WIPL 2023: ಮಹಿಳಾ ಐಪಿಎಲ್ ಹರಾಜಿನಲ್ಲಿ ಈ ಐದು ಆಟಗಾರ್ತಿಯರಿಗೆ ಭಾರಿ ಬೇಡಿಕೆ! ಪಟ್ಟಿಯಲ್ಲಿ ಇಬ್ಬರು ಭಾರತೀಯರು

TV9kannada Web Team

TV9kannada Web Team | Edited By: pruthvi Shankar

Updated on: Jan 20, 2023 | 10:38 PM

WIPL 2023: ಜನವರಿ 25ರಂದು ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲು ಬಿಸಿಸಿಐ ಸಿದ್ಧತೆ ನಡೆಸಿದ್ದು, ಆಯಾ ಫ್ರಾಂಚೈಸಿಗಳ ಪರ್ಸ್ ಮೌಲ್ಯ, ದೇಶಿ ಆಟಗಾರರ ಪಟ್ಟಿಯೊಂದಿಗೆ ವಿದೇಶಿ ಆಟಗಾರರ ಪಟ್ಟಿಯನ್ನೂ ಪ್ರಕಟಿಸಲಾಗುವುದು.

WIPL 2023: ಮಹಿಳಾ ಐಪಿಎಲ್ ಹರಾಜಿನಲ್ಲಿ ಈ ಐದು ಆಟಗಾರ್ತಿಯರಿಗೆ ಭಾರಿ ಬೇಡಿಕೆ! ಪಟ್ಟಿಯಲ್ಲಿ ಇಬ್ಬರು ಭಾರತೀಯರು
ಮಹಿಳಾ ಐಪಿಎಲ್ ಹರಾಜು

6 ತಂಡಗಳೊಂದಿಗೆ ಮೊದಲ ಮಹಿಳಾ ಐಪಿಎಲ್ (women’s IPL) ಮಾರ್ಚ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಅಲ್ಲದೆ ಜನವರಿ 25ರಂದು ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲು ಬಿಸಿಸಿಐ (BCCI) ಸಿದ್ಧತೆ ನಡೆಸಿದ್ದು, ಆಯಾ ಫ್ರಾಂಚೈಸಿಗಳ ಪರ್ಸ್ ಮೌಲ್ಯ, ದೇಶಿ ಆಟಗಾರರ ಪಟ್ಟಿಯೊಂದಿಗೆ ವಿದೇಶಿ ಆಟಗಾರರ ಪಟ್ಟಿಯನ್ನೂ ಪ್ರಕಟಿಸಲಾಗುವುದು. ಬಳಿಕ ಮಹಿಳಾ ಐಪಿಎಲ್ ಹರಾಜು ನಡೆಯಲಿದೆ. ಏತನ್ಮಧ್ಯೆ, WIPL ಮಾಧ್ಯಮ ಹಕ್ಕುಗಳನ್ನು ಈಗಾಗಲೇ ವಯಾಕಾಮ್ 18 ಗೆ ಮಾರಾಟ ಮಾಡಲಾಗಿದೆ. ಫ್ರಾಂಚೈಸ್ ಮಾಲೀಕತ್ವದ ಹರಾಜು ಜನವರಿ 25 ರಂದು ನಡೆಯಲಿದೆ. ಪುರುಷರ ಐಪಿಎಲ್ ಫ್ರಾಂಚೈಸಿಗಳಾದ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಈ ಹರಾಜಿನಲ್ಲಿ ಭಾಗವಹಿಸಲಿವೆ. ಬಳಿಕ ಮುಂಬರುವ ಮಹಿಳಾ ಐಪಿಎಲ್ 2023 ಹರಾಜಿನಲ್ಲಿ ಯಾವ ಆಟಗಾರ್ತಿಯರು ಹೆಚ್ಚು ದುಬಾರಿಯಾಗುತ್ತಾರೆ ಎಂಬುದನ್ನು ನೋಡಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

ಯುವ ಆಟಗಾರ್ತಿಯರಿಗೆ ಸುವರ್ಣಾವಕಾಶ

ಮಹಿಳಾ ಐಪಿಎಲ್ ಮೊದಲ ಬಾರಿಗೆ ನಡೆಯಲಿದ್ದು, ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿರುವ ಮಹಿಳಾ ಐಪಿಎಲ್ ನಲ್ಲಿ ಹಲವು ಯುವ ಆಟಗಾರ್ತಿಯರಿಗೆ ಅವಕಾಶ ಸಿಗಲಿದೆ. ಅಲ್ಲದೆ ಈ ಐಪಿಎಲ್​ನಲ್ಲಿ ಹಿರಿಯರಿಗಷ್ಟೇ ಅಲ್ಲ.. ಯುವ ಆಟಗಾರ್ತಿಯರ ಮೇಲೆ ಭಾರಿ ಹಣದ ಮಳೆಯಾಗುವ ಸಾಧ್ಯತೆಗಳಿವೆ. ಅಂತಹ ಕೆಲವು ಆಟಗಾರರ ಪಟ್ಟಿ ಇಲ್ಲಿದೆ.

ಮಹಿಳಾ ಐಪಿಎಲ್ ಹರಾಜಿನಲ್ಲಿ ದುಬಾರಿ ಬೆಲೆಗೆ ಮಾರಾಟವಾಗಬಹುದಾದಂತ 5 ಆಟಗಾರ್ತಿಯರು ಇವರೇ.

