ಧೋನಿಗಾಗಿ ಕಾದು ಕುಳಿತಿದ್ದ ಫ್ಯಾನ್ಸ್ಗೆ ಚಮಕ್ ಕೊಟ್ಟ ಜಡೇಜಾ; ನಂತರ ಆಗಿದ್ದೇನು ನೋಡಿ..
ಧೋನಿ ಫೀಲ್ಡ್ಗೆ ಇಳಿಯಲಿ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಎಲ್ಲರೂ ಧೋನಿ ಧೋನಿ ಎಂದು ಕೂಗೋಕೆ ಆರಂಭಿಸಿದರು. ಆದರೆ ಬ್ಯಾಟ್ ಹಿಡಿದು ರವೀಂದ್ರ ಜಡೇಜಾ ಫೀಲ್ಡ್ಗೆ ಇಳಿಯೋಕೆ ಹೊರಟರು. ಇದನ್ನು ನೋಡಿ ಧೋನಿ ಫ್ಯಾನ್ಸ್ ಬೇಸರಗೊಂಡರು.

ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಕೆಕೆಆರ್ ಪಂದ್ಯದಲ್ಲಿ ಸಿಎಸ್ಕೆ ತಂಡ ಗೆದ್ದು ಬೀಗಿದೆ. ಹೋಂ ಗ್ರೌಂಡ್ನಲ್ಲಿ ಸಿಎಸ್ಕೆ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ನಡೆದ ಒಂದು ಘಟನೆ ಗಮನ ಸೆಳೆದಿದೆ. ಈ ಪಂದ್ಯದಲ್ಲಿ ಧೋನಿಗಾಗಿ ಫ್ಯಾನ್ಸ್ ಕಾದಿದ್ದರು. ಈ ವೇಳೆ ಜಡೇಜಾ ಅವರು ಧೋನಿ ಫ್ಯಾನ್ಸ್ಗೆ ಚಮಕ್ ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು ಸಿಎಸ್ಕೆ ತಂಡ. ಈ ತಂತ್ರ ಸಹಕಾರಿ ಆಗಿತ್ತು. ಕೇವಲ 137 ರನ್ಗೆ ಕೆಕೆಆರ್ ತಂಡವನ್ನು ಚೆನ್ನೈ ಕಟ್ಟಿ ಹಾಕಿತು. ಆ ಬಳಿಕ ಚೆನ್ನೈ ಸುಲಭ ಮೊತ್ತದ ಬೆನ್ನು ಹತ್ತಿತ್ತು. ಕೇವಲ 15 ರನ್ಗೆ ರಚಿನ್ ರವೀಂದ್ರ ಅವರು ವಿಕೆಟ್ ಒಪ್ಪಿಸಿದರು. ನಂತರ ರುತುರಾಜ್ ಗಾಯಕ್ವಾಡ್ ಹಾಗೂ ಮಿಚೆಲ್ ಉತ್ತಮ ಆಟ ಆಡಿದರು. 25 ರನ್ಗೆ ಮಿಚೆಲ್ ಔಟ್ ಆದ ಬಳಿಕ ಶಿವಮ್ ದೂಬೆ ಕಣಕ್ಕೆ ಇಳಿದರು. ಅವರು 18 ಬಾಲ್ಗೆ 28 ರನ್ ಹೊಡೆದು ಔಟ್ ಆದರು. 135 ರನ್ಗಳಿಗೆ ಚೆನ್ನೈ ಮೂರು ವಿಕೆಟ್ ಕಳೆದುಕೊಂಡಿತ್ತು. ಗೆಲುವಿಗೆ ಬೇಕಾಗಿದ್ದು ಕೇವಲ 3 ರನ್ ಆಗಿತ್ತು.
Jadeja teased the crowd by walking ahead of Dhoni as a joke. This team man🤣💛 pic.twitter.com/Kiostqzgma
— 𝐒𝐞𝐫𝐠𝐢𝐨 (@SergioCSKK) April 8, 2024
ಆಗ ಧೋನಿ ಫೀಲ್ಡ್ಗೆ ಇಳಿಯಲಿ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಎಲ್ಲರೂ ಧೋನಿ ಧೋನಿ ಎಂದು ಕೂಗೋಕೆ ಆರಂಭಿಸಿದರು. ಆದರೆ ಬ್ಯಾಟ್ ಹಿಡಿದು ರವೀಂದ್ರ ಜಡೇಜಾ ಫೀಲ್ಡ್ಗೆ ಇಳಿಯೋಕೆ ಹೊರಟರು. ಇದನ್ನು ನೋಡಿ ಧೋನಿ ಫ್ಯಾನ್ಸ್ ಬೇಸರಗೊಂಡರು. ನಂತರ ಅವರು ಮರಳಿ ಡ್ರೆಸ್ಸಿಂಗ್ ರೂಂಗೆ ಹೋದರು. ನಂತರ ಧೋನಿ ಫೀಲ್ಡ್ಗೆ ಬಂದರು. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟರು. ಧೋನಿ ವಿನ್ನಿಂಗ್ ರನ್ ಬಾರಿಸಿದರು. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟರು.
ಇದನ್ನೂ ಓದಿ: MS Dhoni: ಧೋನಿನ ಪ್ರೀತಿಯಿಂದ ಹಗ್ ಮಾಡಿದ ಗೌತಮ್ ಗಂಭೀರ್; ವಿಡಿಯೋ ವೈರಲ್
ಚೆನ್ನೈ ಸೈಪರ್ ಕಿಂಗ್ಸ್ ತಂಡ ಪಾಯಿಂಟ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿ ಇದೆ. ಐದು ಪಂದ್ಯಗಳಲ್ಲಿ ಇದು ಅವರ ಮೂರನೇ ಜಯ. ದೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಜೊತೆ ಇವರು ಸೋತಿದ್ದಾರೆ. ಕೆಕೆಆರ್ ತಂಡ ಈ ಸೀಸನ್ನ ಮೊದಲ ಸೋಲು ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:52 am, Tue, 9 April 24