ಡಬಲ್ ಹೆಡರ್ ದಿನವಾದ ಇಂದು ನಡೆದ 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಬರೋಬ್ಬರಿ 8 ವಿಕೆಟ್ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ತಂಡದ ಪರ 148 ರನ್ಗಳ ಶತಕದ ಜೊತೆಯಾಟ ನಡೆಸಿದ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಆರ್ಸಿಬಿಯ ದಾಖಲೆಯ ಗೆಲುವಿನ ಹೀರೋಗಳಾದರು. ಮೂರು ವರ್ಷಗಳ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯ ಆರ್ಸಿಬಿ ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ, ಆರ್ಸಿಬಿ ಬೌಲರ್ಗಳ ದಾಳಿಗೆ ನಲುಗಿತು. ಆದರೆ ಒಂದು ತುದಿಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ತಿಲಕ್ ವರ್ಮಾ ಅವರ ಅಜೇಯ ಅರ್ಧಶತಕದ ನೆರವಿನಿಂದಾಗಿ 20 ಓವರ್ಗಳಲ್ಲಿ 172 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ ಆರಂಭಿಕರು ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿ, ಮುಂಬೈ ತಂಡವನ್ನು ಪಂದ್ಯದಿಂದಲೇ ಹೊರಹಾಕಿದರು.
17ನೇ ಓವರ್‌ನ ಮೊದಲ ಎಸೆತವನ್ನು ಬೌಂಡರಿಗಟ್ಟಿದ ಕೊಹ್ಲಿ, 2ನೇ ಎಸೆತವನ್ನು ಲಾಂಗ್ ಆನ್ನಲ್ಲಿ ಸಿಕ್ಸರ್ಗಟ್ಟುವ ಮೂಲಕ ಆರ್ಸಿಬಿಗೆ 8 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.
ಕಾರ್ತಿಕ್ ವಿಕೆಟ್ ಬಳಿಕ ಬಂದ ಮ್ಯಾಕ್ಸ್ವೆಲ್, ಗ್ರೀನ್ ಅವರ 16ನೇ ಓವರ್‌ನ ಕೊನೆಯ ಎರಡು ಎಸೆತಗಳನ್ನು ಸಿಕ್ಸರ್ಗಟ್ಟಿದರು.
ನಾಯಕ ಫಾಫ್ ವಿಕೆಟ್ ಬಳಿಕ ಬಂದಿದ್ದ ದಿನೇಶ್ ಕಾರ್ತಿಕ್ ಕೇವಲ 3 ಎಸೆತಗಳನ್ನು ಎದುರಿಸಿ ಡೀಪ್ ಸ್ಕ್ವೈರ್ನಲ್ಲಿ ಕ್ಯಾಚಿತ್ತು ಔಟಾದರು.
148 ರನ್ಗಳ ಜೊತೆಯಾಟ ಅಂತ್ಯಗೊಂಡಿದೆ. 73 ರನ್ ಬಾರಿಸಿದ್ದ ನಾಯಕ ಫಾಫ್ 15ನೇ ಓವರ್ನಲ್ಲಿ ಕ್ಯಾಚಿತ್ ಔಟಾದರು.
ಅರ್ಷದ್ 15ನೇ ಓವರ್ನಲ್ಲಿ ಕಿಂಗ್ ಕೊಹ್ಲಿ ಮಿಡ್ ವಿಕೆಟ್ ಮೇಲೆ ಭರ್ಜರಿ ಸಿಕ್ಸರ್ ಹೊಡೆದರು.
ಆರ್ಚರ್ ಎಸೆದ 14ನೇ ಓವರ್ನಲ್ಲಿ ಕಿಂಗ್ ಕೊಹ್ಲಿ, ಫೈನ್ ಲೆಗ್ ಮೇಲೆ ಭರ್ಜರಿ ಸಿಕ್ಸರ್ ಬಾರಿಸಿದರು. ಈ ಓವರ್ನಲ್ಲಿ ಒಟ್ಟು 10 ರನ್ ಬಂದವು.
13ನೇ ಓವರ್ನಲ್ಲಿ ಉಗ್ರರೂಪ ತಾಳಿದ ಕೊಹ್ಲಿ ಹಾಗೂ ಫಾಫ್ ಈ ಓವರ್ನಲ್ಲಿ 16 ರನ್ ಕಲೆಹಾಕಿದರು. ಕೊಹ್ಲಿ 1 ಬೌಂಡರಿ ಬಾರಿಸಿದರೆ, ಫಾಫ್ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.