1. ಸ್ಮೃತಿ ಮಂಧಾನ (ಭಾರತ)

ಟೀಂ ಇಂಡಿಯಾ ಮಹಿಳಾ ತಂಡದ ಎಡಗೈ ಬ್ಯಾಟರ್ ಸ್ಮೃತಿ ಮಂಧಾನ ಮಹಿಳಾ ಐಪಿಎಲ್ 2023ರ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಬಿಡ್ ಪಡೆಯುವ ಸಾಧ್ಯತೆ ಇದೆ. ಸ್ಮೃತಿಗೆ ಬ್ಯಾಟಿಂಗ್ ಸಾಮರ್ಥ್ಯದ ಜೊತೆಗೆ ಅಪಾರ ಅಭಿಮಾನಿ ಬಳಗವೂ ಇದೆ. ಇದು ಫ್ರಾಂಚೈಸಿಗೆ ಹೆಚ್ಚು ಅಭಿಮಾನಿಗಳನ್ನು ಪಡೆಯಲು ಸಹಾಯ ಮಾಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

2. ಶಫಾಲಿ ವರ್ಮಾ (ಭಾರತ)

ಭಾರತ ಮಹಿಳಾ ತಂಡದಲ್ಲಿ ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಯುವ ಬ್ಯಾಟರ್ ಶೆಫಾಲಿ ವರ್ಮಾ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ತನ್ನ ಚೊಚ್ಚಲ ಪಂದ್ಯದಲ್ಲಿಯೇ ಅಬ್ಬರಿಸುವ ಮೂಲಕ ಲೇಡಿ ಸೆಹ್ವಾಗ್ ಎಂದು ಕರೆಸಿಕೊಂಡಿರುವ ಶಫಾಲಿ ಅವರನ್ನು ಖರೀದಿಸಲು ಪ್ರತಿ ಫ್ರಾಂಚೈಸಿಯೂ ಪ್ರಯತ್ನಿಸಲಿದೆ.

IND vs NZ: ಶಾರ್ದೂಲ್ ಅಥವಾ ಉಮ್ರಾನ್, ತಂಡದಲ್ಲಿ ಯಾರಿಗೆ ಸ್ಥಾನ? 2ನೇ ಪಂದ್ಯಕ್ಕೆ ಸಂಭಾವ್ಯ ತಂಡಗಳು ಹೀಗಿವೆ

3. ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ)

ಆಸ್ಟ್ರೇಲಿಯನ್ ಮಹಿಳಾ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಹೊಂದಿರುವ ಎಲ್ಲಿಸ್ ಪೆರ್ರಿ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ ಯಾವುದೇ ಹಂತದಲ್ಲಿ ಪಂದ್ಯವನ್ನು ಬದಲಿಸುವ ಸಾಮಥ್ರ್ಯ ಇವರಿಗಿದೆ. ಹಾಗೆಯೇ ನಾಯಕಿಯಾಗಿಯೂ ಅವರು ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಬಲ್ಲರು. ಹೀಗಾಗಿ ಪೆರ್ರಿ ಖರೀದಿಗಾಗಿ ಎಲ್ಲಾ ತಂಡಗಳು ಪ್ರಯತ್ನಿಸಲಿವೆ.

4. ಅಲಿಸ್ಸಾ ಹೀಲಿ (ಆಸ್ಟ್ರೇಲಿಯಾ)

ಹೆಚ್ಚು ಅನುಭವಿ ಆಟಗಾರ್ತಿ ಅಲಿಸ್ಸಾ ಹೀಲಿ ಕೂಡ ಮಹಿಳಾ ಐಪಿಎಲ್ ಹರಾಜಿನಲ್ಲಿ ಭಾರಿ ಮೊತ್ತದ ಹಣ ಪಡೆಯುವ ಸಾಧ್ಯತೆ ಇದೆ. ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಕೆಲವೇ ಮಹಿಳೆಯರಲ್ಲಿ ಇವರು ಕೂಡ ಒಬ್ಬರು. ಅಲ್ಲದೆ ಸ್ಫೋಟಕ ಓಪನಿಂಗ್​ಗೆ ಹೆಸರುವಾಸಿಯಾಗಿರುವ ಹೀಲಿ ಮೇಲೆ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿವೆ.

5. ನ್ಯಾಟ್ ಸ್ಕೀವರ್ (ಇಂಗ್ಲೆಂಡ್)

30ರ ಹರೆಯದ ಇಂಗ್ಲಿಷ್ ಬಲಗೈ ಬ್ಯಾಟರ್ ನಾಟ್ ಸ್ಕೈವರ್ ಕೂಡ ಮೊದಲ ಮಹಿಳಾ ಐಪಿಎಲ್ ಹರಾಜಿನಲ್ಲಿ ಹೆಚ್ಚು ಬೇಡಿಕೆಯಲ್ಲಿದ್ದಾರೆ. ಇದುವರೆಗೆ ಬ್ಯಾಟಿಂಗ್​ನಲ್ಲಿ ಅನೇಕ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ತಂಡಕ್ಕೆ ಅನೇಕ ವಿಜಯಗಳನ್ನು ತಂದುಕೊಟ್ಟಿರುವ ಸ್ಕೀವರ್​ಗೂ ಭಾರಿ ಬೇಡಿಕೆ ಇದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada