ಪರಿಪೂರ್ಣ ನಾಯಕನಾಗಿ ಬಳಿಕ ಒಂದೇ ಒಂದು ಸೋಲನ್ನು ಕಾಣದೆ ಗೆಲುವಿನ ಓಟ ಮುಂದುವರೆಸಿರುವ ರೋಹಿತ್ ಶರ್ಮಾ (Rohit Sharma) ಕ್ಯಾಪ್ಟನ್ ಆಗಿ ದಾಖಲೆ ಬರೆದಿದ್ದಾರೆ. ಕಳೆದ ನವೆಂಬರ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ವೈಟ್ವಾಷ್, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ವೈಟ್ವಾಷ್, ಇದೀಗ ಟಿ20 ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದ್ದು, ಉಳಿದಿರುವ ಒಂದು ಪಂದ್ಯ ಗೆದ್ದರೆ ಇಲ್ಲೂ ಕ್ಲೀನ್ಸ್ವೀಪ್ ಸಾಧನೆ ಮಾಡಲಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ 8 ರನ್ಗಳ ರೋಚಕ ಗೆಲುವು ಕಂಡಿತು. ಆರಂಭಿಕ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸಿದರೂ ವಿರಾಟ್ ಕೊಹ್ಲಿ (Virat Kohli) ಹಾಗೂ ರಿಷಭ್ ಪಂತ್ (Rishabh Pant) ಬೊಂಬಾಟ್ ಆಟವಾಡಿ ತಂಡಕ್ಕೆ ಆಸರೆಯಾದರು.
ಪ್ರಮುಖವಾಗಿ ರಿಷಭ್ ಪಂತ್ ಸ್ಫೋಟಕ ಆಟವಾಡಿ ತಂಡದ ರನ್ ಗತಿಯನ್ನು ಏರಿಸಿದರು. ಕೇವಲ 28 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ ಅಜೇಯ 52 ರನ್ ಚಚ್ಚಿದರು. ಇದೇ ಕಾರಣಕ್ಕೆ ಇವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಒಲಿದುಬಂತು. ಆದರೆ, ಪ್ರಶಸ್ತಿ ಸಮಾರಂಭ ವೇಳೆ ಅಚ್ಚರಿಯ ಘಟನೆಯೊಂದು ನಡೆಯಿತು. ಹರ್ಷ ಬೋಗ್ಲೆ ಅವರು ಪಂತ್ ಹೆಸರನ್ನು ಪಂದ್ಯಶ್ರೇಷ್ಠ ಎಂದು ಘೋಷಣೆ ಮಾಡುವ ವೇಳೆ ನಾಯಕ ರೋಹಿತ್ ಶರ್ಮಾ ಶಾಕ್ ಆದರು.
ಹೌದು, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪಂದ್ಯದ ಬಗ್ಗೆ ಮಾತನಾಡಿದ ಬಳಿಕ ಹರ್ಷ ಬೋಗ್ಲೆ ಪಂದ್ಯಶ್ರೇಷ್ಠ ರಿಷಭ್ ಪಂತ್ಗೆ ಎಂದು ಘೋಷಣೆ ಮಾಡುವುದರಲ್ಲಿದ್ದರು. ಈ ಸಂದರ್ಭ ರೋಹಿತ್ ಶಾಕ್ನಲ್ಲಿ “ಏನು ರಿಷಭ್ ಪಂತ್ ಹಾ ಪಂದ್ಯಶ್ರೇಷ್ಠ?” ಎಂದು ಅಚ್ಚರಿಯಿಂದ ತಮಾಷೆಯಾಗಿ ಕೇಳಿದ್ದಾರೆ. ರೋಹಿತ್ ಆಡಿರುವ ಮಾತು ಮೈಕ್ನಲ್ಲಿ ಸೆರೆಯಾಗಿದೆ. ಇದಕ್ಕೆ ಹರ್ಷ ಬೋಗ್ಲೇ, “ಕಮಾನ್ ರೋಹಿತ್, ಅವರು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಾರೆ,” ಎಂದು ಹೇಳಿದರು. ಬಳಿಕ ಪಂತ್ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
— Addicric (@addicric) February 18, 2022
3ನೇ ಟಿ20ಗೆ ಪಂತ್ ಅಲಭ್ಯ:
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಅಂತಿಮ ಮೂರನೇ ಟಿ20 ಪಂದ್ಯಕ್ಕೆ ರಿಷಭ್ ಪಂತ್ ಅಲಭ್ಯರಾಗಿದ್ದಾರೆ. ಸತತವಾಗಿ ಕ್ರಿಕೆಟ್ ಆಡುತ್ತಿರುವ ಕಾರಣ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪಂತ್ ಅವರಿಗೆ ಬಯೋ ಬಬಲ್ನಿಂದ ವಿಶ್ರಾಂತಿ ನೀಡಿದೆ. ಹೀಗಾಗಿ ಇವರು ವಿಂಡೀಸ್ ಜೊತೆಗೆ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೂ ಅಲಭ್ಯರಾಗಿದ್ದಾರೆ. ಲಂಕಾ ವಿರುದ್ಧದ ಟೆಸ್ಟ್ ಪಂದ್ಯದ ಸಂದರ್ಭ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ. ಇನ್ನು ಕಳೆದ ಡಿಸೆಂಬರ್‌ನಿಂದ ಬಿಡುವಿಲ್ಲದೆ ಕ್ರಿಕೆಟ್ ಆಡುತ್ತಿರುವ ಮಾಜಿ ನಾಯಕ ವಿರಾಟ್ ಕೊಹ್ಲಿಗೂ ವಿಶ್ರಾಂತಿ ಕೊಡಲು ಬಿಸಿಸಿಐ ನಿರ್ಧರಿಸಿದೆ. ಇವರು ಕೂಡ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20 ಮತ್ತು ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ. ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಹಾಗಾರಾಗಲಿದ್ದು, ಇದು ಇವರ 100ನೇ ಟೆಸ್ಟ್ ಪಂದ್ಯ ಆಗಲಿದೆ.
Venkatesh Iyer: ವೆಂಕಟೇಶ್ ಅಯ್ಯರ್ ಸ್ಫೋಟಕ ಹೊಡೆತಕ್ಕೆ ತಬ್ಬಿಬ್ಬಾದ ಭಾರತದ ಡಗೌಟ್: ಇಲ್ಲಿದೆ ರೋಚಕ ವಿಡಿಯೋ
Rohit Sharma: ಪಂದ್ಯ ಮುಗಿದ ಬಳಿಕ ಕೊಹ್ಲಿ ಆಟದ ಬಗ್ಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು ನೋಡಿ