Rishabh Pant: ರಿಷಭ್ ಪಂತ್ ಐಪಿಎಲ್ ಲಭ್ಯತೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್

IPL 2023: ಐಪಿಎಲ್​ನಿಂದ ಪಂತ್ ಔಟಾದರೆ ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕನನ್ನ ಹುಡುಕಬೇಕಾಗುತ್ತದೆ. ಹೀಗಿರುವಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮಹತ್ವದ ಹೇಳಿಕೆ ನೀಡಿದ್ದಾರೆ.

Rishabh Pant: ರಿಷಭ್ ಪಂತ್ ಐಪಿಎಲ್ ಲಭ್ಯತೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್
Rishabh Pant Delhi Capitals
Edited By:

Updated on: Jan 21, 2023 | 10:06 AM

ಕಳೆದ ವರ್ಷ ಡಿಸೆಂಬರ್‌ 30 ರಂದು ದಿಲ್ಲಿಯಿಂದ ಉತ್ತರಾಖಂಡಕ್ಕೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ರಿಷಭ್‌ ಪಂತ್‌ (Rishabh Pant) ಭೀಕರ ಅಪಘಾತಕ್ಕೀಡಾಗಿದ್ದರು. ಡೆಹ್ರಾಡೂನ್​ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಪಂತ್​ಗೆ ಚಿಕಿತ್ಸೆ ನೀಡಲಾಯಿತು. ನಂತರ ಉತ್ತಮ ಚಿಕಿತ್ಸೆಗಾಗಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸದ್ಯ ಪಂತ್ ಚೇತರಿಸಿಕೊಳ್ಳುತ್ತಿದ್ದಾರೆ. ರಿಷಭ್‌ ಪಂತ್‌ ಅವರು ಮುಂದಿನ ಎರಡು ವಾರಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದ್ದಾರೆಂದು ವರದಿಯಾಗಿದೆ. ಆ ಮೂಲಕ 2023ರ ಏಕದಿನ ವಿಶ್ವಕಪ್‌ (World Cup) ಟೂರ್ನಿಯ ಒಳಗಾಗಿ ಎಡಗೈ ಆಟಗಾರ ಸಂಪೂರ್ಣ ಫಿಟ್‌ ಆಗಲಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಐಪಿಎಲ್ 2023 ರಲ್ಲಿ (IPL 2023) ಪಂತ್ ಆಡುವುದು ಅನುಮಾನ ಎಂದೇ ಹೇಳಲಾಗಿದೆ.

ಐಪಿಎಲ್​ನಿಂದ ಪಂತ್ ಔಟಾದರೆ ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕನನ್ನ ಹುಡುಕಬೇಕಾಗುತ್ತದೆ. ಹೀಗಿರುವಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮಹತ್ವದ ಹೇಳಿಕೆ ನೀಡಿದ್ದಾರೆ. ”ರಿಷಬ್ ಪಂತ್ ಐಪಿಎಲ್ 2023ರಲ್ಲಿ ಆಡಲು ಯೋಗ್ಯವಾಗಿಲ್ಲದಿದ್ದರೂ, ಡೆಲ್ಲಿ ಕ್ಯಾಪಿಟಲ್ಸ್​ನ ಡಗೌಟ್​ನಲ್ಲಿ ಅವರನ್ನು ನೋಡಲು ಬಯಸುತ್ತೇನೆ,” ಎಂದು ಪಾಂಟಿಂಗ್ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪಾಂಟಿಂಗ್, ನಾವು ರಿಷಬ್ ಪಂತ್ ಜಾಗವನ್ನು ಬದಲಾಯಿಸಲು ಸಾಧ್ಯವಿಲ್ಲ, ಇದು ಸ್ಪಷ್ಟ ನಿರ್ಧಾರವಾಗಿದೆ. ನಾವು ಕಾಡು ನೋಡಬೇಕಿದೆ ಮತ್ತು ತಂಡದಲ್ಲಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ ಅವರ ಸ್ಥಾನದಲ್ಲಿ ನಮಗೆ ಆಯ್ಕೆ ಇದೆ ಎಂದು ಹೇಳಿದ್ದಾರೆ.

