ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾಗೆ (Rohit Sharma) ಇಂದು ವಿಶೇಷ ದಿನವಾಗಿದೆ. ಇಂದು ಈ ಆಟಗಾರ ತನ್ನ ಪ್ರತಿಭೆಯ ನಿಜವಾದ ಪರಿಚಯವನ್ನು ನೀಡಿದ ದಿನ. ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium in Bangalore) ಆಗಿದ್ದು, ಬಲಿಷ್ಠ ಆಸ್ಟ್ರೇಲಿಯ ತಂಡ ಮುಂದಿತ್ತು. ಕಾಂಗರೂಗಳ ಮೇಲೆ ರನ್‌ಗಳ ಮಳೆಯನ್ನೇ ಸುರಿಸಿದ್ದ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಅಬ್ಬರದ ದ್ವಿಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ರೋಹಿತ್, 16 ಸಿಕ್ಸರ್ ಮತ್ತು 12 ಬೌಂಡರಿಗಳ ಸಹಿತ 209 ರನ್ ಗಳಿಸಿದ್ದರು. ರೋಹಿತ್ ಅವರ ಈ ಇನ್ನಿಂಗ್ಸ್‌ನಿಂದಾಗಿ ಟೀಂ ಇಂಡಿಯಾ ಪಂದ್ಯವನ್ನೂ ಗೆದ್ದು ಸರಣಿಯನ್ನು ಗೆದ್ದುಕೊಂಡಿರುವುದು ದೊಡ್ಡ ವಿಷಯ.
ರೋಹಿತ್ ಶರ್ಮಾ ಅವರ ಈ ಇನ್ನಿಂಗ್ಸ್ ತಂಬಾ ವಿಶೇಷ ಏಕೆಂದರೆ. ತನ್ನ ಅರ್ಧಶತಕವನ್ನು 71 ಎಸೆತಗಳಲ್ಲಿ ಪೂರ್ಣಗೊಳಿಸಿದ್ದ ಹಿಟ್‌ಮ್ಯಾನ್ ಇದರ ಹೊರತಾಗಿಯೂ 156 ಎಸೆತಗಳಲ್ಲಿ ದ್ವಿಶತಕ ಪೂರ್ಣಗೊಳಿಸಿದ್ದರು.
ರೋಹಿತ್ ಸಿಡಿಲಬ್ಬರದ ಬ್ಯಾಟಿಂಗ್
ಈ ಪಂದ್ಯದಲ್ಲಿ ಶಿಖರ್ ಧವನ್ ಜೊತೆಗೂಡಿ ಭಾರತಕ್ಕೆ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರು. ಇಬ್ಬರ ನಡುವೆ ಶತಕದ ಜೊತೆಯಾಟವಿತ್ತು, ಆದರೆ ಈ ಸಮಯದಲ್ಲಿ ರೋಹಿತ್ ತುಂಬಾ ನಿಧಾನವಾಗಿ ಆಡುತ್ತಿದ್ದರು. ಇದರೊಂದಿಗೆ ರೋಹಿತ್ 71 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು, ಇದರಲ್ಲಿ ಕೇವಲ ಒಂದು ಸಿಕ್ಸರ್ ಅವರ ಬ್ಯಾಟ್‌ನಿಂದ ಬಂದಿತು. ಆದರೆ, ಅರ್ಧಶತಕ ಪೂರೈಸಿದ ಬಳಿಕ ಗೇರ್ ಬದಲಿಸಿದ ರೋಹಿತ್ 114 ಎಸೆತಗಳಲ್ಲಿ ಶತಕ ಪೂರೈಸಿದರು. ಈ ವೇಳೆ ಅವರ ಬ್ಯಾಟ್‌ನಿಂದ 6 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳು ಹೊರಬಂದವು.
ಇದನ್ನೂ ಓದಿ: IND vs BAN: ಇಂದು ಅಡಿಲೇಡ್‌ನಲ್ಲಿ ಸೃಷ್ಟಿಯಾಗುವ ದಾಖಲೆಗಳಿವು; ಸೂರ್ಯ- ಕೊಹ್ಲಿಗೆ ಮಹತ್ವದ ದಿನ
ಶತಕದ ನಂತರ ಇನ್ನಷ್ಟು ಅಬ್ಬರಿಸಿದ ‘ಹಿಟ್‌ಮ್ಯಾನ್’
ಶತಕದ ನಂತರ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದ ರೋಹಿತ್ ಶರ್ಮಾ, ಮುಂದಿನ 26 ಎಸೆತಗಳಲ್ಲಿ 150 ರನ್ ಪೂರ್ಣಗೊಳಿಸಿದರು. ನಂತರ ಮುಂದಿನ 16 ಎಸೆತಗಳಲ್ಲಿ ದ್ವಿಶತಕದ ಗಡಿ ದಾಟಿದ್ದರು. 15 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರವಿನಿಂದ ದ್ವಿಶತಕ ಪೂರೈಸಿದ ರೋಹಿತ್ ಶರ್ಮಾ ಅವರ ಬ್ಯಾಟ್‌ನಿಂದ ಒಟ್ಟು 209 ರನ್‌ಗಳು ಹರಿದುಬಂದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್ ಅವರ ದಾಖಲೆಯ ದ್ವಿಶತಕದ ನೆರವಿನಿಂದ 383 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುರಿಬೆನ್ನಟ್ಟಿದ ಆಸ್ಟ್ರೇಲಿಯಾ ಕೂಡ ಗೆಲುವಿಗಾಗಿ ಹೋರಾಟ ನಡೆಸಿ ಅಂತಿಮವಾಗಿ 326 ರನ್ ಗಳಿಗೆ ಸುಸ್ತಾಯಿತು. ಈ ಮೂಲಕ ಈ ಪಂದ್ಯವನ್ನು ಭಾರತ 57 ರನ್‌ಗಳಿಂದ ಗೆದ್ದು ಸರಣಿಯನ್ನು 4-3 ರಿಂದ ವಶಪಡಿಸಿಕೊಂಡಿತು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Wed, 2 November 22