RCB vs MI, IPL 2021: ಹರ್ಷಲ್ ಪಟೇಲ್ ಹ್ಯಾಟ್ರಿಕ್: ಮುಂಬೈ ವಿರುದ್ದ ಆರ್​ಸಿಬಿಗೆ ಭರ್ಜರಿ ಜಯ

TV9 Web
| Updated By: ಝಾಹಿರ್ ಯೂಸುಫ್

Updated on:Sep 26, 2021 | 11:29 PM

Royal Challengers Bangalore vs Mumbai Indians: ಉಭಯ ತಂಡಗಳು ಇದುವರೆಗೆ ಒಟ್ಟು 29 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 17 ಪಂದ್ಯಗಳಲ್ಲಿ ಜಯ ಸಾಧಿಸಿ ಮೇಲುಗೈ ಹೊಂದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 12 ಪಂದ್ಯಗಳನ್ನು ಗೆದ್ದುಕೊಂಡಿದೆ.

RCB vs MI, IPL 2021: ಹರ್ಷಲ್ ಪಟೇಲ್ ಹ್ಯಾಟ್ರಿಕ್: ಮುಂಬೈ ವಿರುದ್ದ ಆರ್​ಸಿಬಿಗೆ ಭರ್ಜರಿ ಜಯ
ಇದೀಗ ಹರ್ಷಲ್ ಪಟೇಲ್ ಕೂಡ ಮುಂಬೈ ಇಂಡಿಯನ್ಸ್​ ವಿರುದ್ದ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ಇತಿಹಾಸ ಬರೆದಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ 39ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ (RCB vs MI) ವಿರುದ್ದ 54 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಹ್ಯಾಟ್ರಿಕ್​ ವಿಕೆಟ್ ಉರುಳಿಸುವ ಮೂಲಕ ಹರ್ಷಲ್ ಪಟೇಲ್ ಆರ್​​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಇನಿಂಗ್ಸ್​ ಆರಂಭಿಸಿದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ (51) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್​ (56) ಅವರ ಅರ್ಧಶತಕದ ನೆರವಿನಿಂದ 6 ವಿಕೆಟ್​ ನಷ್ಟಕ್ಕೆ 165 ರನ್​ ಪೇರಿಸಿತು.

ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್​ ಬ್ಯಾಟರುಗಳನ್ನು ಕಟ್ಟಿಹಾಕುವಲ್ಲಿ ಆರ್​ಸಿಬಿ ಬೌಲರುಗಳು ಯಶಸ್ವಿಯಾದರು. ಅದರಲ್ಲೂ ಅಂತಿಮ ಹಂತದಲ್ಲಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸುವ ಮೂಲಕ ಆರ್​ಸಿಬಿ ಬೌಲರುಗಳು ಪಂದ್ಯದ ಚಿತ್ರಣ ಬದಲಿಸಿದರು. 17ನೇ ಓವರ್​ನಲ್ಲಿ ಹರ್ಷಲ್ ಪಟೇಲ್ ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ ಹಾಗೂ ರಾಹುಲ್ ಚಹರ್ ವಿಕೆಟ್ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆಗೈದರು. ಇದರೊಂದಿಗೆ ಪಂದ್ಯವು ಆರ್​ಸಿಬಿ ಪರ ವಾಲಿತು. ಅಂತಿಮವಾಗಿ ಮುಂಬೈ ಇಂಡಿಯನ್ಸ್​ 18.1 ಓವರ್​ನಲ್ಲಿ 111 ರನ್​ಗೆ ಸರ್ವಪತನ ಕಾಣುವ ಮೂಲಕ 54 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಸಂಕ್ಷಿಪ್ತ ಸ್ಕೋರ್ ವಿವರ:

RCB 165/6 (20)

ಗ್ಲೆನ್ ಮ್ಯಾಕ್ಸ್​ವೆಲ್- 56

ವಿರಾಟ್ ಕೊಹ್ಲಿ- 51

ಬುಮ್ರಾ- 36/3

MI 111 (18.1)

ರೋಹಿತ್ ಶರ್ಮಾ- 43

ಹರ್ಷಲ್ ಪಟೇಲ್- 17/4

ಯುಜುವೇಂದ್ರ ಚಹಲ್- 11/3

ಉಭಯ ತಂಡಗಳು ಇದುವರೆಗೆ ಒಟ್ಟು 29 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 17 ಪಂದ್ಯಗಳಲ್ಲಿ ಜಯ ಸಾಧಿಸಿ ಮೇಲುಗೈ ಹೊಂದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 12 ಪಂದ್ಯಗಳನ್ನು ಗೆದ್ದುಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಡೇನಿಯಲ್ ಕ್ರಿಶ್ಚಿಯನ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನೆ, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

LIVE NEWS & UPDATES

The liveblog has ended.
  • 26 Sep 2021 11:26 PM (IST)

    ಹ್ಯಾಟ್ರಿಕ್ ಪಟೇಲ್

  • 26 Sep 2021 11:17 PM (IST)

    ಆರ್​ಸಿಬಿಗೆ 54 ರನ್​ಗಳ ಭರ್ಜರಿ ಜಯ

    RCB 165/6 (20)

    MI 111 (18.1)

  • 26 Sep 2021 11:16 PM (IST)

    MI 111 (18.1) ಆಲೌಟ್

    ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ 54 ರನ್​ಗಳ ಭರ್ಜರಿ ಜಯ

  • 26 Sep 2021 11:15 PM (IST)

