ದ ಉತ್ತರ ಪ್ರದೇಶ: ಕರ್ನಾಟಕ ಉತ್ತಮ ಆರಂಭ

ಇದನ್ನೂ ಓದಿ
Image
ICC Awards: ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ
Image
IND vs SA: 6 ವರ್ಷ, 56 ಟಿ20 ಪಂದ್ಯ; ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ನಾಯಕನ ಚೊಚ್ಚಲ ಪಂದ್ಯವಿದು
Image
ಭಾರತಕ್ಕೆ ಬಂದಾಗಲೆಲ್ಲ ಇಂಜುರಿಗೊಳಗಾಗುತ್ತೇನೆ; ಇಲ್ಲೇ ನನಗ್ಯಾವುದೋ ಶಾಪ ತಟ್ಟಿರಬೇಕು; ಮಿಚೆಲ್ ಮಾರ್ಷ್

ಸೌರಭ್ ಮತ್ತು ಶಿವಂ ಬೆಂಕಿ ಬೌಲಿಂಗ್

ಸ್ಪಿನ್ನರ್ ಸೌರಭ್ ಅವರ ಸ್ಪಿನ್ ಅನ್ನು ಅರ್ಥಮಾಡಿಕೊಳ್ಳುವುದು ಕರ್ನಾಟಕದ ಬ್ಯಾಟ್ಸ್‌ಮನ್‌ಗಳಿಗೆ ಕಷ್ಟದ ಕೆಲಸವಾಗಿತ್ತು. 67 ರನ್ ನೀಡಿ 4 ವಿಕೆಟ್ ಪಡೆದರು. ಇದರಲ್ಲಿ ಆರಂಭಿಕ ರವಿಕುಮಾರ್ ಸಮರ್ಥ್ ಮತ್ತು ನಾಯಕ ಮನೀಶ್ ಪಾಂಡೆಯಂತಹ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು ಸೇರಿದ್ದರು. ಅದೇ ವೇಳೆ ಯುವ ವೇಗಿ ಶಿವಂ ಮಾವಿ ಕೂಡ 40 ರನ್ ನೀಡಿ ಮೂರು ವಿಕೆಟ್ ಪಡೆದರು. ಮಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್ ಅವರಂತಹ ದಿಗ್ಗಜರನ್ನು ಪೆವಿಲಿಯನ್‌ಗೆ ಕಳುಹಿಸಿದರು.

ಸಮರ್ಥ್ ಹೊರತುಪಡಿಸಿ ಇತರರು ವಿಫಲ

ಕರ್ನಾಟಕದ ಪರ ಆರಂಭಿಕ ರವಿಕುಮಾರ್ ಸಮರ್ಥ್ (57) ಮಾತ್ರ ಸುಸ್ಥಿರ ಬ್ಯಾಟಿಂಗ್‌ಗೆ ಶಕ್ತರಾದರು. ರವಿಕುಮಾರ್ ಮತ್ತು ಮಯಾಂಕ್ ಅಗರ್ವಾಲ್ (10) ಮೊದಲ ವಿಕೆಟ್‌ಗೆ 57 ರನ್ ಸೇರಿಸಿದರು. ಆದಾಗ್ಯೂ, ಈ ಜೊತೆಯಾಟದ ಸಮಯದಲ್ಲಿ ಅಗರ್ವಾಲ್ ಲಯದಲ್ಲಿ ಕಾಣಿಸಿಕೊಂಡಿಲ್ಲ. ರವಿಕುಮಾರ್ ಕೇವಲ 54 ಎಸೆತಗಳಲ್ಲಿ ಸೌರಭ್ ಎಸೆತದಲ್ಲಿ ಅರ್ಧಶತಕ ಪೂರೈಸಿ, ಅವರಿಗೆ ಬಲಿಯಾದರು. ರವಿಕುಮಾರ್ 81 ಎಸೆತಗಳನ್ನು ಎದುರಿಸಿ 10 ಬೌಂಡರಿ ಬಾರಿಸಿದರು. ಕೆಲವೇ ಸಮಯದಲ್ಲಿ ನಾಯರ್ (29) ಅವರನ್ನು ಬೌಲ್ಡ್ ಮಾಡುವ ಮೂಲಕ ಮಾವಿ ಕರ್ನಾಟಕಕ್ಕೆ ಮೂರನೇ ಹೊಡೆತ ನೀಡಿದರು.

ಇದಾದ ನಂತರ ನಾಯಕ ಪಾಂಡೆ (27) ಮತ್ತು ಕೆ.ಸಿದ್ಧಾರ್ಥ (37) ತಂಡದ ಸ್ಕೋರ್ ಅನ್ನು ಮೂರು ವಿಕೆಟ್‌ಗೆ 163 ರನ್‌ಗಳಿಗೆ ಕೊಂಡೊಯ್ದರು. 56ನೇ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಪಾಂಡೆ ಮತ್ತು ಶ್ರೀನಿವಾಸ್ ಶರತ್ (00) ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಸೌರಭ್ ಕರ್ನಾಟಕಕ್ಕೆ ಎರಡು ಹೊಡೆತ ನೀಡಿದರು. ಸೌರಭ್ ಮೇಲೆ ಶ್ರೇಯಸ್ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು ಆದರೆ ಮಾವಿ ಸಿದ್ಧಾರ್ಥ್ ಬೌಲ್ಡ್ ಮಾಡುವ ಮೂಲಕ ಅವರ ಮೂರನೇ ವಿಕೆಟ್ ಪಡೆದರು. ಹವಾಮಾನ ವೈಪರೀತ್ಯದಿಂದಾಗಿ ಮೊದಲ ದಿನ ಕೇವಲ 72 ಓವರ್‌ಗಳು ಮಾತ್ರ ಆಡಲು ಸಾಧ್ಯವಾಯಿತು.

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು