Virat Kohli: ವಿರಾಟ್ ಕೊಹ್ಲಿ ಔಟಾದಾಗ ನಾನ್​ ಸ್ಟ್ರೈಕ್​ನಲ್ಲಿ ಜಡೇಜಾ ಆಡಿದ ಮಾತು ಸ್ಟಂಪ್ ಮೈಕ್​ನಲ್ಲಿ ಸೆರೆ: ಏನು ಹೇಳಿದ್ರು ನೋಡಿ

India vs Australia 2nd ODI: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ಪರ ಗರಿಷ್ಠ ರನ್ ಕಲೆಹಾಕಿದ್ದೇ ವಿರಾಟ್ ಕೊಹ್ಲಿ (31 ರನ್). ಆಕ್ರಮಣಕಾರಿ ಆಟವಾಡುತ್ತಿದ್ದದ ಕೊಹ್ಲಿ 16ನೇ ಓವರ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

Virat Kohli: ವಿರಾಟ್ ಕೊಹ್ಲಿ ಔಟಾದಾಗ ನಾನ್​ ಸ್ಟ್ರೈಕ್​ನಲ್ಲಿ ಜಡೇಜಾ ಆಡಿದ ಮಾತು ಸ್ಟಂಪ್ ಮೈಕ್​ನಲ್ಲಿ ಸೆರೆ: ಏನು ಹೇಳಿದ್ರು ನೋಡಿ
Ravindra Jadeja and Virat Kohli
Follow us
Vinay Bhat
|

Updated on:Mar 20, 2023 | 7:56 AM

ಈ ವರ್ಷದ ಐಸಿಸಿ ಏಕದಿನ ವಿಶ್ವಕಪ್​ನ ತಯಾರಿಗಾಗಿ ನಡೆಯುತ್ತಿರುವ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ (India vs Australia) ಪ್ರದರ್ಶನ ಕಳಪೆ ಆಗಿದೆ. ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಆಡಿದ ಆಟ ಮ್ಯಾನೇಜ್ಮೆಂಟ್​ಗೆ ತಲೆನೋವಾಗಿ ಪರಿಣಮಿಸಿದೆ. ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಕೇವಲ 49 ರನ್​ಗು ಮುನ್ನವೇ ಟೀಮ್ ಇಂಡಿಯಾದ (Team India) ಅರ್ಧ ಬ್ಯಾಟರ್​ಗಳು ಪೆವಿಲಿಯನ್ ಸೇರಿಕೊಂಡರು. ಪಂದ್ಯ ಆರಂಭವಾದ ಮೂರನೇ ಎಸೆತದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ರೋಹಿತ್ ಪಡೆ ಒಟ್ಟು ಗಳಿಸಿದ್ದು ಕೇವಲ 117 ರನ್. ವಿರಾಟ್ ಕೊಹ್ಲಿ (Virat Kohli) ಕ್ರೀಸ್​ನಲ್ಲಿ ಇರುವ ವರೆಗೆ ತಂಡ ಸವಾಲಿನ ಮೊತ್ತ ಕಲೆಹಾಕಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಇವರು ಕೂಡ ಔಟಾಗಿದ್ದು ಹೊಡೆತ ಬಿದ್ದಿತು.

ಭಾರತ ಪರ ಗರಿಷ್ಠ ರನ್ ಕಲೆಹಾಕಿದ್ದೇ ವಿರಾಟ್ ಕೊಹ್ಲಿ. 35 ಎಸೆತಗಳಲ್ಲಿ 4 ಫೋರ್​ನೊಂದಿಗೆ 31 ರನ್ ಗಳಿಸಿದರು. ಆಕ್ರಮಣಕಾರಿ ಆಟವಾಡುತ್ತಿದ್ದದ ಕೊಹ್ಲಿ 16ನೇ ಓವರ್​ನ ನೇಥನ್ ಎಲಿಸ್ ಅವರ ಎರಡನೇ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು. ಕ್ರಾಸ್ ಬ್ಯಾಟ್ ಶಾಟ್ ಹೊಡೆಯುವಲ್ಲಿ ಸಂಪೂರ್ಣ ವಿಫಲರಾದ ವಿರಾಟ್ ಆರನೇ ಬ್ಯಾಟರ್ ಆಗಿ ಪೆವಿಲಿಯನ್ ಸೇರಿಕೊಳ್ಳಬೇಕಾಯಿತು. ಎಲ್​ಬಿಗೆ ಆಸೀಸ್ ಆಟಗಾರರು ಮನವಿ ಮಾಡಿದ ತಕ್ಷಣ ಅಂಪೈರ್ ಔಟ್ ಎಂಬ ಸೂಚನೆ ನೀಡಿದರು.

ಇದನ್ನೂ ಓದಿ
Image
Rohit Sharma: ತಂಡದ ಹೀನಾಯ ಸೋಲಿಗೆ ನಾಯಕ ರೋಹಿತ್ ಶರ್ಮಾ ದೂರಿದ್ದು ಯಾರನ್ನು ಗೊತ್ತೇ?
Image
Team India: ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಕಲೆಹಾಕಿದ ಅತೀ ಕಡಿಮೆ ಸ್ಕೋರ್ ಎಷ್ಟು ಗೊತ್ತಾ?
Image
Mitchell Starc: ಟೀಮ್ ಇಂಡಿಯಾ ವಿರುದ್ಧ 5 ವಿಕೆಟ್ ಉರುಳಿಸಿ ಟಾಪ್-3 ಗೆ ಎಂಟ್ರಿ ಕೊಟ್ಟ ಮಿಚೆಲ್ ಸ್ಟಾರ್ಕ್​
Image
IPL 2023: ಐಪಿಎಲ್ 5 ತಂಡಗಳ ಹೊಸ ಜೆರ್ಸಿ ಅನಾವರಣ

IPL 2023: ಐಪಿಎಲ್​ಗೆ ಮತ್ತೆ ಕೋವಿಡ್​ ಭೀತಿ..!

