RCB vs GT Highlights IPL 2023: ಗೆದ್ದ ಗುಜರಾತ್; ಪ್ಲೇ ಆಫ್​ನಿಂದ ಹೊರಬಿದ್ದ ಆರ್​ಸಿಬಿ

|

Updated on:May 22, 2023 | 2:32 AM

Royal challengers bangalore vs Gujarat Titans IPL 2023 Highlights in Kannada: ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೊನೆಯ ಲೀಗ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್ ತಂಡ ಆರ್​ಸಿಬಿಯ ಪ್ಲೇಆಫ್‌ ಕನಸಿಗೆ ನೀರೆರಚಿದೆ.

RCB vs GT Highlights IPL 2023: ಗೆದ್ದ ಗುಜರಾತ್; ಪ್ಲೇ ಆಫ್​ನಿಂದ ಹೊರಬಿದ್ದ ಆರ್​ಸಿಬಿ
ಆರ್​ಸಿಬಿ- ಗುಜರಾತ್ ಮುಖಾಮುಖಿ

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೊನೆಯ ಲೀಗ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್ ತಂಡ ಆರ್​ಸಿಬಿಯ ಪ್ಲೇಆಫ್‌ ಕನಸಿಗೆ ನೀರೆರಚಿದೆ. ಪ್ಲೇಆಫ್‌ಗೆ ಹೋಗಲು ಈ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ಗೆಲುವಿನ ಅಗತ್ಯವಿತ್ತು. ಆದರೆ ವಿರಾಟ್ ಕೊಹ್ಲಿ ಅವರ ಅಜೇಯ 101 ರನ್‌ಗಳ ಹೊರತಾಗಿಯೂ ಆರ್​ಸಿಬಿ ಸೋಲಿನ ಶಾಕ್​ಗೆ ಒಳಗಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಆರಂಭಿಕ ವಿರಾಟ್ ಕೊಹ್ಲಿಯವರ ಸತತ ಎರಡನೇ ಶತಕದ ನೆರವಿನಿಂದಾಗಿ 197 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾಜ್ ಗಿಲ್ ಅವರ ಶತಕದ ನೆರವಿನಿಂದಾಗಿ 20ನೇ ಓವರ್​ನಲ್ಲಿ ಗೆಲುವಿನ ನಗೆ ಬೀರಿತು. ಇದೊಂದು ಸೋಲಿನಿಂದಾಗಿ ಆರ್​ಸಿಬಿ ಪ್ಲೇ ಆಫ್​ನಿಂದ ಹೊರಬಿದ್ದರೆ, ಈ ಸೋಲಿನ ಲಾಭ ಪಡೆದ ಮುಂಬೈ ಸುಲಭವಾಗಿ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ.

LIVE NEWS & UPDATES

The liveblog has ended.
  • 22 May 2023 02:22 AM (IST)

    ಬೆಂಗಳೂರು ಔಟ್, ಮುಂಬೈ ಇನ್

    ಪ್ಲೇಆಫ್‌ಗೆ ಹೋಗಲು ಆರ್​ಸಿಬಿಗೆ ಈ ಪಂದ್ಯದಲ್ಲಿ ಗೆಲುವಿನ ಅಗತ್ಯವಿತ್ತು. ಆದರೆ ಗುಜರಾತ್ ಈ ಪಂದ್ಯದಲ್ಲಿ ಗೆದ್ದು ಬೀಗಿತು. ಇದರೊಂದಿಗೆ ಬೆಂಗಳೂರು ತಂಡ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿದೆ. ಈ ಸೋಲಿನ ಲಾಭವನ್ನು ಮುಂಬೈ ಇಂಡಿಯನ್ಸ್ ಪಡೆದುಕೊಂಡಿದ್ದು, ಪ್ಲೇಆಫ್ ತಲುಪಿದೆ.