12ನೇ ಓವರ್ನಲ್ಲಿ ಕೇವಲ 7 ರನ್ಗಳು ಬಂದವು ಈ ಓವರ್ನಲ್ಲಿ 3 ಡಬಲ್ ರನ್ ಕದ್ದ ಕೊಹ್ಲಿ ತಮ್ಮ 50ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು.
ನಾಯಕ ಫಾಫ್ ಕೇವಲ 29 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ. 10ನೇ ಓವರ್ ಎಸೆದ ಹೃತಿಕ್ ಅವರ ಓವರ್ನಲ್ಲಿ ಫಾಫ್ 3 ಮತ್ತು 4ನೇ ಎಸೆತವನ್ನು ಸಿಕ್ಸರ್ಗಟ್ಟಿದರು.
8ನೇ ಓವರ್ ಎಸೆದ ಗ್ರೀನ್ಗೆ ಫಾಫ್ ಎರಡು ಬೌಂಡರಿ ಬಾರಿಸಿದರು. ಎರಡೂ ಬೌಂಡರಿಗಳು ಕೂಡ ಡೀಪ್ ಎಕ್ಸ್ಟ್ರಾ ಕವರ್ನಲ್ಲಿಯೇ ಬಂದವು. ಹಾಗೆಯೇ ಕೊನೆಯ ಎಸೆತದಲ್ಲಿ ಸಿಕ್ಸರ್ ಕೂಡ ಬಂತು.
6 ಓವರ್ಗಳಲ್ಲಿ ಆರ್ಸಿಬಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 53 ರನ್ ಗಳಿಸಿದೆ. 6ನೇ ಓವರ್ನಲ್ಲಿ ಕೊಹ್ಲಿ ಮಿಡ್ ಆಫ್ ತಲೆಯ ಮೇಲೆ ಭರ್ಜರಿ ಬೌಂಡರಿ ಬಾರಿಸಿದರು.
5ನೇ ಓವರ್ ಎಸೆದ ಚಾವ್ಲಾ ಕೇವಲ 1 ಬೌಂಡರಿ ಬಿಟ್ಟುಕೊಟ್ಟು ಒಟ್ಟು 5 ರನ್ ನೀಡಿದರು. ಮುಂಬೈಗೆ ಇದು ಉತ್ತಮ ಓವರ್
4ನೇ ಓವರ್ ಎಸೆದ ಆರ್ಚರ್ ಅವರ 2ನೇ ಎಸೆತವನ್ನು ಕೊಹ್ಲಿ ಬೌಂಡರಿಗಟ್ಟಿದರೆ, 5ನೇ ಎಸೆತವನ್ನು ಲಾಂಗ್ ಆಫ್ನಲ್ಲಿ ಸಿಕ್ಸರ್ಗಟ್ಟಿದರು.
ಬೆಹ್ರೆನ್ಡ್ರಾಫ್ ಎಸೆದ 3ನೇ ಓವರ್ನಲ್ಲಿ ನಾಯಕ ಫಾಫ್ 2 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು. ಮೊದಲ ಸಿಕ್ಸರ್ ಮಿಡ್ ಆನ್ ಕಡೆ ಇಂದ ಬಂದರೆ, ಎರಡನೆ ಸಿಕ್ಸರ್ ಮಿಡ್ ಅಫ್ ಕಡೆ ಇಂದ ಬಂತು.
ಅರ್ಷದ್ ಎಸೆದ 2ನೇ ಓವರ್ನಲ್ಲಿ ಮೊದಲು ಹ್ಯಾಟ್ರಿಕ್ ವೈಡ್ ಬಂದವು. ಆ ನಂತರ ಎರಡನೇ ಎಸೆತದಲ್ಲಿ ಕೊಹ್ಲಿ ಫೈನ್ ಲೆಗ್ನಲ್ಲಿ ಬೌಂಡರಿ ಬಾರಿಸಿದರು.
ಆರ್ಸಿಬಿ ಪರ ಕೊಹ್ಲಿ ಹಾಗೂ ಡು ಪ್ಲೆಸಿಸ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಮುಂಬೈ ಪರ ಬೆಹ್ರೆನ್ಡ್ರಾಫ್ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ. ಈ ಓವರ್ನಲ್ಲಿ 5 ರನ್ ಬಂತು
20ನೇ ಓವರ್ ಎಸೆದ ಹರ್ಷಲ್ ಕೂಡ ಈ ಓವರ್ನಲ್ಲಿ ಬರೋಬ್ಬರಿ 22 ರನ್ ಬಿಟ್ಟುಕೊಟ್ಟರು. ಮುಂಬೈ ಪರ ತಿಲಕ್ ವರ್ಮಾ ಅಜೇಯ 84 ರನ್ ಬಾರಿಸಿದರು. ಅಂತಿಮವಾಗಿ ಮುಂಬೈ 20 ಓವರ್ಗಳಲ್ಲಿ 174 ರನ್ ಗಳಿಸಿದೆ.