ಅಂಪೈರ್ ಔಟ್ ಕೊಟ್ಟಾಗ ಕೊಹ್ಲಿ ಡಿಆರ್​ಎಸ್ ಮೊರೆ ಹೋಗಲು ಮುಂದಾದರು. ಆದರೆ, ನಾನ್​ಸ್ಟ್ರೈಕ್​ನಲ್ಲಿದ್ದ ರವೀಂದ್ರ ಜಡೇಜಾ ಇದು ಖಚಿತವಾಗಿ ಔಟ್, ಡಿಆರ್​ಎಸ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಕೊಹ್ಲಿ ಬಳಿ ಹೇಳಿದ್ದಾರೆ. ಜಡೇಜಾ ಹಾಗೂ ಕೊಹ್ಲಿ ನಡುವಣ ಈ ಸಂಭಾಷಣೆ ಸ್ಟಂಪ್​ಮೈಕ್​ನಲ್ಲಿ ಸೆರೆಯಾಗಿದೆ. ಬಳಿಕ ವಿರಾಟ್ ಒಲ್ಲದ ಮನಸ್ಸಿನಲ್ಲಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕೊಹ್ಲಿ ಬೆನ್ನಲ್ಲೇ 16 ರನ್ ಗಳಿಸಿದ್ದ ಜಡೇಜಾ ಕೂಡ ಔಟಾದರರು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ:

ಈ ಪಂದ್ಯದಲ್ಲಿ ಟಾಸ್ ಸೋತು ಭಾರತ ಬ್ಯಾಟಿಂಗ್​ಗೆ ಇಳಿಯಿತು. ಟೀಮ್ ಇಂಡಿಯಾ ಅಂದುಕೊಂಡ ಯೋಜನೆಯಂತೆ ಯಾವುದೂ ನಡೆಯಲಿಲ್ಲ. ಮಿಚೆಲ್ ಸ್ಟಾರ್ಕ್ ಬೌಲಿಂಗ್ ಬಿರುಗಾಳಿಗೆ ಮೊದಲ ಓವರ್​ನ ಮೂರನೇ ಎಸೆತದಲ್ಲೇ ಭಾರತ ಶುಭ್​ಮನ್ ಗಿಲ್ ಅವರ ವಿಕೆಟ್ ಕಳೆದುಕೊಂಡಿತು. ನಂತರ ರೋಹಿತ್ ಶರ್ಮಾ (13,) ಸೂರ್ಯ ಕುಮಾರ್​ ಯಾದವ್​ (0) ವಿಕೆಟ್​ ಒಪ್ಪಿಸಿದರು. 9ನೇ ಓವರ್​ನಲ್ಲಿ ಕೆಎಲ್​ ರಾಹುಲ್​ (9) ಔಟಾದರೆ ಹಾರ್ದಿಕ್​ ಪಾಂಡ್ಯ (1), ನಂತರದಲ್ಲಿ ಕೊಹ್ಲಿ-ಜಡೇಜಾ ಕೂಡ ವಿಕೆಟ್ ಒಪ್ಪಿಸಿದರು. ಅಕ್ಷರ್ ಪಟೇಲ್ 29 ಎಸೆತಗಳಲ್ಲಿ 29 ರನ್ ಬಾರಿಸಿ ತಂಡದ ಮೊತ್ತವನ್ನು 100 ದಾಟಿಸಿದರು. ಅಂತಿಮವಾಗಿ ಭಾರತ 26 ಓವರ್​ಗಳಲ್ಲಿ 117 ರನ್​ಗೆ ಸರ್ವಪತನ ಕಂಡಿತು. ಆಸೀಸ್ ಪರ ಸ್ಟಾರ್ಕ್ 5 ವಿಕೆಟ್ ಕಬಳಿಸಿದರೆ, ಸೀನ್ ಅಬಾಟ್ 3 ಮತ್ತು ನೇಥನ್ ಎಲಿಸ್ 2 ವಿಕೆಟ್​ ಪಡೆದರು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಪರ ಆರಂಭಿಕರಾದ ಟ್ರಾವಿಸ್ ಹೆಡ್ 51 ರನ್​ ಮತ್ತು ಮಿಚೆಲ್ ಮಾರ್ಷ್ 66 ರನ್​ ಗಳಸಿ ಗೆಲುವಿಗೆ ಕಾರಣರಾದರು. ಭಾರತ ತಂಡ ತವರಿನಲ್ಲಿ ಅತಿ ಕಡಿಮೆ ಮೊತಕ್ಕೆ ಕುಸಿದ ನಾಲ್ಕನೇ ಮ್ಯಾಚ್​ ಇದಾಯಿತು. ಈ ಮೂಲಕ ಕೆಟ್ಟ ದಾಖಲೆ ಬರೆಯಿತು. ಇದೀಗ ಎರಡನೇ ಏಕದಿನ ಪಂದ್ಯದಲ್ಲಿ ಕಾಂಗರೂ ಪಡೆ 10 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಅಂಕಗಳ ಅಂತರದ ಸಮಬಲ ಸಾಧಿಸಿದೆ. ಹೀಗಾಗಿ ಅಂತಿಮ ತೃತೀಯ ಏಕದಿನ ಪಂದ್ಯ ಕುತೂಹಲ ಕೆರಳಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:56 am, Mon, 20 March 23