ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ರೋಹಿತ್, ಇಂದು ವಿರಾಟ್ ಕೊಹ್ಲಿ ನೀಡಿದ ಪ್ರದರ್ಶನ ಮಹತ್ವದ್ದಾಗಿತ್ತು. ಅವರು ಬ್ಯಾಟ್ ಹಿಡಿದು ಕ್ರೀಸ್ಗೆ ಬಂದು ಆಟ ಶುರು ಮಾಡಿದಾಗ ನನ್ನ ಮೇಲಿದ್ದ ಒತ್ತಡ ಕಡಿಮೆ ಆಯಿತು. ಮೊದಲ ಎರಡು ಓವರ್ಗಳಲ್ಲಿ ನಾವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಆದರೆ, ಕೊಹ್ಲಿ ಬಂದು ಅಮೋಘ ಹೊಡೆತಗಳ ಮೂಲ ಗಮನ ಸೆಳೆದರು. ಅವರು ಬ್ಯಾಟಿಂಗ್ ಶೈಲಿ ನೋಡಲು ಆಹ್ಲಾದಕರವಾಗಿತ್ತು ಎಂಬುದು ಅವರ ಮಾತು.