U19 Asia Cup 2024: ಅಜೇಯ ತಂಡವಾಗಿ ಏಷ್ಯಾಕಪ್ ಫೈನಲ್ಗೇರಿದ ಟೀಂ ಇಂಡಿಯಾ
Women’s U19 Asia Cup 2024: ಭಾರತದ ಅಂಡರ್-19 ಮಹಿಳಾ ಕ್ರಿಕೆಟ್ ತಂಡವು ಮಲೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್‌ಗೆ ಪ್ರವೇಶಿಸಿದೆ. ಶ್ರೀಲಂಕಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ 4 ವಿಕೆಟ್‌ಗಳ ಗೆಲುವು ಸಾಧಿಸಿ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಮಲೇಷ್ಯಾದಲ್ಲಿ ನಡೆಯುತ್ತಿರುವ ಅಂಡರ್-19 ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಭಾರತ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಇಂದು ಶ್ರೀಲಂಕಾ ತಂಡವನ್ನು ಎದುರಿಸಿದ್ದ ಟೀಂ ಇಂಡಿಯಾ ನಾಲ್ಕು ವಿಕೆಟ್‌ಗಳಿಂದ ಲಂಕಾ ತಂಡವನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಭಾರತ 98 ರನ್ಗಳಿಗೆ ಲಂಕಾ ತಂಡವನ್ನು ಕಟ್ಟಿಹಾಕಿತು. ಭಾರತದ ಪರ ಆಯುಷಿ ಶುಕ್ಲಾ ನಾಲ್ಕು ಓವರ್‌ಗಳಲ್ಲಿ ಹತ್ತು ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಗೆಲುವಿಗೆ 98 ರನ್ ಗುರಿ ಬೆನ್ನಟ್ಟಿದ ಭಾರತ 14.5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.
ಮಿಂಚಿದ ಆಯುಷಿ ಶುಕ್ಲಾ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ಸುಮುದು ನಿಸಂಸಲಾ (21) ಮತ್ತು ನಾಯಕಿ ಮನುಡಿ ಎನ್ (33) ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ಉಳಿದಂತೆ ತಂಡದ ಮಿಕ್ಕ 9 ಆಟಗಾರರು ಕೇವಲ ಒಂದಂಕಿಗೆ ಸುಸ್ತಾದರು. ಭಾರತದ ಪರ ಆಯುಷಿ ಶುಕ್ಲಾರನ್ನು ಬಿಟ್ಟರೆ ಪರುಣಿಕಾ ಸಿಸೋಡಿಯಾ 2, ಶಬ್ನಮ್ ಶಕೀಲ್ ಹಾಗೂ ದೃತಿ ಕೇಸರಿ ತಲಾ 1 ವಿಕೆಟ್ ಪಡೆದರು.
ಭಾರತಕ್ಕೆ 4 ವಿಕೆಟ್ ಜಯ
ಲಂಕಾ ನೀಡಿದ 99 ರನ್ಗಳ ಗುರಿ ಬೆನ್ನಟ್ಟಿದ ಭಾರತದ ಆರಂಭವೂ ಉತ್ತಮವಾಗಿರಲಿಲ್ಲ. ಮೊದಲ ಓವರ್ನ ಮೂರನೇ ಎಸೆತದಲ್ಲಿ ಆರಂಭಿಕ ಆಟಗಾರ್ತಿ ಈಶ್ವರಿ ಅಸ್ವಾರೆ ವಿಕೆಟ್ ಒಪ್ಪಿಸಿದರು. ಆದರೆ ಆ ಬಳಿಕ ಜೊತೆಯಾದ ಜಿ ಕಮಲಿನಿ (28) ಮತ್ತು ಜಿ ತ್ರಿಶಾ (32) ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕಾಗಿ ತಂಡ ಕೂಡ 6 ವಿಕೆಟ್ಗಳನ್ನು ಕಳೆದುಕೊಳ್ಳಬೇಕಾಯಿತು. ಕೊನೆಯಲ್ಲಿ ಮಿಥಿಲಾ ವಿನೋದ್ 17 ರನ್ ಬಾರಿಸಿ ತಂಡಕ್ಕೆ ಅಮೋಘ ಜಯ ತಂದುಕೊಟ್ಟರು.
The Super 4’s have concluded, and India tops the points table with 7 points, followed closely by Bangladesh with 6 points—both securing their spots in the finals. Nepal and Sri Lanka bow out after a hard-fought campaign. #ACCWomensU19AsiaCup #ACC pic.twitter.com/kpAiKWPYWE
— AsianCricketCouncil (@ACCMedia1) December 20, 2024
ಟೂರ್ನಿಯಲ್ಲಿ ಭಾರತದ ಪ್ರದರ್ಶನ
ಅಂಡರ್ 19 ಏಷ್ಯಾಕಪ್ನ ಲೀಗ್ ಹಂತದಲ್ಲಿ ಇದುವರೆಗೆ 4 ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸೋಲದೆ ಇದೀಗ ಅಜೇಯ ತಂಡವಾಗಿ ಫೈನಲ್ ಪ್ರವೇಶಿದೆ. ಲೀಗ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿದ್ದ ಟೀ ಇಂಡಿಯಾ ಇದಾದ ಬಳಿಕ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳನ್ನು ಮಣಿಸಿದೆ. ಆದರೆ ನೇಪಾಳ ವಿರುದ್ಧದ ಪಂದ್ಯ ಮಾತ್ರ ಮಳೆಯಿಂದಾಗಿ ರದ್ದಾಗಬೇಕಾಯಿತು. ಇದೀಗ ಅಜೇಯ ತಂಡವಾಗಿ ಫೈನಲ್ ಪ್ರವೇಶಿರುವ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