    2 ಓವರ್​ನಲ್ಲಿ 55 ರನ್​ಗಳ ಅವಶ್ಯಕತೆ

    MI 111/9 (18)

      

  • 26 Sep 2021 11:13 PM (IST)

    ಬುಮ್ರಾ ಬೌಲ್ಡ್

    ಚಹಲ್ ಎಸೆತದಲ್ಲಿ ಜಸ್​​ಪ್ರೀತ್ ಬುಮ್ರಾ ಕ್ಲೀನ್ ಬೌಲ್ಡ್

    MI 111/9 (17.4)

      

  • 26 Sep 2021 11:10 PM (IST)

    18 ಎಸೆತಗಳಲ್ಲಿ 55 ರನ್​ಗಳ ಅವಶ್ಯಕತೆ

    MI 111/8 (17)

      

  • 26 Sep 2021 11:09 PM (IST)

    ಬುಮ್ರಾ ಫೋರ್

    ಹರ್ಷಲ್ ಪಟೇಲ್ ಎಸೆತದಲ್ಲಿ ಬುಮ್ರಾ ಬ್ಯಾಟ್ ಎಡ್ಜ್…ಕೀಪರ್ ಮೇಲಿಂದ ಚೆಂಡು ಬೌಂಡರಿಗೆ

  • 26 Sep 2021 11:08 PM (IST)

    ಹರ್ಷಲ್ ಪಟೇಲ್ ಹ್ಯಾಟ್ರಿಕ್

    ಹಾರ್ದಿಕ್ ಪಾಂಡ್ಯ

    ಕೀರನ್ ಪೊಲಾರ್ಡ್​

    ರಾಹುಲ್ ಚಹರ್

    ಬ್ಯಾಕ್​ ಟು ಬ್ಯಾಕ್ ಮೂರು ವಿಕೆಟ್​ ಪಡೆದ ಹ್ಯಾಟ್ರಿಕ್ ದಾಖಲೆ ಬರೆದ ಹರ್ಷಲ್ ಪಟೇಲ್

  • 26 Sep 2021 11:06 PM (IST)

    ಹ್ಯಾಟ್ರಿಕ್ ವಿಕೆಟ್

    ಹ್ಯಾಟ್ರಿಕ್ ವಿಕೆಟ್ ಪಡೆದ ಹರ್ಷಲ್ ಪಟೇಲ್

  • 26 Sep 2021 11:05 PM (IST)

    ಸೋಲಿನ ಸುಳಿಯಲ್ಲಿ ಮುಂಬೈ ಇಂಡಿಯನ್ಸ್​

    MI 106/7 (16.2)

      

  • 26 Sep 2021 11:05 PM (IST)

    ಪೊಲಾರ್ಡ್​ ಕ್ಲೀನ್ ಬೌಲ್ಡ್​

    ಹರ್ಷಲ್ ಪಟೇಲ್ ಸೂಪರ್ ಬೌಲಿಂಗ್…ಕೀರನ್ ಪೊಲಾರ್ಡ್​ ಕ್ಲೀನ್ ಬೌಲ್ಡ್​…ಬ್ಯಾಕ್ ಟು ಬ್ಯಾಕ್ ವಿಕೆಟ್

  • 26 Sep 2021 11:03 PM (IST)

    ಪಾಂಡ್ಯ ಔಟ್

    ಹರ್ಷಲ್ ಪಟೇಲ್ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾದ ಹಾರ್ದಿಕ್ ಪಾಂಡ್ಯ… ನೇರವಾಗಿ ವಿರಾಟ್ ಕೊಹ್ಲಿ ಕೈಗೆ ಕ್ಯಾಚ್.. ಪಾಂಡ್ಯ ಇನಿಂಗ್ಸ್​ ಅಂತ್ಯ

  • 26 Sep 2021 11:01 PM (IST)

    24 ಎಸೆತಗಳಲ್ಲಿ 61 ರನ್​ಗಳ ಅವಶ್ಯಕತೆ

    MI 105/5 (16)

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ-ಪೊಲಾರ್ಡ್​ ಬ್ಯಾಟಿಂಗ್

  • 26 Sep 2021 10:59 PM (IST)

    16ನೇ ಓವರ್​ನಲ್ಲಿ ನೂರು ರನ್ ಪೂರೈಸಿದ ಮುಂಬೈ ಇಂಡಿಯನ್ಸ್

    MI 101/5 (15.2)

      

  • 26 Sep 2021 10:55 PM (IST)

    15 ಓವರ್ ಮುಕ್ತಾಯ

    MI 99/5 (15)

     ಮುಂಬೈಗೆ ಗೆಲ್ಲಲು  30 ಎಸೆತಗಳಲ್ಲಿ 67 ರನ್​ಗಳ ಅವಶ್ಯಕತೆ

  • 26 Sep 2021 10:51 PM (IST)

    ಸಿರಾಜ್ ಟು ಸೂರ್ಯ

    ಸಿರಾಜ್​ ಅವರ ವೈಡ್ ಎಸೆತಕ್ಕೆ  ಬ್ಯಾಟ್ ನೀಡಿ ಕ್ಯಾಚಿತ್ತ ಸೂರ್ಯಕುಮಾರ್ ಯಾದವ್

    ಆರ್​ಸಿಬಿಗೆ 5ನೇ ಯಶಸ್ಸು

  • 26 Sep 2021 10:46 PM (IST)

