AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PBKS vs LSG: ಲಖನೌ ಬೌಲರ್​ಗಳ ಕಠಿಣ ಶ್ರಮಕ್ಕೆ ಸಿಕ್ಕ ಫಲ: ರಾಹುಲ್ ಪಡೆಯ ಪ್ಲೇ ಆಫ್ ಹಾದಿ ಕೊಂಚ ಸುಗಮ

Krunal Pandya, IPL 2022: ಮಯಾಂಕ್ ಪಡೆಗೆ ಸಾಧಾರಣ ಟಾರ್ಗೆಟ್ ನೀಡಿದ್ದರೂ ಅದನ್ನು ತಡೆಗಟ್ಟುವಲ್ಲಿ ಲಖನೌ ಬೌಲರ್​ಗಳು ಯಶಸ್ವಿಯಾದು. ಮೋಸಿನ್ ಖಾನ್, ದುಶ್ಮಂತ ಚಮೀರ ಹಾಗೂ ಕ್ರುನಾಲ್ ಪಾಂಡ್ಯ ಕಠಿಣ ಬೌಲಿಂಗ್ ಮುಂದೆ ಪಂಜಾಬ್ ಗುರಿ ಬೆನ್ನಟ್ಟಲು ಸಾಧ್ಯವಾಗದೆ ಸೋಲಿಗೆ ಶರಣಾಯಿತು.

PBKS vs LSG: ಲಖನೌ ಬೌಲರ್​ಗಳ ಕಠಿಣ ಶ್ರಮಕ್ಕೆ ಸಿಕ್ಕ ಫಲ: ರಾಹುಲ್ ಪಡೆಯ ಪ್ಲೇ ಆಫ್ ಹಾದಿ ಕೊಂಚ ಸುಗಮ
PBKS vs LSG IPL 2022
TV9 Web
| Edited By: |

Updated on: Apr 30, 2022 | 7:50 AM

Share

2022 ಇಂಡಿಯನ್ ಪ್ರೀಮಿಯರ್ ಲೀಗ್​ನ ಹೊಸ ತಂಡವಾದ ಕೆಎಲ್ ರಾಹುಲ್ (KL Rahul) ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಪಂದ್ಯದಿಂದ ಪಂದ್ಯಕ್ಕೆ ತಂಡದ ಆಟಗಾರರು ತಪ್ಪುಗಳನ್ನು ತಿದ್ದಿ ಬಲಿಷ್ಠರಾಗುತ್ತಿದ್ದಾರೆ. ಬ್ಯಾಟ್ಸ್​ಮನ್​ಗಳು ಕೈಕೊಟ್ಟರೆ ಬೌಲರ್​​ಗಳೂ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಐಪಿಎಲ್​ನಲ್ಲಿ (IPL) ಶುಕ್ರವಾರ ನಡೆದ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯ. ಮಯಾಂಕ್ ಪಡೆಗೆ ಸಾಧಾರಣ ಟಾರ್ಗೆಟ್ ನೀಡಿದ್ದರೂ ಅದನ್ನು ತಡೆಗಟ್ಟುವಲ್ಲಿ ಲಖನೌ ಬೌಲರ್​ಗಳು ಯಶಸ್ವಿಯಾದು. ಮೋಸಿನ್ ಖಾನ್, ದುಶ್ಮಂತ ಚಮೀರ ಹಾಗೂ ಕ್ರುನಾಲ್ ಪಾಂಡ್ಯ (Krunal Pandya) ಕಠಿಣ ಬೌಲಿಂಗ್ ಮುಂದೆ ಪಂಜಾಬ್ ಗುರಿ ಬೆನ್ನಟ್ಟಲು ಸಾಧ್ಯವಾಗದೆ ಸೋಲಿಗೆ ಶರಣಾಯಿತು. ಈ ಜಯದೊಂದಿಗೆ ಲಖನೌ ಆಡಿದ ಒಂಬತ್ತು ಪಂದ್ಯಗಳಲ್ಲಿ ಆರರಲ್ಲಿ ಗೆಲುವು ಒಂದರಲ್ಲಿ ಸೋಲು ಕಂಡು 12 ಅಂಕದೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೂಪರ್ ಜೈಂಟ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 11 ಎಸೆತಗಳಲ್ಲಿ 6 ರನ್ ಕಲೆಹಾಕಿ ಔಟ್ ಆದರು. ಈ ಮೂಲಕ ಲಖನೌ 13 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಆದರೆ, ರಾಹುಲ್ ಜೊತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಮತ್ತೋರ್ವ ಆಟಗಾರ ಕ್ವಿಂಟನ್ ಡಿ ಕಾಕ್ ಹಾಗೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ ಉತ್ತಮ ಜೊತೆಯಾಟ ಆಡಿದರು.

