RCB vs GT Prediction Playing XI: ಆರ್​ಸಿಬಿ ತಂಡದಿಂದ ಸಿರಾಜ್​ಗೆ ಕೋಕ್? ಉಭಯ ತಂಡಗಳ ಸಂಭಾವ್ಯ XI

| Updated By: ಪೃಥ್ವಿಶಂಕರ

Updated on: May 18, 2022 | 6:38 PM

RCB vs GT Prediction Playing XI IPL 2022: ಮೇ 19ರ ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಹಲವು ತಂಡಗಳಿಗೂ ಮಹತ್ವದ್ದಾಗಿದ್ದರೂ ಬೆಂಗಳೂರಿಗೆ ಮಾತ್ರ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

RCB vs GT Prediction Playing XI: ಆರ್​ಸಿಬಿ ತಂಡದಿಂದ ಸಿರಾಜ್​ಗೆ ಕೋಕ್? ಉಭಯ ತಂಡಗಳ ಸಂಭಾವ್ಯ XI
RCB vs GT
Follow us on

ಗುಜರಾತ್ ಟೈಟಾನ್ಸ್ (Gujarat Titans) ಹೊರತುಪಡಿಸಿ, ಇತರ ಮೂರು ತಂಡಗಳು ಪ್ಲೇ ಆಫ್ ರೇಸ್​ನಲ್ಲಿದ್ದೂ, ಇದರಲ್ಲಿ ಯಾವ ತಂಡವೂ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ. ಆದರೆ ಮೊದಲ ಐಪಿಎಲ್ (IPL 2022) ಪಂದ್ಯಾವಳಿಯನ್ನಾಡುತ್ತಿರುವ ಗುಜರಾತ್ ತನ್ನ ಅದ್ಭುತ ಪ್ರದರ್ಶನದ ಮೂಲಕ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಈಗ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತನ್ನ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ವಿರುದ್ಧ ಸೆಣಸಲಿದೆ. ಆರ್​ಸಿಬಿ ಪ್ಲೇಆಫ್‌ನ ಬಾಗಿಲಲ್ಲಿ ನಿಂತಿರುವ ತಂಡವಾಗಿದ್ದು, ಆದರೆ ಇನ್ನೂ ಪ್ರವೇಶ ಖಚಿತವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಋತುವಿನ ಬಲಿಷ್ಠ ತಂಡವನ್ನು ಸೋಲಿಸಲು ಬೆಂಗಳೂರು ಪೂರ್ಣ ಬಲ ಪ್ರಯೋಗಿಸಬೇಕಾಗಿದ್ದು, ಆಡುವ ಇಲೆವೆನ್ ಹೇಗಿರಲಿದೆ ಎಂಬುದು ಕುತೂಹಲಕಾರಿ ವಿಚಾರವಾಗಿದೆ.

ಮೇ 19ರ ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಹಲವು ತಂಡಗಳಿಗೂ ಮಹತ್ವದ್ದಾಗಿದ್ದರೂ ಬೆಂಗಳೂರಿಗೆ ಮಾತ್ರ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇಲ್ಲಿ ತಂಡ ಸೋತರೆ ಅದಕ್ಕೆ ಎಲ್ಲಾ ಬಾಗಿಲುಗಳು ಮುಚ್ಚಿ ಹೋಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಫಾಫ್ ಡು ಪ್ಲೆಸಿಸ್ ತಂಡವು ಯಾವ ಆಟಗಾರರನ್ನು ತನ್ನ ಇಲೆವೆನ್​ನಲ್ಲಿ ಸೇರಿಸಿಕೊಳ್ಳಿದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಕಳೆದ ಪಂದ್ಯದ ಫಲಿತಾಂಶಗಳನ್ನು ಗಮನಿಸಿದರೆ, ಬದಲಾವಣೆಯ ಭರವಸೆ ಹೆಚ್ಚಿಲ್ಲ.

ಇದನ್ನೂ ಓದಿ:IPL 2022: ಐಪಿಎಲ್​ನಿಂದ ರಹಾನೆ ಔಟ್! ಟೀಂ ಇಂಡಿಯಾದಲ್ಲೂ ಇಲ್ಲ ಸ್ಥಾನ; ಅಪಾಯದಲ್ಲಿ ಅಜಿಂಕ್ಯ ವೃತ್ತಿಜೀವನ