    6 ಓವರ್​ನಲ್ಲಿ 69 ರನ್​ಗಳ ಅವಶ್ಯಕತೆ

    MI 97/4 (14)

      

  • 26 Sep 2021 10:42 PM (IST)

    ಕ್ರೀಸ್​ಗೆ ಆಗಮಿಸಿದ ಕೀರನ್ ಪೊಲಾರ್ಡ್​

    RCB 165/6 (20)

    MI 93/4 (13.1)

      

  • 26 Sep 2021 10:41 PM (IST)

    ಕ್ಲೀನ್ ಬೌಲ್ಡ್​- ಕೃನಾಲ್ ಪಾಂಡ್ಯ ಔಟ್

    ಗ್ಲೆನ್ ಮ್ಯಾಕ್ಸ್​ವೆಲ್ ಎಸೆತದಲ್ಲಿ ಕೃನಾಲ್ ಪಾಂಡ್ಯ ಕ್ಲೀನ್ ಬೌಲ್ಡ್

  • 26 Sep 2021 10:41 PM (IST)

    ಕೊನೆಯ 7 ಓವರ್​ಗಳು ಬಾಕಿ

    RCB 165/6 (20)

    MI 93/3 (13)

  • 26 Sep 2021 10:36 PM (IST)

    ಆರ್​ಸಿಬಿ ಉತ್ತಮ ಬೌಲಿಂಗ್

    MI 89/3 (12.3)

    ಮುಂಬೈ ಇಂಡಿಯನ್ಸ್ ಗೆ 45 ಎಸೆತಗಳಲ್ಲಿ 77 ರನ್​ಗಳ ಅವಶ್ಯಕತೆ
  • 26 Sep 2021 10:29 PM (IST)

    11 ಓವರ್ ಮುಕ್ತಾಯ

    MI 82/3 (11)

      

  • 26 Sep 2021 10:27 PM (IST)

    ಚಹಲ್​ಗೆ ಮತ್ತೊಂದು ವಿಕೆಟ್

    ಚಹಲ್​ ಎಸೆತಕ್ಕೆ ಭರ್ಜರಿ ಉತ್ತರ ನೀಡುವ ಯತ್ನ…ಬ್ಯಾಟ್ ಎಡ್ಜ್​ ಚೆಂಡು ನೇರವಾಗಿ ಹರ್ಷಲ್ ಪಟೇಲ್​ಗೆ ಕೈಗೆ…ಇಶಾನ್ ಕಿಶನ್ ಔಟ್.

    MI 81/3 (10.3)

      

  • 26 Sep 2021 10:26 PM (IST)

    MI 81

    MI 81/2 (10.2)

      ಕ್ರೀಸ್​ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್

  • 26 Sep 2021 10:25 PM (IST)

    ರೋಹಿತ್ ಶರ್ಮಾ ಔಟ್

    ಗ್ಲೆನ್ ಮ್ಯಾಕ್ಸ್​ವೆಲ್ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾದ ರೋಹಿತ್ ಶರ್ಮಾ…ಬೌಂಡರಿ ಲೈನ್​ನಲ್ಲಿ ದೇವದತ್ ಪಡಿಕ್ಕಲ್ ಉತ್ತಮ ಕ್ಯಾಚ್

  • 26 Sep 2021 10:23 PM (IST)

    ಇಶಾನ್ ಕಿಶನ್ ಸ್ಟ್ರೈಟ್ ಹಿಟ್​…!

    ಇಶಾನ್ ಕಿಶನ್ ಸ್ಟ್ರೈಟ್ ಹಿಟ್​…ಚೆಂಡು ನೇರವಾಗಿ ರೋಹಿತ್ ಶರ್ಮಾ ಮುಖದತ್ತ..ಬಾಲ್​ನ್ನು ಕೈಯಲ್ಲಿ ತಡೆದ ಹಿಟ್​ಮ್ಯಾನ್…ಫಿಸಿಯೋ ಚೆಕ್ಕಿಂಗ್ ಬಳಿಕ ಬ್ಯಾಟಿಂಗ್ ಮುಂದುವರೆಸಿದ ರೋಹಿತ್ ಶರ್ಮಾ

  • 26 Sep 2021 10:18 PM (IST)

    9 ಓವರ್ ಮುಕ್ತಾಯ

    MI 75/1 (9)

     

    ಕ್ರೀಸ್​ನಲ್ಲಿ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್

  • 26 Sep 2021 10:16 PM (IST)

    ಪಾಕೆಟ್ ಡೈನಾಮೊ ಓಪನ್

    ಚಹಲ್ ಎಸೆತಕ್ಕೆ ಸೂಪರ್ ಶಾಟ್…ನೇರವಾಗಿ ಹೊಡೆದು ಫೋರ್ ಗಿಟ್ಟಿಸಿಕೊಂಡ ಇಶಾನ್ ಕಿಶನ್

  • 26 Sep 2021 10:14 PM (IST)

    ಬಿಗ್ ಬಿಗ್ ಬಿಗ್ ಹಿಟ್​

    ಗ್ಲೆನ್ ಮ್ಯಾಕ್ಸ್​ವೆಲ್ ಎಸೆತಕ್ಕೆ ಹಿಟ್​​ಮ್ಯಾನ್ ಬಿಗ್ ಹಿಟ್​….ಭರ್ಜರಿ ಸಿಕ್ಸ್​

    MI 69/1 (8)

      

  • 26 Sep 2021 10:10 PM (IST)

    ಕ್ರೀಸ್​ಗೆ ಆಗಮಿಸಿದ ಎಡಗೈ ದಾಂಡಿಗ ಇಶಾನ್ ಕಿಶನ್

    RCB 165/6 (20)

    MI 57/1 (6.5)

      

  • 26 Sep 2021 10:09 PM (IST)

    ಡಿಕಾಕ್ ಔಟ್

    ಚಹಲ್ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾದ ಡಿಕಾಕ್…ಗ್ಲೆನ್ ಮ್ಯಾಕ್ಸ್​ವೆಲ್ ಉತ್ತಮ ಕ್ಯಾಚ್…24 ರನ್​ಗಳೊಂದಿಗೆ ಡಿಕಾಕ್ ಪೆವಿಲಿಯನ್​ನತ್ತ.