ಡಿಕಾಕ್-ಹೂಡ ಜೋಡಿ 85 ರನ್‌ಗಳ ಜತೆಯಾಟವಾಡಿದರು. ಕ್ವಿಂಟನ್ ಡಿ ಕಾಕ್ 46 ರನ್ ಗಳಿಸಿ ಔಟ್ ಆದರೆ, ದೀಪಕ್ ಹೂಡಾ 34 ರನ್ ಗಳಿಸಿ ರನ್‌ಔಟ್ ಆದರು. ಇನ್ನುಳಿದಂತೆ ಕೃನಾಲ್ ಪಾಂಡ್ಯ 7 ರನ್, ಮಾರ್ಕಸ್ ಸ್ಟಾಯಿನಿಸ್ 1 ರನ್, ಆಯುಷ್ ಬದೋನಿ 4 ರನ್, ಜೇಸನ್ ಹೋಲ್ಡರ್ 11 ರನ್, ದುಷ್ಮಂತ ಚಮೀರ 17 ರನ್ ಕಲೆಹಾಕಿದರೆ, ಮೊಹ್ಸಿನ್ ಖಾನ್ ಅಜೇಯ 13 ರನ್ ಹಾಗೂ ಅವೇಶ್ ಖಾನ್ ಅಜೇಯ 2 ರನ್ ದಾಖಲಿಸಿದರು. ಕೊನೆಯ ಹಂತದಲ್ಲಿ ಲಖನೌ ಪರ ಯಾರೂ ದೊಡ್ಡ ಮೊತ್ತ ಕಲೆಹಾಕದ ಕಾರಣ 20 ಓವರ್​ಗೆ 8 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಪಂಜಾಬ್ ಪರ ಕಗಿಸೊ ರಬಾಡ 4 ವಿಕೆಟ್ ಹಾಗೂ ರಾಹುಲ್ ಚಹರ್ 2 ವಿಕೆಟ್ ಪಡೆದರು.

ಇತ್ತ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಆರಂಭ ಉತ್ತಮವಾಗಿರಲಿಲ್ಲ. ತಂಡವು 46 ರನ್ ಗಳಿಸುವಷ್ಟರಲ್ಲಿ ನಾಯಕ ಮಯಂಕ್ ಅಗರವಾಲ್ (25) ಹಾಗೂ ಶಿಖರ್ ಧವನ್ (5) ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾನುಕ ರಾಜಪಕ್ಸ (9) ಅವರಿಗೂ ಪ್ರಭಾವಿ ಎನಿಸಿಕೊಳ್ಳಲಾಗಲಿಲ್ಲ. ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 87 ರನ್ ಬೇಕಾಗಿತ್ತು. ಇಲ್ಲಿಂದ ಬಳಿಕವೂ ಪಂಜಾಬ್ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಲಖನೌ ಬೌಲರ್​​ಗಳು ರನ್​ಗೆ ಕಡಿವಾಣ ಹಾಕುವುದರ ಜೊತೆಗೆ ವಿಕೆಟ್​ಗಳನ್ನೂ ಕಿತ್ತರು. ಲಿಯಾಮ್ ಲಿವಿಂಗ್‌ಸ್ಟೋನ್ (18) ಹಾಗೂ ಜಾನಿ ಬೆಸ್ಟೊ (32) ವಿಕೆಟ್ ಪತನದೊಂದಿಗೆ ಗೆಲುವಿನ ಆಸೆ ಕಮರಿತು.

ಅಂತಿಮವಾಗಿ 133 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ರಿಷಿ ಧವನ್ 21 ರನ್ ಗಳಿಸಿ ಔಟಾಗದೆ ಉಳಿದರು. ಇನ್ನುಳಿದಂತೆ ಜಿತೇಶ್ ಶರ್ಮಾ (2), ಕಗಿಸೊ ರಬಾಡ (2), ರಾಹುಲ್ ಚಾಹರ್ (4) ನಿರಾಸೆ ಮೂಡಿಸಿದರು. ಲಖನೌ ಪರ 24 ರನ್ ತೆತ್ತು ಮೂರು ವಿಕೆಟ್ ಕಬಳಿಸಿದ ಮೊಹಸಿನ್ ಮಿಂಚಿದರು. ಕ್ರುನಾಲ್ ಪಾಂಡ್ಯ 11 ರನ್ನಿಗೆ ಎರಡು ವಿಕೆಟ್ ಪಡೆದರು. ಚಮೀರ ಸಹ ಎರಡು ವಿಕೆಟ್ ಗಳಿಸಿದರು. ಪಾಂಡ್ಯ ಪಂದ್ಯಶ್ರೇಷ್ಠ ಬಾಜಿಕೊಂಡರು.

GT vs RCB Prediction Playing XI: ಸೋಲಿನ ಸುಳಿಯಲ್ಲಿರುವ ಆರ್​ಸಿಬಿಯಲ್ಲಿ ಬದಲಾವಣೆ ಖಚಿತ! ಕೊಹ್ಲಿಗೆ ಕೋಕ್?

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