19ನೇ ಓವರ್ ಎಸೆದ ಸಿರಾಜ್ ಬರೋಬ್ಬರಿ 5 ವೈಡ್ ಜೊತೆಗೆ 2 ಬೌಂಡರಿ ನೀಡಿ, ಒಟ್ಟು 16 ರನ್ ಬಿಟ್ಟುಕೊಟ್ಟರು.
ಹರ್ಷಲ್ ಪಟೇಲ್ 18ನೇ ಓವರ್‌ನ ಮೊದಲ ಎಸೆತದಲ್ಲಿ ಹೃತಿಕ್ ಶೋಕಿನ್ ಅವರ ವಿಕೆಟ್ ಪಡೆದರು. ಫಾಫ್ ಡು ಪ್ಲೆಸಿಸ್ ಅದ್ಭುತ ಕ್ಯಾಚ್ ಹಿಡಿದರು.
ತಿಲಕ್ ವರ್ಮಾ 17ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದ್ದಾರೆ. ಇದಕ್ಕಾಗಿ ಅವರು 32 ಎಸೆತಗಳನ್ನು ತೆಗೆದುಕೊಂಡರು.
16ನೇ ಓವರ್ ಎಸೆಯಲು ಬಂದ ಕರ್ಣ್ ಶರ್ಮಾ, ಮುಂಬೈನ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
14ನೇ ಓವರ್ ಎಸೆಯಲು ಬಂದ ಕರ್ಣ್ ಶರ್ಮಾ ಅವರ 3 ಮತ್ತು 4 ನೇ ಎಸೆತವನ್ನು ವದೀರಾ ಲಾಂಗ್ ಆಫ್ನಲ್ಲಿ ಭರ್ಜರಿ ಸಿಕ್ಸರ್ಗಟ್ಟಿದರು. ಆದರೆ ಅದರ ಮುಂದಿನ ಎಸೆತದಲ್ಲೇ ಮತ್ತೊಂದು ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು.
12ನೇ ಓವರ್ ಎಸೆದ ಮ್ಯಾಕ್ಸ್ವೆಲ್ 12 ರನ್ ಬಿಟ್ಟುಕೊಟ್ಟರು. ಈ ಓವರ್ನಲ್ಲಿ ತಿಲಕ್ ಲಾಂಕ್ ಆಫ್ನಲ್ಲಿ 1 ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರು.
ಮುಂಬೈ ಇನ್ನಿಂಗ್ಸ್ನ 10 ಓವರ್ ಮುಗಿದಿದೆ. ಇದರಲ್ಲಿ ತಂಡದ ಪ್ರಮುಖ 4 ಬ್ಯಾಟರ್ ಪೆವಿಲಿಯನ್ ಸೇರಿಕೊಂಡಿದ್ದರೆ, ತಿಲಕ್ ಹಾಗೂ ವದೇರಾ ಸದ್ಯ ಕ್ರೀಸ್ನಲ್ಲಿದ್ದಾರೆ. 10 ಓವರ್ ಅಂತ್ಯಕ್ಕೆ ಮುಂಬೈ 55 ರನ್ ಬಾರಿಸಿದೆ.
ಬ್ರೆಸ್ವೆಲ್ ಎಸೆದ 9ನೇ ಓವರ್‌ನ 3ನೇ ಎಸೆದಲ್ಲಿ ಭರ್ಜರಿ ಬೌಂಡರಿ ಬಾರಿಸಿದ್ದ ಸೂರ್ಯಕುಮಾರ್ ಯಾದವ್, ಮುಂದಿನ ಎಸೆತದಲ್ಲೂ ಅದೇ ಯತ್ನ ಮಾಡಿ, ಪಾಯಿಂಟ್ನಲ್ಲಿ ನಿಂತಿದ್ದ ಫಿಲ್ಡರ್ಗೆ ಕ್ಯಾಚಿತ್ತು ಔಟಾದರು.
ಹರ್ಷಲ್ ಪಟೇಲ್ ಎಸೆದ 7ನೇ ಓವರ್ನಲ್ಲಿ ತಿಲಕ್ ವರ್ಮಾ ಥರ್ಡ್ ಮ್ಯಾನ್ ಕಡೆ ಬೌಂಡರಿ ಬಾರಿಸಿದರು. 7 ಓವರ್ ಅಂತ್ಯಕ್ಕೆ ಮುಂಬೈ 37/3
ಮುಂಬೈ ಪಾಳಯದ ಪವರ್ ಪ್ಲೇ ಅಂತ್ಯವಾಗಿದ್ದು, ಈ 6 ಓವರ್ಗಳಲ್ಲಿ ಮುಂಬೈ 3 ವಿಕೆಟ್ ಕಳೆದುಕೊಂಡು 29 ರನ್ ಗಳಿಸಿದೆ. 6ನೇ ಓವರ್ನಲ್ಲಿ ತಿಲಕ್ ವರ್ಮಾ ಲಾಂಗ್ ಆಫ್ನಲ್ಲಿ ಭರ್ಜರಿ ಸಿಕ್ಸರ್ ಭಾರಿಸಿದರು.
