Updated on: Feb 27, 2022 | 5:40 PM
ಐಪಿಎಲ್ ಸೀಸನ್ 15 ಗೆ ಡೇಟ್ ಫಿಕ್ಸ್ ಆಗಿದೆ. ಅದರಂತೆ ಮಾರ್ಚ್ 26 ರಿಂದ ಟೂರ್ನಿಗೆ ಚಾಲನೆ ದೊರೆಯಲಿದೆ. ಹಾಗೆಯೇ ಫೈನಲ್ ಪಂದ್ಯವು ಮೇ 29 ರಂದು ನಡೆಯಲಿದೆ. ಇದಾಗ್ಯೂ ಮುಂದಿನ ಸೀಸನ್ ಐಪಿಎಲ್ಗಾಗಿ ಆರ್ಸಿಬಿ ತಂಡ ಕ್ಯಾಪ್ಟನ್ ಅನ್ನು ಘೋಷಿಸಿಲ್ಲ. ಒಂದು ವೇಳೆ ಈ ಬಾರಿ ಆರ್ಸಿಬಿ ತಂಡವು ಹೊಸ ನಾಯಕನನ್ನು ಘೋಷಿಸಿದರೆ ಆರ್ಸಿಬಿ ತಂಡದ 6ನೇ ಕ್ಯಾಪ್ಟನ್ ಎನಿಸಿಕೊಳ್ಳಲಿದ್ದಾರೆ.
ಅಂದರೆ ಕಳೆದ 14 ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಐವರು ನಾಯಕರುಗಳು ಮುನ್ನಡೆಸಿದ್ದಾರೆ. ಅದರಲ್ಲಿ ಇಬ್ಬರು ವಿದೇಶಿ ಆಟಗಾರರಿದ್ದರೆ, ಮೂವರು ಭಾರತೀಯ ಆಟಗಾರರು ಎಂಬುದು ವಿಶೇಷ. ಈ ವೇಳೆ ಆರ್ಸಿಬಿ 3 ಬಾರಿ ಫೈನಲ್ ಪ್ರವೇಶಿಸಿದೆ. ಹಾಗಿದ್ರೆ ಆರ್ಸಿಬಿ ತಂಡವನ್ನು ಇದುವರೆಗೆ ಮುನ್ನಡೆಸಿದ ನಾಯಕರುಗಳು ಯಾರೆಲ್ಲಾ ನೋಡೋಣ...
ರಾಹುಲ್ ದ್ರಾವಿಡ್: ಆರ್ಸಿಬಿ ತಂಡದ ಮೊದಲ ನಾಯಕ ರಾಹುಲ್ ದ್ರಾವಿಡ್. 2008 ರಲ್ಲಿ ದ್ರಾವಿಡ್ ಆರ್ಸಿಬಿ ತಂಡವನ್ನು 14 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಈ ವೇಳೆ ಆರ್ಸಿಬಿ 4 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿತ್ತು.
ಕೆವಿನ್ ಪೀಟರ್ಸನ್: ಆರ್ಸಿಬಿ ತಂಡದ 2ನೇ ನಾಯಕ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್. ಪೀಟರ್ಸನ್ 2009 ರಲ್ಲಿ ಆರ್ಸಿಬಿ ತಂಡವನ್ನು 6 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಈ ವೇಳೆ ಆರ್ಸಿಬಿ 2 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿತ್ತು.
ಅನಿಲ್ ಕುಂಬ್ಳೆ: 2009 ರಲ್ಲಿ ಕೆವಿನ್ ಪೀಟರ್ಸನ್ ಅರ್ಧದಲ್ಲೇ ಟೂರ್ನಿ ತೊರೆದಿದ್ದರು. ಹೀಗಾಗಿ ಅನಿಲ್ ಕುಂಬ್ಳೆ ಉಳಿದ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆರ್ಸಿಬಿ ಡೆಕ್ಕನ್ ಚಾರ್ಜರ್ಸ್ ವಿರುದ್ದ ಸೋತು ಪ್ರಶಸ್ತಿಯನ್ನು ತಪ್ಪಿಸಿಕೊಂಡಿತು. ಅಷ್ಟೇ ಅಲ್ಲದೆ 2010ರಲ್ಲೂ ನಾಯಕರಾಗಿ ಮುಂದುವರೆದ ಕುಂಬ್ಳೆ 35 ಪಂದ್ಯಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದರು. ಕುಂಬ್ಳೆ ನಾಯಕತ್ವದಲ್ಲಿ ಆರ್ಸಿಬಿ 19 ಪಂದ್ಯಗಳಲ್ಲಿ ಜಯ ಸಾಧಿಸಿತ್ತು.
ಡೇನಿಯಲ್ ವೆಟ್ಟೋರಿ: ಆರ್ಸಿಬಿ ತಂಡದ ನಾಲ್ಕನೇ ನಾಯಕ ಡೇನಿಯಲ್ ವೆಟ್ಟೋರಿ. 2011 ರಲ್ಲಿ ವೆಟ್ಟೋರಿ ನಾಯಕತ್ವದಲ್ಲಿ ಆರ್ಸಿಬಿ 2ನೇ ಬಾರಿ ಫೈನಲ್ ಪ್ರವೇಶಿಸಿತ್ತು. ಆದರೆ ಸಿಎಸ್ಕೆ ವಿರುದ್ದ ಸೋಲುವ ಮೂಲಕ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಇನ್ನು 2012 ರ ಸೀಸನ್ನಲ್ಲೂ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದ ವೆಟ್ಟೋರಿ ಒಟ್ಟು 28
ವಿರಾಟ್ ಕೊಹ್ಲಿ: ಕಿಂಗ್ ಕೊಹ್ಲಿ 2013 ರಿಂದ 2021 ರವರೆಗೆ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದರು. 2016 ರಲ್ಲಿ ಫೈನಲ್ ಪ್ರವೇಶಿಸಿದ್ದ ಆರ್ಸಿಬಿ ಎಸ್ಆರ್ಹೆಚ್ ವಿರುದ್ದ ಸೋಲುವ ಮೂಲಕ ಮತ್ತೊಮ್ಮೆ ನಿರಾಸೆ ಅನುಭವಿಸಿತು. 140 ಪಂದ್ಯಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ 66 ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಇದೀಗ ಆರ್ಸಿಬಿ ತಂಡವು ನೂತನ ನಾಯಕನ ಘೋಷಣೆ ಮಾಡುವ ಇರಾದೆಯಲ್ಲಿದೆ. ಅದರಂತೆ ಹೊಸ ನಾಯಕನೊಂದಿಗೆ ಆರ್ಸಿಬಿ ಚೊಚ್ಚಲ ಟ್ರೋಫಿ ಗೆಲ್ಲಲಿದೆಯಾ ಕಾದು ನೋಡಬೇಕಿದೆ.
RCB Old Team