ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನಲ್ಲಿ ಜೇಕಬ್ ಬೆಥೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದೇ ಮೊದಲ ಬಾರಿಗೆ ಬಿಬಿಎಲ್ ಟೂರ್ನಿ ಆಡುತ್ತಿರುವ ಬೆಥೆಲ್, ಹೊಬಾರ್ಟ್ ಹರಿಕೇನ್ಸ್ ವಿರುದ್ಧ ಚೊಚ್ಚಲ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಬೆಲ್ಗೆರಿವ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಹೊಬಾರ್ಟ್ ಹರಿಕೇನ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಟಾಸ್ ಗೆದ್ದ ಹೊಬಾರ್ಟ್ ಹರಿಕೇನ್ಸ್ ತಂಡದ ನಾಯಕ ನಾಥನ್ ಎಲ್ಲಿಸ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಮೆಲ್ಬೋರ್ನ್ ರೆನೆಗೇಡ್ಸ್ ಉತ್ತಮ ಆರಂಭ ಪಡೆದಿರಲಿಲ್ಲ.
ರೆನೆಗೇಡ್ಸ್ ತಂಡವು 23 ರನ್ಗಳುಸುವಷ್ಟರಲ್ಲಿ ಟಾಪ್-3 ಬ್ಯಾಟರ್ಗಳು ಪೆವಿಲಿಯನ್ಗೆ ಮರಳಿದ್ದರು. ಈ ಹಂತದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೇಕಬ್ ಬೆಥೆಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ಎಚ್ಚರಿಕೆಗೆ ಬ್ಯಾಟಿಂಗ್ಗೆ ಒತ್ತು ನೀಡಿದ ಬೆಥೆಲ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಇದಾದ ಬಳಿಕ ಸಿಡಿಲಬ್ಬರದ ಶುರು ಮಾಡಿದ ಜೇಕಬ್ ಬೆಥೆಲ್ ಹೋಬಾರ್ಟ್ ಹರಿಕೇನ್ಸ್ ಬೌಲರ್ಗಳ ಬೆಂಡೆತ್ತಲು ಪ್ರಾರಂಭಿಸಿದರು. ಪರಿಣಾಮ ಬೆಥೆಲ್ ಬ್ಯಾಟ್ನಿಂದ 4 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳು ಮೂಡಿಬಂದವು. ಈ ಫೋರ್-ಸಿಕ್ಸ್ಗಳೊಂದಿಗೆ ಜೇಕಬ್ ಬೆಥೆಲ್ 50 ಎಸೆತಗಳಲ್ಲಿ 87 ರನ್ ಬಾರಿಸಿ ಔಟಾದರು.
Jacob Bethell kept the game alive for the Renegades in Hobart.
87 off 50 to go along with 12 huge boundaries! 🔥 #BBL14 pic.twitter.com/5IMjdCI8G5
— KFC Big Bash League (@BBL) January 14, 2025
ಇನ್ನು ಜೇಕಬ್ ಬೆಥೆಲ್ ಅವರ ಈ ಅರ್ಧಶತಕದ ನೆರವಿನಿಂದ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು 20 ಓವರ್ಗಳಲ್ಲಿ 154 ರನ್ ಕಲೆಹಾಕಿತು. 155 ರನ್ಗಳ ಗುರಿ ಬೆನ್ನತ್ತಿದ ಹೋಬಾರ್ಟ್ ಹರಿಕೇನ್ಸ್ ತಂಡವು 19.4 ಓವರ್ಗಳಲ್ಲಿ 155 ರನ್ ಬಾರಿಸಿ 6 ವಿಕೆಟ್ಗಳ ಜಯ ಸಾಧಿಸಿತು.
ಈ ಸೋಲಿನ ಹೊರತಾಗಿಯೂ ಮೆಲ್ಬೋರ್ನ್ ರೆನೆಗೇಡ್ಸ್ ಪರ ದಿಟ್ಟ ಪ್ರದರ್ಶನ ನೀಡಿದ 21 ವರ್ಷ ಜೇಕಬ್ ಬೆಥೆಲ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಅಂದಹಾಗೆ ಬೆಥೆಲ್ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರೆ.
ಇಂಗ್ಲೆಂಡ್ ತಂಡದ ಭರವಸೆಯ ಯುವ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಜೇಕಬ್ ಬೆಥೆಲ್ ಭರ್ಜರಿ ಫಾರ್ಮ್ನಲ್ಲಿದ್ದು, ಇದೇ ಲಯದೊಂದಿಗೆ ಐಪಿಎಲ್ನಲ್ಲೂ ಅಬ್ಬರಿಸುವ ನಿರೀಕ್ಷೆಯಿದೆ.
ಹೊಬಾರ್ಟ್ ಹರಿಕೇನ್ಸ್ ಪ್ಲೇಯಿಂಗ್ 11: ಮಿಚೆಲ್ ಓವನ್ , ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್) , ಚಾರ್ಲಿ ವಕಿಮ್ , ನಿಖಿಲ್ ಚೌಧರಿ , ಕ್ಯಾಲೆಬ್ ಜ್ಯುವೆಲ್ , ಟಿಮ್ ಡೇವಿಡ್ , ಜೇಕ್ ಡೋರನ್ , ನಾಥನ್ ಎಲ್ಲಿಸ್ (ನಾಯಕ) , ಪೀಟರ್ ಹ್ಯಾಟ್ಜೋಗ್ಲೋ , ರಿಲೆ ಮೆರೆಡಿತ್ , ಬಿಲ್ಲಿ ಸ್ಟಾನ್ಲೇಕ್.
ಇದನ್ನೂ ಓದಿ: 7 ವರ್ಷಗಳ ಬಳಿಕ ರಣಜಿ ಪಂದ್ಯವಾಡಲು ಸಜ್ಜಾದ ಟೀಮ್ ಇಂಡಿಯಾ ಆಟಗಾರ
ಮೆಲ್ಬೋರ್ನ್ ರೆನೆಗೇಡ್ಸ್ ಪ್ಲೇಯಿಂಗ್ 11: ಜೋಶ್ ಬ್ರೌನ್ , ಮಾರ್ಕಸ್ ಹ್ಯಾರಿಸ್ , ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ , ಜಾಕೋಬ್ ಬೆಥೆಲ್ , ಟಿಮ್ ಸೀಫರ್ಟ್ (ವಿಕೆಟ್ ಕೀಪರ್) , ವಿಲ್ ಸದರ್ಲ್ಯಾಂಡ್ (ನಾಯಕ) , ಹ್ಯಾರಿ ಡಿಕ್ಸನ್ , ಥಾಮಸ್ ಸ್ಟೀವರ್ಟ್ ರೋಜರ್ಸ್ , ಫರ್ಗುಸ್ ಓ ನೀಲ್ , ಆಡಮ್ ಝಂಪಾ , ಕ್ಯಾಲಮ್ ಸ್ಟೋ.