Ranji Trophy 2024: ಕರ್ನಾಟಕ ಬೌಲರ್​ಗಳ ಪರಾಕ್ರಮ: ಮೊದಲ ದಿನವೇ ಗುಜರಾತ್ ಆಲೌಟ್

| Updated By: ಝಾಹಿರ್ ಯೂಸುಫ್

Updated on: Jan 13, 2024 | 8:49 AM

Ranji Trophy 2024: ಪ್ರಿಯಾಂಕ್ ಪಾಂಚಾಲ್​ರನ್ನು 24 ರನ್​ಗಳಿಗೆ ಔಟ್ ಮಾಡುವ ಮೂಲಕ ವಿಜಯಕುಮಾರ್ ವೈಶಾಕ್ 3ನೇ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಪ್ರಸಿದ್ಧ್ ಕೃಷ್ಣ ಮತ್ತೊಂದು ವಿಕೆಟ್ ಕಬಳಿಸಿದರು. ಕೇವಲ 45 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಗುಜರಾತ್ ತಂಡಕ್ಕೆ ಈ ಹಂತದಲ್ಲಿ ಕ್ಷಿತಿಜ್ ಪಟೇಲ್ ಹಾಗೂ ಉಮಾಂಗ್ ಕುಮಾರ್ ಆಸರೆಯಾದರು.

Ranji Trophy 2024: ಕರ್ನಾಟಕ ಬೌಲರ್​ಗಳ ಪರಾಕ್ರಮ: ಮೊದಲ ದಿನವೇ ಗುಜರಾತ್ ಆಲೌಟ್
Karnataka Team
Image Credit source: PC: VIJAY SONEJI
Follow us on

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿ (Ranji Trophy 2024) ಪಂದ್ಯದಲ್ಲಿ ಕರ್ನಾಟಕ ತಂಡ ಭರ್ಜರಿ ಬೌಲಿಂಗ್ ಪ್ರದರ್ಶಿಸಿದೆ. ಗುಜರಾತ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ವಾಸುಕಿ ಕೌಶಿಕ್ ಯಶಸ್ವಿಯಾದರು. 2ನೇ ಓವರ್​ನ ಕೊನೆಯ ಎಸೆತದಲ್ಲಿ ಹೆಟ್ ಪಟೇಲ್ (4) ವಿಕೆಟ್ ಕಬಳಿಸಿದ ವಾಸುಕಿ, 3ನೇ ಓವರ್​ನ ಮೊದಲ ಎಸೆತದಲ್ಲೇ ಮತ್ತೊಂದು ವಿಕೆಟ್ ಪಡೆದರು.

ಇನ್ನು ಪ್ರಿಯಾಂಕ್ ಪಾಂಚಾಲ್​ರನ್ನು 24 ರನ್​ಗಳಿಗೆ ಔಟ್ ಮಾಡುವ ಮೂಲಕ ವಿಜಯಕುಮಾರ್ ವೈಶಾಕ್ 3ನೇ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಪ್ರಸಿದ್ಧ್ ಕೃಷ್ಣ ಮತ್ತೊಂದು ವಿಕೆಟ್ ಕಬಳಿಸಿದರು. ಕೇವಲ 45 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಗುಜರಾತ್ ತಂಡಕ್ಕೆ ಈ ಹಂತದಲ್ಲಿ ಕ್ಷಿತಿಜ್ ಪಟೇಲ್ ಹಾಗೂ ಉಮಾಂಗ್ ಕುಮಾರ್ ಆಸರೆಯಾದರು.

5ನೇ ವಿಕೆಟ್​ಗೆ 157 ರನ್​ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೊನೆಗೂ ವಿಜಯ್ ಕುಮಾರ್ ವಿಶಾಕ್ ಯಶಸ್ವಿಯಾದರು. 161 ಎಸೆತಗಳಲ್ಲಿ 95 ರನ್ ಬಾರಿಸಿದ ಕ್ಷಿತಿಜ್ ಪಟೇಲ್ ಔಟಾದ ಬೆನ್ನಲ್ಲೇ ಉಮಾಂಗ್ ಕುಮಾರ್ (72) ಕೂಡ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಕರ್ನಾಟಕ ಬೌಲರ್​ ಕೆಳ ಕ್ರಮಾಂಕದ ಬ್ಯಾಟರ್​ಗಳನ್ನು ಬ್ಯಾಕ್ ಟು ಬ್ಯಾಕ್ ಔಟ್ ಮಾಡಿದುರ. ಅದರಂತೆ ಮೊದಲ ದಿನದಾಟದ ಮುಕ್ತಾಯಕ್ಕೂ ಮುನ್ನ 264 ರನ್​ಗಳಿಗೆ ಗುಜರಾತ್ ತಂಡವನ್ನು ಆಲೌಟ್ ಮಾಡಿ ಕರ್ನಾಟಕ ತಂಡ ಮೇಲುಗೈ ಸಾಧಿಸಿದೆ.

ಕರ್ನಾಟಕ ಪರ ವಾಸುಕಿ ಕೌಶಿಕ್ 4 ವಿಕೆಟ್ ಕಬಳಿಸಿದರೆ, ವಿಜಯಕುಮಾರ್ ವೈಶಾಕ್, ಪ್ರಸಿದ್ಧ್ ಕೃಷ್ಣ ಹಾಗೂ ರೋಹಿತ್ ಕುಮಾರ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ಗುಜರಾತ್ ಪ್ಲೇಯಿಂಗ್ 11: ಪ್ರಿಯಾಂಕ್ ಪಾಂಚಾಲ್ , ಹೆಟ್ ಪಟೇಲ್ (ವಿಕೆಟ್ ಕೀಪರ್) , ಸನ್‌ಪ್ರೀತ್‌ಸಿಂಗ್ ಬಗ್ಗಾ , ಮನನ್ ಹಿಂಗ್ರಾಜಿಯಾ , ಕ್ಷಿತಿಜ್ ಪಟೇಲ್ , ಉಮಂಗ್ ಕುಮಾರ್ , ಚಿಂತನ್ ಗಜ (ನಾಯಕ) , ರಿಪಾಲ್ ಪಟೇಲ್ , ಸಿದ್ಧಾರ್ಥ್ ದೇಸಾಯಿ , ಅರ್ಜನ್ ನಾಗವಾಸ್ವಾಲ್ಲಾ , ರಿಂಕೇಶ್ ವಘೇಲಾ

ಇದನ್ನೂ ಓದಿ: Rohit Sharma: ಧೋನಿ, ಕೊಹ್ಲಿಯ ಬೇಡದ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ನಿಕಿನ್ ಜೋಸ್ , ಸುಜಯ್ ಸಾತೇರಿ (ವಿಕೆಟ್ ಕೀಪರ್) , ದೇವದತ್ ಪಡಿಕ್ಕಲ್ , ಮನೀಶ್ ಪಾಂಡೆ , ಶುಭಾಂಗ್ ಹೆಗ್ಡೆ , ರೋಹಿತ್ ಕುಮಾರ್ , ಪ್ರಸಿದ್ಧ್ ಕೃಷ್ಣ , ವಿಜಯ್ ಕುಮಾರ್ ವೈಶಾಕ್ , ವಾಸುಕಿ ಕೌಶಿಕ್ , ರವಿಕುಮಾರ್ ಸಮರ್ಥ್.