IND vs SL: 3ನೇ ಟಿ20 ಆರಂಭಕ್ಕೂ ಮುನ್ನ ಭಾರತಕ್ಕೆ ಸಿಹಿ ಸುದ್ದಿ; ಇಶಾನ್ ಕಿಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್
Ishan Kishan: ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ, ಅವರು ಇನ್ನೂ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ.
ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Ishan Kishan) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ, ಅವರು ಇನ್ನೂ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ. ಬಿಸಿಸಿಐ ಮೂಲಗಳ ಪ್ರಕಾರ, ಅವರು ಮೂರನೇ ಟಿ 20 (3rd T20) ನಲ್ಲಿ ಆಡುವ ಬಗ್ಗೆ ಸಸ್ಪೆನ್ಸ್ ಇದೆ. ಎರಡನೇ T20 (2nd T20I) ಸಮಯದಲ್ಲಿ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರ ಹೆಲ್ಮೆಟ್‌ಗೆ ಚೆಂಡು ಬಡಿದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ನಂತರ ಅವರಿಗೆ ಸಿಟಿ ಸ್ಕ್ಯಾನ್ ಕೂಡ ಮಾಡಲಾಯಿತು. ಆದರೆ, ಈಗ ಡಿಸ್ಚಾರ್ಜ್ ಆಗಿರುವುದರಿಂದ ಇಂಜುರಿ ಅಷ್ಟೊಂದು ಗಂಭೀರವಾಗಿಲ್ಲ ಎಂದು ತೋರುತ್ತಿದೆ. ಈ ಸುದ್ದಿ ಟೀಂ ಇಂಡಿಯಾಗೆ ಕೊಂಚ ಸಮಾಧಾನ ತಂದಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟಿ20 ಪಂದ್ಯ ಭಾನುವಾರ ಸಂಜೆ ಧರ್ಮಶಾಲಾ ಮೈದಾನದಲ್ಲಿ ನಡೆಯಲಿದ್ದು, ಎರಡನೇ ಟಿ20 ಆಡುವಾಗ ಇಶಾನ್ ಕಿಶನ್ ಗಾಯಗೊಂಡಿದ್ದರು. 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಇಂದು ಗೆದ್ದರೆ ಸರಣಿ ಕ್ಲೀನ್ ಸ್ವೀಪ್ ಮಾಡಲಿದೆ. ಅಲ್ಲದೆ ಇದು ಭಾರತಕ್ಕೆ ಸತತ 12ನೇ ಟಿ20 ಸರಣಿ ಜಯವಾಗಿದ್ದು, ವಿಶ್ವದಾಖಲೆಯನ್ನು ಸರಿಗಟ್ಟಲಿದೆ.
ಇಶಾನ್ ಕಿಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಶನಿವಾರ ಪಂದ್ಯ ಮುಗಿದ ನಂತರ ಇಶಾನ್ ಕಿಶನ್ ಅವರನ್ನು ಕಾಂಗ್ರಾದ ಫೋರ್ಟಿಸ್ ಆಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆಗಾಗಿ ಶ್ರೀಲಂಕಾ ಆಟಗಾರ ದಿನೇಶ್ ಚಾಂಡಿಮಾಲ್ ಅವರನ್ನೂ ಕರೆತರಲಾಗಿತ್ತು. ಚಾಂಡಿಮಾಲ್ ಅವರ ಹೆಬ್ಬೆರಳಿಗೆ ಸಣ್ಣ ಗಾಯವಾಗಿದ್ದು, ಚಿಕಿತ್ಸೆ ನೀಡಿ ವಾಪಸ್ ಕಳುಹಿಸಲಾಗಿತ್ತು. ಆದರೆ, ಇಶಾನ್ ಕಿಶನ್ ಅವರನ್ನು ಆಸ್ಪತ್ರೆಯ ವಿಶೇಷ ವಾರ್ಡ್ಗೆ ದಾಖಲಿಸಲಾಗಿತ್ತು. ಆದರೆ, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಅವರು ಮೂರನೇ ಟಿ20ಯಲ್ಲಿ ಆಡುವ ಬಗ್ಗೆ ಇನ್ನೂ ಸಸ್ಪೆನ್ಸ್ ಉಳಿದಿದೆ.
ಇಶಾನ್ ಗಾಯಗೊಂಡಿದ್ದು ಹೀಗೆ
ಎರಡನೇ ಟಿ20 ಪಂದ್ಯದ ವೇಳೆ ಹೆಲ್ಮೆಟ್‌ಗೆ ಚೆಂಡು ತಗುಲಿ ಇಶಾನ್ ಕಿಶನ್ ಗಾಯಗೊಂಡಿದ್ದರು. ಭಾರತದ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ಶ್ರೀಲಂಕಾದ ವೇಗಿ ಲಹಿರು ಕುಮಾರ ಈ ಓವರ್‌ನ ಎರಡನೇ ಎಸೆತವನ್ನು ವೇಗದ ಬೌನ್ಸರ್ ಮೂಲಕ ಬೌಲ್ ಮಾಡಿದರು. ಈ ಚೆಂಡಿನ ವೇಗ ಗಂಟೆಗೆ 146 ಕಿಲೋಮೀಟರ್ ಆಗಿತ್ತು. ಇಷ್ಟು ವೇಗದಲ್ಲಿ ಬೌನ್ಸರ್ ಆಡುವುದನ್ನ ಇಶಾನ್ ತಪ್ಪಿಸಿದರು.ಚೆಂಡು ನೇರವಾಗಿ ಕಿಶನ್ ಹೆಲ್ಮೆಟ್‌ಗೆ ಬಡಿಯಿತು. ಚೆಂಡು ಬಡಿದ ಬಳಿಕ ಇಶಾನ್ ಕಣ್ಣೆದುರು ಕತ್ತಲು ಆವರಿಸಿ ಮೈದಾನದಲ್ಲಿ ಸ್ವಲ್ಪ ಹೊತ್ತು ಕುಳಿತರು. ಈ ವೇಳೆ ಶ್ರೀಲಂಕಾ ಆಟಗಾರರು ಸಹ ಅವರ ನೆರವಿಗೆ ಬಂದರು. ಕೂಡಲೇ ಭಾರತದ ಫಿಸಿಯೋ ಮೈದಾನಕ್ಕೆ ಬಂದು ಇಶಾನ್ ಅವರನ್ನು ಪರೀಕ್ಷಿಸಿದರು, ನಂತರ ಅವರು ಮತ್ತೆ ಬ್ಯಾಟಿಂಗ್ ಮುಂದುವರೆಸಿದ್ದರು.
ಇದನ್ನೂ ಓದಿ:ದುರಂತ ಅಂತ್ಯ: ಮಾರಕ ಬೌನ್ಸರ್, ಹೃದಯಾಘಾತದಿಂದ ಪ್ರಾಣ ಕಳೆದುಕೊಂಡ ಐವರು ಕ್ರಿಕೆಟಿಗರಿವರು