ಇದನ್ನೂ ಓದಿ
IPL 2022: ಟಿ20 ಕ್ರಿಕೆಟ್​ನಲ್ಲಿ ಈ ದಾಖಲೆ ಬರೆದ ಭಾರತದ ಮೊದಲ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ..!
IPL 2022 RCB vs GT live streaming: ಆರ್​ಸಿಬಿ ಮುಂದೆ ಟೇಬಲ್ ಟಾಪರ್ ಗುಜರಾತ್; ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ
IND vs SA: ದೀಪಕ್ ಔಟ್! ಜಡೇಜಾ- ಸೂರ್ಯಕುಮಾರ್ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ಬಿಸಿಸಿಐ

ಸಿರಾಜ್​ಗೆ ಕೋಕ್?
ಕಳೆದ ಪಂದ್ಯದಲ್ಲಿ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಕೆಟ್ಟ ಸೋಲನ್ನು ಎದುರಿಸಬೇಕಾಯಿತು, ಇದರಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಫಲವಾಗಿತ್ತು. ಇದರ ಹೊರತಾಗಿಯೂ ಅದೇ ಆಡುವ XI ಕಟ್ಟುವುದು ಖಚಿತ. ಕಳೆದ ಬಾರಿ ವಿರಾಟ್ ಕೊಹ್ಲಿ ಗುಜರಾತ್ ವಿರುದ್ಧವೇ ಅರ್ಧಶತಕ ಸಿಡಿಸಿದ್ದರು. ಪಂಜಾಬ್ ವಿರುದ್ಧ ಅವರು ಉತ್ತಮ ಲಯದಲ್ಲಿರುವಂತೆ ತೋರುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಈ ಬಾರಿ ಬಲಿಷ್ಠ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ. ಬೆಂಗಳೂರಿಗೆ ದೊಡ್ಡ ಸಮಸ್ಯೆ ಎಂದರೆ ಮೊಹಮ್ಮದ್ ಸಿರಾಜ್ ಫಾರ್ಮ್​. ಈ ವೇಗದ ಬೌಲರ್ ಋತುವಿನ ಉದ್ದಕ್ಕೂ ನಿರಾಸೆ ಮೂಡಿಸಿದ್ದಾರೆ. ಇದರ ಹೊರತಾಗಿಯೂ ಪ್ರತಿ ಪಂದ್ಯದಲ್ಲೂ ಅವರಿಗೆ ಅವಕಾಶ ನೀಡಲಾಗಿದ್ದು, ಈ ಕೊನೆಯ ಪಂದ್ಯದಲ್ಲೂ ಅದೇ ಸ್ಥಿತಿ ಮುಂದುವರಿಯಲಿದೆ.

ಗುಜರಾತ್​ನ ದಿಗ್ಗಜರಿಗೆ ವಿಶ್ರಾಂತಿ ಸಿಗುತ್ತಾ?
ಮತ್ತೊಂದೆಡೆ ಈಗಾಗಲೇ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಗುಜರಾತ್ ತಂಡವು ತನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಅವಕಾಶವನ್ನು ಹೊಂದಿದೆ. ಹೀಗಾಗಿ ಬೆಂಚ್ ಮೇಲೆ ಕುಳಿತಿರುವ ಆಟಗಾರರನ್ನು ಪರೀಕ್ಷಿಸುವ ಅವಕಾಶವನ್ನು ಹೊಂದಿದೆ. ಆದರೆ, ತಂಡ ಈ ರೀತಿ ಮಾಡುತ್ತದೆ ಎಂದು ನಿರೀಕ್ಷಿಸಲಾಗದು, ಅಗತ್ಯವಿಲ್ಲದಿದ್ದರೆ ಕೊನೆಯ ಪಂದ್ಯಕ್ಕೆ ಸಂಪೂರ್ಣ ಬಲದಿಂದ ಕಣಕ್ಕಿಳಿಯುತ್ತೇನೆ ಎಂದು ಕಳೆದ ಪಂದ್ಯದ ನಂತರ ನಾಯಕ ಹಾರ್ದಿಕ್ ಸ್ಪಷ್ಟಪಡಿಸಿದ್ದರಿಂದ ಗೆಲುವಿನ ಓಟ ಕಾಯ್ದುಕೊಂಡಿದೆ. ಅಂದರೆ, ಇಲ್ಲಿಯೂ ಬದಲಾವಣೆಯನ್ನು ನಿರೀಕ್ಷಿಸಲಾಗುವುದಿಲ್ಲ.

RCB vs GT: ಸಂಭಾವ್ಯ ಪ್ಲೇಯಿಂಗ್ XI
ಬೆಂಗಳೂರು: ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮೊರ್ಡ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್.

ಗುಜರಾತ್: ಹಾರ್ದಿಕ್ ಪಾಂಡ್ಯ (ನಾಯಕ), ಶುಬ್ಮನ್ ಗಿಲ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಲ್

Published On - 6:38 pm, Wed, 18 May 22