RCB vs SRH Highlights, IPL 2025: ಆರ್‌ಸಿಬಿಗೆ ಸೋಲಿನ ಶಾಕ್ ನೀಡಿದ ಹೈದರಾಬಾದ್
Royal Challengers Bengaluru vs Sunrisers Hyderabad Highlights in Kannada: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೈದರಾಬಾದ್ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಹೈದರಾಬಾದ್ ಮೊದಲು ಬ್ಯಾಟ್ ಮಾಡಿ 231 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಆರ್‌ಸಿಬಿ 42 ರನ್‌ಗಳಿಂದ ಸೋತು ಇದರೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಐಪಿಎಲ್ 2025 ರ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಸೋಲಿನ ಶಾಕ್ ನೀಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಇಶಾನ್ ಕಿಶನ್ ಅವರ ಅದ್ಭುತ ಬ್ಯಾಟಿಂಗ್ ಆಧಾರದ ಮೇಲೆ ಆರ್‌ಸಿಬಿಗೆ 232 ರನ್‌ಗಳ ಗುರಿಯನ್ನು ನೀಡಿತು. ಇಶಾನ್ 48 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 94 ರನ್ ಗಳಿಸಿದರು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಕ್ಕಿತ್ತಾದರೂ, ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ರೆಡ್ ಆರ್ಮಿಗೆ ಈ ಬೃಹತ್ ಮೊತ್ತವನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಇಡೀ ತಂಡಕ್ಕೆ ಪೂರ್ಣ 20 ಓವರ್ಗಳನ್ನು ಆಡಲು ಸಾಧ್ಯವಾಗದೆ 19.5 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲೌಟ್ ಆಯಿತು.
LIVE NEWS & UPDATES
-
SRH ಗೆ ಭರ್ಜರಿ ಗೆಲುವು
ಸನ್‌ರೈಸರ್ಸ್ ಹೈದರಾಬಾದ್ ತಂಡವು ಬೆಂಗಳೂರು ತಂಡವನ್ನು 42 ರನ್‌ಗಳ ಭರ್ಜರಿ ಅಂತರದಿಂದ ಸೋಲಿಸಿದೆ. ಕೊನೆಯ ಓವರ್‌ನಲ್ಲಿ ಹರ್ಷಲ್ ಪಟೇಲ್ ಯಶ್ ದಯಾಳ್ ಅವರ ವಿಕೆಟ್ ಪಡೆದರು, ಇದರಿಂದಾಗಿ ಇಡೀ ಬೆಂಗಳೂರು ತಂಡ 189 ರನ್‌ಗಳಿಗೆ ಆಲೌಟ್ ಆಯಿತು.
-
ಭುವನೇಶ್ವರ್ ಕೂಡ ಔಟ್
19ನೇ ಓವರ್‌ನ ಮೊದಲ ಎಸೆತದಲ್ಲೇ ಭುವನೇಶ್ವರ್ ಕುಮಾರ್ ಕ್ಲೀನ್ ಬೌಲ್ಡ್ ಆದರು.
-
-
ಟಿಮ್ ಡೇವಿಡ್ ಔಟ್
ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿರುವ ಟಿಮ್ ಡೇವಿಡ್ ನೋವಿನಿಂದಾಗಿ ಯಾವುದೇ ಕೊಡುಗೆ ನೀಡಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದರು. ಬೆಂಗಳೂರಿನ ಸೋಲು ಈಗ ಖಚಿತವಾಗಿದೆ.
-
ಮೂರನೇ ವಿಕೆಟ್ ಪತನ
ಉತ್ತಮ ಫಾರ್ಮ್‌ನಲ್ಲಿರುವ ಫಿಲ್ ಸಾಲ್ಟ್ (62 ರನ್‌ಗಳು, 32 ಎಸೆತಗಳು) ಔಟಾಗಿದ್ದು, ಬೆಂಗಳೂರು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತು. 12 ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ನಾಯಕ ಪ್ಯಾಟ್ ಕಮ್ಮಿನ್ಸ್ ಈ ವಿಕೆಟ್ ಪಡೆದರು.