  • 26 Sep 2021 10:07 PM (IST)

    ಪವರ್​ಪ್ಲೇ ಲೆಕ್ಕಚಾರ

    ಪವರ್​ಪ್ಲೇ ಮುಕ್ತಾಯದ ವೇಳೆಗೆ

    RCB 48/2 (6)

    MI 56/0 (6)

      

  • 26 Sep 2021 10:03 PM (IST)

    ಪವರ್​ಪ್ಲೇ ಮುಕ್ತಾಯ: ಮುಂಬೈ ಇಂಡಿಯನ್ಸ್​ ಉತ್ತಮ ಆರಂಭ

    MI 56/0 (6)

     ರೋಹಿತ್ ಶರ್ಮಾ- 29

    ಡಿಕಾಕ್- 24

  • 26 Sep 2021 09:56 PM (IST)

    5 ಓವರ್ ಮುಕ್ತಾಯ: ಮುಂಬೈ ಭರ್ಜರಿ ಬ್ಯಾಟಿಂಗ್

    MI 51/0 (5)

      ಡೇನಿಯಲ್ ಕ್ರಿಶ್ಚಿಯನ್ ಎಸೆದ 5ನೇ ಓವರ್​ನಲ್ಲಿ 15 ರನ್ ಕಲೆಹಾಕಿದ ಮುಂಬೈ ಬ್ಯಾಟರುಗಳು

  • 26 Sep 2021 09:53 PM (IST)

    ವೆಲ್ಕಂ ಡೇನಿಯಲ್…! ಡಿಕಾಕ್

    ಡೇನಿಯಲ್ ಕ್ರಿಶ್ಚಿಯನ್​ ಮೊದಲ ಎಸೆತಕ್ಕೆ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಡಿಕಾಕ್…

    2ನೇ ಎಸೆತದಲ್ಲಿ ಆಫ್​ ಸೈಡ್​ನತ್ತ ಮತ್ತೊಂದು ಬೌಂಡರಿ

  • 26 Sep 2021 09:50 PM (IST)

    ಹಿಟ್​ಮ್ಯಾನ್ ಹಿಟ್ಟಿಂಗ್

    ಸಿರಾಜ್ ಎಸೆತಕ್ಕೆ ಫರ್ಫೆಕ್ಟ್​ ಸ್ಟ್ರೈಟ್ ಶಾಟ್….ರೋಹಿತ್ ಶರ್ಮಾ ಬ್ಯಾಟ್​ನಿಂದ ಬೌಂಡರಿ

  • 26 Sep 2021 09:48 PM (IST)

    ಡಿಕಾಕ್ ಬ್ಯೂಟಿ

    ಸಿರಾಜ್ ಆಫ್​ ಸೈಡ್ ಎಸೆತಕ್ಕೆ ಭರ್ಜರಿ ಬೌಂಡರಿ ಉತ್ತರ ನೀಡಿದ ಕ್ವಿಂಟನ್ ಡಿಕಾಕ್

  • 26 Sep 2021 09:46 PM (IST)

    ಹ್ಯಾಟ್ರಿಕ್ ಬೌಂಡರಿ

    ಜೇಮಿಸನ್​ಗೆ ಹ್ಯಾಟ್ರಿಕ್ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ.

    MI 27/0 (3)

      

  • 26 Sep 2021 09:45 PM (IST)

    ಹಿಟ್​-ಮ್ಯಾನ್-ಹಿಟ್

    ಜೇಮಿಸನ್​ ಎಸೆತಕ್ಕೆ ಬ್ಯಾಕ್​ವರ್ಡ್​ ಪಾಯಿಂಟ್​ನತ್ತ ಸೂಪರ್ ಶಾಟ್…ರೋಹಿತ್ ಶರ್ಮಾ ಬ್ಯಾಟ್​ನಿಂದ ಮತ್ತೊಂದು ಬೌಂಡರಿ

  • 26 Sep 2021 09:44 PM (IST)

    ಫ್ರೀ ಹಿಟ್

    ಕೈಲ್ ಜೇಮಿಸನ್ ಬೌಲಿಂಗ್​ನಲ್ಲಿ ಲೈನ್ ನೋಬಾಲ್..ಫ್ರೀ ಹಿಟ್​…ಫುಲ್ ಟಾಸ್ ಎಸೆತಕ್ಕೆ ನೇರವಾಗಿ ಬೌಂಡರಿ ಬಾರಿಸಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

  • 26 Sep 2021 09:42 PM (IST)

    ಮುಂಬೈ ಇಂಡಿಯನ್ಸ್​ ನಿಧಾನಗತಿಯ ಆರಂಭ

    ಮೊದಲ ಎರಡು ಓವರ್​ನಲ್ಲಿ 10 ರನ್​

    MI 12/0 (2.2)

