Rashid Khan: ಜಸ್ಟ್ 68 ಪಂದ್ಯಗಳಲ್ಲಿ ಹೊಸ ದಾಖಲೆ ಬರೆದ ರಶೀದ್ ಖಾನ್

| Updated By: ಝಾಹಿರ್ ಯೂಸುಫ್

Updated on: Aug 31, 2022 | 11:55 AM

Rashid Khan: ಈ ಪಟ್ಟಿಯಲ್ಲಿ ಬಾಂಗ್ಲಾದೇಶ್ ತಂಡದ ಶಕೀಬ್ ಅಲ್ ಹಸನ್ ಅಗ್ರಸ್ಥಾನದಲ್ಲಿದ್ದು, ಶಕೀಬ್ 100 ಪಂದ್ಯಗಳಿಂದ 122 ವಿಕೆಟ್ ಕಬಳಿಸಿದ್ದಾರೆ.

Rashid Khan: ಜಸ್ಟ್ 68 ಪಂದ್ಯಗಳಲ್ಲಿ ಹೊಸ ದಾಖಲೆ ಬರೆದ ರಶೀದ್ ಖಾನ್
Rashid Khan
Follow us on

Asia Cup 2022: ಏಷ್ಯಾಕಪ್​ನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡದ ವಿರುದ್ದ ಅಫ್ಘಾನಿಸ್ತಾನ್ (AFG vs BAN) ತಂಡವು 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನ ರುವಾರಿಗಳೆಂದರೆ ಮುಜೀಬ್ ಉರ್ ರಹಮಾನ್, ರಶೀದ್ ಖಾನ್ (Rashid Khan) ಹಾಗೂ ನಜೀಬುಲ್ಲಾ ಝರ್ದಾನ್. ಮುಜೀಬ್-ರಶೀದ್ ಖಾನ್ ಬೌಲಿಂಗ್​ನಲ್ಲಿ ಮಿಂಚಿದರೆ, ಝರ್ದಾನ್ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ದರು.

ಅದರಲ್ಲೂ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಬ್ಯಾಟಿಂಗ್ ಲೈನಪ್​ ಅನ್ನು ಹಳ್ಳಕ್ಕೆ ಕೆಡವಿದ್ದು ಮುಜೀಬ್ ಹಾಗೂ ರಶೀದ್ ಖಾನ್. ಮೊದಲ ಮೂರು ವಿಕೆಟ್​ಗಳನ್ನು ಮುಜೀಬ್ ಪಡೆದರೆ, ಮಧ್ಯಮ ಕ್ರಮಾಂಕದ ಮೂವರು ಬ್ಯಾಟ್ಸ್​ಮನ್​ಗಳನ್ನು ರಶೀದ್ ಖಾನ್ ಪೆವಿಲಿಯನ್​ಗೆ ಕಳುಹಿಸಿದ್ದರು.

ಈ ಮೂರು ವಿಕೆಟ್​ಗಳೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ರಶೀದ್ ಖಾನ್ ಹೊಸ ದಾಖಲೆಯನ್ನೂ ಕೂಡ ತಮ್ಮದಾಗಿಸಿಕೊಂಡಿದರು. ಅಂದರೆ ಇದೀಗ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ ರಶೀದ್ ಖಾನ್ ಇದೀಗ 2ನೇ ಸ್ಥಾನಕ್ಕೇರಿದ್ದಾರೆ.

ಇದನ್ನೂ ಓದಿ
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

93 ಇನಿಂಗ್ಸ್​ ಮೂಲಕ 114 ವಿಕೆಟ್ ಪಡೆದಿದ್ದ ನ್ಯೂಜಿಲೆಂಡ್​ನ ವೇಗಿ ಟಿಮ್ ಸೌಥಿಯನ್ನು ರಶೀದ್ ಖಾನ್ ಹಿಂದಿಕ್ಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನ ಟಾಪ್ ವಿಕೆಟ್ ಟೇಕರ್ಸ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

ವಿಶೇಷ ಎಂದರೆ ರಶೀದ್ ಖಾನ್ ಈ ಸಾಧನೆ ಮಾಡಿದ್ದು ಕೇವಲ 68 ಪಂದ್ಯಗಳಲ್ಲಿ ಎಂಬುದೇ ಅಚ್ಚರಿ. ಅಂದರೆ ಅತೀ ಕಡಿಮೆ ಪಂದ್ಯಗಳಲ್ಲೂ 100 ಕ್ಕೂ ಅಧಿಕ ವಿಕೆಟ್ ಪಡೆದ ಹೆಗ್ಗಳಿಕೆ ಅಫ್ಘಾನ್ ಸ್ಪಿನ್ನರ್​ಗೆ ಸಲ್ಲುತ್ತದೆ. ಸದ್ಯ ರಶೀದ್ ಖಾನ್ ಕೇವಲ 68 ಇನಿಂಗ್ಸ್ ಮೂಲಕ ಒಟ್ಟು 115 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ 2ನೇ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.

ಸದ್ಯ ಈ ಪಟ್ಟಿಯಲ್ಲಿ ಬಾಂಗ್ಲಾದೇಶ್ ತಂಡದ ಶಕೀಬ್ ಅಲ್ ಹಸನ್ ಅಗ್ರಸ್ಥಾನದಲ್ಲಿದ್ದು, ಶಕೀಬ್ 100 ಪಂದ್ಯಗಳಿಂದ 122 ವಿಕೆಟ್ ಕಬಳಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ರಶೀದ್​ ಖಾನ್​ಗೆ ಕೇವಲ 8 ವಿಕೆಟ್​ಗಳ ಅವಶ್ಯಕತೆಯಿದ್ದು, ಈ ಬಾರಿಯ ಏಷ್ಯಾಕಪ್​ ಮೂಲಕ ನಂಬರ್ 1 ಸ್ಥಾನಕ್ಕೇರಲಿದ್ದಾರಾ ಕಾದು ನೋಡಬೇಕಿದೆ.