Asia Cup 2022: ಏಷ್ಯಾಕಪ್‌ನಿಂದ ಜಡೇಜಾ ಔಟ್! ತಂಡದ ಈ 4 ಕೊರತೆಗಳನ್ನು ತುಂಬುವವರು ಯಾರು?

| Updated By: ಪೃಥ್ವಿಶಂಕರ

Updated on: Sep 02, 2022 | 6:45 PM

Asia Cup 2022: ಜಡೇಜಾ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂಬುದು ತಿಳಿದಿಲ್ಲ, ಆದರೆ ಟಿ 20 ವಿಶ್ವಕಪ್ ಹತ್ತಿರದಲ್ಲಿದ್ದು, ಈ ಸುದ್ದಿ ಟೀಮ್ ಇಂಡಿಯಾಕ್ಕೆ ಬರಸಿಡಿಲಿನಂತೆ ಎರಗಿದೆ. ಜಡೇಜಾ ನಿರ್ಗಮನದಿಂದ ಟೀಮ್ ಇಂಡಿಯಾಕ್ಕೆ ಆಗುವ ನಷ್ಟ ಏನು ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Asia Cup 2022: ಏಷ್ಯಾಕಪ್‌ನಿಂದ ಜಡೇಜಾ ಔಟ್! ತಂಡದ ಈ 4 ಕೊರತೆಗಳನ್ನು ತುಂಬುವವರು ಯಾರು?
ರವೀಂದ್ರ ಜಡೇಜಾ
Follow us on

ಏಷ್ಯಾಕಪ್ 2022 (Asia Cup 2022)ರ ಸೂಪರ್-4 ಗೆ ಎಂಟ್ರಿಕೊಟ್ಟಿರುವ ಟೀಮ್ ಇಂಡಿಯಾ (Team India)ಗೆ ದೊಡ್ಡ ಹಿನ್ನಡೆ ಎದುರಾಗಿದೆ. ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಪಂದ್ಯಾವಳಿಯಿಂದ ಹೊರಬಿದಿದ್ದಾರೆ. ಜಡೇಜಾ ಹೊರಗುಳಿಯಲು ಕಾರಣ ಮೊಣಕಾಲು ಗಾಯ. ಗಾಯದ ಸಮಸ್ಯೆಯಿಂದ ರವೀಂದ್ರ ಜಡೇಜಾ ಏಷ್ಯಾಕಪ್‌ನಲ್ಲಿ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮಾಹಿತಿ ನೀಡಿದ್ದು, ಅವರ ಸ್ಥಾನಕ್ಕೆ ಅಕ್ಸರ್ ಪಟೇಲ್ (Axar Patel) ಅವರನ್ನು ಟೀಂ ಇಂಡಿಯಾಗೆ ಸೇರಿಸಿಕೊಳ್ಳಲಾಗಿದೆ. ರವೀಂದ್ರ ಜಡೇಜಾ ಅವರ ಬಲ ಮೊಣಕಾಲಿಗೆ ಗಾಯವಾಗಿದ್ದು, ಈ ಕಾರಣದಿಂದಾಗಿ ಅವರು ತಂಡದಿಂದ ಔಟಾಗಿದ್ದಾರೆ. ಜಡೇಜಾ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂಬುದು ತಿಳಿದಿಲ್ಲ, ಆದರೆ ಟಿ 20 ವಿಶ್ವಕಪ್ ಹತ್ತಿರದಲ್ಲಿದ್ದು, ಈ ಸುದ್ದಿ ಟೀಮ್ ಇಂಡಿಯಾಕ್ಕೆ ಬರಸಿಡಿಲಿನಂತೆ ಎರಗಿದೆ. ಜಡೇಜಾ ನಿರ್ಗಮನದಿಂದ ಟೀಮ್ ಇಂಡಿಯಾಕ್ಕೆ ಆಗುವ ನಷ್ಟ ಏನು ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

– ರವೀಂದ್ರ ಜಡೇಜಾ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದು, ಟೀಂ ಇಂಡಿಯಾ ಅವರನ್ನು ಬ್ಯಾಟ್ಸ್‌ಮನ್‌ ಆಗಿ ಮಿಸ್ ಮಾಡಿಕೊಳ್ಳಲಿದೆ. ಪಾಕಿಸ್ತಾನದ ವಿರುದ್ಧ, ಜಡೇಜಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 35 ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದರು. ಹಾರ್ದಿಕ್ ಪಾಂಡ್ಯ ಅವರೊಂದಿಗೆ 29 ಎಸೆತಗಳಲ್ಲಿ 52 ರನ್‌ಗಳ ಅಮೂಲ್ಯ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು. ಮುಂಬರುವ ಪಂದ್ಯಗಳಲ್ಲಿ ಜಡೇಜಾ ಮಿಸ್ ಆಗುವುದು ಖಚಿತ.

