Rinku Singh Captain: ಐಪಿಎಲ್​ಗೂ ಮುನ್ನ ರಿಂಕು ಸಿಂಗ್​ಗೆ ಒಲಿದ ನಾಯಕತ್ವ ಪಟ್ಟ..!

Rinku Singh Captain: ಉತ್ತರ ಪ್ರದೇಶ ಕ್ರಿಕೆಟ್ ತಂಡವು ಡಿಸೆಂಬರ್ 21 ರಿಂದ ಆರಂಭವಾಗುವ ವಿಜಯ್ ಹಜಾರೆ ಟ್ರೋಫಿಗೆ ರಿಂಕು ಸಿಂಗ್ ಅವರನ್ನು ನಾಯಕನನ್ನಾಗಿ ನೇಮಿಸಿದೆ. ಭುವನೇಶ್ವರ್ ಕುಮಾರ್ ಅವರ ಬದಲಿಗೆ ರಿಂಕು ಸಿಂಗ್ ಅವರನ್ನು ನೇಮಿಸಲಾಗಿದೆ. ರಿಂಕು ಸಿಂಗ್ ಇದೇ ಮೊದಲ ಬಾರಿಗೆ ರಾಜ್ಯ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ.

Rinku Singh Captain: ಐಪಿಎಲ್​ಗೂ ಮುನ್ನ ರಿಂಕು ಸಿಂಗ್​ಗೆ ಒಲಿದ ನಾಯಕತ್ವ ಪಟ್ಟ..!
ರಿಂಕು ಸಿಂಗ್
Follow us
ಪೃಥ್ವಿಶಂಕರ
|

Updated on: Dec 20, 2024 | 9:57 PM

ಭಾರತದ ದೇಶೀಯ ಟೂರ್ನಿ ವಿಜಯ್ ಹಜಾರೆ ಟ್ರೋಫಿಗೆ ಉತ್ತರ ಪ್ರದೇಶ ತಂಡವನ್ನು ಪ್ರಕಟಿಸಲಾಗಿದೆ. ಡಿಸೆಂಬರ್ 21 ರಿಂದ ಆರಂಭವಾಗಲಿರುವ ಈ ಟೂರ್ನಿಗೆ ರಿಂಕು ಸಿಂಗ್ ಅವರನ್ನು ತಂಡದ ನಾಯಕನಾಗಿ ಮಾಡಲಾಗಿದೆ. ಭುವನೇಶ್ವರ್ ಕುಮಾರ್ ಬದಲಿಗೆ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭುವನೇಶ್ವರ್ ಕುಮಾರ್ ಉತ್ತರ ಪ್ರದೇಶ ತಂಡದ ನಾಯಕರಾಗಿದ್ದರು. ಆದರೀಗ ತಂಡದ ನಾಯಕತ್ವವನ್ನು ರಿಂಕು ಸಿಂಗ್​ಗೆ ನೀಡಲಾಗಿದೆ. ಈ ಮೂಲಕ ರಿಂಕು ಇದೇ ಮೊದಲ ಬಾರಿಗೆ ಸೀನಿಯರ್ ಮಟ್ಟದಲ್ಲಿ ರಾಜ್ಯ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ರಿಂಕು ಯುಪಿ ಟಿ 20 ಲೀಗ್‌ನಲ್ಲಿ ಮೀರತ್ ಮೇವರಿಕ್ಸ್ ತಂಡದ ನಾಯಕತ್ವವಹಿಸಿ ತಂಡವನ್ನು ಚಾಂಪಿಯನ್‌ ಮಾಡಿದ್ದರು.

ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ ತಂಡದ ನಾಯಕತ್ವವಹಿಸಿಕೊಳ್ಳುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ರಿಂಕು ಸಿಂಗ್, ‘ಯುಪಿ ಟಿ20 ಲೀಗ್‌ನಲ್ಲಿ ನಾಯಕತ್ವವಹಿಸಿದ್ದು ನನಗೆ ದೊಡ್ಡ ಅವಕಾಶವಾಗಿತ್ತು. ಈ ಅವಧಿಯಲ್ಲಿ ನಾನು ಬಹಳಷ್ಟು ಕಲಿಯಲು ಸಾಧ್ಯವಾಯಿತು. ಯುಪಿ ಟಿ20 ಲೀಗ್‌ನಲ್ಲೂ ಬೌಲಿಂಗ್‌ನತ್ತ ಗಮನ ಹರಿಸಿದ್ದೆ. ಆಧುನಿಕ ಕ್ರಿಕೆಟ್‌ಗೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡುವ ಆಟಗಾರರ ಅಗತ್ಯವಿದೆ. ಹೀಗಾಗಿ ನಾನು ನನ್ನ ಬೌಲಿಂಗ್‌ನಲ್ಲಿಯೂ ಕೆಲಸ ಮಾಡಿದ್ದೇನೆ. ನಾಯಕನಾಗಿ ನನ್ನ ಜವಾಬ್ದಾರಿ ಹೆಚ್ಚಿದೆ. ನಾನು ಇದಕ್ಕೆ ಸಿದ್ಧನಿದ್ದೇನೆ ಎಂದಿದ್ದಾರೆ.

ಕೆಕೆಆರ್ ನಾಯಕತ್ವದ ಬಗ್ಗೆ ನಾನು ಯೋಚಿಸುತ್ತಿಲ್ಲ

ಇತ್ತೀಚೆಗೆ, ಕೆಲವು ಮಾಧ್ಯಮ ವರದಿಗಳು ಮುಂಬರುವ ಐಪಿಎಲ್ ಸೀಸನ್‌ನಲ್ಲಿ ರಿಂಕು ಸಿಂಗ್ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ನಾಯಕತ್ವವನ್ನೂ ಪಡೆಯಬಹುದು ಎಂದು ಹೇಳಿದ್ದವು. ಈ ಕುರಿತು ಮಾತನಾಡಿದ ರಿಂಕು ಸಿಂಗ್, ‘ಸದ್ಯಕ್ಕೆ ತಮ್ಮ ಗಮನವು ತಂಡವನ್ನು ವಿಜಯ್ ಹಜಾರೆ ಟ್ರೋಫಿ ಗೆಲ್ಲಿಸುವುದರ ಮೇಲೆ ಮಾತ್ರ. ಐಪಿಎಲ್‌ನಲ್ಲಿ ಕೆಕೆಆರ್ ನಾಯಕತ್ವದ ಬಗ್ಗೆ ನಾನು ಹೆಚ್ಚು ಯೋಚಿಸುವುದಿಲ್ಲ. ಸದ್ಯ ನನ್ನ ಗಮನವೆಲ್ಲ ಉತ್ತರ ಪ್ರದೇಶ ತಂಡದ ಮೇಲಿದೆ. ನಾವು ವಿಜಯ್ ಹಜಾರೆ ಟ್ರೋಫಿ ಗೆಲ್ಲಲು ಬಯಸುತ್ತೇವೆ ಎಂದಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆ

ದೇಶೀಯ ಕ್ರಿಕೆಟ್‌ನಲ್ಲಿ ರಿಂಕು ಸಿಂಗ್ ಅವರ ಅಂಕಿಅಂಶಗಳು ಅತ್ಯುತ್ತಮವಾಗಿದ್ದು ಅವರು ಆಡಿರುವ 52 ಇನ್ನಿಂಗ್ಸ್‌ಗಳಲ್ಲಿ 48.69 ಸರಾಸರಿ ಮತ್ತು 94.8 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 1899 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್​ನಿಂದ ಒಂದು ಶತಕ ಮತ್ತು 17 ಅರ್ಧ ಶತಕಗಳು ಸಿಡಿದಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