AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಚೇರಿಯಲ್ಲಿ ಸುಳ್ಳು ಹೇಳಿ ಐಪಿಎಲ್​​ಗೆ ಹೋದ ಆರ್​ಸಿಬಿ ಅಭಿಮಾನಿ; ಟಿವಿಯಲ್ಲಿ ಮ್ಯಾಚ್ ನೋಡಿದ ಬಾಸ್​ಗೆ ಶಾಕ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖ್ನೋ ಸೂಪರ್ ಜೈಂಟ್ಸ್ ಪಂದ್ಯ ಇತ್ತೀಚೆಗೆ ನಡೆದಿತ್ತು. ಈ ಪಂದ್ಯ ನೋಡಲು ನೇಹಾ ದ್ವಿವೇದಿ ಎಂಬ ಯುವತಿ ಟಿಕೆಟ್ ಖರೀಸಿದಿದ್ದರು. ಬಾಸ್​ಗೆ ಸುಳ್ಳು ಕಾರಣ ಹೇಳಿ ಅವರು ಸ್ಟೇಡಿಯಂ ಹೋಗಿದ್ದರು. ಆದರೆ, ಬಾಸ್​ಗೆ ಅವರು ಟಿವಿ ಕ್ಯಾಮೆರಾದಲ್ಲಿ ಕಾಣಿಸಿದ್ದರು.

ಕಚೇರಿಯಲ್ಲಿ ಸುಳ್ಳು ಹೇಳಿ ಐಪಿಎಲ್​​ಗೆ ಹೋದ ಆರ್​ಸಿಬಿ ಅಭಿಮಾನಿ; ಟಿವಿಯಲ್ಲಿ ಮ್ಯಾಚ್ ನೋಡಿದ ಬಾಸ್​ಗೆ ಶಾಕ್
ಐಪಿಎಲ್
ರಾಜೇಶ್ ದುಗ್ಗುಮನೆ
|

Updated on:Apr 10, 2024 | 10:45 AM

Share

ಅನಾರೋಗ್ಯದ ಕಾರಣ ನೀಡಿ ಕಚೇರಿಗೆ ಚಕ್ಕರ್ ಹಾಕುವವರು ಅನೇಕರಿದ್ದಾರೆ. ಈ ರೀತಿಯ ಸಂದರ್ಭಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಅಪ್ಪಿ ತಪ್ಪಿ ಬಾಸ್​ ಕೈಗೆ ಸಿಕ್ಕರೆ ಕಥೆ ಮುಗಿದಂತೆ. ಅದೇ ರೀತಿ ಯುವತಿಯೊಬ್ಬರು ಕುಟುಂಬದಲ್ಲಿ ಎಮರ್ಜೆನ್ಸಿ ಆಗಿದೆ ಎಂದು ಹೇಳಿ ಕಚೇರಿಯಿಂದ ಮನೆಗೆ ಹೋಗಿದ್ದರು. ಅಸಲಿಗೆ ಮನೆಯಲ್ಲಿ ಯಾರಿಗೆ ಏನೂ ಆಗಿರಲಿಲ್ಲ. ಅವರು ಐಪಿಎಲ್ (IPL) ನೋಡೋಕೆ ಹೋಗಿದ್ದರು. ಅವರ ದುರಾದೃಷ್ಟ ಎಂದರೆ ಟಿವಿಯಲ್ಲಿ ಅವರು ಬಾಸ್ ಕಣ್ಣಿಗೆ ಬಿದ್ದಿದ್ದರು. ಹೀಗೋಂದು ಮಜವಾದ ಪ್ರಸಂಗ ಇತ್ತೀಚೆಗೆ ನಡೆದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖ್ನೋ ಸೂಪರ್ ಜೈಂಟ್ಸ್ ಪಂದ್ಯ ಇತ್ತೀಚೆಗೆ ನಡೆದಿತ್ತು. ಈ ಪಂದ್ಯ ನೋಡಲು ನೇಹಾ ದ್ವಿವೇದಿ ಎಂಬ ಯುವತಿ ಟಿಕೆಟ್ ಖರೀಸಿದಿದ್ದರು. ಬಾಸ್​ಗೆ ಸುಳ್ಳು ಕಾರಣ ಹೇಳಿ ಅವರು ಸ್ಟೇಡಿಯಂ ಹೋಗಿದ್ದರು. ಆದರೆ, ಬಾಸ್​ಗೆ ಅವರು ಟಿವಿ ಕ್ಯಾಮೆರಾದಲ್ಲಿ ಕಾಣಿಸಿದ್ದರು. ಇದರಿಂದ ಅವರ ರಜೆಗೆ ಅಸಲಿ ಕಾರಣ ಸಿಕ್ಕಿದೆ.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹಿಸ್ಟರಿ ಬರೆದ ಹಿಟ್​ಮ್ಯಾನ್

ಪಂದ್ಯ ಮುಗಿದ ಬಳಿಕ ಬಾಸ್ ಕಡೆಯಿಂದ ನೇಹಾಗೆ ಸಂದೇಶ ಬಂದಿದೆ. ‘ನೀವು ಆರ್​ಸಿಬಿ ಅಭಿಮಾನಿಯೇ’ ಎಂದು ಕೇಳಲಾಯಿತು. ಇದಕ್ಕೆ ನೇಹಾ ಹೌದು ಎಂದು ಉತ್ತರಿಸಿದ್ದು ಅಲ್ಲದೆ, ಏಕೆ ಎಂದು ಪ್ರಶ್ನಿಸಿದ್ದರು. ‘ನಾನು ನಿಮ್ಮನ್ನು ಟಿವಿಯಲ್ಲಿ ನೋಡಿದೆ. ಕ್ಯಾಚ್ ಬಿಟ್ಟಾಗ ನೀವು ಬೇಸರದಲ್ಲಿ ಕಾಣಿಸಿಕೊಂಡಿರಿ’ ಎಂದಿದ್ದಾರೆ ಬಾಸ್. ಇದನ್ನು ಕೇಳಿ ನೇಹಾಗೆ ಒಂದು ಕ್ಷಣ ಶಾಕ್ ಆಗಿದೆ. ಆದರೆ, ಬಾಸ್ ಇದನ್ನು ಹೆಚ್ಚು ಗಂಭೀರವಾಗಿ ಸ್ವೀಕರಿಸಿಲ್ಲ ಅನ್ನೋದು ಖುಷಿಯ ವಿಚಾರ.

ಸದ್ಯ ಈ ಪೋಸ್ಟ್​ಗೆ 8 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಈ ರೀಲ್ಸ್ ನೋಡಿದ್ದಾರೆ. ‘ಮ್ಯಾನೇಜರ್ ಸಾಹೇಬ್ರೇ ನೀವು ಕಚೇರಿಯಲ್ಲಿ ಮ್ಯಾಚ್ ನೋಡ್ತಿದ್ರಾ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ದೊಡ್ಡ ಬ್ಯಾಡ್ ಲಕ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಎಲ್ಲರಿಗೂ ಕ್ಯಾಮೆರಾಗೆ ಕಾಣಿಸಿಕೊಳ್ಳಬೇಕು ಎಂದಿರುತ್ತದೆ. ನಿಮಗೆ ಹಾಗೆ ಇರಲಿಲ್ಲ. ಆದರೂ ಕ್ಯಾಮೆರಾ ನಿಮ್ಮನ್ನು ಹುಡುಕಿ ಬಂದಿದೆ. ಎಂತಹ ದುರಾದೃಷ್ಟ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:43 am, Wed, 10 April 24

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