      

  • 26 Sep 2021 09:21 PM (IST)

    ಮುಂಬೈಗೆ 166 ರನ್​ಗಳ ಗುರಿ ನೀಡಿದ ಆರ್​ಸಿಬಿ

  • 26 Sep 2021 09:21 PM (IST)

    ಟಾರ್ಗೆಟ್- 166

  • 26 Sep 2021 09:16 PM (IST)

    ಆರ್​ಸಿಬಿ ಇನಿಂಗ್ಸ್​ ಅಂತ್ಯ

    RCB 165/6 (20)

      

  • 26 Sep 2021 09:16 PM (IST)

    20ನೇ ಓವರ್- ಟ್ರೆಂಟ್ ಬೌಲ್ಟ್

    3ನೇ ಎಸೆತದಲ್ಲಿ ಕೈಲ್ ಜೇಮಿಸನ್ ಉತ್ತಮ ಹೊಡೆತ…1 ರನ್

    4ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ.

    5ನೇ ಎಸೆತದಲ್ಲಿ ಡೇನಿಯಲ್ ಕ್ರಿಶ್ಚಿಯನ್ 1 ರನ್​

    6ನೇ ಎಸೆತದಲ್ಲಿ 1 ರನ್

    RCB 165/6 (20)

  • 26 Sep 2021 09:12 PM (IST)

    ಕೊನೆಯ ಓವರ್​ ಟ್ರೆಂಟ್ ಬೌಲ್ಟ್

    ಮೊದಲ ಎಸೆತದಲ್ಲಿ ಯಾವುದೇ ರನ್ ಇಲ್ಲ.

    2ನೇ ಎಸೆತದಲ್ಲಿ ಶಹಬಾಜ್ ಅಹ್ಮದ್ ಕ್ಲೀನ್ ಬೌಲ್ಡ್

  • 26 Sep 2021 09:11 PM (IST)

    ಕೊನೆಯ ಓವರ್​ ಟ್ರೆಂಟ್ ಬೌಲ್ಟ್​

    RCB 162/5 (19)

      

  • 26 Sep 2021 09:10 PM (IST)

    19ನೇ ಓವರ್​ನಲ್ಲಿ ಕೇವಲ 6 ರನ್ 2 ವಿಕೆಟ್

    ಜಸ್​ಪ್ರೀತ್ ಬುಮ್ರಾ ಎಸೆದ 19ನೇ ಓವರ್​ನಲ್ಲಿ ಕೇವಲ 6 ರನ್ 2 ವಿಕೆಟ್.

    RCB 162/5 (19)

      

  • 26 Sep 2021 09:08 PM (IST)

    ಬ್ಯಾಕ್ ಟು ಬ್ಯಾಕ್ ವಿಕೆಟ್

    ಮ್ಯಾಕ್ಸ್​ವೆಲ್ ಬೆನ್ನಲ್ಲೇ ಎಬಿ ಡಿವಿಲಿಯರ್ಸ್ ಔಟ್

    ಬುಮ್ರಾ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್

    RCB 161/5 (18.4)

  • 26 Sep 2021 09:07 PM (IST)

    ಮ್ಯಾಕ್ಸ್​ವೆಲ್ ಔಟ್

    ಬುಮ್ರಾ ಎಸೆತದಲ್ಲಿ ಸುಲಭವಾಗಿ ಕ್ಯಾಚ್ ನೀಡಿದ ಗ್ಲೆನ್ ಮ್ಯಾಕ್ಸ್​ವೆಲ್…36 ಎಸೆತಗಳಲ್ಲಿ 57 ರನ್​ ಬಾರಿಸಿ ಔಟಾದ ಮ್ಯಾಕ್ಸಿ.

    RCB 161/4 (18.3)

      

  • 26 Sep 2021 09:05 PM (IST)

    ಬುಮ್ರಾ ಟು ಮ್ಯಾಕ್ಸಿ

    ಬುಮ್ರಾ ಮೊದಲ ಎಸೆತವನ್ನು ಆನ್​ಸೈಡ್​ನತ್ತ ಭರ್ಜರಿಯಾಗಿ ಬೌಂಡರಿಗಿಟ್ಟಿಸಿಕೊಂಡ ಗ್ಲೆನ್ ಮ್ಯಾಕ್ಸ್​ವೆಲ್

  • 26 Sep 2021 09:04 PM (IST)

    ಕೊನೆಯ 2 ಓವರ್​

    19ನೇ ಓವರ್ ಎಸೆಯುತ್ತಿರುವ ಜಸ್​ಪ್ರೀತ್ ಬುಮ್ರಾ

  • 26 Sep 2021 09:02 PM (IST)

    ಅರ್ಧಶತಕದ ಪೂರೈಸಿದ ಮ್ಯಾಕ್ಸ್​ವೆಲ್

    33 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಬೌಂಡರಿಗಳೊಂದಿಗೆ ಅರ್ಧಶತಕದ ಪೂರೈಸಿದ ಮ್ಯಾಕ್ಸ್​ವೆಲ್

    RCB 156/3 (18)

      

  • 26 Sep 2021 09:00 PM (IST)

    ಮ್ಯಾಕ್ಸಿ ಸಿಡಿಲಬ್ಬರ

    ಕವರ್ಸ್​​ನತ್ತ ಭರ್ಜರಿ ಬೌಂಡರಿ ಬಾರಿಸಿದ ಗ್ಲೆನ್ ಮ್ಯಾಕ್ಸ್​ವೆಲ್

  • 26 Sep 2021 08:59 PM (IST)

