AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy 2025: ಕನ್ನಡಿಗರ ಕರಾರುವಾಕ್ ದಾಳಿಗೆ ಎರಡಂಕಿ ಮೊತ್ತಕ್ಕೆ ಪಂಜಾಬ್ ಆಲೌಟ್

Ranji Trophy 2025 Karnataka vs Punjab: ರಣಜಿ ಟ್ರೋಫಿಯ ದ್ವಿತೀಯ ಸುತ್ತಿನ ಮೊದಲ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ಕರ್ನಾಟಕದ ಬೌಲರ್​ಗಳ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎರಡಂಕಿ ಮೊತ್ತಕ್ಕೆ ಆಲೌಟ್ ಮಾಡಿ ಕನ್ನಡಿಗರು ಪರಾಕ್ರಮ ಮೆರೆದಿದ್ದಾರೆ.

Ranji Trophy 2025: ಕನ್ನಡಿಗರ ಕರಾರುವಾಕ್ ದಾಳಿಗೆ ಎರಡಂಕಿ ಮೊತ್ತಕ್ಕೆ ಪಂಜಾಬ್ ಆಲೌಟ್
Karnataka
ಝಾಹಿರ್ ಯೂಸುಫ್
|

Updated on: Jan 23, 2025 | 12:54 PM

Share

ವಿಜಯ ಹಝಾರೆ ಟ್ರೋಫಿಯ ಚಾಂಪಿಯನ್ ತಂಡ ಕರ್ನಾಟಕ ರಣಜಿ ಟೂರ್ನಿಯಲ್ಲೂ ಪರಾಕ್ರಮ ಮುಂದುವರೆಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಗ್ರೂಪ್ ಸಿ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಕೇವಲ 55 ರನ್​ಗಳಿಗೆ ಆಲೌಟ್ ಮಾಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲ ಇನಿಂಗ್ಸ್ ಶುರು ಮಾಡಿದ ಪಂಜಾಬ್ ತಂಡಕ್ಕೆ ಅಭಿಲಾಷ್ ಶೆಟ್ಟಿ ಮೊದಲ ಆಘಾತ ನೀಡಿದರು.

ನಾಯಕ ಶುಭ್​ಮನ್ ಗಿಲ್ (4) ಅವರನ್ನು ಔಟ್ ಮಾಡುವ ಮೂಲಕ ಅಭಿಲಾಷ್ ಕರ್ನಾಟಕ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ವಾಸುಕಿ ಕೌಶಿಕ್ ಎಸೆತದಲ್ಲಿ ಪುಖರಾಜ್ ಮನ್ (1)  ವಿಕೆಟ್ ಕೀಪರ್ ಕೃಷ್ಣನ್ ಶೀಜಿತ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಅನ್ಮೋಲ್ಪ್ರೀತ್ ಸಿಂಗ್ (0) ರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಕೌಶಿಕ್ ಯಶಸ್ವಿಯಾದರು.

ಇನ್ನು 8ನೇ ಓವರ್​ನಲ್ಲಿ ಮತ್ತೆ ಬಂದ ಅಭಿಲಾಷ್ ಶೆಟ್ಟಿ, ಪ್ರಭ್​ಸಿಮ್ರಾನ್ ಸಿಂಗ್​ (6) ಹಾಗೂ ಸುಖದೀಪ್ ಬಾಜ್ವಾ (0) ಗೆ ಪೆವಿಲಿಯನ್ ಹಾದಿ ತೋರಿಸಿದರು. ಇದರ ನಡುವೆ ಸನ್ವೀರ್ ಸಿಂಗ್ (1) ಹಾಗೂ ರಮಣದೀಪ್ ಸಿಂಗ್ (16) ವಿಕೆಟ್ ಪಡೆಯುವಲ್ಲಿ ಪ್ರಸಿದ್ಧ್ ಕೃಷ್ಣ ಯಶಸ್ವಿಯಾದರು.