  • 22 May 2023 02:21 AM (IST)

    ಗಿಲ್ ಶತಕ, ಗುಜರಾತ್ ಗೆಲುವು

    ಶುಭ್​ಮನ್ ಗಿಲ್ ಮತ್ತೊಂದು ಶತಕ ಬಾರಿಸಿದ್ದಾರೆ. ಇದು ಅವರ ಐಪಿಎಲ್‌ನಲ್ಲಿ ಎರಡನೇ ಶತಕವಾಗಿದೆ. ಕೊನೆಯ ಓವರ್‌ನಲ್ಲಿ ಮೊದಲ ಎಸೆತದಲ್ಲಿ ಗಿಲ್ ಶತಕ ಗಳಿಸಿದರು ಮತ್ತು ಇದರೊಂದಿಗೆ ಗುಜರಾತ್ ಆರು ವಿಕೆಟ್‌ಗಳಿಂದ ಬೆಂಗಳೂರು ತಂಡವನ್ನು ಸೋಲಿಸಿತು.

  • 21 May 2023 10:56 PM (IST)

    ಗುಜರಾತ್ ಅರ್ಧಶತಕ

    ಪರ್ನೆಲ್ ಬೌಲ್ ಮಾಡಿದ 5ನೇ ಓವರ್​ನಲ್ಲಿ ವಿಜಯ್ ಶಂಕರ್ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದರು.

    6 ಓವರ್ ಅಂತ್ಯಕ್ಕೆ 51/1

  • 21 May 2023 10:53 PM (IST)

    5 ಓವರ್ ಅಂತ್ಯ

    5 ಓವರ್ ಅಂತ್ಯಕ್ಕೆ ಗುಜರಾತ್ 35 ರನ್ ಬಾರಿಸಿದೆ

    ವೈಶಾಕ್ ಬೌಲ್ ಮಾಡಿದ ಈ ಓವರ್​ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ

    ಗುಜರಾತ್ 35/1

  • 21 May 2023 10:43 PM (IST)

    ಸಹಾ ಔಟ್

    ಸಿರಾಜ್ ಬೌಲ್ ಮಾಡಿದ 3ನೇ ಓವರ್​ನಲ್ಲಿ ಗುಜರಾತ್ ಮೊದಲ ವಿಕೆಟ್ ಪತನವಾಗಿದೆ.

    ಓವರ್​ನ 6ನೇ ಎಸೆತದಲ್ಲಿ ಸಹಾ ಕ್ಯಾಚಿತ್ತು ಔಟಾದರು

    ಗುಜರಾತ್ 25/1

  • 21 May 2023 10:35 PM (IST)

    ಸಹಾ ಬೌಂಡರಿ

    ಪರ್ನೆಲ್ ಬೌಲ್ ಮಾಡಿದ 2ನೇ ಓವರ್​ನಲ್ಲಿ ಸಹಾ ಡೀಪ್ ಬ್ಯಾಕ್​ವರ್ಡ್​ ಪಾಯಿಂಟ್​ನಲ್ಲಿ ಬೌಂಡರಿ ಬಾರಿಸಿದರು. ಕೊನೆಯ ಎಸೆತದಲ್ಲೂ ಬೌಂಡರಿ ಬಂತು.

  • 21 May 2023 10:30 PM (IST)

    ಗುಜರಾತ್ ಇನ್ನಿಂಗ್ಸ್ ಆರಂಭ

    ಗುಜರಾತ್ ಇನ್ನಿಂಗ್ಸ್ ಆರಂಭವಾಗಿದೆ

    ತಂಡದ ಪರ ಸಹಾ ಹಾಗೂ ಗಿಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ

    ಸಿರಾಜ್ ಬೌಲ್ ಮಾಡಿದ ಮೊದಲ ಓವರ್​ನಲ್ಲಿ 2 ರನ್ ಬಂದವು

  • 21 May 2023 10:17 PM (IST)

    ವಿರಾಟ್ ಕೊಹ್ಲಿ ಶತಕ

    ವಿರಾಟ್ ಕೊಹ್ಲಿ ಶತಕ ಪೂರೈಸಿದ್ದಾರೆ. 20 ನೇ ಓವರ್‌ನ ಮೊದಲ ಎಸೆತದಲ್ಲಿ ಕೊಹ್ಲಿ ಅವರು 61 ಎಸೆತಗಳಲ್ಲಿ ಒಂದು ರನ್ ಗಳಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

    ಈ ಬಾರಿಯ ಐಪಿಎಲ್‌ನಲ್ಲಿ ಕೊಹ್ಲಿ ಗಳಿಸಿದ ಸತತ ಎರಡನೇ ಶತಕ ಇದಾಗಿದೆ.

    ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

  • 21 May 2023 10:16 PM (IST)

    150 ರನ್‌ ಪೂರ್ಣ

    ಆರ್‌ಸಿಬಿಯ 150 ರನ್‌ಗಳು ಪೂರ್ಣಗೊಂಡಿವೆ. 17ನೇ ಓವರ್‌ನ ಮೊದಲ ಎಸೆತದಲ್ಲಿ ಕೊಹ್ಲಿ ಒಂದು ರನ್ ಗಳಿಸುವ ಮೂಲಕ ತಂಡದ 150 ರನ್‌ಗಳನ್ನು ಪೂರೈಸಿದರು.

  • 21 May 2023 10:16 PM (IST)

    ಕೊಹ್ಲಿ ಅರ್ಧಶತಕ

    ಕೊಹ್ಲಿ ಅರ್ಧಶತಕ ಪೂರ್ಣಗೊಂಡಿದೆ. 12ನೇ ಓವರ್​ನ ಐದನೇ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ ಕೊಹ್ಲಿ ಅರ್ಧಶತಕ ಪೂರೈಸಿದರು.

  • 21 May 2023 10:15 PM (IST)

    50 ರನ್‌ ಪೂರ್ಣ

    ಐದನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಆರ್‌ಸಿಬಿ 50 ರನ್ ಪೂರೈಸಿತು. ಐದನೇ ಓವರ್ ನ ಮೂರನೇ ಎಸೆತದಲ್ಲಿ ಡುಪ್ಲೆಸಿ ಒಂದು ರನ್ ಗಳಿಸುವ ಮೂಲಕ ತಂಡದ ಅರ್ಧಶತಕ ಪೂರೈಸಿದರು.

  • 21 May 2023 08:37 PM (IST)

    ಬೆಂಗಳೂರು ಬ್ಯಾಟಿಂಗ್ ಆರಂಭ

    ಮಳೆಯಿಂದಾಗಿ ಇಂದು 7.30ರ ಬದಲು 8.25ಕ್ಕೆ ಪಂದ್ಯ ಆರಂಭವಾಯಿತು. ವಿರಾಟ್ ಕೊಹ್ಲಿ ಮತ್ತು ಫಾಫಾ ಡು ಪ್ಲೆಸಿಸ್ ಬೆಂಗಳೂರು ಪರ ಬ್ಯಾಟಿಂಗ್‌ಗೆ ಬಂದಿದ್ದಾರೆ. 1 ಓವರ್‌ನ ನಂತರ ಬೆಂಗಳೂರು ಸ್ಕೋರ್ – 6/0. ಈ ಓವರ್‌ನಲ್ಲಿ ವಿರಾಟ್ ಕೊಹ್ಲಿ ಬೌಂಡರಿ ಬಾರಿಸಿದರು.

  • 21 May 2023 08:18 PM (IST)

    ಗುಜರಾತ್ ಟೈಟಾನ್ಸ್

    ಶುಭಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ದಾಸುನ್ ಶನಕ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಯಶ್ ದಯಾಳ್

  • 21 May 2023 08:12 PM (IST)

    ರಾಯಲ್ ಚಾಲೆಂಜರ್ಸ್ ಬೆಂಗಳೂರು

    ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮೈಕಲ್ ಬ್ರೇಸ್‌ವೆಲ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೋಮರೋರ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್, ವಿಜಯಕುಮಾರ್ ವೈಶಾಕ್

  • 21 May 2023 08:06 PM (IST)

    ಟಾಸ್ ಗೆದ್ದ ಗುಜರಾತ್

    ಗೆದ್ದ ಗುಜರಾತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.ಗುಜರಾತ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬೆಂಗಳೂರು ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಕರ್ಣ್ ಶರ್ಮಾ ಬದಲಿಗೆ ಹಿಮಾಂಶು ರಾಣಾ ತಂಡಕ್ಕೆ ಬಂದಿದ್ದಾರೆ.

  • 21 May 2023 06:59 PM (IST)

    ಟಾಸ್ ವಿಳಂಬ

    ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿದ್ದು, ಟಾಸ್ ತಡವಾಗಲಿದೆ.

  • Published On - May 21,2023 6:58 PM

    Follow us
    ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
    ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
    ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
    ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
    ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
    ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
    ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
    ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
    ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
    ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
    ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
    ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
    ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
    ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
    ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
    ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
    Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
    Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?