-
ಎರಡನೇ ವಿಕೆಟ್
ಬೆಂಗಳೂರು ಎರಡನೇ ಹಿನ್ನಡೆ ಅನುಭವಿಸಿದ್ದು, ಮಾಯಾಂಕ್ ಅಗರ್ವಾಲ್ ಅವರ ಪುನರಾಗಮನ ಉತ್ತಮವಾಗಿರಲಿಲ್ಲ. 11ನೇ ಓವರ್‌ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಮಯಾಂಕ್ ವಿಕೆಟ್ ಪಡೆದರು.
-
-
ಸಾಲ್ಟ್ ಅರ್ಧಶತಕ
ನಿಧಾನಗತಿಯ ಆರಂಭದ ನಂತರ, ಫಿಲ್ ಸಾಲ್ಟ್ ಗೇರ್ ಬದಲಾಯಿಸಿ ಕೇವಲ 27 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಸಾಲ್ಟ್ ಇದುವರೆಗೆ 4 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
-
100 ರನ್ ಪೂರ್ಣ
9ನೇ ಓವರ್‌ನ ಎರಡನೇ ಎಸೆತದಲ್ಲಿ ಫಿಲ್ ಸಾಲ್ಟ್ ಅದ್ಭುತ ಸಿಕ್ಸರ್ ಬಾರಿಸಿದರು. ಇದರೊಂದಿಗೆ ಬೆಂಗಳೂರು 100 ರನ್‌ಗಳನ್ನು ಪೂರ್ಣಗೊಳಿಸಿತು.
-
ಮೊದಲ ವಿಕೆಟ್ ಪತನ
7ನೇ ಓವರ್‌ನಲ್ಲಿ ಸ್ಪಿನ್ನರ್ ಹರ್ಷ್ ದುಬೆ ಅವರ ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿ (43, 25 ಎಸೆತಗಳು) ಸರಳ ಕ್ಯಾಚ್ ನೀಡಿದರು.
-
50 ರನ್ ಪೂರ್ಣ
ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರ ಆಟದ ನೆರವಿನಿಂದ ಬೆಂಗಳೂರು ತಂಡ 5ನೇ ಓವರ್‌ನಲ್ಲೇ 50 ರನ್‌ಗಳನ್ನು ಪೂರ್ಣಗೊಳಿಸಿತು.
-
ಆರ್‌ಸಿಬಿ ಬ್ಯಾಟಿಂಗ್ ಆರಂಭ
ಬೆಂಗಳೂರು ತಂಡದ ಇನ್ನಿಂಗ್ಸ್ ಆರಂಭಿಸಲು ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಬಂದಿದ್ದಾರೆ. ಇವರಿಬ್ಬರೂ ಮೊದಲ 2 ಓವರ್‌ಗಳಲ್ಲಿ 19 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು.
-
232 ರನ್‌ಗಳ ಟಾರ್ಗೆಟ್
ಸನ್‌ರೈಸರ್ಸ್ ಹೈದರಾಬಾದ್ ತಂಡ 231 ರನ್‌ಗಳ ಬೃಹತ್ ಸ್ಕೋರ್ ಗಳಿಸಿದೆ. ಕೊನೆಯ ಓವರ್‌ನಲ್ಲಿ ಇಶಾನ್ ಕಿಶನ್ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರೂ ಶತಕ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅವರು ಕೇವಲ 48 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳಿಂದ 94 ರನ್ ಗಳಿಸಿ ಸ್ಮರಣೀಯ ಇನ್ನಿಂಗ್ಸ್ ಆಡಿದರು.
-
ಆರನೇ ವಿಕೆಟ್ ಪತನ
17ನೇ ಓವರ್‌ನ ಕೊನೆಯ ಎಸೆತದಲ್ಲಿ ಹೈದರಾಬಾದ್ ಅಭಿನವ್ ಮನೋಹರ್ ಅವರ ವಿಕೆಟ್ ಕಳೆದುಕೊಂಡಿತು. ಶೆಫರ್ಡ್ಗೆ ಈ ವಿಕೆಟ್ ಸಿಕ್ಕಿತು.
-
ಐದನೇ ವಿಕೆಟ್ ಪತನ
ನಿತೀಶ್ ಕುಮಾರ್ ರೆಡ್ಡಿ (4) ಬೇಗನೆ ನಿರ್ಗಮಿಸುವುದರೊಂದಿಗೆ ಸನ್‌ರೈಸರ್ಸ್ ಐದನೇ ವಿಕೆಟ್ ಕಳೆದುಕೊಂಡಿತು. ರೊಮಾರಿಯೊ ಶೆಫರ್ಡ್ ಎಸೆದ 15ನೇ ಓವರ್‌ನ ಎರಡನೇ ಎಸೆತದಲ್ಲಿ ನಿತೀಶ್ ಔಟಾದರು.