– ಬೌಲಿಂಗ್​ನಲ್ಲೂ ರವೀಂದ್ರ ಜಡೇಜಾ ಫಾರ್ಮ್​ನಲ್ಲಿದ್ದರು. ಈ ಎಡಗೈ ಸ್ಪಿನ್ನರ್ ಪಾಕಿಸ್ತಾನದ ವಿರುದ್ಧ 2 ಓವರ್‌ಗಳಲ್ಲಿ 11 ರನ್ ನೀಡಿದರು. ಅದೇ ವೇಳೆ ಹಾಂಕಾಂಗ್ ವಿರುದ್ಧ 4 ಓವರ್​ಗಳಲ್ಲಿ ಕೇವಲ 15 ರನ್ ನೀಡಿ ಒಂದು ವಿಕೆಟ್ ಪಡೆದರು. ಜಡೇಜಾ ಅವರ ಎಕಾನಮಿ ರೇಟ್ ಪ್ರತಿ ಓವರ್‌ಗೆ ಕೇವಲ 4.33 ರನ್ ಆಗಿತ್ತು. ಇದು ರಶೀದ್ ಖಾನ್ ನಂತರದ ಅತ್ಯುತ್ತಮ ಎಕಾನಮಿಯಾಗಿದೆ.

ಇದನ್ನೂ ಓದಿ
‘ಮೆಗಾ ಬ್ಲಾಕ್‌ಬಸ್ಟರ್’; ಕನ್ನಡತಿ ರಶ್ಮಿಕಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ರೋಹಿತ್- ಗಂಗೂಲಿ..! ಪೋಸ್ಟರ್ ನೋಡಿ
Asia Cup 2022: ಟೀಂ ಇಂಡಿಯಾ ನಾಯಕನಾಗಿ ರೋಹಿತ್​ಗೆ ಹೆಚ್ಚು ದಿನ ಉಳಿಗಾಲವಿಲ್ಲ; ಪಾಕ್ ಕ್ರಿಕೆಟಿಗನ ವಿಶ್ಲೇಷಣೆ
SL vs BAN: ರಣ ರೋಚಕ ಪಂದ್ಯದಲ್ಲಿ ಬಾಂಗ್ಲಾ ಮಣಿಸಿ ಸೂಪರ್- 4 ಹಂತಕ್ಕೆ ಎಂಟ್ರಿಕೊಟ್ಟ ಶ್ರೀಲಂಕಾ

– ರವೀಂದ್ರ ಜಡೇಜಾ ಫೀಲ್ಡಿಂಗ್‌ಗೆ ಯಾರು ಸರಿಸಮರಿಲ್ಲ. ಜಡೇಜಾ ಪ್ರಸ್ತುತ ವಿಶ್ವದ ಅತ್ಯುತ್ತಮ ಫೀಲ್ಡರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಜಡೇಜಾ ಹಾಂಕಾಂಗ್ ವಿರುದ್ಧ ಸೊಗಸಾದ ರನ್ ಔಟ್ ಮಾಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. ಒಟ್ಟಿನಲ್ಲಿ ಟೀಂ ಇಂಡಿಯಾ ಕೂಡ ಒಬ್ಬ ಶ್ರೇಷ್ಠ ಫೀಲ್ಡರ್ ಅನ್ನು ಕಳೆದುಕೊಂಡಿದೆ.

– ಒತ್ತಡದ ಪಂದ್ಯದಲ್ಲೂ ಟೀಂ ಇಂಡಿಯಾ ರವೀಂದ್ರ ಜಡೇಜಾ ಅವರನ್ನು ನೆನಪಿಸಲಿದೆ. ಟೀಂ ಇಂಡಿಯಾದಲ್ಲಿ ಜಡೇಜಾ ಅವರ ಬದಲಿ ಆಟಗಾರರಿದ್ದಾರೆ ಆದರೆ ಯಾವುದೇ ಆಟಗಾರನಿಗೆ ಅವರಂತಹ ಅನುಭವವಿಲ್ಲ. ಈ ಆಟಗಾರ ಯಾವುದೇ ಸಂದರ್ಭದಲ್ಲೂ ಯಾವುದೇ ಎದುರಾಳಿಯ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಶಕ್ತಿಯನ್ನು ಹೊಂದಿದ್ದಾನೆ, ಬಹುಶಃ ಅಕ್ಷರ್ ಪಟೇಲ್ ಟೀಮ್ ಇಂಡಿಯಾಕ್ಕೆ ಆ ಗುಣಮಟ್ಟವನ್ನು ನೀಡಲು ಸಾಧ್ಯವಾಗದಿರಬಹುದು. ಈಗ T20 ವಿಶ್ವಕಪ್ 2022 ಸಮೀಪಿಸುತ್ತಿರುವ ಕಾರಣ ಜಡೇಜಾ ಅವರ ಗಾಯವು ಗಂಭೀರವಾಗಬಾರದೆಂದು ಟೀಂ ಇಂಡಿಯಾ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.