    ಮ್ಯಾಕ್ಸ್​ವೆಲ್ ಅಬ್ಬರ

    ಸ್ವೀಪ್ ಅಥವಾ ಸ್ವಿಚ್ ಹಿಟ್​…ಮಿಲ್ನ್​ ಎಸೆತದಲ್ಲಿ ರಿವರ್ಸ್​ ಬ್ಯಾಟ್ ಮೂಲಕ ಮತ್ತೊಂದು ಬೌಂಡರಿ ಬಾರಿಸಿದ ಮ್ಯಾಕ್ಸ್​ವೆಲ್

  • 26 Sep 2021 08:58 PM (IST)

    ಮಿಲ್ನ್ ಟು ಮ್ಯಾಕ್ಸಿ

    ಮತ್ತೊಮ್ಮೆ ಮಿಲ್ನ್ ಎಸೆತದಲ್ಲಿ ಸ್ವಿಚ್ ಹಿಟ್ ಮೂಲಕ ಸಿಕ್ಸ್​ ಸಿಡಿಸಿದ ಮ್ಯಾಕ್ಸ್​ವೆಲ್

  • 26 Sep 2021 08:57 PM (IST)

    ವಾಟ್ ಎ ಶಾಟ್…ಎಬಿಡಿ

    ಬುಮ್ರಾ ಎಸೆತಕ್ಕೆ ಸ್ಟ್ರೈಟ್ ಪುಲ್​ ಶಾಟ್…ಎಬಿ ಡಿವಿಲಿಯರ್ಸ್ ಬ್ಯಾಟ್​ನಿಂದ ಮತ್ತೊಂದು ಬೌಂಡರಿ

    RCB 139/3 (17)

     

  • 26 Sep 2021 08:54 PM (IST)

    ಡೇಂಜರಸ್ ಎಬಿಡಿ

    ಬುಮ್ರಾ ಎಸೆತಕ್ಕೆ ಭರ್ಜರಿ ಪ್ರತ್ಯುತ್ತರ…ಲಾಂಗ್​ ಆನ್​ನತ್ತ ಸೂಪರ್ ಸಿಕ್ಸ್ ಸಿಡಿಸಿದ ಎಬಿಡಿ

  • 26 Sep 2021 08:50 PM (IST)

    ವಿರಾಟ್ ಕೊಹ್ಲಿ ಔಟ್

    ಮಿಲ್ನೆ ಬೌನ್ಸರ್ ಎಸೆತಕ್ಕೆ ಭರ್ಜರಿ ಪ್ರತ್ಯುತ್ತರ ನೀಡುವ ಪ್ರಯತ್ನ…ಆಕಾಶದತ್ತ ಚಿಮ್ಮಿದ ಚೆಂಡು ನೇರವಾಗಿ ಸಬ್​ ಫೀಲ್ಡರ್ ಅನ್ಕುಲ್ ಕೈಗೆ…ವಿರಾಟ್ ಕೊಹ್ಲಿ ಔಟ್

    RCB 126/3 (16)

     

  • 26 Sep 2021 08:48 PM (IST)

    ಮ್ಯಾಕ್ಸಿ ಬ್ಯೂಟಿ

    ಮುಂದುವರೆದ ಸ್ವಿಚ್ ಹಿಟ್…ಸಿಂಪಲ್ ಸ್ವಿಚ್​ ಹಿಟ್​ ಮೂಲಕ ಮಿಲ್ನೆ ಎಸೆತವನ್ನು ಬೌಂಡರಿಗಟ್ಟಿದ ಮ್ಯಾಕ್ಸ್​ವೆಲ್

  • 26 Sep 2021 08:45 PM (IST)

    15 ಓವರ್ ಮುಕ್ತಾಯ

    RCB 119/2 (15)

     

  • 26 Sep 2021 08:43 PM (IST)

    ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ

    40 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ

  • 26 Sep 2021 08:40 PM (IST)

    14 ಓವರ್ ಮುಕ್ತಾಯ

    ಗ್ಲೆನ್ ಮ್ಯಾಕ್ಸ್​ವೆಲ್ ಭರ್ಜರಿ ಬ್ಯಾಟಿಂಗ್…ಕೊಹ್ಲಿ ಉತ್ತಮ ಸಾಥ್

    RCB 117/2 (14)

  • 26 Sep 2021 08:38 PM (IST)

    ವಾಟ್ ಎ ಸ್ವಿಚ್ ಶಾಟ್…!

    ರಾಹುಲ್ ಚಹರ್ ಎಸೆತಕ್ಕೆ ಅದ್ಭುತ ಪ್ರತ್ಯುತ್ತರ…ಸ್ವಿಚ್ ಹಿಟ್ ಮೂಲಕ ಮತ್ತೊಂದು ಸಿಕ್ಸ್​ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್

  • 26 Sep 2021 08:32 PM (IST)

    ಆರ್​ಸಿಬಿ ಭರ್ಜರಿ ಬ್ಯಾಟಿಂಗ್

    RCB 109/2 (13)

  • 26 Sep 2021 08:29 PM (IST)

    ಫ್ರೀ ಹಿಟ್​

    ನೋಬಾಲ್ ಎಸೆದ ಮಿಲ್ನೆ…ಫ್ರಿ ಹಿಟ್​ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಿದ ಗ್ಲೆನ್ ಮ್ಯಾಕ್ಸ್​ವೆಲ್…ಫೋರ್

