Joe Root: ಅನುಮಾನ ಮೂಡಿಸಿದ ಜೋ ರೂಟ್ ಬ್ಯಾಟ್: ಯಾವುದೇ ಆಧಾರವಿಲ್ಲದೆ ಮೈದಾನದಲ್ಲಿ ನಿಂತಿದ್ದೇಗೆ?

ENG vs NZ Test: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಜೋ ರೂಟ್ ಕುಸಿದ ಇಂಗ್ಲೆಂಡ್ ತಂಡಕ್ಕೆ ಆಧಾರವಾಗಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಆದರೆ, ಈ ಪಂದ್ಯದಲ್ಲಿ ರೂಟ್ ಅವರ ಬ್ಯಾಟ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ವೈರಲ್ ಆಗುತ್ತಿರುವ ವಿಡಿಯೋ.

Joe Root: ಅನುಮಾನ ಮೂಡಿಸಿದ ಜೋ ರೂಟ್ ಬ್ಯಾಟ್: ಯಾವುದೇ ಆಧಾರವಿಲ್ಲದೆ ಮೈದಾನದಲ್ಲಿ ನಿಂತಿದ್ದೇಗೆ?
Joe Root Bat ENG vs NZ Test
Follow us
TV9 Web
| Updated By: Vinay Bhat

Updated on: Jun 07, 2022 | 9:15 AM

ಲಂಡನ್​ನ ಲಾರ್ಡ್ಸ್​ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ (England vs New Zealand) ತಂಡ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಮಾಜಿ ನಾಯಕ ಜೋ ರೂಟ್ (Joe Root) ಅವರ ಅಮೋಘ ಆಟದ ನೆರವಿನಿಂದ ಆಂಗ್ಲರು ಗೆಲುವಿನ ನಗೆ ಬೀರಿದರು. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ರೂಟ್ 170 ಎಸೆತಗಲ್ಲಿ 12 ಫೋರ್​ನೊಂದಿಗೆ ಅಜೇಯ 115 ರನ್ ಗಳಿಸಿದರು. ಈ ಮೂಲಕ ಟೆಸ್ಟ್ ಸ್ವರೂಪದಲ್ಲಿ 10,000 ರನ್ ಪೂರೈಸಿದ ವಿಶ್ವದ 14ನೇ ಆಟಗಾರ ಮತ್ತು ಎರಡನೇ ಇಂಗ್ಲೆಂಡ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕುಸಿದ ತಂಡಕ್ಕೆ ಆಧಾರವಾಗಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಆದರೆ, ಈ ಪಂದ್ಯದಲ್ಲಿ ರೂಟ್ ಅವರ ಬ್ಯಾಟ್ (Root Bat) ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ವೈರಲ್ ಆಗುತ್ತಿರುವ ವಿಡಿಯೋ.

ಹೌದು, ಅದು 72ನೇ ಓವರ್. ಆಗ ಜೋ ರೂಟ್ 87 ರನ್ ಗಳಿಸಿದ್ದರು. ಖೈಲ್ ಜೆಮಿಸನ್ ಬೌಲಿಂಗ್ ಮಾಡಲೆಂದು ಓಡಿ ಬರಲು ತಯಾರಿ ನಡೆಸುತ್ತಿರುವಾಗ ಜೋ ರೂಟ್ ನಾನ್ ಸ್ಟ್ರೈಕರ್​ನಲ್ಲಿದ್ದರು. ಈ ಸಂದರ್ಭ ಸೆರೆಯಾದ ವಿಡಿಯೋ ಎಲ್ಲರ ಹುಬ್ಬರುವಂತೆ ಮಾಡಿದೆ. ರೂಟ್ ತಮ್ಮ ಎರಡೂ ಕೈಗಳನ್ನು ಸೊಂಟಕ್ಕೆ ಹಿಡಿದು ನಿತ್ತಿದ್ದರೆ ಅವರ ಬ್ಯಾಟ್ ಯಾವುದೇ ಆಧಾರವಿಲ್ಲದೆ ಮೈದಾನದಲ್ಲಿ ನಿಂತುಕೊಂಡಿತ್ತು. ಇದನ್ನ ಕಂಡವರು ಒಂದು ಕ್ಷಣ ದಂಗಾಗಿದ್ದಾರೆ.

