GT vs RCB: ಆರ್​ಸಿಬಿ ಪ್ಲೇಯಿಂಗ್ XIಗೆ ಹೊಸ ಆಟಗಾರ ಎಂಟ್ರಿ: ಓಪನಿಂಗ್​ನಲ್ಲಿ ಮತ್ತೆ ಬದಲಾವಣೆ

Predicted Playing XI GT vs RCB: ಐಪಿಎಲ್​ನಲ್ಲಿಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಮತ್ತು ಪಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿ ಆಗಲಿದೆ. ಹಾಗಾದ್ರೆ ಆರ್​ಸಿಬಿಯ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದನ್ನು ನೋಡೋಣ.

GT vs RCB: ಆರ್​ಸಿಬಿ ಪ್ಲೇಯಿಂಗ್ XIಗೆ ಹೊಸ ಆಟಗಾರ ಎಂಟ್ರಿ: ಓಪನಿಂಗ್​ನಲ್ಲಿ ಮತ್ತೆ ಬದಲಾವಣೆ
RCB Playing XI vs GT IPL 2022
Follow us
TV9 Web
| Updated By: Vinay Bhat

Updated on: Apr 30, 2022 | 10:30 AM

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು ದಬಲ್ ಧಮಾಕ. ಒಟ್ಟು ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಬ್ರಬೌರ್ನ್​​ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಮತ್ತು ಪಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (GT vs RCB) ತಂಡಗಳು ಮುಖಾಮುಖಿ ಆಗಲಿದೆ. ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್​​ ಅಕಾಡೆಮಿಯಲ್ಲಿ ಜರುಗಲಿರುವ ದ್ವಿತೀಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕನಾಗಿರುವ ರಾಜಸ್ಥಾನ್ ರಾಯಲ್ಸ್​ ತಂಡವನ್ನು ಬರ್ತ್​ ಡೇ ಬಾಯ್ ರೋಹಿತ್ ಶರ್ಮಾ ಅವರ ಮುಂಬೈ ಇಂಡಿಯನ್ಸ್ (RR vs MI) ಎದುರಲಿಸಲಿದೆ. ಇದರಲ್ಲಿ ಆರ್​ಆರ್​​ ಹಾಗೂ ಜಿಟಿ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದರೆ ಇತ್ತ ಆರ್​ಸಿಬಿ ಸೋಲಿನಿಂದ ಹೊರಬರಬೇಕಾದ ಒತ್ತಡದಲ್ಲಿದೆ. ಈ ಪಂದ್ಯವನ್ನೂ ಬೆಂಗಳೂರು ಸೋತರೆ ಮುಂದಿನ ಹಾದಿ ಕಷ್ಟವಾಗಿರಲಿದೆ. ಇತ್ತ ಇದುವರೆಗೆ ಗೆಲುವಿನ ಮುಖವನ್ನೇ ನೋಡದ ಮುಂಬೈ ಈ ಪಂದ್ಯ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಇಂದು ರೋಹಿತ್ ಶರ್ಮಾ (Rohit Sharma) ಹುಟ್ಟುಹಬ್ಬವಾಗಿದ್ದು ಈ ಶುಭದಿನದಂದು ಗೆಲುವಿನ ಲಯಕ್ಕೆ ಮರಳುತ್ತಾ ನೋಡಬೇಕಿದೆ.

ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಆರ್ ಸಿಬಿಗೆ ಇನ್ನುಳಿದಿರೋದು ಕೇವಲ 5 ಪಂದ್ಯಗಳು ಮಾತ್ರ. ಬೆಂಗಳೂರು ತಂಡ ಪ್ಲೇ ಆಫ್ಸ್ ಪ್ರವೇಶಿಸಬೇಕು ಅಂದ್ರೆ ಈ ಐದು ಪಂದ್ಯಗಳಲ್ಲಿ ಕನಿಷ್ಠ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಲೇಬೇಕು. ಆರ್​ಸಿಬಿಗೆ ಮೊದಲಾರ್ಧ ಹಾಗೂ ದ್ವಿತೀಯಾರ್ಧದಲ್ಲಿ ಕಾಡುತ್ತಿರುವ ಸಮಸ್ಯೆ ಓಪನರ್ಸ್​. ಒಂದೆರೆಡು ಪಂದ್ಯಗಳಲ್ಲಿ ಬಿಟ್ಟರೆ, ಯಾವೊಂದು ಪಂದ್ಯದಲ್ಲೂ ಆರಂಭಿಕರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಕಳೆದ ಪಂದ್ಯದಲ್ಲಿ ಸ್ವತಃ ಕೊಹ್ಲಿ ಹಾಗೂ ಫಾಫ್ ಡುಪ್ಲಿಸಿಯೇ ಇನ್ನಿಂಗ್ಸ್​ ಆರಂಭಿಸಿದರೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.

ಟೂರ್ನಿಯಲ್ಲಿ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 128 ರನ್ ಮಾತ್ರ ಗಳಿಸಿರುವ ವಿರಾಟ್ ಕೊಹ್ಲಿ ಅವರ ಫಾರ್ಮ್ ಆರ್‌ಸಿಬಿ ತಂಡಕ್ಕೆ ಕಳವಳ ಮೂಡಿಸಿದೆ. ಇದುವರೆಗೆ ಒಂದೂ ಅರ್ಧಶತಕ ಬಾರಿಸದಿರುವ ಕೊಹ್ಲಿ, 48 ರನ್ ಗಳಿಸಿದ್ದೇ ಗರಿಷ್ಠವೆನಿಸಿದೆ. ಇದಲ್ಲದೆ 2 ಬಾರಿ ಶೂನ್ಯ ಸುತ್ತಿದ್ದಾರೆ. ಮ್ಯಾಕ್ಸ್​​ ವೆಲ್​​ ವೈಫಲ್ಯ ಮಿಡಲ್​​ ಆರ್ಡರ್​​ಗೆ ಸಮಸ್ಯೆ ತಂದಿದೆ. ರಜತ್​​ ಪಾಟಿದಾರ್​​ ಹಾಗೂ ಸುಯೇಶ್​ ಪ್ರಭುದೇಸಾಯಿ ಕಡೆಯಿಂದ ತಂಡಕ್ಕೆ ಯಾವುದೇ ಕಾಣಿಕೆ ಸಿಗುತ್ತಿಲ್ಲ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರನ್ನು ಹೊರಗಿಟ್ಟು ಹೊಸ ಆಟಗಾರ ಮಹಿಪಾಲ್​​ ಲೊಮ್ರೊರ್​ಗೆ ಅವಕಾಶ ಮಾಡಿಕೊಡುವುದು ಬಹುತೇಕ ಖಚಿತ. ಅಲ್ಲದೆ ಇವರು ಓಪನರ್ ಆಗಿ ಕಣಕ್ಕಿಳಿದರೆ ಅಚ್ಚರಿ ಪಡಬೇಕಿಲ್ಲ. ದಿನೇಶ್​ ಕಾರ್ತಿಕ್​​ ಮತ್ತು ಶಹಬಾಜ್​ ಅಹ್ಮದ್​​ ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದಾರೆ.

