ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಭಾರತ 5 ವಿಕೆಟ್ಗಳಿಂದ ಗೆದ್ದು ಬೀಗಿತ್ತು. ಬ್ಯಾಟಿಂಗ್- ಬೌಲಿಂಗ್ನಲ್ಲಿ ಉತ್ತಮ ಆಟವಾಡಿತ್ತು. ಆದರೆ, ದ್ವಿತೀಯ ಏಕದಿನದಲ್ಲಿ ನಡೆದಿದ್ದು ಇದರ ತದ್ವಿರುದ್ದ.
ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ ಟೀಮ್ ಇಂಡಿಯಾ 10 ವಿಕೆಟ್ಗಳ ಸೋಲು ಅನುಭವಿಸಿತು. ಬ್ಯಾಟಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರೆ, ಬೌಲಿಂಗ್ನಲ್ಲಿ ಎದುರಾಳಿಯ ಒಂದೂ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ.
ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಕೇವಲ 49 ರನ್ಗು ಮುನ್ನವೇ ಟೀಮ್ ಇಂಡಿಯಾದ ಅರ್ಧ ಬ್ಯಾಟರ್ಗಳು ಪೆವಿಲಿಯನ್ ಸೇರಿಕೊಂಡರು. ರೋಹಿತ್ ಪಡೆ ಒಟ್ಟು ಗಳಿಸಿದ್ದು ಕೇವಲ 117 ರನ್.
ಭಾರತ ಪರ ಗರಿಷ್ಠ ರನ್ ಕಲೆಹಾಕಿದ್ದೇ ವಿರಾಟ್ ಕೊಹ್ಲಿ. 35 ಎಸೆತಗಳಲ್ಲಿ 4 ಫೋರ್ನೊಂದಿಗೆ 31 ರನ್ ಗಳಿಸಿದರು. ಕೊಹ್ಲಿ ಕ್ರೀಸ್ನಲ್ಲಿ ಇರುವ ವರೆಗೆ ತಂಡ ಸವಾಲಿನ ಮೊತ್ತ ಕಲೆಹಾಕಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಇವರು ಕೂಡ ಔಟಾಗಿದ್ದು ಹೊಡೆತ ಬಿದ್ದಿತು.
ಮಿಚೆಲ್ ಸ್ಟಾರ್ಕ್ (5 ವಿಕೆಟ್) ಬೌಲಿಂಗ್ ಬಿರುಗಾಳಿಗೆ ಮೊದಲ ಓವರ್ನ ಮೂರನೇ ಎಸೆತದಲ್ಲೇ ಭಾರತ ಶುಭ್ಮನ್ ಗಿಲ್ ಅವರ ವಿಕೆಟ್ ಕಳೆದುಕೊಂಡಿತು.
ರೋಹಿತ್ ಶರ್ಮಾ (13,) ಸೂರ್ಯ ಕುಮಾರ್ ಯಾದವ್ (0) ವಿಕೆಟ್ ಒಪ್ಪಿಸಿದರು. 9ನೇ ಓವರ್ನಲ್ಲಿ ಕೆಎಲ್ ರಾಹುಲ್ (9) ಔಟಾದರೆ ಹಾರ್ದಿಕ್ ಪಾಂಡ್ಯ (1), ನಂತರದಲ್ಲಿ ಕೊಹ್ಲಿ-ಜಡೇಜಾ ಕೂಡ ವಿಕೆಟ್ ಒಪ್ಪಿಸಿದರು.v
ಅಕ್ಷರ್ ಪಟೇಲ್ 29 ಎಸೆತಗಳಲ್ಲಿ 29 ರನ್ ಬಾರಿಸಿ ತಂಡದ ಮೊತ್ತವನ್ನು 100 ದಾಟಿಸಿದರು. ಅಂತಿಮವಾಗಿ ಭಾರತ 26 ಓವರ್ಗಳಲ್ಲಿ 117 ರನ್ಗೆ ಸರ್ವಪತನ ಕಂಡಿತು. ಆಸೀಸ್ ಪರ ಸ್ಟಾರ್ಕ್ 5 ವಿಕೆಟ್ ಕಬಳಿಸಿದರೆ, ಸೀನ್ ಅಬಾಟ್ 3 ಮತ್ತು ನೇಥನ್ ಎಲಿಸ್ 2 ವಿಕೆಟ್ ಪಡೆದರು.
ಸುಲಭ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಪರ ಆರಂಭಿಕರಾದ ಟ್ರಾವಿಸ್ ಹೆಡ್ 51 ರನ್ ಮತ್ತು ಮಿಚೆಲ್ ಮಾರ್ಷ್ 66 ರನ್ ಗಳಸಿ ಗೆಲುವಿಗೆ ಕಾರಣರಾದರು. ಕಾಂಗರೂ ಪಡೆ 10 ವಿಕೆಟ್ಗಳ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಅಂಕಗಳ ಅಂತರದ ಸಮಬಲ ಸಾಧಿಸಿದೆ.
Published On - 9:45 am, Mon, 20 March 23