Ranji Trophy Final 2022: ರಣಜಿ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನದಾಟ ಮುಕ್ತಾಯ

| Updated By: ಝಾಹಿರ್ ಯೂಸುಫ್

Updated on: Jun 22, 2022 | 5:09 PM

Mumbai vs Madhya Pradesh: ಈ ಹಂತದಲ್ಲಿ ಕಣಕ್ಕಿಳಿದ ಯುವ ಬ್ಯಾಟ್ಸ್​ಮನ್​ ಸರ್ಫರಾಜ್ ಖಾನ್ 125 ಎಸೆತಗಳನ್ನು ಎದುರಿಸಿ 40 ರನ್​ ಕಲೆಹಾಕುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.

Ranji Trophy Final 2022: ರಣಜಿ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನದಾಟ ಮುಕ್ತಾಯ
Ranji Trophy Final 2022
Follow us on

Ranji Trophy Final 2022: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಫೈನಲ್ (Ranji Trophy Final 2022) ಪಂದ್ಯದಲ್ಲಿ ಮುಂಬೈ ಹಾಗೂ ಮಧ್ಯ ಪ್ರದೇಶ (Mumbai vs Madhya Pradesh) ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಪೃಥ್ವಿ ಶಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್​ ಆರಂಭಿಸಿದ ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ಪೃಥ್ವಿ ಶಾ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​​ಗೆ 87 ರನ್​ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೊನೆಗೂ ವೇಗಿ ಅನುಭವ್ ಅಗರ್ವಾಲ್ ಯಶಸ್ವಿಯಾದರು. 79 ಎಸೆತಗಳಲ್ಲಿ 47 ರನ್​ ಬಾರಿಸಿದ ಪೃಥ್ವಿ ಶಾ ಮೊದಲಿಗರಾಗಿ ಹೊರನಡೆದರೆ, ಆ ಬಳಿಕ ಬಂದ ಅರ್ಮಾನ್ ಜಾಫರ್ ಕೇವಲ 26 ರನ್​ ಬಾರಿಸಿ ನಿರ್ಗಮಿಸಿದರು.

ಇದರ ಬೆನ್ನಲ್ಲೇ ಸುವೇದ್ ಪಾರ್ಕರ್ (18) ಕೂಡ ವಿಕೆಟ್ ಕೈಚೆಲ್ಲಿದರು. ಇತ್ತ ತಂಡವು 147 ರನ್​ಗೆ 3 ವಿಕೆಟ್ ಕಳೆದುಕೊಂಡಿದ್ದರೂ ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ ಎಚ್ಚರಿಕೆಯ ಆಟವನ್ನು ಮುಂದುವರೆಸಿದ್ದರು. ಅದರಂತೆ ಅರ್ಧಶತಕ ಪೂರೈಸಿ ತಂಡಕ್ಕೆ ಆಸರೆಯಾಗಿ ನಿಂತಿದ್ದ ಜೈಸ್ವಾಲ್​ರನ್ನು ಪೆವಿಲಿಯನ್​ಗೆ ಕಳುಹಿಸುವಲ್ಲಿ ಅನುಭವ್ ಅಗರ್ವಾಲ್ ಯಶಸ್ವಿಯಾದರು. ಔಟಾಗುವ ಮುನ್ನ 163 ಎಸೆತಗಳನ್ನು ಎದುರಿಸಿದ್ದ ಯಶಸ್ವಿ ಜೈಸ್ವಾಲ್ 1 ಸಿಕ್ಸ್ ಹಾಗೂ 7 ಫೋರ್​ನೊಂದಿಗೆ 78 ರನ್​ ಕಲೆಹಾಕಿದ್ದಾರೆ.

ಜೈಸ್ವಾಲ್ ವಿಕೆಟ್ ಸಿಗುತ್ತಿದ್ದಂತೆ ಮಧ್ಯಪ್ರದೇಶದ ಬೌಲರ್​ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅಲ್ಲದೆ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಹಾರ್ದಿಕ್ ತಮೋರ್ (24) ವಿಕೆಟ್ ಉರುಳಿಸಿ ಮೇಲುಗೈ ಸಾಧಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ಯುವ ಬ್ಯಾಟ್ಸ್​ಮನ್​ ಸರ್ಫರಾಜ್ ಖಾನ್ 125 ಎಸೆತಗಳನ್ನು ಎದುರಿಸಿ 40 ರನ್​ ಕಲೆಹಾಕುವ ಮೂಲಕ ತಂಡಕ್ಕೆ ಆಸರೆಯಾದರು. ಅದರಂತೆ ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಮುಂಬೈ ತಂಡವು 5 ವಿಕೆಟ್ ನಷ್ಟಕ್ಕೆ 248 ರನ್​ ಕಲೆಹಾಕಿದೆ. ಸದ್ಯ ಕ್ರೀಸ್​ನಲ್ಲಿ ಶಮ್ಸ್ ಮುಲಾನಿ ಹಾಗೂ ಸರ್ಫರಾಜ್ ಖಾನ್ ಇದ್ದು, 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ
Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

ಇನ್ನು ಮಧ್ಯಪ್ರದೇಶ ತಂಡದ ಪರ ಅನುಭವ್ ಅಗರ್ವಾಲ್ ಹಾಗೂ ಸರನ್ಶ್​ ಜೈನ್ ತಲಾ 2 ವಿಕೆಟ್ ಪಡೆದರೆ, ಕುಮಾರ್ ಕಾರ್ತಿಕೇಯ 1 ವಿಕೆಟ್ ಕಬಳಿಸಿದ್ದಾರೆ.

ಮುಂಬೈ ಪ್ಲೇಯಿಂಗ್ 11: ಪೃಥ್ವಿ ಶಾ (ನಾಯಕ) , ಯಶಸ್ವಿ ಜೈಸ್ವಾಲ್ , ಅರ್ಮಾನ್ ಜಾಫರ್ , ಸುವೇದ್ ಪಾರ್ಕರ್ , ಸರ್ಫರಾಜ್ ಖಾನ್ , ಹಾರ್ದಿಕ್ ತಮೋರ್ ( ವಿಕೆಟ್ ಕೀಪರ್) , ಶಮ್ಸ್ ಮುಲಾನಿ , ತನುಷ್ ಕೋಟ್ಯಾನ್ , ಧವಲ್ ಕುಲಕರ್ಣಿ , ತುಷಾರ್ ದೇಶಪಾಂಡೆ , ಮೋಹಿತ್ ಅವಸ್ತಿ

ಮಧ್ಯಪ್ರದೇಶ ಪ್ಲೇಯಿಂಗ್ 11: ಯಶ್ ದುಬೆ , ಹಿಮಾಂಶು ಮಂತ್ರಿ (ವಿಕೆಟ್ ಕೀಪರ್) , ಶುಭಂ ಎಸ್ ಶರ್ಮಾ , ರಜತ್ ಪಾಟಿದಾರ್ , ಆದಿತ್ಯ ಶ್ರೀವಾಸ್ತವ್ (ನಾಯಕ) , ಅಕ್ಷತ್ ರಘುವಂಶಿ , ಪಾರ್ಥ್ ಸಹಾನಿ , ಸರನ್ಶ್ ಜೈನ್ , ಕುಮಾರ್ ಕಾರ್ತಿಕೇಯ , ಅನುಭವ್ ಅಗರ್ವಾಲ್ , ಗೌರವ್ ಯಾದವ್

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.