ಆರ್​​ಸಿಬಿ ಬೌಲಿಂಗ್​ ಕೂಡ ಸಂಘಟಿತವಾಗಿಲ್ಲ. ಹರ್ಷಲ್​​ ಪಟೇಲ್​​ ವಿಕೆಟ್​​ ಕಬಳಿಸುತ್ತಿಲ್ಲ. ಜೋಶ್​​ ಹ್ಯಾಜಲ್​​ವುಡ್​​ ಒತ್ತಡ ಹಾಕುತ್ತಿದ್ದರೂ ಮೊಹಮ್ಮದ್​​ ಸಿರಾಜ್​​ ರನ್​​ ಲೀಕ್​​ ಮಾಡುತ್ತಿದ್ದಾರೆ. ವನಿಂದು ಹಸರಂಗ ವಿಕೆಟ್​​ ಪಡೆದರೆ ಪಡೆದರು ಇಲ್ಲದಿದ್ದರೆ ದುಬಾರಿ ಅನ್ನುವ ಹಾಗಾಗಿದೆ. ಗ್ಲೆನ್​​ ಮ್ಯಾಕ್ಸ್​​ ವೆಲ್​ ಮತ್ತು ಶಹಬಾಸ್​ ಅಹ್ಮದ್​​ ಟೈಟ್​​ ಬೌಲಿಂಗ್​​ ಮಾಡಿದರೂ ವಿಕೆಟ್​​ ಸಿಗುತ್ತಿಲ್ಲ.

ಇತ್ತ ಸತತ 4 ಗೆಲುವಿನ ಲಯದಲ್ಲಿರುವ ಟೈಟಾನ್ಸ್ ತಂಡದ 11ರ ಬಳಗ ಬಲಿಷ್ಠವಾಗಿಯೇ ಇದೆ. ಆದರೂ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಲಾಕಿ ರ್ಗ್ಯುಸನ್ ಬದಲಿಗೆ ವಿಂಡೀಸ್ ಆಲ್ರೌಂಡರ್ ಡೊಮಿನಿಕ್ ಡ್ರೇಕ್ಸ್, ವರುಣ್ ಆರನ್ ಅಥವಾ ಪ್ರದೀಪ್ ಸಂಗ್ವಾನ್‌ಗೆ ಅವಕಾಶ ನೀಡುವ ಚಿಂತನೆ ನಡೆಸಬಹುದು. ಶುಭ್ಮನ್​​ ಗಿಲ್​​​ ಇತ್ತೀಚಿನ ಪಂದ್ಯಗಳಲ್ಲಿ ವೈಫಲ್ಯ ಕಂಡರೂ, ವೃದ್ಧಿಮಾನ್​​ ಸಾಹಾ ಮಿಂಚಿದ್ದಾರೆ. ಹಾರ್ದಿಕ್​​ ಪಾಂಡ್ಯಾ, ಡೇವಿಡ್​​ ಮಿಲ್ಲರ್​​ ಮತ್ತು ರಾಹುಲ್​​ ತೇವಾಟಿಯಾ ಬ್ಯಾಟಿಂಗ್​​ ನಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ರಶೀದ್​ ಖಾನ್​​ ಅಬ್ಬರದ ಆಟದ ಮೂಲಕ ಸೋಲುತ್ತಿದ್ದ ಪಂದ್ಯಗಳನ್ನು ಗೆಲ್ಲಿಸಿದ್ದು ಒಟ್ಟಾರೆ ಜಿಟಿ ಬಲಿಷ್ಠದಿಂದ ಕೂಡಿದೆ.

ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ XI: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್​​ ಲೊಮ್ರೊರ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್​​ ಹ್ಯಾಜಲ್​​ವುಡ್, ಮೊಹಮ್ಮದ್ ಸಿರಾಜ್.

KL Rahul: ಗೆದ್ದರೂ ಸಿಟ್ಟಾದ ಕೆಎಲ್ ರಾಹುಲ್: ಪಂದ್ಯ ಮುಗಿದ ಬಳಿಕ ಏನಂದ್ರು ಕೇಳಿ

PBKS vs LSG: ಲಖನೌ ಬೌಲರ್​ಗಳ ಕಠಿಣ ಶ್ರಮಕ್ಕೆ ಸಿಕ್ಕ ಫಲ: ರಾಹುಲ್ ಪಡೆಯ ಪ್ಲೇ ಆಫ್ ಹಾದಿ ಕೊಂಚ ಸುಗಮ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್