BAN vs WI: ವಿಂಡೀಸ್ ವಿರುದ್ಧ ಸರಣಿ ಗೆದ್ದು ಅಪರೂಪದ ಸಾಧನೆ ಮಾಡಿದ ಬಾಂಗ್ಲಾದೇಶ
BAN vs WI: ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 80 ರನ್‌ಗಳಿಂದ ಸೋಲಿಸುವ ಮೂಲಕ ಬಾಂಗ್ಲಾದೇಶ ತಂಡವು ಕ್ಲೀನ್ ಸ್ವೀಪ್ ಮಾಡಿದೆ. ಈ ಗೆಲುವಿನೊಂದಿಗೆ ಬಾಂಗ್ಲಾದೇಶವು ಮೊದಲ ಬಾರಿಗೆ ವಿದೇಶದಲ್ಲಿ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿದೆ.
ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಬಾಂಗ್ಲಾದೇಶ ತಂಡ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಉಭಯ ತಂಡಗಳ ನಡುವೆ ನಡೆದ ಕೊನೆಯ ಹಾಗೂ ಮೂರನೇ ಟಿ20ಪಂದ್ಯದಲ್ಲಿ ಆತಿಥೇಯ ತಂಡವನ್ನು 80 ರನ್ ಗಳಿಂದ ಸೋಲಿಸುವ ಮೂಲಕ ಬಾಂಗ್ಲಾ ತಂಡ ಈ ಸಾಧನೆ ಮಾಡಿದೆ. ಮೂರನೇ ಟಿ20ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 190 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 109 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಬಾಂಗ್ಲಾದೇಶ ಮೊದಲ ಬಾರಿಗೆ ವಿದೇಶದಲ್ಲಿ ನಡೆದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದೆ.
189 ರನ್ ಕಲೆಹಾಕಿದ ಬಾಂಗ್ಲಾ
ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 189 ರನ್ ಗಳಿಸಿತು. ತಂಡದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಾಕಿರ್ ಅಲಿ 41 ಎಸೆತಗಳಲ್ಲಿ 6 ಸಿಕ್ಸರ್ ಒಳಗೊಂಡ ಅಜೇಯ 72 ರನ್ ಗಳಿಸಿದರು. ಉಳಿದಂತೆ ಪರ್ವೇಜ್ ಹೊಸೈನ್ ಎಮಾನ್ 39 ರನ್‌ಗಳ ಇನ್ನಿಂಗ್ಸ್ ಆಡಿದರೆ, ಮೆಹದಿ ಹಸನ್ ಮಿರಾಜ್ ಕೂಡ 29 ರನ್‌ಗಳ ಕಾಣಿಕೆ ನೀಡಿದರು.
First clean sweep in an away T20i series against the West Indies🏏🇧🇩🔥
PC: CWI#BCB | #Cricket | #BANvWI | #T20 pic.twitter.com/6Xrp4PgBpj
— Bangladesh Cricket (@BCBtigers) December 20, 2024
ಇದಕ್ಕುತ್ತರವಾಗಿ ಗುರಿ ಬೆನ್ನತ್ತಿದ ಆತಿಥೇಯ ವೆಸ್ಟ್ ಇಂಡೀಸ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಹೀಗಾಗಿ 190 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅರ್ಧದಷ್ಟು ವಿಂಡೀಸ್ ತಂಡ ಕೇವಲ 46 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡಿತು. ಆ ಬಳಿಕವೂ ಆಟದಲ್ಲಿ ಯಾವುದೇ ಸುಧಾರಣೆ ಕಾಣದ ಪರಿಣಾಮ ಇಡೀ ತಂಡ 16.4 ಓವರ್ ಗಳಲ್ಲಿ ಆಲೌಟ್ ಆಯಿತು. ಅಂದರೆ, ಆತಿಥೇಯ ವೆಸ್ಟ್ ಇಂಡೀಸ್‌ಗೆ ಪೂರ್ಣ 20 ಓವರ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ.
ಸತತ ಮೂರನೇ ಬಾರಿಯೂ ವಿಫಲ
ಟಿ20 ಸರಣಿಯಲ್ಲಿ ಇದು ಸತತ ಮೂರನೇ ಬಾರಿಗೆ ವೆಸ್ಟ್ ಇಂಡೀಸ್ ತಂಡ ಗುರಿ ಬೆನ್ನಟ್ಟುವಲ್ಲಿ ವಿಫಲವಾಗಿದೆ. ಮೊದಲ ಟಿ20ಯಲ್ಲಿ 148 ರನ್ ಚೇಸ್ ಮಾಡಲು ವಿಫಲವಾಗಿದ್ದ ವಿಂಡೀಸ್ ಎರಡನೇ ಟಿ20ಯಲ್ಲಿ 130 ರನ್‌ಗಳ ಬೆನ್ನತ್ತುವುದರಲ್ಲೂ ಫೇಲ್ ಆಗಿತ್ತು. ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶದ ಗೆಲುವಿನ ಹೀರೋ ಜಾಕಿರ್ ಅಲಿ ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾದರೆ, ಸರಣಿಯಲ್ಲಿ 37 ರನ್ ಹಾಗೂ 8 ವಿಕೆಟ್ ಪಡೆದಿದ್ದ ಮೆಹದಿ ಹಸನ್ ಪಂದ್ಯಾವಳಿಯ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