ಇದನ್ನೂ ಓದಿ
Image
Indonesia Open: ಲಕ್ಷ್ಯ ಸೇನ್​ಗೆ ಭಾರತೀಯನೇ ಎದುರಾಳಿ; ಪಿವಿ ಸಿಂಧು, ಸೈನಾ ನೆಹ್ವಾಲ್ ಮೇಲೆ ಭಾರಿ ನಿರೀಕ್ಷೆ
Image
Ranji Trophy: ಕರ್ನಾಟಕದ 7 ವಿಕೆಟ್ ಕಿತ್ತ ಯುಪಿ ತಂಡದ ಇಬ್ಬರು ಬೌಲರ್ಸ್​! ಮೊದಲ ದಿನದಾಟ ಹೀಗಿತ್ತು
Image
ICC Awards: ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ
Image
IND vs SA: 6 ವರ್ಷ, 56 ಟಿ20 ಪಂದ್ಯ; ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ನಾಯಕನ ಚೊಚ್ಚಲ ಪಂದ್ಯವಿದು

IND vs SA: ಮೊದಲ ಟಿ20ಗೆ ಫಿನಿಶರ್ ದಿನೇಶ್ ಕಾರ್ತಿಕ್ ಭರ್ಜರಿ ತಯಾರಿ: ವೈರಲ್ ಆಗುತ್ತಿದೆ ಫೋಟೋ

ಅರೇ, ಇದು ಹೇಗೆ ಸಾಧ್ಯ ಎಂದು ಅಚ್ಚರಿಗೊಂಡಿದ್ದಾರೆ. ಕೆಲವರು ಈ ಬಗ್ಗೆ ಅನುಮಾನ ಕೂಡ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಪಂದ್ಯದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದಿರುವ ಇಂಗ್ಲಿಷ್ ಜರ್ನಲಿಸ್ಟ್ ಒಬ್ಬರು, ರೂಟ್ ಅವರ ಬ್ಯಾಟ್​ನ ಕೆಳ ಪದರ ಅಗಲವಾಗಿದೆ, ಅದರ ಕೆಳಭಾಗ ಸಮತಟ್ಟಾಗಿದೆ. ಹೀಗಾಗಿ ಬ್ಯಾಟ್ ಯಾವುದೇ ಆಧಾರವಿಲ್ಲದೆ ಮೈದಾನದಲ್ಲಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಅಜೇಯ ಶತಕ ಗಳಿಸಿದ ಜೋ ರೂಟ್ ಇಂಗ್ಲೆಂಡ್ ತಂಡಕ್ಕೆ ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್‌ನಲ್ಲಿ ಜಯದ ಕಾಣಿಕೆ ನೀಡಿದರು. ನಾಯಕನಾಗಿ ಮೊದಲ ಬಾರಿ ಕಣಕ್ಕಿಳಿದಿರುವ ಬೆನ್‌ಸ್ಟೋಕ್ಸ್ (54;110ಎ, 4X5, 6X3) ಅವರ ಆಟದಿಂದ ಇಂಗ್ಲೆಂಡ್ 5 ವಿಕೆಟ್‌ಗಳಿಂದ ಜಯಿಸಿತು. ಶನಿವಾರ ದಿನದಾಟದಲ್ಲಿ ನ್ಯೂಜಿಲೆಂಡ್ ತಂಡವು ಇಂಗ್ಲೆಂಡ್‌ ಗೆಲುವಿಗೆ 278 ರನ್‌ಗಳ ಗುರಿ ನೀಡಿತ್ತು. ಆದರೆ ದಿನದಾಟದ ಮುಕ್ತಯಕ್ಕೆ ತಂಡವು 69 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ರೂಟ್ ಮತ್ತು ಸ್ಟೋಕ್ಸ್ ತಂಡಕ್ಕೆ ಆಸರೆಯಾಗಿದ್ದರು.

ಭಾನುವಾರವೂ ತಮ್ಮ ಆಟ ಮುಂದುವರಿಸಿದ ಜೋಡಿಯು ಐದನೇ ವಿಕೆಟ್ ಜೊತೆಯಾಟದಲ್ಲಿ 90 ರನ್ ಸೇರಿಸಿತು. ಜೆಮಿಸನ್ ಬೌಲಿಂಗ್‌ನಲ್ಲಿ ಬೆನ್ ಔಟಾಗುವುದರೊಂದಿಗೆ ಜತೆಯಾಟ ಮುರಿಯಿತು. ರೂಟ್ ಜೊತೆಗೂಡಿದ ಬೆನ್ ಫೋಕ್ಸ್‌ (ಔಟಾಗದೆ 32; 92ಎ) ತಂಡವನ್ನು ಗೆಲುವಿನ ದಡ ಸೇರಿಸಿದರು. ಜೂನ್ 10 ರಿಂದ ನ್ಯಾಟಿಂಗ್​ಹ್ಯಾಮ್​ನ ಟ್ರೆಂಟ್​​ಬ್ರಿಡ್ಜ್​ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