  • 26 Sep 2021 08:28 PM (IST)

    ಸೂಪರ್ ಶಾಟ್-ಬೌಂಡರಿ

    ಮಿಲ್ನೆ ಎಸೆತದಲ್ಲಿ ಮಿಡ್ ವಿಕೆಟ್​ ಫೀಲ್ಡರ್​ನತ್ತ ಬೌಂಡರಿ…ಮ್ಯಾಕ್ಸ್​ವೆಲ್​ ಬ್ಯಾಟ್​ನಿಂದ ಮತ್ತೊಂದು ಫೋರ್

  • 26 Sep 2021 08:27 PM (IST)

    ಮ್ಯಾಕ್ಸ್​ವೆಲ್-ಮ್ಯಾಕ್ಸಿಮಮಂ

    ಕೃನಾಲ್ ಪಾಂಡ್ಯ ಎಸೆತದಲ್ಲಿ ರಿವರ್ಸ್​ ಸ್ವೀಪ್​ ಮೂಲಕ ಸಿಕ್ಸ್​ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್

    RCB 97/2 (12)

     

  • 26 Sep 2021 08:22 PM (IST)

    RCB 85/2 (11)

    ಕ್ರೀಸ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್-ಕೊಹ್ಲಿ ಬ್ಯಾಟಿಂಗ್

  • 26 Sep 2021 08:18 PM (IST)

    10 ಓವರ್ ಮುಕ್ತಾಯ

    ಮೊದಲ 60 ಎಸೆತಗಳಲ್ಲಿ ಆರ್​ಸಿಬಿ ಕಲೆಹಾಕಿದ್ದು 82 ರನ್​ಗಳು

    RCB 82/2 (10)

    ಕ್ರೀಸ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್-ಕೊಹ್ಲಿ ಬ್ಯಾಟಿಂಗ್

  • 26 Sep 2021 08:17 PM (IST)

    ಕ್ರೀಸ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್-ಕೊಹ್ಲಿ

    RCB 80/2 (9.3)

     

  • 26 Sep 2021 08:14 PM (IST)

    ಭರತ್ ಔಟ್..!

    ರಾಹುಲ್ ಚಹರ್ ಎಸೆತದಲ್ಲಿ ಮತ್ತೊಂದು ಬಿಗ್​ ಹಿಟ್​ಗೆ ಮುಂದಾದ ಭರತ್…ಸೂರ್ಯಕುಮಾರ್​ಗೆ ಕ್ಯಾಚ್​. 32 ರನ್​ಗಳೊಂದಿಗೆ  ಪೆವಿಲಿಯನ್ ಕಡೆ ಹೆಜ್ಜೆಹಾಕಿದ ಭರತ್.

    ಆರ್​ಸಿಬಿ 2ನೇ ವಿಕೆಟ್ ಪತನ

    RCB 75/2 (8.5)

  • 26 Sep 2021 08:13 PM (IST)

    ಬೂಮ್ ಬೂಮ್ ಭರತ್

    ವಾಟ್ ಎ ಶಾಟ್…ರಾಹುಲ್ ಚಹರ್​ ಎಸೆತಕ್ಕೆ ಲೆಗ್​ಸೈಡ್​ನತ್ತ ಬಿಗ್ ಹಿಟ್​…ಭರತ್ ಬ್ಯಾಟ್​ನಿಂದ ಸಿಕ್ಸ್​

  • 26 Sep 2021 08:11 PM (IST)

    ವಿರಾಟ ದರ್ಶನ

    ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಕೊಹ್ಲಿ…ರಾಹುಲ್ ಚಹರ್ ಎಸೆತದಲ್ಲಿ ಸ್ಟ್ರೈಟ್ ಹಿಟ್​…ಫೋರ್

    RCB 68/1 (8.2)

      

  • 26 Sep 2021 08:05 PM (IST)

    7ನೇ ಓವರ್​ನಲ್ಲಿ 10 ರನ್​

    ರಾಹುಲ್ ಚಹರ್ ಎಸೆದ 7ನೇ ಓವರ್​ನಲ್ಲಿ 10 ರನ್

    RCB 58/1 (7)

  • 26 Sep 2021 08:05 PM (IST)

    ಕೊಹ್ಲಿ-ಭರತ್ ಉತ್ತಮ ಜೊತೆಯಾಟ

    ಕೊಹ್ಲಿ-ಭರತ್ ಉತ್ತಮ ಜೊತೆಯಾಟ

    30 ಎಸೆತಗಳಲ್ಲಿ 50 ರನ್​ಗಳ ಜೊತೆಯಾಟ ಪೂರೈಸಿದ ಕಿಂಗ್​ ಕೊಹ್ಲಿ-ಭರತ್

  • 26 Sep 2021 08:04 PM (IST)

    50 ರನ್​ ಪೂರೈಸಿದ ಆರ್​ಸಿಬಿ

    ಭರತ್…ವಾಟ್ ಎ ಶಾಟ್…ರಾಹುಲ್ ಚಹರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಶಾಟ್…ಸಿಕ್ಸ್

  • 26 Sep 2021 07:59 PM (IST)

    ಪವರ್​ಪ್ಲೇ ಮುಕ್ತಾಯ: ಆರ್​ಸಿಬಿ ಉತ್ತಮ ಆರಂಭ

    RCB 48/1 (6)

    ಕ್ರೀಸ್​ನಲ್ಲಿ ಭರತ್ ಹಾಗೂ ಕೊಹ್ಲಿ ಬ್ಯಾಟಿಂಗ್.