ಸಿಕ್ಕ ಜೀವದಾನವನ್ನು ಬಳಸಿಕೊಳ್ಳುವಲ್ಲಿ ರೋಹಿತ್ ಯಡವಿದ್ದಾರೆ. 5ನೇ ಓವರ್ನಲ್ಲಿ ಜೀವದಾನ ಸಿಕ್ಕರೆ, 6ನೇ ಓವರ್ನಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ರೋಹಿತ್, ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
5ನೇ ಓವರ್ ಎಸೆದ ಸಿರಾಜ್ ರನ್ಗೆ ಕಡಿವಾಣ ಹಾಕಿದರು. ಇದರಿಂದ ಬಿಗ್ ಶಾಟ್ ಹೊಡೆಯಲು ಯತ್ನಿಸಿದ ರಾಹುಲ್ ಚೆಂಡನ್ನು ಗಾಳಿಯಲ್ಲಿ ಆಡಿದರು. ಇಲ್ಲಿ ಸುಲಭ ಕ್ಯಾಚ್ ತೆಗೆದುಕೊಳ್ಳುವ ಅವಕಾಶವಿತ್ತು. ಆದರೆ ಕಮ್ಯುನಿಕೆಷನ್ ಗ್ಯಾಪ್ನಿಂದಾಗಿ ಕ್ಯಾಚ್ ಕೈಚೆಲ್ಲಿದರು.
ಮುಂಬೈ ತಂಡದ 2ನೇ ವಿಕೆಟ್ ಪತನವಾಗಿದೆ. ಕಿಶನ್ ವಿಕೆಟ್ ಬಳಿಕ ಬಂದಿದ್ದ ಗ್ರೀನ್ ಒಂದು ಬೌಂಡರಿ ಬಾರಿಸಿ, ಮುಂದಿನ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಟೋಪ್ಲಿಗೆ ಇದು ಮೊದಲ ವಿಕೆಟ್
3ನೇ ಓವರ್ ಎಸೆದ ಸಿರಾಜ್ ಅವರ 3ನೇ ಎಸೆತವನ್ನು ಬಿಗ್ ಶಾಟ್ ಆಡಲು ಯತ್ನಿಸಿದ ಕಿಶನ್ ಫೈನ್ ಲೆಗ್ನಲ್ಲಿ ನಿಂತಿದ್ದ ಹರ್ಷಲ್ ಪಟೇಲ್ಗೆ ಕ್ಯಾಚಿತ್ತು ಔಟಾಗಿದ್ದಾರೆ.
ಟೋಪ್ಲಿ ಎಸೆದ 2ನೇ ಓವರ್ನಲ್ಲಿ ಕಿಶನ್ 2 ಬೌಂಡರಿ ಬಾರಿಸಿದರು. ಈ ಓವರ್ನಲ್ಲಿ ಒಟ್ಟು 9 ರನ್ ಬಂದವು
ಮುಂಬೈ ಬ್ಯಾಟಿಂಗ್ ಆರಂಭಿಸಿದ್ದು, ನಾಯಕ ರೋಹಿತ್ ಹಾಗೂ ಕಿಶನ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆರ್ಸಿಬಿ ಪರ ಸಿರಾಜ್ ಮೊದಲ ಓವರ್ ಎಸೆದರು. ಈ ಓವರ್ನಲ್ಲಿ ಕೇವಲ 2 ರನ್ ಬಂದವು.
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕಲ್ ಬ್ರೇಸ್‌ವೆಲ್, ಗ್ಲೆನ್ ಮ್ಯಾಕ್ಸ್‌ವೆಲ್, ರೀಸ್ ಟೋಪ್ಲಿ, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್,
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ಜೋಫ್ರಾ ಆರ್ಚರ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಅರ್ಷದ್ ಖಾನ್
A look at the Playing XIs of the two sides ??
Follow the match ▶️ https://t.co/ws391sGhme#TATAIPL | #RCBvMI pic.twitter.com/6yTWelIWWO
— IndianPremierLeague (@IPL) April 2, 2023
ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಮುಂಬೈ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - 7:01 pm, Sun, 2 April 23