ಅಂತಿಮವಾಗಿ ಮಯಾಂಕ್ ಮಾರ್ಕಂಡೆ (12) ಹಾಗೂ ಜಸಿಂದರ್ ಸಿಂಗ್ (4) ವಾಸುಕಿ ಕೌಶಿಕ್​ಗೆ ವಿಕೆಟ್ ಒಪ್ಪಿಸಿದರೆ, ಆರಾಧ್ಯ ಶುಕ್ಲಾ (0) ಗೆ ಪೆವಿಲಿಯನ್​ಗೆ ಕಳುಹಿಸುವಲ್ಲಿ ಯಶೋವರ್ಧನ್ ಪರಂತಪ್ ಯಶಸ್ವಿಯಾದರು.

ಕನ್ನಡಿಗರ ಈ ಭರ್ಜರಿ ಬೌಲಿಂಗ್ ಪರಿಣಾಮ ಪಂಜಾಬ್ ತಂಡವು ಮೊದಲ ಇನಿಂಗ್ಸ್​ನಲ್ಲಿ 29 ಓವರ್​ಗಳಲ್ಲಿ ಕೇವಲ 55 ರನ್​ಗಳಿಸಿ ಆಲೌಟ್ ಆಗಿದೆ. ಇತ್ತ ಕರ್ನಾಟಕ ಪರ ವಾಸುಕಿ ಕೌಶಿಕ್ 11 ಓವರ್​ಗಳಲ್ಲಿ 16 ರನ್ ನೀಡಿ 4 ವಿಕೆಟ್ ಪಡೆದರೆ, ಅಭಿಲಾಷ್ ಶೆಟ್ಟಿ 3 ವಿಕೆಟ್ ಪಡೆದರು. ಇನ್ನು ಪ್ರಸಿದ್ಧ್ ಕೃಷ್ಣ 2 ವಿಕೆಟ್ ಕಬಳಿಸಿದರೆ, ಯಶೋವರ್ಧನ್ ಪರಂತಪ್ ಒಂದು ವಿಕೆಟ್ ಪಡೆದಿದ್ದಾರೆ.

ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರವಾಲ್ (ನಾಯಕ) , ದೇವದತ್ ಪಡಿಕ್ಕಲ್ , ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್) , ಅನೀಶ್ ಕೆ ವಿ , ಸ್ಮರಣ್ ರವಿಚಂದ್ರನ್ , ಅಭಿನವ್ ಮನೋಹರ್ , ಶ್ರೇಯಸ್ ಗೋಪಾಲ್ , ಯಶೋವರ್ಧನ್ ಪರಂತಪ್ , ಪ್ರಸಿದ್ಧ್ ಕೃಷ್ಣ , ವಾಸುಕಿ ಕೌಶಿಕ್ , ಅಭಿಲಾಷ್ ಶೆಟ್ಟಿ.

ಇದನ್ನೂ ಓದಿ: ಟೀಮ್ ಇಂಡಿಯಾ ಆರ್ಭಟಕ್ಕೆ ಪಾಕಿಸ್ತಾನ್ ತಂಡದ ದಾಖಲೆ ಉಡೀಸ್

ಪಂಜಾಬ್ ಪ್ಲೇಯಿಂಗ್ 11: ಶುಭ್​ಮನ್ ಗಿಲ್ (ನಾಯಕ) , ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್) , ಅನ್ಮೋಲ್ಪ್ರೀತ್ ಸಿಂಗ್ , ಪುಖ್ರಾಜ್ ಮನ್ , ಸನ್ವಿರ್ ಸಿಂಗ್ , ರಮಣದೀಪ್ ಸಿಂಗ್ , ಜಸಿಂದರ್ ಸಿಂಗ್ , ಸುಖದೀಪ್ ಬಾಜ್ವಾ , ಆರಾಧ್ಯ ಶುಕ್ಲಾ , ಮಯಾಂಕ್ ಮಾರ್ಕಾಂಡೆ , ಗುರ್ನೂರ್ ಬ್ರಾರ್.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