  • 26 Sep 2021 07:55 PM (IST)

    ರಾಕಿಂಗ್ ಕ್ಯಾಪ್ಟನ್

    ಮಿಲ್ನೆ ಎಸೆತಕ್ಕೆ ಸಿಕ್ಸರ್ ಉತ್ತರ..ಮಿಡ್​ ಆನ್​ನತ್ತ ಭರ್ಜರಿ ಹೊಡೆತ… ಕೊಹ್ಲಿ ಬ್ಯಾಟ್​ನಿಂದ ಸಿಕ್ಸ್

    RCB 44/1 (5)

      

  • 26 Sep 2021 07:54 PM (IST)

    ಮಾಸ್ಟರ್​ ಆಫ್ ಕವರ್​ ಡ್ರೈವ್

    ಆ್ಯಡಂ ಮಿಲ್ನೆ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಸೂಪರ್ ಶಾಟ್….ಫೋರ್

  • 26 Sep 2021 07:51 PM (IST)

    4 ಓವರ್ ಮುಕ್ತಾಯ

    RCB 31/1 (4)

      

  • 26 Sep 2021 07:50 PM (IST)

    ಲವ್ಲಿ ಬೌಂಡರಿ

    ಬುಮ್ರಾ ಟು ಭರತ್….ಸ್ಕ್ವೇರ್​ ಕಟ್​… ಲವ್ಲಿ ಬೌಂಡರಿ…ಫೋರ್

  • 26 Sep 2021 07:49 PM (IST)

    ಕೊಹ್ಲಿ ಅಬ್ಬರ ಶುರು

    ಬುಮ್ರಾ ಎಸೆತದಲ್ಲಿ ಬ್ಯಾಟ್​ ತುದಿ ತಗುಲಿ ಬೌಂಡರಿ

    ಇದರ ಬೆನ್ನಲ್ಲೇ ಪುಲ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದ ವಿರಾಟ್ ಕೊಹ್ಲಿ

  • 26 Sep 2021 07:46 PM (IST)

    3 ಓವರ್ ಮುಕ್ತಾಯ

    RCB 15/1 (3)

    ಕ್ರೀಸ್​ನಲ್ಲಿ ಭರತ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್

      

  • 26 Sep 2021 07:45 PM (IST)

    ಭರತ್ ಬೌಂಡರಿ

    ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಟಾಪ್ ಎಡ್ಜ್​…ಭರತ್ ಬ್ಯಾಟ್​ನಿಂದ ಬೌಂಡರಿ

  • 26 Sep 2021 07:41 PM (IST)

    2 ಓವರ್ ಮುಕ್ತಾಯ

    RCB- 8/1 (2)

     

  • 26 Sep 2021 07:39 PM (IST)

    ವಾವ್ಹ್​…ವಾಟ್​ ಎ ಕ್ವಿಂಟನ್​ ಕ್ಯಾಚ್

    ದೇವದತ್ ಪಡಿಕ್ಕಲ್ ಔಟ್….ಬುಮ್ರಾ ಎಸೆತದಲ್ಲಿ ಚೆಂಡು ಪಡಿಕ್ಕಲ್ ಬ್ಯಾಟ್ ಸವರಿ ಕೀಪರ್​ನತ್ತ…ಅದ್ಭುತ ಡೈವಿಂಗ್​ ಕ್ಯಾಚ್ ಹಿಡಿದ ಕ್ವಿಂಟನ್ ಡಿಕಾಕ್

  • 26 Sep 2021 07:38 PM (IST)

    ಸಿಕ್ಸ್ ಸಿಡಿಸಿದ ಕೊಹ್ಲಿ

    ಟ್ರೆಂಟ್ ಬೌಲ್ಟ್ ಮೊದಲ ಓವರ್​ನ 2ನೇ ಎಸೆತದಲ್ಲಿ ಕೊಹ್ಲಿ ಬ್ಯಾಟ್​ನಿಂದ ಭರ್ಜರಿ ಹೊಡೆತ…ಚೆಂಡು ರಾಹುಲ್ ಚಹರ್ ಕೈಗೆ ತಗುಲಿ ಬೌಂಡರಿ ಹೊರಕ್ಕೆ…ಸಿಕ್ಸ್

  • 26 Sep 2021 07:37 PM (IST)

    ಮೊದಲ ಓವರ್​

    ಮೊದಲ ಓವರ್​ನಲ್ಲಿ ಕೇವಲ 7 ರನ್ ನೀಡಿದ ಟ್ರೆಂಟ್ ಬೌಲ್ಟ್​

  • 26 Sep 2021 07:35 PM (IST)

    ಕಣಕ್ಕಿಳಿದಿರುವ ಕಲಿಗಳು

  • 26 Sep 2021 07:10 PM (IST)

    ಉಭಯ ತಂಡಗಳು ಹೀಗಿವೆ

    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಡೇನಿಯಲ್ ಕ್ರಿಶ್ಚಿಯನ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್

    ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನೆ, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

  • 26 Sep 2021 06:56 PM (IST)

    ಉಭಯ ತಂಡಗಳ ಅಂಕಿ ಅಂಶಗಳು ಹೀಗಿವೆ

  • Published On - Sep 26,2021 6:54 PM

    Follow us
    ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
    ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
    ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
    ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
    ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
    ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
    ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
    ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
    ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
    ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
    ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
    ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
    ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
    ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
    ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
    ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
    ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
    ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
    ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
    ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