IND vs NZ: ಶಾರ್ದೂಲ್ ಅಥವಾ ಉಮ್ರಾನ್, ತಂಡದಲ್ಲಿ ಯಾರಿಗೆ ಸ್ಥಾನ? 2ನೇ ಪಂದ್ಯಕ್ಕೆ ಸಂಭಾವ್ಯ ತಂಡಗಳು ಹೀಗಿವೆ

ಇದನ್ನೂ ಓದಿ
IND vs NZ 2nd ODI: ಇಂದು ದ್ವಿತೀಯ ಏಕದಿನ: ರಾಯ್​ಪುರದಲ್ಲಿ ಟೀಮ್ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ
Cricket News: ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ಗಿಲ್ಲ ಅವಕಾಶ; ನುಚ್ಚುನೂರಾಯ್ತು ಐಸಿಸಿಯ ಮಹಾ ಕನಸು..!
IND vs NZ: ಟಾಸ್​ ಗೆದ್ದವನೇ ಬಾಸ್; ರಾಯ್‌ಪುರದ ಪಿಚ್​ನಲ್ಲಿ ಮಿಂಚುವವರು ಯಾರು? ಇಲ್ಲಿದೆ ಪಿಚ್ ರಿಪೋರ್ಟ್
IND vs NZ: ಇಂದಿನ ಪಂದ್ಯದಲ್ಲಿ ವಿಶೇಷ ದಾಖಲೆ ಬರೆಯಲಿದ್ದಾರೆ ಶಮಿ; ಸಿರಾಜ್​ಗೂ ಇದೆ ಅವಕಾಶ

ಬಿಸಿಸಿಐ ಮೂಲಗಳು ತಿಳಿಸಿರುವ ಪ್ರಕಾರ, ”ರಿಷಭ್‌ ಪಂತ್ ಅವರ ಮೊಣಕಾಲಿನ ಅಸ್ಥಿ ರಜ್ಜುಗಳು ಸಂಪೂರ್ಣವಾಗಿ ಗುಣಮುಖರಾಗಲು ಆರು ವಾರಗಳ ಕಾಲ ಸಮಯಬೇಕು. ತದನಂತರ ಅವರ ಪುನಶ್ಚೇತನ ಕಾರ್ಯ ಹಾಗೂ ಫಿಟ್ನೆಸ್‌ ಕಾರ್ಯ ಆರಂಭವಾಗಲಿದೆ. ನಂತರ ಎರಡು ತಿಂಗಳ ಬಳಿಕ ಅವರು ಕ್ರಿಕೆಟ್‌ ಆಡಬಹುದು. ಈ ಹಾದಿ ತುಂಬಾ ಕಠಿಣವಾಗಿದೆ,” ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೆ ರಿಷಭ್ ಪಂತ್ ತಮ್ಮ ಆರೋಗ್ಯದ ಕುರಿತು ತಾವೇ ಟ್ವೀಟ್ ಹಾಗೂ ಇನ್ಸ್‌ಸ್ಟಾ ಗ್ರಾಮ್‌ನಲ್ಲಿ ಮೆಸೇಜ್ ಮಾಡಿದ್ದರು. ”ನಾನು ಎಲ್ಲರಿಗೂ ವಿನಮ್ರ ಮತ್ತು ಕೃತಜ್ಞನಾಗಿದ್ದೇನೆ. ನಿಮ್ಮ ಅಪಾರ ಬೆಂಬಲಕ್ಕೆ ನನ್ನ ಅನಂತಾನಂತ ಧನ್ಯವಾದಗಳು. ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇದೀಗ ನಾನು ಅನಾರೋಗ್ಯದಿಂದ ಸುಧಾರಿಸಿಕೊಳ್ಳುತ್ತಿದ್ದೇನೆ. ಇವನ್ನೆಲ್ಲ ನಿಮಗೆ ಹೇಳಬೇಕು ಅಂತ ಅನಿಸಿತು,” ಎಂದು ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:06 am, Sat, 21 January 23