-
ಕಿಶನ್ ಅರ್ಧಶತಕ
ಇಶಾನ್ ಕಿಶನ್ ಅದ್ಭುತ ಇನ್ನಿಂಗ್ಸ್ ಆಡಿ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಸೀಸನ್ನಲ್ಲಿ ಅವರು 50ರ ಗಡಿ ದಾಟಿದ್ದು ಇದು ಎರಡನೇ ಬಾರಿ ಮಾತ್ರ.
-
ಅನಿಕೇತ್ ವರ್ಮಾ ಔಟ್
ಬೆಂಗಳೂರು ತಂಡವು ಅನಿಕೇತ್ ವರ್ಮಾ (26 ರನ್, 9 ಎಸೆತ) ಅವರ ಸ್ಫೋಟಕ ಇನ್ನಿಂಗ್ಸ್‌ಗೆ ಬ್ರೇಕ್ ಹಾಕಿತು. 12ನೇ ಓವರ್‌ನಲ್ಲಿ ಕೃನಾಲ್ ಪಾಂಡ್ಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಅವರು ಅದೇ ಓವರ್‌ನಲ್ಲಿ ಔಟಾದರು.
-
ಸುಯಶ್ ಮತ್ತೆ ದುಬಾರಿ
ಅನಿಕೇತ್ ವರ್ಮಾ ಸುಯಶ್ ಶರ್ಮಾ ಅವರನ್ನು ಗುರಿಯಾಗಿಸಿಕೊಂಡು ಈ ಓವರ್‌ನಲ್ಲಿ 2 ಸಿಕ್ಸರ್‌ಗಳು ಮತ್ತು 1 ಬೌಂಡರಿ ಬಾರಿಸಿದರು. ಈ ರೀತಿಯಾಗಿ 11ನೇ ಓವರ್‌ನಲ್ಲಿ ಒಟ್ಟು 19 ರನ್‌ಗಳು ಬಂದವು.
-
ಮೂರನೇ ವಿಕೆಟ್ ಪತನ
ಹೆನ್ರಿಕ್ ಕ್ಲಾಸೆನ್ (24) ಅವರನ್ನು ಸುಯಾಶ್ ಶರ್ಮಾ ವಾಪಸ್ ಕಳುಹಿಸಿದ್ದರಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತು.
-
100 ರನ್ ಪೂರ್ಣ
9ನೇ ಓವರ್‌ನಲ್ಲಿ ಇಶಾನ್ ಮತ್ತು ಕ್ಲಾಸೆನ್ ಒಟ್ಟಾಗಿ 3 ಬೌಂಡರಿಗಳನ್ನು ಬಾರಿಸಿದರು. ಹೈದರಾಬಾದ್ 100 ರನ್‌ಗಳನ್ನು ಪೂರ್ಣಗೊಳಿಸಿತು.
-
ಸುಯಾಶ್ ದುಬಾರಿ ಓವರ್
7ನೇ ಓವರ್‌ನಲ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡಲು ಬಂದ ಸ್ಪಿನ್ನರ್ ಸುಯಾಶ್ ಶರ್ಮಾ ಅವರ ಆರಂಭ ಉತ್ತಮವಾಗಿರಲಿಲ್ಲ ಮತ್ತು ಕ್ಲಾಸೆನ್ ಆ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸುವ ಮೂಲಕ 13 ರನ್ ಗಳಿಸಿದರು.
-
ಪವರ್‌ಪ್ಲೇ ಪೂರ್ಣ
ಸನ್‌ರೈಸರ್ಸ್ ಇನ್ನಿಂಗ್ಸ್‌ನ ಪವರ್‌ಪ್ಲೇ ಅದ್ಭುತವಾದ ಸಿಕ್ಸರ್‌ನೊಂದಿಗೆ ಕೊನೆಗೊಂಡಿದೆ. ಲುಂಗಿ ಎನ್‌ಗಿಡಿ ಎಸೆತದಲ್ಲಿ ಹೆನ್ರಿಕ್ ಕ್ಲಾಸೆನ್ ಪುಲ್ ಶಾಟ್ ಹೊಡೆದು ಸಿಕ್ಸರ್ ಬಾರಿಸಿದರು. ಪವರ್‌ಪ್ಲೇನಲ್ಲಿ ಹೈದರಾಬಾದ್ ತಂಡ 2 ವಿಕೆಟ್ ಕಳೆದುಕೊಂಡು 71 ರನ್ ಗಳಿಸಿತು.
-
ಎರಡನೇ ವಿಕೆಟ್ ಪತನ
ಹೈದರಾಬಾದ್ ತಂಡವು ತನ್ನ ಎರಡನೇ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಐದನೇ ಓವರ್‌ನಲ್ಲಿ ಭುವನೇಶ್ವರ್ ಎಸೆದ ಎರಡನೇ ಎಸೆತದಲ್ಲಿ ಟ್ರಾವಿಸ್ ಹೆಡ್ (17) ಸರಳ ಕ್ಯಾಚ್ ನೀಡಿದರು. ಈ ಮೂಲಕ ಹೈದರಾಬಾದ್ ಕೇವಲ 3 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡಿದೆ.
-
ಮೊದಲ ವಿಕೆಟ್
ಅಭಿಷೇಕ್ ಶರ್ಮಾ (34) ಔಟಾದ ನಂತರ ಸನ್‌ರೈಸರ್ಸ್ ತಂಡದ ಸ್ಫೋಟಕ ಆರಂಭ ಅಂತ್ಯಗೊಂಡಿತು. ನಾಲ್ಕನೇ ಓವರ್‌ನಲ್ಲಿ ಲುಂಗಿ ಎನ್‌ಗಿಡಿ ಎಸೆದ ಕೊನೆಯ ಎಸೆತದಲ್ಲಿ ಅಭಿಷೇಕ್ ಔಟಾದರು.
-
50 ರನ್ ಪೂರ್ಣ
ಅಭಿಷೇಕ್ ಶರ್ಮಾ ಅವರ ಆಕ್ರಮಣಕಾರಿ ಆಟದಿಂದ ಹೈದರಾಬಾದ್ ಕೇವಲ 3.3 ಓವರ್‌ಗಳಲ್ಲಿ 50 ರನ್‌ಗಳನ್ನು ತಲುಪಿದೆ.
-
ಅಭಿ- ಹೆಡ್ ಆರ್ಭಟ
ಹೈದರಾಬಾದ್ ತಂಡದ ಆರಂಭಿಕರು ಬಂದ ಕೂಡಲೇ ತಮ್ಮದೇ ಆದ ಶೈಲಿಯಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ. ವಿಶೇಷವಾಗಿ ಭುವನೇಶ್ವರ್ ಕುಮಾರ್ ಅವರ ಎರಡನೇ ಓವರ್‌ನಲ್ಲಿ ಅಭಿಷೇಕ್ ಮತ್ತು ಹೆಡ್ 2 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸುವ ಮೂಲಕ 18 ರನ್ ಗಳಿಸಿದರು.
-
ಆರ್‌ಸಿಬಿ
ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ (ನಾಯಕ ಮತ್ತು ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಲುಂಗ್ ಎನ್‌ಗಿಡಿ, ಸುಯಾಶ್ ಶರ್ಮಾ.
-
ಸನ್ ರೈಸರ್ಸ್ ಹೈದರಾಬಾದ್
ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನದ್ಕಟ್, ಇಶಾನ್ ಮಾಲಿಂಗ.
-
ಟಾಸ್ ಗೆದ್ದ ಆರ್‌ಸಿಬಿ
ಟಾಸ್ ಗೆದ್ದ ಆರ್‌ಸಿಬಿ ನಾಯಕ ಜಿತೇಶ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
-
ಮೊದಲ ಹಣಾಹಣಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಮೊದಲ ಮುಖಾಮುಖಿ ಇದು. ಬೆಂಗಳೂರು ಪ್ಲೇಆಫ್ ತಲುಪಿದ್ದರೆ, ಹೈದರಾಬಾದ್ ಟೂರ್ನಿಯಿಂದ ಹೊರಬಿದ್ದಿದೆ. ಈ ಸೀಸನ್ನಲ್ಲಿ ಉಭಯ ತಂಡಗಳ ನಡುವಿನ 13 ನೇ ಪಂದ್ಯ ಇದು.
Published On - May 23,2025 6:57 PM
